ಅದ್ಭುತ ರುಚಿಯ ಬೂಂದಿ ಲಾಡು ಮಾಡೋದು ಹೇಗೆ? ಈ ವಸ್ತುಗಳಿದ್ದರೆ ಸಾಕು

Posted By:

ಹಬ್ಬಗಳಲ್ಲಿ ಒಂದಾದರು ಸಿಹಿ ತಿಂಡಿಯನ್ನು ನಾವು ಮಾಡುತ್ತೇವೆ. ಹಬ್ಬದಲ್ಲಿ ಮಾತ್ರವಲ್ಲ ಯಾವುದಾದರು ಶುಭ ಗಳಿಗೆ, ಅತಿಥಿಗಳು ಮನೆಗೆ ಬಂದಾಗ,ಮನೆಯಲ್ಲಿ ಯಾವುದಾದರು ಪೂಜೆ ಇದ್ದಾಗ ಹೀಗೆ ಹಲವಾರು ಶುಭ ಸಂದರ್ಭದಲ್ಲಿ ಈ ರೀತಿ ಸಿಹಿ ತಿಂಡಿಗಳನ್ನು ನಾವು ಮಾಡಿಯೇ ಮಾಡುತ್ತಾರೆ.

ಈಗಂತು ಹಬ್ಬದ ಸೀಸನ್ ಆರಂಭಗೊಂಡಿದೆ. ಒಂದಲ್ಲ ಒಂದು ಹಬ್ಬ ಬರುತ್ತಲೇ ಇರುತ್ತದೆ. ಹೀಗಾಗಿ ಎಷ್ಟು ಸಿಹಿ ತಿಂಡಿ ಬಗ್ಗೆ ನಮಗೆ ತಿಳಿದಿದ್ದರೂ ಸಾಕಾಗುವುದಿಲ್ಲ. ಹೀಗಾಗಿ ನಾವಿಂದು ಒಂದಿಷ್ಟು ಸಿಹಿ ತಿಂಡಿ ಮಾಡಲು ಕಲಿತಿರುತ್ತೇವೆ. ಆದ್ರೆ ವಿಶೇಷವಾಗಿ ಯಾವುದಾದರು ತಿಂಡಿ ಮಾಡುವುದು ಡಬಲ್ ಖುಷಿ ನೀಡುತ್ತೆ.

How To Make Bundi Ladu Recipe At Home In Kannada

ಹಾಗಾದ್ರೆ ನಾವಿಂದು ಈ ಬೂಂದಿ ಲಾಡು ಮಾಡುವ ಕುರಿತು ತಿಳಿಯೋಣ, ಬೂಂದಿ ಲಾಡು ಎಂದರೆ ಮಕ್ಕಳ ಬಾಯಲ್ಲಿ ಮಾತ್ರವಲ್ಲ ದೊಡ್ಡವರ ಬಾಯಲ್ಲಿಯೂ ನೀರು ಬರುತ್ತೆ ಅದರ ರುಚಿಯೇ ಹಾಗಿರುತ್ತೆ. ಬೇಕರಿಯಲ್ಲಿ ಬೂಂದಿ ಲಾಡು ಬಹಳ ಬೇಡಿಕೆಯ ಸಿಹಿ ತಿಂಡಿಯಾಗಿರುತ್ತೆ.

ಹಾಗಾದ್ರೆ ನಾವಿಂದು ಮನೆಯಲ್ಲಿ ಈ ಅದ್ಭುತ ರುಚಿಯ ಬೂಂದಿ ಲಾಡು ಮಾಡುವ ಕುರಿತು ತಿಳಿದುಕೊಳ್ಳೋಣ. ಬೂಂದಿ ಲಾಡು ಮಾಡುವುದು ಹೇಗೆ? ಬೂಂದಿ ಲಾಡು ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಯಾವ ವಿಧಾನದಲ್ಲಿ ಮಾಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಬೂಂದಿ ಲಾಡು ಮಾಡಲು ಬೇಕಾಗುವ ವಸ್ತುಗಳು

