Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬದನೆಕಾಯಿ ಎಣ್ಣೆಗಾಯಿ ಅಲ್ಲ ಈ ರೀತಿ ಗ್ರೇವಿ ಮಾಡಿ..! ಬಾಯಲ್ಲಿ ನೀರು ಬರೋದು ಪಕ್ಕ!
ನೀವು ತಿಂಡಿಗೆ ಹಾಗೆ ಊಟದ ಸಮಯದಲ್ಲಿ ಪಲ್ಯದ ಜೊತೆಗೆ ಯಾವುದಾದರು ಹೊಸ ರೀತಿಯ ಗ್ರೇವಿ ಇರಲಿ ಎಂದು ಇಷ್ಟಪಡಬಹುದು. ಹಾಗೆ ಚಪಾತಿ, ರೊಟ್ಟಿ, ದೋಸೆ ಅಂತಹ ತಿಂಡಿ ಮಾಡಿದ್ರೆ ಅದರೊಂದಿಗೆ ಸವಿಯೋಕೆ ಒಂದು ಗ್ರೇವಿ, ಪಲ್ಯ, ಚಟ್ನಿ ಮಾಡುವುದು ಕಾಮನ್. ಇನ್ನು ಚಪಾತಿ, ರೊಟ್ಟಿಯೊಂದಿಗೆ ನೀವು ಎಣ್ಣೆ ಬದನೆಕಾಯಿ ಗ್ರೇವಿ ಮಾಡುವುದು ಸಾಮಾನ್ಯ.
ಆದ್ರೆ ನಾವಿಂದು ಈ ಬದನೆಕಾಯಿಯಲ್ಲಿ ಎಣ್ಣೆಗಾಯಿ ಮಾಡದೆ ಅದರಿಂದ ಮಾಡುವ ರುಚಿ ರುಚಿಯ ಗ್ರೇವಿ ಕುರಿತಾಗಿ ತಿಳಿದುಕೊಳ್ಳೋಣ. ಬದನೆಕಾಯಿ ಎಣ್ಣೆಗಾಯಿ ಅಂದ್ರೆ ಎಲ್ಲರಿಗೂ ಇಷ್ಟವಾಗೋ ಖಾದ್ಯ. ಹಾಗೆ ಬದನೆಕಾಯಿ ಸುಟ್ಟು ಮಾಡುವ ಚಟ್ನಿ ಕೂಡ ಅದ್ಭುತ ಸುವಾಸನೆಯುಕ್ತ ರುಚಿ ನೀಡಲಿದೆ. ಆದ್ರೆ ಬದನೆಕಾಯಿ ಗ್ರೇವಿ ಇದೆಲ್ಲ ಖಾದ್ಯವನ್ನು ಮೀರಿಸಲಿದೆ.

ಹಾಗಾದ್ರೆ ಬದನೆಕಾಯಿಯಿಂದ ಮಾಡುವಂತಹ ಈ ಗ್ರೇವಿಯ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ. ಬದನೆಕಾಯಿ ಗ್ರೇವಿ ಮಾಡಿದ್ರೆ ತಿಂಡಿಯ ಜೊತೆಗೆ ಊಟಕ್ಕೂ ಕೂಡ ಬಹಳ ರುಚಿ ನೀಡಲಿದೆ. ಹೀಗಾಗಿ ನಾವಿಂದು ಸುಲಭವಾಗಿ ಮಾಡಬಹುದಾದಂತಹ ಈ ಬದನೆಕಾಯಿ ಗ್ರೇವಿಯನ್ನು ಮಾಡುವ ಕುರಿತು ತಿಳಿದುಕೋಳ್ಳೋಣ. ಬದನೆಕಾಯಿ ಗ್ರೇವಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬದನೆಕಾಯಿ ಗ್ರೇವಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಬದನೆಕಾಯಿ
- ಈರುಳ್ಳಿ
- ಟೊಮೆಟೋ
- ಕೊತ್ತಂಬರಿ ಸೊಪ್ಪು
- ಸಾಂಬಾರ್ ಪುಡಿ
- ಖಾರದ ಪುಡಿ
- ಧನಿಯಾ ಪುಡಿ
- ಗರಂ ಮಸಾಲ
- ಜೀರಿಗೆ ಪುಡಿ
- ರುಚಿಗೆ ತಕ್ಕಷ್ಟು ಉಪ್ಪು
- ಎಣ್ಣೆ
ಬದನೆಕಾಯಿ ಗ್ರೇವಿ ಮಾಡುವ ವಿಧಾನವೇನು?
2 ಬದನೆಕಾಯಿಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಒರೆಸಿಕೊಳ್ಳಿ. ಈಗ ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ನಂತರ ಇದಕ್ಕೆ ಹೆಚ್ಚಿಕೊಂಡಿರುವ ಈರುಳ್ಳಿ ಹಾಕಿ 4 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಖಾರದ ಪುಡಿ ಸೇರಿಸಿ ಮಿಕ್ಸ್ ಮಾಡಿ, ಈರುಳ್ಳಿಗೆ ಖಾರ ಚೆನ್ನಾಗಿ ಹಿಡಿಯಲಿ. ಈಗ 2 ಟೊಮೆಟೋ ಹಾಕಿ ಉಪ್ಪು ಕೂಡ ಹಾಕಿ ಮಿಶ್ರಣ ಮಾಡಿ 5 ನಿಮಿಷ ಬೇಯಿಸಿಕೊಳ್ಳಿ.
ಈಗ ಸಾಂಬಾರ್ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ ಪುಡಿ, ಧನಿಯ ಪುಡಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ ಅರ್ಧ ನಿಮಿಷ ಬೆರೆಸಿಕೊಂಡ ಬಳಿಕ. ಹೆಚ್ಚಿಟ್ಟಿರುವ ಬದನೆಕಾಯಿಯನ್ನು ಈ ಕುಕ್ಕರ್‌ಗೆ ಹಾಕಿಕೊಳ್ಳಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಇದಕ್ಕೆ ಸ್ವಲ್ಪ ನೀರು ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಕುಕ್ಕರ್ ಮುಚ್ಚಳ ಮುಚ್ಚಿ 1 ಸೀಟಿ ಹೊಡೆಯಲು ಬಿಡಬೇಕು.
ಒಂದು ಸೀಟಿ ಹೊಡೆದ ಬಳಿಕ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ನಂತರ ಮುಚ್ಚಳ ತೆಗೆದು ಒಮ್ಮೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಹಾಗೆ ಒಮ್ಮೆ ರುಚಿ ನೋಡಿಕೊಂಡು ಮತ್ತೆ ಉಪ್ಪು, ಖಾರ ಬೇಕಿದ್ದರೆ ಹಾಕಿಕೊಳ್ಳಬಹುದು. ಇಷ್ಟಾದರೆ ನಿಮ್ಮ ಮುಂದೆ ಈ ಬದನೆಕಾಯಿ ಗ್ರೇವಿ ರೆಡಿಯಾಗುತ್ತದೆ. ಇದನ್ನು ನೀವು ಚಪಾತಿ ಹಾಗೆ ರೊಟ್ಟಿಯೊಂದಿಗೆ ಸವಿದರೆ ಬಹಳ ರುಚಿ ನೀಡಲಿದೆ.
ನೀವು ಎಣ್ಣೆಗಾಯಿ ಪಲ್ಯ ಇಷ್ಟಪಡುವವರಾಗಿದ್ದರೆ ಈ ಗ್ರೇವಿಯನ್ನು ಒಮ್ಮೆಯಾದರು ರುಚಿ ನೋಡಬೇಕಿದೆ. ಅದರ ರುಚಿಗೆ ಮನಸೋಲೋದಂತು ಖಚಿತ. ಹಾಗಿದ್ದ ಮೇಲೆ ಮನೆಯಲ್ಲಿ ಬೆಳಗ್ಗೆ ಇಲ್ಲವೆ ಮಧ್ಯಾದ ಊಟಕ್ಕೂ ಇದನ್ನು ಮಾಡಿ ಸವಿದು ನೋಡಿ. ಮಾಡೋದು ಸಹ ಬಹಳ ಸುಲಭ.



Click it and Unblock the Notifications