Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಇದರ ಗಮ್ಮತ್ತೇ ಬೇರೆ! ನಾಟಿ ಸ್ಟೈಲ್ ದೊನ್ನೆ ಬಿರಿಯಾನಿ.. ಹೈದರಾಬಾದ್ ಬಿರಿಯಾನಿಯೂ ಜುಜುಬಿ; ಮಾಡೋದು ಹೇಗೆ?
ಬಿರಿಯಾನಿ ಅಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ದೊನ್ನೆ ಬಿರಿಯಾನಿ ಹಲವರ ಫೇವರಿಟ್. ಆದರೆ, ಬೆಂಗಳೂರು ಸ್ಪೆಷಲ್ 'ನಾಟಿ ಸ್ಟೈಲ್ ದೊನ್ನೆ ಬಿರಿಯಾನಿ' ಅಂದ್ರೆ, ಎಲ್ಲರ ಬಾಯಲ್ಲಿ ನೀರೂರಿಸುತ್ತದೆ. ಇದರ ಮುಂದೆ ಹೈದರಾಬಾದಿ ಬಿರಿಯಾನಿ ಕೂಡ ಜುಜುಬಿ. ಹೌದು, ನಾವು ಹೇಳುತ್ತಿರುವುದು ಬೆಂಗಳೂರು ಸ್ಪೆಷಲ್ ಚಿಕನ್ ದೊನ್ನೆ ಬಿರಿಯಾನಿ ಬಗ್ಗೆ. ಇದು ಬೆಂಗಳೂರಿನಲ್ಲಿ ಬಹಳ ಜನಪ್ರಿಯ ಮಾಂಸಹಾರಿ ಖಾದ್ಯ. ಈ ಬಿರಿಯಾನಿಯನ್ನು ಸಾಮಾನ್ಯವಾಗಿ ದೊನ್ನೆ ಎಂಬ ಮರದ ತಟ್ಟೆಯಲ್ಲಿ ಬಡಿಸಲಾಗುತ್ತದೆ. ಆದ್ದರಿಂದ, ಇದಕ್ಕೆ ಈ ಹೆಸರು ಬಂದಿದೆ. ಹಾಗಿದ್ರೆ, ಬೆಂಗಳೂರು ಚಿಕನ್ ದೊನ್ನೆ ಬಿರಿಯಾನಿ (Bengaluru Nati style Donne Biryani) ಹೇಗೆ ತಯಾರಿಬೇಕು ಎಂಬುದುನ್ನು ತಿಳಿಯೋಣ ಬನ್ನಿ.
ದೊನ್ನೆ ಬಿರಿಯಾನಿ ಸಾಮಾನ್ಯ ಬಿರಿಯಾನಿಗಳಿಗಿಂತ ವಿಶಿಷ್ಟವಾದ ಮಸಾಲೆ ಮತ್ತು ಅಡುಗೆ ವಿಧಾನವನ್ನು ಹೊಂದಿದೆ. ಈ ದೊನ್ನೆಗಳನ್ನು ಸಾಮಾನ್ಯವಾಗಿ ಬಾಳೆ ಎಲೆಗಳು ಅಥವಾ ಪರಿಸರ ಸ್ನೇಹಿ ಎಲೆಗಳಿಂದ ತಯಾರಿಸಲಾಗುತ್ತದೆ. ಈ ದೊನ್ನೆಗಳಲ್ಲಿ ಬಿರಿಯಾನಿಯನ್ನು ಬಡಿಸುವುದರಿಂದ ಅದಕ್ಕೆ ವಿಶಿಷ್ಟವಾದ ರುಚಿ ಮತ್ತು ವಾಸನೆ ಸಿಗುತ್ತದೆ. ಬೆಂಗಳೂರು ಮತ್ತು ಮೈಸೂರು ಭಾಗದಲ್ಲಿ ಸಾಮಾನ್ಯವಾಗಿ ಬೆಳೆಯುವ ಜೀರಾ ಅಕ್ಕಿ ಅಥವಾ ಸಣ್ಣ ಅಕ್ಕಿಯನ್ನು ಈ ಬಿರಿಯಾನಿಗೆ ಬಳಸಬೇಕು. ಈ ದೊನ್ನೆ ಬಿರಿಯಾನಿ ತಯಾರಿಸಲು ಯಾವೆಲ್ಲಾ ಪದಾರ್ಥಗಳು ಬೇಕು ಅಂತ ನೋಡೋಣ ಬನ್ನಿ.

