Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಂಗಳೂರು ಸ್ಟೈಲ್‌ನ ಮುರುಗನ್ ಇಡ್ಲಿ ಮಾಡಿ ನೋಡಿ..! ಎಷ್ಟು ಸಿಂಪಲ್ ಗೊತ್ತಾ?
ಬೆಳಗ್ಗೆ ಎದ್ದಾಗ ಇಂದು ಯಾವ ತಿಂಡಿ ಮಾಡಬೇಕು ಎಂದು ಎಲ್ಲರು ಒಮ್ಮೆ ಯೋಚಿಸಿಯೇ ಯೋಚಿಸುತ್ತಾರೆ. ಹಾಗೆ ಸಡನ್ ಆಗಿ ಮಾಡುವಂತಹ ತಿಂಡಿಗಳಿಗೆ ಭಾರಿ ಬೇಡಿಕೆಯೂ ಇದೆ. ಯಾಕಂದ್ರೆ ಬೆಳಗ್ಗೆ ಎದ್ದಾಗಿನಿಂದ ಕೆಲಸಗಳು ಒಂದೊಂದೇ ಬರುತ್ತವೆ, ಹೀಗಾಗಿ ಗೃಹಿಣಿಯರಿಗೆ ತಿಂಡಿ ಮಾಡುವುದೊಂದೇ ಕೆಲಸವಾಗಿರುವುದಿಲ್ಲ. ಇನ್ನು ತಿಂಡಿಯೂ ಮಾಡುತ್ತಾ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ಇಡ್ಲಿ ಮಾಡುವುದು ಸಾಮಾನ್ಯ.
ಹಾಗೆ ಹಲವು ಬೆಳಗ್ಗೆ ತಿಂಡಿಗೆ ಇಡ್ಲಿ ಮಾಡಿ ಸವಿಯುತ್ತಾರೆ. ಇಡ್ಲಿ ಎಲ್ಲರ ಮನೆಯ ಸಾಮಾನ್ಯ ಖಾದ್ಯ, ಬಹಳ ಸುಲಭವಾಗಿ ಕಡಿಮೆ ಸಮಯದಲ್ಲಿ ಇದನ್ನು ಮಾಡಬಹುದಾಗೊರೋದ್ರಿಂದ ಗೃಹಿಣಿಯರು ಬೆಳಗ್ಗೆ ತಿಂಡಿಗೆ ಮಾಡಿ ಸವಿಯಲು ಮುಂದಾಗುತ್ತಾರೆ. ಇಡ್ಲಿ ಆರೋಗ್ಯಕ್ಕೂ ಬಹಳ ಉತ್ತಮ. ಹಾಗೆ ಈ ಇಡ್ಲಿಯಲ್ಲಿ ಹತ್ತಾರು ವಿಧಗಳಿವೆ.

ಒಂದೊಂದು ಊರಿಗೆ ತೆರಳಿದರು ಅಲ್ಲಿ ವಿಶೇಷ ರೀತಿಯ ಇಡ್ಲಿ ಮಾಡುವುದನ್ನು ನಾವು ನೋಡಬಹುದು. ರವೆ ಇಡ್ಲಿ, ಮಸಾಲೆ ಇಡ್ಲಿ, ಬಿಡದಿ ತಟ್ಟೆ ಇಡ್ಲಿ, ಮಲ್ಲಿಗೆ ಇಡ್ಲಿ ಹೀಗೆ ಹತ್ತಾರು ಬಗೆಯ ಇಡ್ಲಿ ಇವೆ. ಹಾಗೆ ನೀವು ಬೆಂಗಳೂರಿನಲ್ಲಿ ಮುರುಗನ್ ಇಡ್ಲಿ ಎಂಬ ವಿಶೇಷ ಬಗೆಯ ಇಡ್ಲಿ ಸವಿದಿರಬಹುದು. ಮೂಲತಃ ತಮಿಳುನಾಡಿನಲ್ಲಿ ಹೆಚ್ಚಾಗಿ ಮಾಡಿ ಸವಿಯುತ್ತಾರೆ.
