Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬ್ರೇಕ್‌ಫಾಸ್ಟ್‌ಗೆ ರಾಜಮುಡಿ ಅಕ್ಕಿಯಿಂದ ಮಾಡಬಹುದು ರುಚಿಯಾದ ಬನ್ ದೋಸೆ
ರಾಜಮುಡಿ ಅಕ್ಕಿ ಬಳಸಿ ಮಾಡುವ ಬನ್ ದೋಸೆ ರೆಸಿಪಿಯಿದು. ತುಂಬಾ ಮೃದುವಾದ ಈ ದೋಸೆ ತುಂಬಾನೇ ರುಚಿಯಾಗಿರುತ್ತೆ, ಅಲ್ಲದೆ ತುಂಬಾನೇ ಮೃದುವಾಗಿರುವುದರಿಂದ ರುಚಿ ತುಂಬಾನೇ ಇಷ್ಟವಾಗುವುದು, ಬನ್ನಿ ಇದನ್ನು ಮಾಡುವದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ರಾಜಮುಡಿ ಅಕ್ಕಿ ಒಂದೂವರೆ ಕಪ್
ಅವಲಕ್ಕಿ ಮುಕ್ಕಾಲು ಕಪ್
ರುಚಿಗೆ ತಕ್ಕ ಉಪ್ಪು
ಈರುಳ್ಳಿ 2
ಹಸಿ ಮೆಣಸಿಕಾಯಿ 2
1 ಚಮಚ ಎಣ್ಣೆ
ಸ್ವಲ್ಪ ಸಾಸಿವೆ
ಸ್ವಲ್ಪ ಕರಿಬೇವು
ಸ್ವಲ್ಪ ಶುಂಠಿ
ಮಾಡುವ ವಿಧಾನ
- ನೀವು ಅಕ್ಕಿಯನ್ನು 5-6 ಗಂಟೆ ನೆನೆ ಹಾಕಿ
- ಅವಲಕ್ಕಿಯನ್ನು ಅಕ್ಕಿ ರುಬ್ಬುವ 15 ನಿಮಿಷ ಮುನ್ನ ನೆನೆ ಹಾಕಿದರೆ ಸಾಕು
- ನೀವು ಅಕ್ಕಿಯನ್ನು ನುಣ್ಣನೆ ರುಬ್ಬಿ, ಅವಲಕ್ಕಿ ರುಬ್ಬಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಕೈಯಿಂದಲೇ ಚೆನ್ನಾಗಿ ಮಿಕ್ಸ್ ಮಾಡಿ ಇಡಿ. ನೀವು ರುಬ್ಬಿದ ಹಿಟ್ಟು 7-8 ಗಂಟೆ ಹಿಡಿ, ಹಿಟ್ಟು ಹುಳಿ ಬಂದರೆ ಟೇಸ್ಟ್ ಸೂಪರ್ ಆಗಿರುತ್ತದೆ.
- ನೀವು ದೋಸೆ ರೆಡಿ ಮಾಡುವ ಸಮಯದಲ್ಲಿ ಈರುಳ್ಳಿ, ಹಸಿ ಮೆಣಸು ಚಿಕ್ಕದಾಗಿ ಕತ್ತರಿಸಿ ಹಿಟ್ಟುಜೊತೆ ಸೇರಿಸಿ
- ನೀವು ಒಗ್ಗರಣೆ ಪಾತ್ರೆಗೆ 1 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಕರಿಬೇವು ಹಾಕಿ, ಶುಂಇ ಹಾಕಿ ಒಗ್ಗರಣೆಯನ್ನು ನೀವು ಹಿಟ್ಟಿಗೆ ಸೇರಿಸಿ ಮಿಕ್ಸ್ ಮಾಡಿ.
ಬನ್ ದೋಸೆ ಮಾಡಲೆಂದೇ ದೋಸೆ ಹಂಚು ಸಿಗುತ್ತೆ, ಅದನ್ನು ಬಳಸಬಹುದು,
ಇಲ್ಲಾಂದ್ರೆ ಮಾಮೂಲ ದೋಸೆ ಕಲ್ಲು ಕೂಡ ಬಳಸಬಹುದು.
ಈಗ ನೀವು ದೋಸೆ ಹಂಚಿಗೆ ಎಣ್ಣೆ ಹಚ್ಚಿ ಅದಕ್ಕೆ ಹಿಟ್ಟು ಹಾಕಿ, ಹಿಟ್ಟು ಹಾಕಿದ
ಮೇಲೆ ಸೌಟ್‌ನಿಂದ ಉಜ್ಜಬೇಡಿ, ದೋಸೆ ಬೇಯುವಾಗ ದೋಸೆ ಕಲ್ಲಿನ ಆಯಿ ಮಿಚ್ಚು 2
ನಿಮಿಷ ಬೇಯಿಸಿ ನಂತರ ದೋಸೆ ಮಗುಚಿ ಹಾಕಿ,
ಈಗ ರೆಡಿಯಾದ ದೋಸೆಯನ್ನು ನೀವು ಖಾರ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಿರಿ.
ಬನ್ ದೋಸೆಗೆ ಸೂಪರ್ ಕಾಂಬಿನೇಷನ್ ಚಟ್ನಿ
ಬೇಕಾಗುವ ಸಾಮಗ್ರಿ
ಕಡ್ಲೆಬೇಳೆ 2 ಚಮಚ
ಒಣಮೆಣಸು 4-5(ನಿಮ್ಮ ಖಾರಕ್ಕೆ ತಕ್ಕಷ್ಟು)
ಸ್ವಲ್ಪ ಹುಣಸೆಹಣ್ಣು
ರುಚಿಗೆ ತಕ್ಕ ಉಪ್ಪು
ಅರ್ಧ ಕಪ್ ತೆಂಗಿನತುರಿ
ಈರುಳ್ಳಿ 1
ನೀವು ಕಡ್ಲೆಬೇಳೆ ಸ್ವಲ್ಪ ರೋಸ್ಟ್ ಮಾಡಿ
ನಂತರ ಇದನ್ನು ತೆಂಗಿನ ತುರಿ ಹಾಗೂ ಇತರ ಸಾಮಗ್ರಿ ಸೇರಿಸಿ ಸ್ವಲ್ಪ ನೀರು ಸೇರಿಸಿ
ಗಟ್ಟಿ ಚಟ್ನಿ ಮಾಡಿ
ಬನ್ ದೋಸೆ ಸವಿಯಲು ಈ ಚಟ್ನಿ ಸೂಪರ್ ಆಗಿರುತ್ತದೆ.



Click it and Unblock the Notifications