Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೊಂಟಾಟ್ ರುಚಿಯ ಈ ಬಿರಿಯಾನಿ ಪಲಾವ್ ಮಾಡಿ..! ಬ್ರೇಕ್‌ಫಾಸ್ಟ್‌ಗೆ ಇದೆ ಬೆಸ್ಟ್!
ಬೆಳಗ್ಗೆ ಬ್ರೇಕ್ ಫಾಸ್ಟ್‌ಗೆ ಎಲ್ಲರ ಮನೆಯಲ್ಲಿ ವಾರದಲ್ಲಿ ಒಮ್ಮೆಯಾದರು ಪಲಾವ್ ಮಾಡಿಯೇ ಮಾಡುತ್ತೇವರ. ಸುಲಭವಾಗಿ ಅತ್ಯಂತ ರುಚಿಕರವಾಗಿ ಮಾಡುವಂತಹ ಖಾದ್ಯ ಯಾವುದಾದ್ರು ಇದ್ರೆ ಅದು ಪಲಾವ್ ಎನ್ನಬಹುದು. ತರಕಾರಿಗಳ ಹಾಕಿ ಮಾಡೋದ್ರಿಂದ ಬಹಳ ರುಚಿಯಾಗಿ ಆರೋಗ್ಯಕ್ಕೂ ಉತ್ತಮ ಹಾಗೆ ಬಾಯಿ ರುಚಿಗೆ ಹೇಳಿ ಮಾಡಿಸಿದ ಬ್ರೇಕ್ ಫಾಸ್ಟ್ ಇದು. ಹೀಗಾಗಿ ಬಹುತೇಕ ಹೊಸ ಹೊಸ ರುಚಿಯ ಪಲಾವ್ ಮಾಡುತ್ತಾರೆ.
ಕಡಿಮೆ ವಸ್ತುಗಳ ಬಳಸಿ ಹಲವು ಬಗೆಯ ಪಲಾವ್ ಮಾಡಬಹುದ, ಹಾಗೆ ನಾವಿಂದು ಬೆಳಗ್ಗೆ ತಿಂಡಿಗೆ ವಿಶೇಷವಾಗಿ ಈ ಬಿರಿಯಾನಿ ಪಲಾವ್ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ವೆಜ್ ಬಿರಿಯಾನಿ ಹೆಸರು ನೀವು ಕೇಳಿರುತ್ತೀರಿ. ಅದರಂತೆ ಇದು ಬಿರಿಯಾನಿ ಪಲಾವ್ ಆಗಿದೆ. ಬಹಳ ಸುಲಭವಾಗಿ ಮನೆಯಲ್ಲ ಕುಳಿತು ಬಾಯಿ ಚಪ್ಪರಿಸಿ ಸವಿಯಬಹುದಾದಂತಹ ಪಲಾವ್ ಇದಾಗಿದೆ.

ಹಾಗಾದ್ರೆ ನಾವಿಂದು ಮನೆಯಲ್ಲಿ ಈ ಸುಲಭವಾದ ಬಿರಿಯಾನಿ ಪಲಾವ್ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಹಾಗೆ ಇದನ್ನು ಮಾಡಿ ಸವಿದು ನೋಡೋಣ. ಈ ಬಿರಿಯಾನಿ ಪಲಾವ್ ವಿಭಿನ್ನ ಶೈಲಿಯ ರುಚಿ ನಿಮಗೆ ಮತ್ತೆ ಮತ್ತೆ ಮಾಡಬೇಕು ಎನಿಸುತ್ತದೆ. ಹಾಗಾದ್ರೆ ಈ ಬಿರಿಯಾನಿ ಪಲಾವ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಬಿರಿಯಾನಿ ಪಲಾವ್ ಮಾಡುವ ವಿಧಾನವೇನು? ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಬಿರಿಯಾನಿ ಪಲಾವ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅಕ್ಕಿ
- ಮೆಣಸು - 1/2 tbs
- ಲವಂಗ
- ಶುಂಠಿ/ಬೆಳ್ಳುಳ್ಳಿ
- ಹಸಿರು ಮೆಣಸಿನಕಾಯಿ - 10
- ಕೊತ್ತಂಬರಿ ಸೊಪ್ಪು
- ಟೊಮೆಟೊ
- ಎಣ್ಣೆ
- ಕರಿಬೇವಿನ ಎಲೆಗಳು
- ಬಿರಿಯಾನಿ ಮಸಾಲೆ
- ಪಲಾವ್ ಎಲೆ
- ಸಬ್ಬಸಿಗೆ ಸೊಪ್ಪು
- ತೊಗರಿಕಾಳು
- ಈರುಳ್ಳಿ
- ಧನಿಯಾ ಪುಡಿ
- ಅರಿಶಿನ ಪುಡಿ
- ರುಚಿಗೆ ಉಪ್ಪು
ಬಿರಿಯಾನಿ ಪಲಾವ್ ಮಾಡುವ ವಿಧಾನವೇನು?
