Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆನ್ನು ನೋವು, ಕೈ ಕಾಲು ನೋವಿಗೆ ಈ ಜ್ಯೂಸ್ ಫಸ್ಟ್ ಕ್ಲಾಸ್! ವರ್ಷದ ನೋವು ನಿವಾರಣೆ!
ಈಗ ನಿತ್ಯದ ದುಡಿಮೆಯ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ದೊಡ್ಡ ಕೆಲಸವಾಗಿದೆ. ನಮ್ಮ ದೈನಂದಿನ ಕೆಲಸದ ನಡುವೆ ಹಲವು ರೀತಿಯ ಅನಾರೋಗ್ಯಗಳನ್ನು ಸಹ ನಾವು ಎದುರಿಸಬೇಕಾಗುತ್ತದೆ. ಅಂತಹ ಅನಾರೋಗ್ಯ ವಿರುದ್ಧ ನಾವು ಕೂಡ ಸಿದ್ಧತೆ ಮಾಡಿಕೊಳ್ಳಬೇಕಿದೆ. ಇನ್ನು ಕೆಲಸ ಅಂದರೆ ಅಲ್ಲಿ ಮೂಳೆ, ಕೀಲು ನೋವು ಸಾಮಾನ್ಯ ಎನ್ನುವಂತಾಗಿರಲಿದೆ.
ಹಾಗೆ ಮೂಳೆಗಳು ಬಲಶಾಲಿಯಾಗುವಂತಹ ಕೆಲವು ಖಾದ್ಯಗಳ ಮಾಡಿ ಸವಿಯುವ ಕುರಿತು ನಾವಿಂದು ತಿಳಿಯೋಣ. ಅದ್ರಲ್ಲೂ ಮೂಳೆಗಳು ಬಲವಾಗಬೇಕಾದರೆ ಕ್ಯಾಲ್ಸಿಯಂನ ಅಗತ್ಯತೆ ಇರಲಿದೆ. ಹೀಗಾಗಿ ನಾವು ಸೇವಿಸು ಖಾದ್ಯಗಳಲ್ಲಿ ಕ್ಯಾಲ್ಸಿಯಂ ಸೇರಿಸುವುದು ಬಹಳ ಉತ್ತಮ. ಹೀಗಾಗಿ ನಾವಿಂದು ಕ್ಯಾಲ್ಸಿಯಂ ತುಂಬಿರುವ ಹುರುಳಿ ಖಾದ್ಯ ಕುರಿತು ತಿಳಿಯೋಣ.

ಹುರುಳಿಯಲ್ಲಿನ ಫೈಬರ್ ಹಾಗೂ ಕ್ಯಾಲ್ಸಿಯಂ ಅಂಶ ನಿಮ್ಮ ದೇಹಕ್ಕೆ ಬಹಳ ಉತ್ತಮ. ಅದ್ರಲ್ಲು ಬೆನ್ನು ನೋವು, ಕೈ ಕಾಲು ನೋವು, ಮೂಳೆ ನೋವಿನಂತಹ ಸಮಸ್ಯೆ ಇದ್ದರೆ ಈ ಹುರುಳಿ ಜ್ಯೂಸ್ ಕುಡಿದು ನೋಡಿ. ಇದು ನಿಮ್ಮೆಲ್ಲಾ ಮೂಳೆ ಸಮಸ್ಯೆಗಳಿಗೂ ಪರಿಹಾರ ನೀಡಲಿದೆ. ಹಾಗಾದ್ರೆ ಹುರುಳಿಯಿಂದ ಈ ಜ್ಯೂಸ್ ಮಾಡೋದು ಹೇಗೆ ನೋಡೋಣ.
ಹುರುಳಿ ಜ್ಯೂಸ್ ಮಾಡುವುದು ಹೇಗೆ? ಹುರುಳಿ ಜ್ಯೂಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳಿ.
ಹುರುಳಿ ಜ್ಯೂಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಹುರುಳಿ
- ಬೆಲ್ಲ
- ಕಾಳು ಮೆಣಸಿನ ಪುಡಿ
- ಶುಂಠಿ
- ತುಪ್ಪ
- ಹಾಲು
- ಉಪ್ಪು
ಹುರುಳಿ ಜ್ಯೂಸ್ ಮಾಡುವುದು ಹೇಗೆ?
ಮೊದಲಿಗೆ ಹುರುಳಿ ಅನ್ನು ತೆಗೆದುಕೊಂಡು ಬಾಣಲೆಗೆ ಹಾಕಿ ಹುರಿದುಕೊಳ್ಳಬೇಕು. 5 ನಿಮಿಷ ಹುರಿದುಕೊಂಡ ಬಳಿಕ ಇದನ್ನು ತಣ್ಣಗಾಗಲು ಬಿಡಿ. ಸ್ವಲ್ಪ ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಇದು ನುಣ್ಣಗೆ ಪುಡಿ ಪುಡಿಯಾಗಬೇಕು. ಈಗ ಬಾಣಲೆಯಲ್ಲಿ ಬೆಲ್ಲ ಹಾಕಿ ಅದಕ್ಕೆ ನೀರು ಹಾಕಿ ಕರಗಲು ಬಿಡಿ.
ಈ ಬೆಲ್ಲದ ನೀರಿಗೆ ಉಪ್ಪು ಸಹ ಹಾಕಿಕೊಂಡು ಮಿಶ್ರಣ ಮಾಡಿ. ಈಗ 3 ಸ್ಪೂನ್ ಹುರುಳಿ ಹಿಟ್ಟನ್ನು ಈ ಬೆಲ್ಲದ ನೀರಿಗೆ ಹಾಕಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಕುದಿಬರಲು ಬಿಡಿ. ನಿಧಾನವಾಗಿ ತಿರುಗಿಸುತ್ತಾ ಇರಿ. ಹಾಗೆ ಇದನ್ನು ನೀರು ಹಾಕದೆ ಹಾಗೆಯೇ ಕುದಿಬರಲು ಬಿಡಿ. ಕುದಿಬರುವಾಗ ಇದಕ್ಕೆ ಕಾಳು ಮೆಣಸಿನ ಪುಡಿ ಇಲ್ಲವೆ ಶುಂಠಿ ಹಾಕಿಕೊಳ್ಳಿ.
ಕೊನೆಯಲ್ಲಿ 1 ಸ್ಪೂನ್ ತುಪ್ಪ ಹಾಕಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ನಂತರ ಇದಕ್ಕೆ ಬೇಕಾದಷ್ಟು ಹಾಕು ಸಹ ಸೇರಿಸಿಕೊಳ್ಳಿ. ನಂತರ ಮಿಶ್ರಣ ಮಾಡಿ ಅಥವಾ ಒಂದು ಲೋಟದಿಂದ ಇನ್ನೊಂದು ಲೋಟಕ್ಕೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅನಂತರ ಒಂದು ಗ್ಲಾಸ್ ಹುರುಳಿ ಜ್ಯೂಸ್ ಕುಡಿದು ನೋಡಿ. ಇದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ ಜ್ಯುಸ್ ಆಗಿರಲಿದೆ.



Click it and Unblock the Notifications