Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಚೋರಿ ಪ್ರಿಯರಿಗೆ ಬೆಸ್ಟ್! ಕಡಲೆ ಹಿಟ್ಟಿನಿಂದ ಕ್ರಿಸ್ಪಿ ಕಚೋರಿ.. ಸುಲಭ ವಿಧಾನ ಇಲ್ಲಿದೆ
ಕಚೋರಿ ಪ್ರಿಯರಿಗೆ ಮಾನ್ಸೂನ್ ಸ್ಪೆಷಲ್! ಮನೆಯಲ್ಲೇ ಮಾಡಿ ಬಾಯಿ ಚಪ್ಪರಿಸುವ ಬೇಸನ್ ಕಚೋರಿ (Besan Kachori). ಮಳೆ ಸವಿಯುತ್ತಾ ಎಂಜಾಯ್ ಮಾಡಿ. ಭಾರತದಲ್ಲಿ ಪ್ರತಿಯೊಂದು ರಾಜ್ಯವು ತನ್ನದೇ ಆದ ವಿಶಿಷ್ಟವಾದ ಅಡುಗೆಗಳನ್ನು ಹೊಂದಿದೆ. ಮಳೆಯ ವಾತಾವರಣದಲ್ಲಿ (Monsoon) ಹೆಚ್ಚಿನ ಜನರು ಮಸಾಲೆಯುಕ್ತ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಬೇಸನ್ ಕಚೋರಿ ಉತ್ತರ ಭಾರತದಲ್ಲಿ ಹೆಚ್ಚು ಪ್ರಸಿದ್ಧವಾಗಿದೆ. ಆದರೆ, ಈಗ ಭಾರತದಾದ್ಯಂತ ಲಭ್ಯವಿದೆ. ನಾವು ಇಂದು ಕಡಲೆ ಹಿಟ್ಟಿನ ಕಚೋರಿಯನ್ನು (Besan Kachori Recipe) ಹೇಗೆ ತಯಾರಿಸುವುದು ಎಂಬ ಬಗ್ಗೆ ತಿಳಿಸಿಕೊಡಲಿದ್ದೇವೆ.
ಕಡಲೆ ಹಿಟ್ಟಿನಿಂದ ತಯಾರಿಸಲಾಗುವ ಕಚೋರಿ ಭಾರತದ ಜನಪ್ರಿಯ ತಿಂಡಿಗಳಲ್ಲಿ ಒಂದು. ಇದನ್ನು ತಯಾರಿಸಲು ಕಡಲೆ ಹಿಟ್ಟು, ಮೈದಾ ಹಿಟ್ಟು, ಜೀರಿಗೆ, ಓಂ ಕಾಳು, ಅಡುಗೆ ಸೋಡಾ, ಮತ್ತು ಉಪ್ಪನ್ನು ಬಳಸಲಾಗುತ್ತದೆ. ಕಚೋರಿಯನ್ನು ಸಾಮಾನ್ಯವಾಗಿ ಸಿಹಿ ಚಟ್ನಿ, ಹಸಿರು ಚಟ್ನಿ, ಅಥವಾ ಮೊಸರಿನೊಂದಿಗೆ ಸವಿಯುತ್ತಾರೆ. ಕೆಲವು ಪ್ರದೇಶಗಳಲ್ಲಿ, ಇದನ್ನು ಆಲೂಗಡ್ಡೆ ಕರಿ ಅಥವಾ ಚೋಲದೊಂದಿಗೆ ಕೂಡ ನೀಡಲಾಗುತ್ತದೆ. ಕಚೋರಿಯನ್ನು ಮಧ್ಯಾಹ್ನದ ಊಟಕ್ಕೆ ಅಥವಾ ಸಂಜೆಯ ಟೀ ಜೊತೆಗೆ ತಿನ್ನಲು ಇಷ್ಟಪಡುತ್ತಾರೆ.

ಕಚೋರಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಸುಲಭವಾಗಿ ಸಿಗುತ್ತವೆ. ಇದನ್ನು ಮನೆಯಲ್ಲಿಯೇ ತಯಾರಿಸಬಹುದು. ಹಬ್ಬ ಹರಿದಿನಗಳಲ್ಲಿ ಮತ್ತು ವಿಶೇಷ ಸಂದರ್ಭಗಳಲ್ಲಿ ಕಚೋರಿಯನ್ನು ತಯಾರಿಸಿ ಸವಿಯುವುದು ಸಾಮಾನ್ಯ. ಕಚೋರಿಯನ್ನು ತಯಾರಿಸುವ ವಿಧಾನವು ಸರಳವಾಗಿದ್ದರೂ, ರುಚಿಯಲ್ಲಿ ಮಾತ್ರ ರಾಜಿ ಮಾಡಿಕೊಳ್ಳುವುದಿಲ್ಲ. ಬಿಸಿ ಬಿಸಿಯಾದ ಕಚೋರಿಗಳು ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತವೆ.
ಬೇಸನ್ ಕಚೋರಿ ತಯಾರಿಸಲು ಬೇಕಾಗುವ ಪದಾರ್ಥಗಳು
• ಕಡಲೆ ಹಿಟ್ಟು - 1 ಕಪ್
• ಮೈದಾ ಹಿಟ್ಟು - 1/2 ಕಪ್
• ಕೆಂಪು ಮೆಣಸಿನ ಪುಡಿ (ಖಾರದ ಪುಡಿ) - 1 ಚಮಚ
• ಕೊತ್ತಂಬರಿ ಸೊಪ್ಪು - ಸ್ವಲ್ಪ
• ಶುಂಠಿ ಪೇಸ್ಟ್ - 1/2 ಚಮಚ
• ತುಪ್ಪ
• ಸೋಂಪು
• ಉಪ್ಪಿನಕಾಯಿ ಮಸಾಲೆ (ಗರಂ ಮಸಾಲ) - 1/2 ಚಮಚ
• ಜೀರಿಗೆ
• ಓಂಕಾಳು - 1/2 ಚಮಚ
• ಎಣ್ಣೆ - ಕರಿಯಲು ಮತ್ತು ಹಿಟ್ಟಿಗೆ ಹಾಕಲು
• ಉಪ್ಪು - ರುಚಿಗೆ ತಕ್ಕಷ್ಟು

ಕಡಲೆ ಹಿಟ್ಟಿನ ಕಚೋರಿ ಮಾಡುವ ವಿಧಾನ
ಮೊದಲಿಗೆ ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು ತೆಗೆದುಕೊಳ್ಳಿ. ಅದಕ್ಕೆ ಓಂಕಾಳು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಹಿಟ್ಟನ್ನು ನಾದಿಕೊಳ್ಳಿ. ಈಗ ಗ್ಯಾಸ್ ಆನ್ ಮಾಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಲು ಇಡಿ. ಅದಕ್ಕೆ ಇಂಗು, ಜೀರಿಗೆ ಮತ್ತು ಸೋಂಪು ಸೇರಿಸಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಸ್ವಲ್ಪ ಹೊತ್ತು ಫ್ರೈ ಮಾಡಿ.
ಇದಾದ ನಂತರ ಅದಕ್ಕೆ ಕಡಲೆ ಹಿಟ್ಟು ಸೇರಿಸಿ ಚೆನ್ನಾಗಿ ಹುರಿಯಿರಿ. ಬಳಿಕ ಉಪ್ಪಿನಕಾಯಿ ಮಸಾಲೆ, ಕೆಂಪು ಮೆಣಸಿನ ಪುಡಿ ಮತ್ತು ಕೊತ್ತಂಬರಿ ಸೊಪ್ಪು ಅಥವಾ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಗ್ಯಾಸ್ ಆಫ್ ಮಾಡಿ. ಈಗ ನಾದಿಕೊಂಡ ಹಿಟ್ಟಿನಿಂದ ಸಣ್ಣ ಪುರಿಗಳನ್ನು ಮಾಡಿ. ಅದರಲ್ಲಿ ಕಡಲೆ ಹಿಟ್ಟಿನ ಸ್ಟಫಿಂಗ್ ತುಂಬಿ ಕಚೋರಿಯನ್ನು ಚೆನ್ನಾಗಿ ಕಟ್ಟಿ. ಇದರಿಂದ ಸ್ಟಫಿಂಗ್ ಹೊರಗೆ ಬರದಂತೆ ಇರುತ್ತದೆ.

ಈಗ ಎಣ್ಣೆ ಚೆನ್ನಾಗಿ ಬಿಸಿ ಮಾಡಿ. ಬಳಿಕ ಅದನ್ನು ಸಣ್ಣ ಉರಿಯಲ್ಲಿ ಇಡಿ. ಕಚೋರಿಯನ್ನು ಎಣ್ಣೆಯಲ್ಲಿ ಹಾಕಿ. ಕಚೋರಿ ಎರಡೂ ಕಡೆ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ. ಇಷ್ಟು ಮಾಡಿದರೆ, ಈಗ ರುಚಿಯಾದ ಕಡಲೆ ಹಿಟ್ಟಿನ ಕಚೋರಿ ಸವಿಯಲು ಸಿದ್ಧ. ತಯಾರಾದ ಕಚೋರಿಯನ್ನು ಚಟ್ನಿಯೊಂದಿಗೆ ಬಿಸಿಬಿಸಿಯಾಗಿ ಸವಿಯಬಹುದು. ಇದನ್ನು ಟೊಮೆಟೊ ಸಾಸ್ ಜೊತೆಗೆ ಮಕ್ಕಳಿಗೆ ನೀಡಬಹುದು. ಒಟ್ಟಾರೆಯಾಗಿ, ಈ ಕಡಲೆ ಹಿಟ್ಟಿನ ಕಚೋರಿ ಮಳೆಯ ವಾತಾವರಣಕ್ಕೆ ಹೇಳಿಮಾಡಿಸಿದ ಖಾದ್ಯ. ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.



Click it and Unblock the Notifications