  • ಕಡಲೆ ಹಿಟ್ಟು - 4 ಕಪ್
  • ಅರಶಿನ ಪುಡಿ
  • ಸೋಡಾ
  • ತುಪ್ಪ
  • 2 ಚಮಚ ತುಪ್ಪ
  • ಗೋಡಂಬಿ
  • ದ್ರಾಕ್ಷಿ
  • ಸಕ್ಕರೆ
  • ಏಲಕ್ಕಿ ಪುಡಿ
  • ಎಣ್ಣೆ

ಬೂಂದಿ ಲಾಡು ಮಾಡುವ ವಿಧಾನ

ಮೊದಲು ಕಡಲೆ ಹಿಟ್ಟನ್ನು ಜರಡಿ ಹಿಡಿದು ನುಣ್ಣಗಿರುವ ಹಿಟ್ಟನ್ನು ತೆಗೆದುಕೊಳ್ಳಿ. ಹಿಟ್ಟನ್ನು ಒಂದು ಬೌಲ್‌ಗೆ ಹಾಕಿ ಅದಕ್ಕೆ ಅರಶಿಣ, ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳುತ್ತಾ ಹಿಟ್ಟನ್ನು ರೆಡಿ ಮಾಡಿಕೊಳ್ಳಿ.

ಹಿಟ್ಟು ಗಂಟು ಆಗದಂತೆ ಮಿಕ್ಸ್ ಮಾಡಿಕೊಳ್ಳುತ್ತಾ ತೆಳುವಾಗಿ ದೋಸೆ ಹಿಟ್ಟಿನಂತೆ ದಪ್ಪವೂ ಅಲ್ಲ ತೆಳುವಾಗಿಯೂ ಇಲ್ಲದಂತೆ ಇರಬೇಕು. ಹಿಟ್ಟು ರೆಡಿ ಮಾಡಿಕೊಳ್ಳಲು ಹಲವು ವಿಧಾನವಿದೆ. ಬೂಂದಿ ಹಿಟ್ಟು ಹದವಾಗಿ ಬರಬೇಕಾದರೆ ನೀರು ಹಾಕುವಾಗ ಎಚ್ಚರಿಕೆ ವಹಿಸಬೇಕು. ಉದ್ದಿನ ದೋಸೆಗಿಂತ ಸ್ವಲ್ಪ ದಪ್ಪವಾದ ಹಿಟ್ಟು ರೆಡಿ ಮಾಡಿಕೊಳ್ಳಿ.

ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಕಾಯಲು ಬಿಡಿ. ನಂತರ ಉರಿ ಹೆಚ್ಚಾಗಿ ಇಟ್ಟುಕೊಂಡು ನಿಮ್ಮಲ್ಲಿ ಬೂಂದಿ ಸೌಟು ಇದ್ದರೆ ಅದರ ಮೇಲೆ ಹಿಟ್ಟನ್ನು ಸುರಿಯಿರಿ. ಬೂಂಡಿ ಸೌಟು ಇಲ್ಲ ಎಂದಾದರೆ ಅನ್ನ ಮಾಡುವ ಸೌಟು ಅಥವಾ ಕ್ಯಾರೆಟ್ ತುರಿಯುವ ಸಣ್ಣ ಕಂಡಿಯ ಪಾತ್ರೆ ಇದ್ದರೆ ಅದರಿಂದಲೂ ಬೂಂಡಿ ಬಿಡಬಹುದು.

