Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಯಲ್ಲಿ ನೀರು ತರಿಸುವ ಬೋಂಡಾ ಸೂಪ್ ಮನೆಯಲ್ಲೇ ಮಾಡಿ..!! ಇಲ್ಲಿದೆ ರೆಸಿಪಿ
ಸಂಜೆ ವೇಳೆ ಸ್ನ್ಯಾಕ್ಸ್ ತಿನ್ನಬೇಕು ಅಂದ್ರೆ ಅಥವಾ ಹೋಟೆಲ್‌ನಲ್ಲಿ ತಿಂಡಿ ಸವಿಯಬೇಕು ಎಂಬ ಮನಸಾದರೆ ನೀವು ಯಾವ ತಿಂಡಿ ಸವಿಯಲು ಮುಂದಾಗುತ್ತೀರಿ? ನಿಮ್ಮ ಬಳಿ ಹತ್ತಾರು ತಿಂಡಿಗಳ ಹೆಸರು ಇರಬಹುದು. ಆದ್ರೆ ಹೋಟೆಲ್ ತಿಂಡಿ ಅಂದ್ರೆ ಬೋಂಡಾ ಸೂಪ್ ಎಲ್ಲರಿಗೂ ಇಷ್ಟವಾಗುತ್ತದೆ.
ಅದ್ರಲ್ಲೂ ಹೋಟೆಲ್‌ನಲ್ಲಿ ಮಳೆಗಾಲದ ನಡುವೆ ಬೋಂಡಾ ಸೂಪ್ ಸವಿಯುತ್ತಿದ್ದರೆ ಅದರ ರುಚಿಯೇ ಬೇರೆ. ಹೀಗಾಗಿ ಕೆಲವರಿಗೆ ಬೋಂಡಾ ಸೂಪ್ ಸವಿಯುವುದು ಅಂದ್ರೆ ಎಲ್ಲಿಲ್ಲದ ಇಷ್ಟ. ಹುಡುಕಿಕೊಂಡು ಹೋಗಿ ಸವಿಯುವವರು ಇದ್ದಾರೆ. ಈಗಂತು ಈ ಬೋಂಡಾ ಸೂಪ್‌ನಲ್ಲಿ ಹಲವು ಬಗೆ ಬಂದು ಬಿಟ್ಟಿದೆ. ಜನರು ಸಹ ಬೋಂಡಾ ಸೂಪ್‌ನಲ್ಲಿ ವಿಶೇಷತೆ ಹುಡುಕುತ್ತಾರೆ.

ಆದ್ರೆ ಹೋಟೆಲ್‌ನಲ್ಲಿ ಮೊದಲೆಲ್ಲ 10 ರೂಪಾಯಿಗೆಲ್ಲಾ ಈ ಬೋಂಡಾ ಸೂಪ್ ಸವಿಯಬಹುದಿತ್ತು, ಆದ್ರೆ ಇಗ 25, 30 ರೂಪಾಯಿ ನೀಡಬೇಕಾದ ಅನಿವಾರ್ಯತೆಯೂ ಇದೆ. ಹೀಗಾಗಿ ಈ ಬೋಂಡಾ ಸೂಪ್ ಪ್ರಿಯರು ಮನೆಯಲ್ಲೇ ಬೋಂಡಾ ಸೂಪ್ ಮಾಡಿ ಸವಿಯಬಹುದಾದ ರೆಸಿಪಿ ನಾವು ಹೇಳುತ್ತೇವೆ ನೋಡಿ.
ಹೋಟೆಲ್ ರುಚಿಯ ಬೋಂಡಾ ಸೂಪ್ ಮನೆಯಲ್ಲೇ ಮಾಡೋದು ಹೇಗೆ? ಬೋಂಡಾ ಸೂಪ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಮಾಡುವ ಕ್ರಮವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೋಂಡಾ ಸೂಪ್ ಮಾಡಲು ಬೇಕಾಗುವ ಪದಾರ್ಥಗಳು
- ಉದ್ದಿನ ಬೇಳೆ -1 ಕಪ್
- ಹಸಿ ಮೆಣಸಿನಕಾಯಿ - 10
- ತೆಂಗಿನಕಾಯಿ
- ಹಸಿ ಶುಂಠಿ
- ಸೋಡಾ
- ಉಪ್ಪು
- ತೊಗರಿಬೇಳೆ - ಅರ್ಧ ಕಪ್
- ಟೊಮೆಟೋ- 2
- ಕೊತ್ತಂಬರಿ ಸೊಪ್ಪು
- ಕರಿಬೇವು
- ಬೆಳ್ಳುಳ್ಳಿ - 1 ಗಡ್ಡೆ
- ನಿಂಬೆಹಣ್ಣಿನ ರಸ
- ಕಾಳು ಮೆಣಸಿನ ಪುಡಿ
- ಅರಿಶಿಣದ ಪುಡಿ
- ಇಂಗು
- ಜೀರಿಗೆ
- ಎಣ್ಣೆ
ಬೋಂಡಾ ಸೂಪ್ ಮಾಡುವುದು ಹೇಗೆ?
ಒಂದು ಕಪ್‌ನಲ್ಲಿ ಉದ್ದಿನ ವೇಳೆ ತೆಗದುಕೊಂಡು 2ರಿಂದ 3 ಗಂಟೆ ನೆನೆಸಿಡಬೇಕು. ಈಗ ಸೂಪ್ ಮಾಡಲು ತೊಗರಿ ಬೇಳೆ ತೆಗೆದುಕೊಂಡು ಚೆನ್ನಾಗಿ ತೊಳೆದು ಅದನ್ನು ನೆನೆಸಿಡಿ. 10 ನಿಮಿಷ ನೆನೆಸಿಟ್ಟರೆ ಸಾಕು. ಬಳಿಕ ಇದನ್ನು ಕುಕ್ಕರ್ ಇಟ್ಟು ಅದಕ್ಕೆ ತೊಗರಿ ಬೇಳೆ ಹಾಕಿ ನೀರು ಹಾಕಿ, ಅರಶಿನ ಪುಡಿ, ಎಣ್ಣೆ ಹಾಕಿ ಬೇಯಲು ಬಿಡಿ.
3ರಿಂದ 4 ಸೀಟಿ ಹೊಡೆಯುವವರೆಗೂ ಬೇಯಲು ಬಿಡಿ. ಈಗ ಉದ್ದಿನ ವೇಳೆಯನ್ನು ಚೆನ್ನಾಗಿ ತೊಳೆದುಕೊಂಡು ಈಗ ನೀರಿನಿಂದ ತೆಗೆದುಕೊಂಡು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳು. ರುಬ್ಬಿಕೊಳ್ಳುವಾಗ ನೀರು ಹಾಕಿಕೊಳ್ಳದೆ ದಪ್ಪವಾಗಿ ರುಬ್ಬಿಕೊಳ್ಳಿ. ಸ್ವಲ್ಪ ಸ್ವಲ್ಪ ಸ್ಪೂನ್‌ನಲ್ಲಿ ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ಈ ಹಿಟ್ಟು ದಪ್ಪವಾಗಿರಲಿ.
ಈಗ ಈ ಹಿಟ್ಟಿಗೆ ತೆಂಗಿನ ಕಾಯಿ ಪೀಸ್‌ಗಳನ್ನು ಹಾಕಿ ಬಳಿಕ ಶುಂಠಿ, ಉಪ್ಪು, ಸೋಡಾ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಕುಕ್ಕರ್‌ನಲ್ಲಿರುವ ಬೇಳೆಯನ್ನು ಮಸೆದುಕೊಳ್ಳಿ. ಇದಕ್ಕೂ ಮುನ್ನ ಹೆಚ್ಚುವರಿ ನೀರನ್ನು ತೆಗೆದುಕೊಳ್ಳಿ.
ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಎಣ್ಣೆಗೆ ಜೀರಿಗೆ, ಇಂಗು, ಬೆಳ್ಳುಳ್ಳಿ, ಹಸಿ ಮೆಣಸು, ಶುಂಠಿ, ಕಾಳು ಮೆಣಸಿನ ಪುಡಿ, ಕರಿಬೇವಿನ ಸೊಪ್ಪು ಹಾಕಿ ಒಂದು ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಬಳಿಕ ಟೊಮೆಟೋ, ಉಪ್ಪು, ಅರಶಿನ ಹಾಕಿ ಮತ್ತೆ 2 ನಿಮಿಷ ಫ್ರೈ ಮಾಡಿ. ಈಗ ತೊಗರಿ ಬೇಳೆಯನ್ನು ಇದಕ್ಕೆ ಹಾಕಿಕೊಳ್ಳಿ. ಬಳಿಕ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ 10 ನಿಮಿಷ ಈ ಸೂಪ್ ಅನ್ನು ಕುದಿಸಿಕೊಳ್ಳಿ. ಕೊನೆಯದಾಗಿ ನಿಂಬೆ ರಸ, ಕೊತ್ತಂಬರಿ ಸೊಪ್ಪು ಹಾಕಿ ಒಲೆ ಆಫ್ ಮಾಡಿಕೊಳ್ಳಿ.
ಈಗ ಬೋಂಡಾ ಮಾಡಿಕೊಳ್ಳಿ. ಒಂದು ಬಾಂಡ್ಲಿ ತೆಗೆದುಕೊಂಡು ಎಣ್ಣೆ ಹಾಕಿಕೊಳ್ಳಿ. ಈಗ ರೆಡಿ ಮಾಡಿಕೊಂಡಿರುವ ಹಿಟ್ಟಿನಿಂದ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರದ ಬೋಂಡಾ ಮಾಡಿಕೊಂಡು ಅದನ್ನು ಎಣ್ಣೆಗೆ ಬಿಟ್ಟುಕೊಳ್ಳಿ. ಬೋಂಡಾ ಕರಿದ ಬಳಿಕ ತಣ್ಣಗಾಗಲು ಬಿಡಿ. ನಂತರ ಬೋಂಡಾವನ್ನು ಒಂದು ಬೌಲ್‌ಗೆ ಹಾಕಿ ಅದರ ಮೇಲೆ ಸೂಪ್ ಹಾಕಿದರೆ ನಿಮ್ಮ ಮುಂದೆ ಬೋಂಡಾ ಸೂಪ್ ರೆಡಿಯಾಗಿರುತ್ತೆ.



Click it and Unblock the Notifications