ದೊನ್ನೆ ಬಿರಿಯಾನಿ ತಯಾರಿಸಲು ಬೇಕಾಗುವ ಪದಾರ್ಥಗಳು
• ಅಕ್ಕಿ - 2 ಕಪ್
• ಚಿಕನ್ (ಕೋಳಿ) - 500 ಗ್ರಾಂ
• ಎಣ್ಣೆ - 3 ಸ್ಪೂನ್
• ತುಪ್ಪ - 3 ಸ್ಪೂನ್
• ಈರುಳ್ಳಿ - 2
• ಹಸಿ ಮೆಣಸಿನಕಾಯಿ - 4 ರಿಂದ 5
• ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಸ್ಪೂನ್
• ಟೊಮ್ಯಾಟೊ - 1
• ಪುದೀನ ಎಲೆಗಳು - 1 ಕಪ್
• ಕೊತ್ತಂಬರಿ ಸೊಪ್ಪು - 1 ಕಪ್
• ಮೊಸರು - 1/2 ಕಪ್
• ಉಪ್ಪು: ರುಚಿಗೆ ತಕ್ಕಷ್ಟು
• ನಿಂಬೆ ರಸ: 1 ಚಮಚ
ದೊನ್ನೆ ಬಿರಿಯಾನಿ ಮಸಾಲೆ ಪೇಸ್ಟ್ ತಯಾರಿಸಿ
• ಕೊತ್ತಂಬರಿ ಸೊಪ್ಪು - 1 ಕಪ್
• ಪುದೀನ ಸೊಪ್ಪು - 1/2 ಕಪ್
• ಹಸಿ ಮೆಣಸಿನಕಾಯಿ - 4 ರಿಂದ 5
• ಶುಂಠಿ - ಸ್ವಲ್ಪ
• ಬೆಳ್ಳುಳ್ಳಿ - 6 ರಿಂದ 7 ಎಸಳು
• ಲವಂಗ - 4 ರಿಂದ 5
• ಏಲಕ್ಕಿ - 3 ರಿಂದ 4
• ದಾಲ್ಚಿನ್ನಿ - ಸ್ವಲ್ಪ
• ತೆಂಗಿನಕಾಯಿ ತುರಿ - 2 ಸ್ಪೂನ್

ದೊನ್ನೆ ಬಿರಿಯಾನಿ ಮಾಡುವ ವಿಧಾನ
ಮೊದಲು, ಕೊತ್ತಂಬರಿ, ಪುದೀನ, ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಏಲಕ್ಕಿ, ದಾಲ್ಚಿನ್ನಿ, ಕಡಲೆ ಹಿಟ್ಟು ಮತ್ತು ತೆಂಗಿನಕಾಯಿ ತುರಿ ಎಲ್ಲವನ್ನೂ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಬೇಕು. ಇದಕ್ಕೆ ಸ್ವಲ್ಪ ನೀರು ಸೇರಿಸಬಹುದು. ಈಗ ಅಕ್ಕಿಯನ್ನು ಚೆನ್ನಾಗಿ ತೊಳೆದು 20 ರಿಂದ 30 ನಿಮಿಷಗಳ ಕಾಲ ನೆನೆಸಿಡಿಬೇಕು. ಬಳಿಕ ಒಂದು ದೊಡ್ಡ ಬಟ್ಟಲಿನಲ್ಲಿ ಚಿಕನ್ ತುಂಡುಗಳನ್ನು ಹಾಕಿ. ಅರ್ಧ ಮಸಾಲಾ ಪೇಸ್ಟ್, ಅರ್ಧ ಮೊಸರು ಮತ್ತು ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಇದನ್ನು 30 ನಿಮಿಷಗಳ ಕಾಲ ಫ್ರಿಡ್ಜ್‌ನಲ್ಲಿ ಇಡಬೇಕು.