ಹೀಗೆ ಅಚ್ಚನ ಪಾತ್ರೆಗೆ ಹಿಟ್ಟು ಹಾಕಿ ಒಮ್ಮೆ ಒಂದಿಷ್ಟು ಕಾಳುಗಳು ಎಣ್ಣೆಗೆ ಬೀಳುವಂತೆ ಮಾಡಿ. ಈ ಕಾಳುಗಳು ಚೆನ್ನಾಗಿ ಕರಿಯಬೇಕು. 1 ನಿಮಿಷದ ಒಳಗೆಯೇ ಎತ್ತಿಟ್ಟುಕೊಳ್ಳಿ. ಮತ್ತೆ ಹಿಟ್ಟನ್ನು ಹಾಕಿ ಎರಡನೇ ಬ್ಯಾಚ್‌ನ ಕಾಳುಗಳ ಬಿಟ್ಟುಕೊಳ್ಳಿ. ಹೆಚ್ಚು ಹೊತ್ತು ಕರಿಯದೆ ನಿಮಿಷದ ಒಳಗೆ ಈ ರೀತಿಯ ಕಾಳುಗಳ ಮಾಡಿಕೊಳ್ಳಿ.

ಈ ಬೂಂದಿ ಕಾಳುಗಳನ್ನು ಒಂದು ಪಾತ್ರೆಗೆ ಹಾಕಿ ತಣ್ಣಗಾಗಲು ಬಿಡಿ. ಈಗ ಈ ಸ್ವಲ್ಪ ಬೂಂದಿ ಕಾಳುಗಳನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿ ಅದನ್ನು ರುಬ್ಬಿಕೊಳ್ಳಿ. ಪುಡಿ ಪುಡಿ ಮಾಡಿಕೊಳ್ಳಿ. ಏಕೆಂದರೆ ಮುಂದೆ ಉಂಡೆ ಕಟ್ಟಲು ಸಹಾಯವಾಗುತ್ತದೆ. ಸ್ವಲ್ಪ ಕಾಳುಗಳನ್ನು ಪುಡಿ ಮಾಡಿಕೊಂಡರೆ ಸಾಕು.

ಈಗ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎರಡು ಸ್ಪೂನ್ ತುಪ್ಪ ಹಾಕಿ ಅದಕ್ಕೆ ಗೋಡಂಬಿ ದ್ರಾಕ್ಷಿ ಹಾಕಿ ಫ್ರೈ ಮಾಡಿಕೊಳ್ಳಿ. ಬಳಿಕ ಇದನ್ನು ಬದಿಗಿಟ್ಟುಕೊಂಡು ಅದೇ ಪಾತ್ರೆಗೆ 4 ಗ್ಲಾಸ್ ಸಕ್ಕರೆ ಹಾಕಿಕೊಳ್ಳಿ. ಅರ್ಧದಷ್ಟು ನೀರು ಹಾಕಿ ಸಕ್ಕರೆ ಕರಗಲು ಬಿಡಿ. ಇದು ಪಾಕವಾಗಬೇಕು. ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಒಂದು ಎಳೆ ಪಾಕ ಬರಬೇಕು.

ಬಳಿಕ ಈ ಪಾಕಕ್ಕೆ ಹುರಿದುಕೊಂಡ ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ, ಪುಡಿ ಮಾಡಿಕೊಂಡ ಬೂಂದಿ ಹಾಗೂ ಇಡಿ ಬೂಂದಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಉರಿ ಸಣ್ಣದಾಗಿ ಇರಲಿ. 2 ನಿಮಿಷ ಮಿಕ್ಸ್ ಮಾಡಿ ನಂತರ ಒಲೆ ಆಫ್ ಮಾಡಿ ಇಳಿಸಿಕೊಳ್ಳಿ. ಈಗ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆ ಮಾಡಿಕೊಳ್ಳಿ.

ಈ ಉಂಡೆಯನ್ನು ತಣ್ಣಗಾಗಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಅದ್ಭುತ ರುಚಿಯ ಬೂಂದಿ ಲಾಡು ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಇದನ್ನು ಒಮ್ಮೆ ಟ್ರೈ ಮಾಡಿ ನೋಡಿ.

[ of 5 - Users]
Story first published: Monday, September 9, 2024, 13:15 [IST]
X
Desktop Bottom Promotion