Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬನ್ ದೋಸೆ ಟ್ರೈ ಮಾಡದ್ದೀರಾ? ಉದ್ದು ಬೇಕಾಗಿಲ್ಲ, ಖಾರ ಚಟ್ನಿ ಜೊತೆ ಸವಿಯಲು ಸೂಪರ್
ಬನ್ ದೋಸೆ ಬಾಯಿಗೆ ಇಟ್ಟ ತಕ್ಷಣ ವಾವ್! ಎಷ್ಟು ಸೂಪರ್ ಎಂದು ನಮಗನಿಸದೆ ಇರಲ್ಲ, ಇದನ್ನು ಬಲು ಸುಲಭವಾಗಿ ಮಾಡಬಹುದು, ಅಲ್ಲದೆ ಉದ್ದಿನ ಬೇಳೆ ಬೇಕಾಗಿಲ್ಲ, ಈ ದೋಸೆ ಹುಳಿ ಟೇಸ್ಟ್ ಇರಲ್ಲ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
2 ಕಪ್ ಅಕ್ಕಿ
1/2 ಚಮಚ ಮೆಂತೆ
1 ಕಪ್ ಅವಲಕ್ಕಿ
1ಕಪ್ ತೆಂಗಿನ ತುರಿ
ರುಚಿಗೆ ತಕ್ಕ ಉಪ್ಪು
ನೀರು
ಒಗ್ಗರಣೆಗೆ
2-3 ಚಮಚ ಎಣ್ಣೆ
1/2 ಚಮಚ ಸಾಸಿವೆ
1 ಚಮಚ ಉದ್ದಿನ ಬೇಳೆ
2-3 ಹಸಿಮೆಣಸು
ಕರಿಬೇವು
ಈರುಳ್ಳಿ 2
ಜೀರಿಗೆ 1 ಚಮಚ
ಮಾಡುವ ವಿಧಾನ:
- ನೀವು ಅಕ್ಕಿ ಮತ್ತು ಮೆಂತೆಯನ್ನು 5-6 ಗಂಟೆ ನೆನೆ ಹಾಕಿ, ಕಡಿಮೆಯೆಂದರೂ ನಾಲ್ಕು ಗಂಟೆ ನೆನೆ ಹಾಕಿ
- ನಂತರ ಅಕ್ಕಿಯನ್ನು ತೊಳೆದು ನುಣ್ಣನೆ ರುಬ್ಬಿ
- ಇದನ್ನು ಬೌಲ್‌ಗೆ ಹಾಕಿ
- ನಂತರ ಅವಲಕ್ಕಿ ಮತ್ತು ತೆಂಗಿನ ತುರಿಯನ್ನು ನುಣ್ಣನೆ ರುಬ್ಬಿ
- ಇದನ್ನು ಬೌಲ್‌ಗೆ ಹಾಕಿ ಮಿಕ್ಸ್ ಮಾಡಿ, ಉಪ್ಪು ಸೇರಿಸಿ ಮಿಕ್ಸ್ ಮಾಡಿ ಹುದುಗು ಬರಲು 8 ಗಂಟೆ ಇಡಿ.
ಈಗ ಹುದುಗು ಬಂದ ಹಟ್ಟಿಗೆ ಒಗ್ಗರಣೆ ಹಾಕಬೇಕು
ನೀವು ಎಣ್ಣೆ ಬಿಸಿ ಮಾಡಿ
ನಂತರ ಸಾಸಿವೆ, ಜೀರಿಗೆ ಹಾಕಿ
ಕರಿಬೇವು ಹಾಕಿ
ಈರುಳ್ಳಿ ಹಾಕಿ, ಈರುಳ್ಳಿ ರೋಸ್ಟ್ ಮಾಡಿ
ನಂತರ ಇದನ್ನು ಹಿಟ್ಟಿಗೆ ಹಾಕಿ ಮಿಕ್ಸ್ ಮಾಡಿ
ಈಗ ತವಾ ಹಾಕಿ ಬಿಸಿ ಮಾಡಿ ಎಣ್ಣೆ ಸವರಿ ದೋಸೆ ಹಿಟ್ಟನ್ನು ಹಾಕಿ,ಆದರೆ ಹರಡಬೇಡಿ,
ಮಂದವಾಗಿ ಇರಲಿ
ತವಾದ ಮುಚ್ಚಳ ಮುಚ್ಚಿ ಬೇಯಿಸಿ, ದೋಸೆ ಬೆಂದ ಮೇಲೆ ಮಗುಚಿ ಹಾಕಿಮತ್ತೆ 1 ನಿಮಿಷ
ಬೇಯಿಸಿ ತೆಗೆದರೆ ರುಚಿಯಾದ ಬನ್ ದೋಸೆ ರೆಡಿ.
ಇದನ್ನು ಖಾರ ಚಟ್ನಿ ಜೊತೆ ಸವಿದು ನೋಡಿ ಸೂಪರ್ ಆಗಿರುತ್ತೆ.
ಖಾರ ಚಟ್ನಿ ರೆಸಿಪಿ
ತೆಂಗಿನ ತುರಿ 1 ಕಪ್
ಹಸಿ ಮೆಣಸು 3-4
ಸ್ವಲ್ಪ ಹುಣಸೆಹಣ್ಣು
ಹುರಿಗಡಲೆ ಸ್ವಲ್ಪ
ಈರುಳ್ಳಿ 1
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
ಈ ಎಲ್ಲಾ ಸಾಮಗ್ರಿ ಹಾಕಿ ಗಟ್ಟಿ ಚಟ್ನಿ ಮಾಡಿ, ಇದನ್ನು ನೆಚ್ಚಿ ಕೊಂಡು ತಿನ್ನಲು
ರುಚಿಯಾಗಿರುತ್ತದೆ.
ಇತರ ಸಲಹೆ
ಅಕ್ಕಿ ನೀವು ರೇಷನ್ ಅಕ್ಕಿ ಅಥವಾ ದೋಸೆ ಅಕ್ಕಿ ಬಳಸಬಹುದು.
ತೆಂಗಿನ ತುರಿ ಫ್ರೆಷ್ ಬಳಸಿದರೆ ತುಂಬಾ ಒಳ್ಳೆಯದು
ಇದನ್ನು ಸಾಂಬಾರ್ ಜೊತೆ ಕೂಡ ಸವಿಯಬಹುದು.
ನೀವು ತೆಂಗಿನ ತುರಿ ಹಾಕುವಾಗ ದೋಸೆ ಕಲ್ಲಿಗೆ ಅಂಟಿಕೊಳ್ಳಬಹುದು, ಹೀಗಾಗಿ ನೀವು
ಮಿಶ್ರಣಕ್ಕೆ ಎಣ್ಣೆ ಹಾಕಿ ಮಿಕ್ಸ್ ಮಾಡಿ.



Click it and Unblock the Notifications