ಕುಕ್ಕರ್‌ನಲ್ಲಿ ಸುಲಭವಾಗಿ ಬೆಣ್ಣೆ ಬಿಸ್ಕೇಟ್ ಮಾಡುವುದು ಹೇಗೆ? ಇದೇ ಸುಲಭ ರೆಸಿಪಿ

Posted By:

ಸಂಜೆಯ ಸಮಯದಲ್ಲಿ ನಾವು ಟೀ- ಕಾಫಿಯ ಜೊತೆಗೆ ಏನಾದರು ಸ್ನ್ಯಾಕ್ಸ್ ಸವಿಯುವ ಅಭ್ಯಾಸ ಇಟ್ಟುಕೊಂಡಿರುತ್ತೇವೆ. ಆದ್ರೆ ನಾವು ಮನೆಯಲ್ಲಿ ಮಾಡಿ ಸವಿಯುವುದಕ್ಕಿಂತ ಹೊರಗಡೆ ಅಂಗಡಿ, ಬೇಕರಿಯಿಂದ ತಂದು ಸವಿಯುವುದೇ ಹೆಚ್ಚು. ಅದರಲ್ಲೂ ಹೆಚ್ಚಾಗಿ ನಾವು ಸಂಜೆ ಬಿಸ್ಕೇಟ್, ಬೋಂಡಾ, ಬಜ್ಜಿ, ಕರಿದ ತಿಂಡಿಗಳು, ಬೇಕರಿ ವಸ್ತುಗಳ ಸವಿಯಲು ಇಷ್ಟಪಡುತ್ತೇವೆ.

ಅದರಲ್ಲೂ ಸಂಜೆ ಟೀ ಜೊತೆ ಬಿಸ್ಕೇಟ್ ಸವಿಯುವ ಅಭ್ಯಾಸವನ್ನ ಬಹಳಷ್ಟು ಮಂದಿ ಇಟ್ಟುಕೊಂಡಿರುತ್ತೇವೆ. ಏಕೆಂದರೆ ಟೀ-ಬಿಸ್ಕೇಟ್ ಜೊತೆಗೆ ಒಂದು ಎರಡು ಬಿಸ್ಕೇಟ್ ಇದ್ದರೆ ಆ ಈ ಕುಡಿಯುವ ಮಜವೇ ಬೇರೆ. ಹೀಗಾಗೀ ಹೆಚ್ಚಿನ ಜನರು ಟೀ ಜೊತೆಗೆ ಮಾರಿ ಗೋಲ್ಡ್, ಗುಡ್ ಡೇ, ಓರಿಯೋ ಹೀಗೆ ಹತ್ತಾರು ಬಿಸ್ಕೇಟ್‌ಗಳ ಸವಿಯಲು ಮುಂದಾಗುತ್ತಾರೆ.

How To Make Butter Biscuit Recipe At Home In Kannada

ಆದ್ರೆ ನಾವು ಮನೆಯಲ್ಲಿ ಮಾಡಿರುವ ಬಿಸ್ಕೇಟ್ ಅನ್ನು ಟೀ ಜೊತೆ ಸವಿಯಲು ನೀಡಿದರೆ ಹೇಗಿರಲಿದೆ. ಹೌದು ಬೇಕರಿಗಳಲ್ಲಿ ಸಿಗುವಂತಹ ಬೆಣ್ಣೆ ಬಿಸ್ಕೇಟ್‌ಗಳನ್ನು ಮನೆಯಲ್ಲಿಯೇ ಮಾಡಿ ಸವಿಯುವುದು ಒಳ್ಳೆಯ ರುಚಿಗೆ ದಾರಿಯಾಗುತ್ತೆ. ಹಾಗಾfರೆ ಈ ಬೆಣ್ಣೆ ಬಿಸ್ಕೇಟ್ ಅನ್ನು ಮನೆಯಲ್ಲಿ ಮಾಡುವುದು ಹೇಗೆ?, ಬೆಣ್ಣೆ ಬಿಸ್ಕೇಟ್ ಮಾಡಲು ಬೇಕಾಗುವ ಪದಾರ್ಥಗಳು ಯಾವುದು?, ಮಾಡುವ ವಿಧಾನವೇನು?, ಮಾಡಲು ಏನೆಲ್ಲಾ ಕ್ರಮ ಅಗತ್ಯ ಎನ್ನುವುದುನ್ನು ನೋಡಿ.

ಬೆಣ್ಣೆ ಬಿಸ್ಕೇಟ್ ಮಾಡಲು ಬೇಕಾಗುವ ಪದಾರ್ಥಗಳು

  • ಮೈದಾ ಹಿಟ್ಟು - 1 ಕಪ್
  • ಸಕ್ಕರೆ - 1 ಕಪ್
  • ಬೆಣ್ಣೆ - 2 ಕಪ್
  • ಉಪ್ಪ

ಬೆಣ್ಣೆ ಬಿಸ್ಕೇಟ್ ಮಾಡುವುದು ಹೇಗೆ?