ಮೊದಲು ಒಂದು ಗ್ಲಾಸ್‌ನಲ್ಲಿ ಒಂದು ಗ್ಲಾಸ್ ಅಕ್ಕಿ ಹಾಕಿಕೊಂಡು ಚೆನ್ನಾಗಿ ತೊಳೆದು ನೆನೆಸಿಡಬೇಕು. ಬಾಸ್ಮತಿ ರೈಸ್ ಇದ್ದರೆ ಇದಕ್ಕೆ ಅತ್ಯುತ್ತಮ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಕಾಳು ಮೆಣಸು, ಲವಂಗ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು, ಕೊತ್ತಂಬರಿ ಸೊಪ್ಪು, 4 ಟೊಮೆಟೋ, ಚಕ್ಕೆ ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ.
ಈಗ ಪಲೆ ಮೇಲೆ ಒಂದು ಕುಕ್ಕರ್ ಇಟ್ಟು ಇದಕ್ಕೆ ಎಣ್ಣೆ ಹಾಕಿಕೊಳ್ಳಿ, ನಂತರ ಕರಿಬೇವು, ಪಲಾವ್ ಎಲೆ, ಚಕ್ರಮೊಗ್ಗು, ಸೋಂಪು, ಸಬ್ಬಸಿಗೆ ಸೊಪ್ಪು, ತೊಗರಿ ಕಾಳು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಬೇಕು. 2 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ಈರುಳ್ಳಿ ಸೇರಿಸಿಕೊಳ್ಳಿ. ನಂತರ ಇದಕ್ಕೆ ಧನಿಯಾ ಪುಡಿ, ಅರಶಿನ ಹಾಕಿ ಫ್ರೈ ಮಾಡಿಕೊಳ್ಳಿ.
ಈಗ ರುಬ್ಬಿಕೊಂಡಿರುವ ಮಸಾಲೆಯನ್ನು ಇದಕ್ಕೆ ಹಾಕಿ ಚೆನ್ನಾಗಿ ಕುದಿಬರಲು ಬಿಡಬೇಕು. ನಂತರ ಇದಕ್ಕೆ ನೆನೆಸಿಟ್ಟಿರುವ ಅಕ್ಕಿಯನ್ನು ಹಾಕಿ ಮಿಕ್ಸ್ ಮಾಡಿ, ಹಾಗೆ ಅಳತೆಯ ಪ್ರಕಾರವಾಗಿ ನೀರು ಹಾಕಿಕೊಳ್ಳಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸಹ ಸೇರಿಸಿಕೊಳ್ಳಿ. ಒಮ್ಮೆ ಮಿಕ್ಸ್ ಮಾಡಿ ಕುಕ್ಕರ್ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಬೇಕು. 2 ಸೀಟಿ ಹೊಡೆದ ಬಳಿಕ ಒಲೆ ಆಫ್ ಮಾಡಿ ಮುಚ್ಚಳ ತೆಗೆದು ಮಿಕ್ಸ್ ಮಾಡಿಕೊಳ್ಳಿ.
ಇಷ್ಟಾದರೆ ಬಿರಿಯಾನಿ ಪಲಾವ್ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ. ಇದರ ಜೊತೆಗೆ ಒಂದು ಮೊಸರು ಬಜ್ಜಿ ಮಾಡಿಕೊಂಡರೆ ಇದರ ರುಚಿಗೆ ನೀವು ಖಂಡಿತ ಫಿದಾ ಆಗಿ ಬಿಡುತ್ತೀರಿ.



Click it and Unblock the Notifications