ಈಗ ದೊಡ್ಡ ಪಾತ್ರೆ ತೆಗೆದುಕೊಂಡು ಎಣ್ಣೆ ಮತ್ತು ತುಪ್ಪವನ್ನು ಹಾಕಿ ಬಿಸಿ ಮಾಡಬೇಕು. ಎಣ್ಣೆ ಬಿಸಿಯಾದ ಬಳಿಕ ಈರುಳ್ಳಿ ಹಾಕಿ ಚೆನ್ನಾಗಿ ರೋಸ್ಟ್ ಮಾಡಬೇಕು. ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ. ಈಗ ಟೊಮ್ಯಾಟೊ, ಹಸಿ ಮೆಣಸಿನಕಾಯಿ ಮತ್ತು ಉಳಿದ ಮಸಾಲಾ ಪೇಸ್ಟ್ ಹಾಕಿ. ಬಳಿಕ ನೀವು ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಚಿಕನ್ ತೆಗೆದುಕೊಂಡು ಇದಕ್ಕೆ ಹಾಕಿ. ಮಧ್ಯಮ ಉರಿಯಲ್ಲಿ 5 ರಿಂದ 7 ನಿಮಿಷ ಬೇಯಿಸಿ. ಚಿಕನ್ ಬಣ್ಣ ಸ್ವಲ್ಪ ಬದಲಾಗಬೇಕು. ಮೊಸರು, ಪುದೀನ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಒಂದು ನಿಮಿಷ ಬೇಯಿಸಿ.
ಈಗ ಅಕ್ಕಿಯನ್ನು ಚಿಕನ್‌ಗೆ ಹಾಕಿ ನಿಧಾನವಾಗಿ ಮಿಕ್ಸ್ ಮಾಡಿ. ನೆನಪಿಡಿ, ಅಕ್ಕಿ ಕಾಳು ಮುರಿಯಬಾರದು. ಒಂದು ಕಪ್ ಅಕ್ಕಿ ಮತ್ತು ಒಂದೂವರೆ ಕಪ್ ನೀರು ಇರಬೇಕು. ಈಗ ಮೂರು ಕಪ್ ಬಿಸಿ ನೀರು ಅಥವಾ ಚಿಕನ್ ಸ್ಟಾಕ್ ಸುರಿಯಿರಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ನಿಂಬೆ ರಸ ಹಾಕಿ. ಇದನ್ನು ಚೆನ್ನಾಗಿ ಕುದಿಸಿ, ಉರಿಯನ್ನು ಕಡಿಮೆ ಮಾಡಿ. ಬಳಿಕ ಪ್ಲೇಟ್ ಮುಚ್ಚಿ 15 ರಿಂದ 20 ನಿಮಿಷಗಳ ಕಾಲ ಬೇಯಿಸಿ. ಬಿರಿಯಾನಿ ಅಂಟಿಕೊಳ್ಳದಂತೆ ನೋಡಿಕೊಳ್ಳಿ. ಈಗ ಗ್ಯಾಸ್ ಆಫ್ ಮಾಡಿ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇಷ್ಟು ಮಾಡಿದರೆ ಬೆಂಗಳೂರು ಸ್ಪೆಷಲ್ ದೊನ್ನೆ ಬಿರಿಯಾನಿ ಸವಿಯಲು ಸಿದ್ಧ.



Click it and Unblock the Notifications