ಮೊದಲು ಒಂದು ಕುಕ್ಕರ್ ಅನ್ನು ಒಲೆ ಮೇಲೆ ಇಟ್ಟು ಅದಕ್ಕೆ ತಳ ಮುಚ್ಚುವಷ್ಟು ಉಪ್ಪು ಹಾಕಿಕೊಳ್ಳಿ. ನಂತರ ಇದರ ಒಳಗೆ ಒಂದು ರಿಂಗ್ ಇಡಿ. ಉಪ್ಪಿಗೆ ಯಾವ ಪಾತ್ರೆ ತಾಕದಂತೆ ಮಾಡಲು ಈ ರಿಂಗ್ ಮಧ್ಯದಲ್ಲಿ ಇಡಿ. ಹಾಗೆ ಸಣ್ಣ ಉರಿಯಲ್ಲಿ ಕಾಯಿಸಬೇಕು. ಆದರೆ ಕುಕ್ಕರ್ ಮುಚ್ಚಳ ಮುಚ್ಚಿ ಆದರೆ ಸೀಟಿಯನ್ನು ಹಾಕಬೇಡಿ. ಹಾಗೆ ಕಾಯಿಸಿಕೊಳ್ಳಿ. 10 ನಿಮಿಷ ಕಾಯಿಸಿದರೆ ಸಾಕು.

ಈಗ ಒಂದು ಸಣ್ಣ ತಟ್ಟೆ ತೆಗೆದುಕೊಂಡು ಅದಕ್ಕೆ ಒಂದು ಕಪ್ ಬೆಣ್ಣೆ ಹಾಕಿ ಚೆನ್ನಾಗಿ ತಿರುಗಿಸುತ್ತಾ ಮೆದುವಾಗುವಂತೆ ಮಾಡಿಕೊಳ್ಳಿ. ಬೆಣ್ಣೆ ಗಟ್ಟಿಯಾಗಿರಬಾರದು. ಹೀಗಾಗಿ ಬೆಣ್ಣೆಯನ್ನು ಫ್ರಿಡ್ಜ್‌ನಿಂದ ತೆಗೆದು ಹೊರಗಿ ಟ್ಟು ಮೆದುವಾಗುವಂತೆ ಮಾಡಬೇಕು. ನಂತರ ಇದಕ್ಕೆ ಒಂದು ಕಪ್ ಸಕ್ಕರೆ ಪುಡಿ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಬೆಣ್ಣೆಗೆ ಸಕ್ಕರೆ ಪುಡಿ ಬೆರೆಯುವಂತೆ ಮಾಡಿ.

ಈ ಮಿಶ್ರಣ ಕೇಕ್‌ನಂತೆ ಮೃುದುವಾಗಿ ಬರಬೇಕು. ಇದೇ ಪ್ಲೇಟ್‌ಗೆ ಒಂದು ಕಪ್‌ನಲ್ಲಿ ಮೈದಾ ಹಿಟ್ಟನ್ನ ಜರಡಿ ಹಿಡಿದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಜಾಮೂನ್ ಹಿಟ್ಟಿನಂತೆ ಈ ಹಿಟ್ಟು ಬರುವಂತೆ ಹದ ಮಾಡಿಕೊಳ್ಳಿ. ಸುಮ್ಮನೆ ಮಿಕ್ಸ್ ಮಾಡಿದರೆ ಸಾಕಾಗುತ್ತದೆ. ಇದನ್ನು ಕೈಯಲ್ಲಿ ತೆಗೆದುಕೊಂಡು ಜಾಮೂನ್‌ನಂತೆ ಉಂಡೆ ಮಾಡಿಕೊಳ್ಳಿ.

ನಂರತ ನಿಮಗೆ ಯಾವ ಗಾತ್ರಕ್ಕೆ ಬಿಸ್ಕೇಟ್ ಬೇಕೋ ಆ ಗಾತ್ರಕ್ಕೆ ಬಿಸ್ಕೇಟ್ ಅನ್ನು ಮಾಡಿಕೊಳ್ಳಿ. ನಲ್ಲಿಕಾಯಿ ಗಾತ್ರದಲ್ಲಿ ಈ ಉಂಡೆ ಇದ್ದರೆ ಚೆನ್ನಾಗಿರುತ್ತದೆ. ಎಲ್ಲಾ ಬಿಸ್ಕೇಟ್ ಅನ್ನು ತಿದ್ದಿಕೊಂಡು ಇಡಿ, ಈಗ ಒಂದು ಪ್ಲೇಟ್‌ಗೆ ಎಲ್ಲಾ ಬಿಸ್ಕೇಟ್ ಹಾಕಿಕೊಂಡು ಅದನ್ನು ಕುಕ್ಕರ್ ಒಲೆಗೆ ಇರುವ ರಿಂಗ್ ಮೇಲೆ ಇಟ್ಟು ಮುಚ್ಚಳ ಮುಚ್ಚಿ.

ಸುಮಾರು 25 ನಿಮಿಷ ಚೆನ್ನಾಗಿ ಬೇಯಿಸಿಕೊಳ್ಳಿ. ಈ ಬಿಸ್ಕೇಟ್ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಬೆಣ್ಣೆ ಬಿಸ್ಕೇಟ್ ರೆಡಿಯಾಗುತ್ತದೆ. ಇದನ್ನು ತಣ್ಣಗಾಗಲು ಬಿಟ್ಟು ಬಳಿಕ ಸವಿಯಬಹುದು.

[ of 5 - Users]
Story first published: Monday, September 23, 2024, 16:50 [IST]
X
Desktop Bottom Promotion