ಬೆಂಗಳೂರಿನ ಹಲವು ಕ್ಯಾಂಟೀನ್‌ಗಳಲ್ಲಿ ಈ ಮುರುಗನ್ ಇಡ್ಲಿ ಮಾಡುತ್ತಾರೆ. ಇದೊಂದು ಫೇಮಸ್ ಇಡ್ಲಿಯ ಬಗೆಯಾಗಿದೆ. ಹಾಗಾದ್ರೆ ನಾವಿಂದು ಮನೆಯಲ್ಲೇ ಕುಳಿತು ಈ ಮುರುಗನ್ ಇಡ್ಲಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಮುರುಗನ್ ಫೇಮಸ್ ಇಡ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಬೇಕಾಗುತ್ತದೆ? ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಮರುಗನ್ ಫೇಮಸ್ ಇಡ್ಲಿ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ
- ಅವಲಕ್ಕಿ
- ಉದ್ದಿನ ಬೇಳೆ
- ಸಾಬೂದಾನಿ
- ಬೇಕಿಂಗ್ ಸೋಡಾ
- ಉಪ್ಪು
- ಎಣ್ಣೆ
ಮರುಗನ್ ಫೇಮಸ್ ಇಡ್ಲಿ ಮಾಡುವ ವಿಧಾನ
ಮೊದಲು ಒಂದು ಬೌಲ್‌ನಲ್ಲಿ 2 ಕಪ್ ಅಕ್ಕಿ ತೆಗೆದುಕೊಂಡು ಇದಕ್ಕೆ ಒಂದು ಕಪ್ ಸಾಬೂದಾನಿ ಹಾಕಿ ಚೆನ್ನಾಗಿ ತೊಳೆದುಕೊಳ್ಳಬೇಕು. 4 ಬಾರಿಯಾದರು ತೊಳೆದುಕೊಂಡು ಬಳಿಕ ಅಕ್ಕಿ ಮುಳುಗುವಷ್ಟು ನೀರು ಹಾಕಿ ನೆನೆಯಲು ಬಿಡಿ.
ಈಗ ಮತ್ತೊಂದು ಪಾತ್ರೆಗೆ ಮುಕ್ಕಾಲು ಕಪ್ ಉದ್ದಿನ ಬೇಳೆ ಹಾಕಿಕೊಂಡು ಅದಕ್ಕೆ ನೀರು ಹಾಕಿ ತೊಳೆದುಕೊಂಡು ಇದನ್ನು ಕೂಡ ನೆನೆಸಿಡಬೇಕು. ಈ ಎರಡು ಪದಾರ್ಥಗಳು 6 ಗಂಟೆ ನೆನೆದ ಬಳಿಕ ಒಂದು ಕಪ್‌ನಲ್ಲಿ ಅವಲಕ್ಕಿ ಹಾಕಿ ತೊಳದು ನೆನೆಸಿಡಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಉದ್ದಿನ ಬೇಳೆ ಹಾಕಿಕೊಂಡು ರುಬ್ಬಿಕೊಳ್ಳಿ. ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು. ಈ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ.
ಈಗ ಅಕ್ಕಿಯನ್ನು ಕೂಡ ಇದೇ ರೀತಿ ಅಕ್ಕಿ ಹಾಗೂ ಸಾಬೂದಾನಿ ಹಾಕಿಕೊಂಡು ರುಬ್ಬಿಕೊಳ್ಳಿ. ಸ್ವಲ್ಪ ನೀರು ಹಾಕಿಕೊಂಡು ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಇದನ್ನು ಉದ್ದಿನ ಬೇಳೆ ಹಿಟ್ಟಿನ ಜೊತೆಗೆ ಸೇರಿಸಿಕೊಳ್ಳಿ. ಈಗ ಅವಲಕ್ಕಿಯನ್ನು ಹಾಕಿಕೊಂಡು ರುಬ್ಬಿಕೊಂಡು ಅದೇ ಪಾತ್ರೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟಿಗೆ ಬೇಕಿಂಗ್ ಸೋಡಾ ಹಾಕಿ 5 ನಿಮಿಷ ಮಿಕ್ಸ್ ಮಾಡಿಕೊಳ್ಳಿ. ನಂತರ ಮುಚ್ಚಳ ಮುಚ್ಚಿ ರಾತ್ರಿ ನೆನೆಯಲು ಬಿಡಿ.
ಬೆಳಗ್ಗೆ ಈ ಹಿಟ್ಟಿಗೆ ಉಪ್ಪು ಸೇರಿಸಿ ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಈಗ ರೆಡಿಯಾಗಿರುವ ಹಿಟ್ಟನ್ನು ತೆಗೆದುಕೊಂಡು ಪ್ಲೇಟ್‌ಗಳಿಗೆ ಎಣ್ಣೆ ಸವರಿಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿಕೊಳ್ಳಿ. ಈ ಪ್ಲೇಟ್‌ಗಳನ್ನು ಇಡ್ಲಿ ಕುಕ್ಕರ್‌ನಲ್ಲಿ ಇಟ್ಟು ಬೇಯಿಸಿಕೊಳ್ಳಿ. 15 ನಿಮಿಷದಲ್ಲಿ ಬೇಯುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಮುರುಗನ್ ಸ್ಟೈಲ್‌ನ ಇಡ್ಲಿ ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications