Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಾಂಬಾರ್, ಮೊಸರು ಏನೆ ಇದ್ದರೂ ಈ ಬೆಂಡೆಕಾಯಿ ಫ್ರೈ ಬೆಸ್ಟ್ ಕಾಂಬಿನೇಷನ್: ಟ್ರೈ ಮಾಡಿ ನೋಡಿ
ಬೆಂಡೆಕಾಯಿ ಸವಿಯುವುದರಿಂದ ಬುದ್ದಿ ಚುರುಕುತಾಗುತ್ತದೆ ಎಂದು ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಅದ್ರಲ್ಲೂ ನಿತ್ಯದ ಖಾದ್ಯಗಳು, ಅಡುಗೆಯಲ್ಲಿ ಬೆಂಡೆಕಾಯಿ ಬಳಸುವಂತೆ ಹೇಳುವುದು ನೋಡಬಹುದು. ಹಾಗೆ ಬೆಂಡೆಕಾಯಿಯಲ್ಲಿರುವ ಹಲವು ಆರೋಗ್ಯಕರ ಅಂಶಗಳು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುತ್ತದೆ.
ಬೆಂಡೆಕಾಯಿಯಲ್ಲಿ ಹಲವು ರೀತಿಯ ಖಾದ್ಯಗಳ ಮಾಡುವುದು ನೋಡಬಹುದು. ಬೆಂಡೆಕಾಯಿ ಸಾಂಬಾರ್, ಬೆಂಡೆಕಾಯಿ ಪಲ್ಯ, ಬೆಂಡೆಕಾಯಿ ಗ್ರೇವಿ, ಬೆಂಡೆ ಮಸಾಲ ಫ್ರೈ, ಬೆಂಡೆಕಾಯಿಯ ಬಜ್ಜಿ ಕೂಡ ಮಾಡುವುದು ನೋಡಬಹುದು. ಹಾಗೆ ಕೆಲವರು ಈ ಬೆಂಡೆಕಾಯಿಯನ್ನು ಬಿಸಿಲಿನಲ್ಲಿ ಒಣಗಿಸಿ ಅದು ಒಣಗಿದ ಬಳಿಕ ಮಸಾಲೆಗಳ ತುಂಬಿ ಅದನ್ನು ಮಜ್ಜಿಗೆಯಲ್ಲಿ ನೆನೆಸಿಟ್ಟು ಬಳಿಕ ಎಣ್ಣೆಗೆ ಬಿಟ್ಟು ಕರಿದು ಸವಿಯುವುದು ನೋಡಬಹುದು.

ಹಾಗೆ ಬೆಂಡೆಕಾಯಿಯಲ್ಲಿ ಇಷ್ಟೊಂದು ಅಡುಗೆಗಳು ಮಾಡಬಹುದಾದರು ನಾವಿಂದು ಈ ಬೆಂಡೆಕಾಯಿಯ ಕರಿದ ಗರಿ ಗರಿಯಾದ ಮಸಾಲ ಫ್ರೈ ಮಾಡುವ ಕುರಿತು ತಿಲಿದುಕೊಳ್ಳೋಣ. ಊಟದ ಜೊತೆಗೆ ಇಲ್ಲವೆ ಸ್ನ್ಯಾಕ್ಸ್ ಆಗಿ ಸವಿಯಬಹುದು. ಮಕ್ಕಳಿಂದ ಹಿರಿಯರವರೆಗೂ ಈ ಬೆಂಡೆಕಾಯಿ ಫ್ರೈ ಸವಿಯಲು ಇಷ್ಟಪಡುತ್ತಾರೆ.
ಹಾಗಾದ್ರೆ ಈ ಬೆಂಡೆಕಾಯಿ ಫ್ರೈ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಸ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಗರಿ ಗರಿಯಾದ ಬೆಂಡೆಕಾಯಿ ಮಸಾಲ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು
- ಬೆಂಡೆಕಾಯಿ- ಕಾಲು ಕೆ.ಜಿ
- ಕಡಲೆಕಾಯಿ ಹಿಟ್ಟು
- ಮೆಣಸಿನ ಪುಡಿ
- ಅರಿಶಿನ
- ಚಾಟ್ ಮಸಾಲ
- ಉಪ್ಪು
- ನಿಂಬೆ ರಸ
- ಎಣ್ಣೆ
ಗರಿ ಗರಿಯಾದ ಬೆಂಡೆಕಾಯಿ ಮಸಾಲ ಫ್ರೈ ಮಾಡುವುದು ಹೇಗೆ?
ಮೊದಲು ಬೆಂಡೆಕಾಯಿಗಳನ್ನು ತೊಳೆದು ಒರೆಸಿಕೊಳ್ಳಬೇಕು. ಒದ್ದೆಯಾಗಿರಬಾರದು. ನಂತರ ತುದಿಗಳನ್ನು ಕತ್ತರಿಸಿಕೊಂಡು ಉದ್ದವಾಗಿ ನಾಲ್ಕು ಭಾಗವಾಗಿ ಕತ್ತರಿಸಿಕೊಳ್ಳಿ. ಹಾಗೆ ಒಳಗಿನ ಬೀಜಗಳ ತೆಗೆದು ಕ್ಲೀನ್ ಮಾಡಿಕೊಳ್ಳಿ. ಕತ್ತರಿಸಿದ ಬೆಂಡೆಕಾಯಿಯನ್ನು 10 ನಿಮಿಷ ಹಾಗೆಯೆ ಬಿಡಿ, ಅದರಲ್ಲಿನ ತೇವಾಂಶ ಒಣಗಲು ಬಿಡಿ.
ನಂತರ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಕಡಲೆ ಹಿಟ್ಟು, ಮೆಣಸಿನ ಪುಡಿ, ಜೀರಿಗೆ ಪುಡಿ, ಅರಿಶಿನ, ಚಾಟ್ ಮಸಾಲ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. 1 ಚಮಚ ಎಣ್ಣೆ, ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಿಂಬೆ ರಸ ಸೇರಿಸುವುದರಿಂದ ಬೆಂಡೆಕಾಯಿ ಗರಿಗರಿಯಾಗುವುದಲ್ಲದೆ, ಅದರ ರುಚಿಯೂ ಹೆಚ್ಚಾಗುತ್ತದೆ.
ಈ ಮಸಾಲೆ ಮಿಶ್ರಣವನ್ನು ಕತ್ತರಿಸಿಕೊಂಡಿರುವ ಬೆಂಡೆಕಾಯಿಯ ಒಳಗೆ ಹಾಕಿಕೊಳ್ಳಿ. ಹಾಗೆ ಎಲ್ಲಾ ಬೆಂಡೆಕಾಯಿಗಳಿಗೂ ಈ ಮಸಾಲೆಗಳ ಹಾಕಿಟ್ಟುಕೊಳ್ಳಿ. ಈಗ ಒಲೆ ಮಲೆ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಬಿಡಿ. ನಂತರ ಮಸಾಲೆಯುಕ್ತ ಬೆಂಡೆಕಾಯಿಗಳನ್ನು ಎಣ್ಣೆಯಲ್ಲಿ ಬಿಟ್ಟು ಕರಿದುಕೊಳ್ಳಬೇಕು.
ಎಲ್ಲಾ ಕಡೆಯೂ ಬೆಂಡೆಕಾಯಿ ಚೆನ್ನಾಗಿ ಕರಿದುಕೊಳ್ಳಿ. ಬೆಂಡೆಕಾಯಿ ಗರಿ ಗರಿ ಆಗುವವರೆಗೂ ಕರಿದುಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ಸವಿಯಲು ಈ ಗರಿ ಗರಿಯಾದ ಬೆಂಡೆಕಾಯಿ ಮಸಾಲ ಫ್ರೈ ರೆಡಿಯಾಗುತ್ತದೆ. ಇದನ್ನು ಮಕ್ಕಳು ಕೂಡ ಬಹಳ ಇಷ್ಟಪಟ್ಟು ಸವಿಯುತ್ತಾರೆ. ಹಾಗೆ ಎಲ್ಲರಿಗೂ ಇಷ್ಟವಾಗುವಂತಹ ಖಾದ್ಯ ಎನ್ನಬಹುದು, ನೀವು ಸಹ ಮನೆಯಲ್ಲಿ ಕಾಲು ಕೆ.ಜಿ ಬೆಂಡೆಕಾಯಿ ತಂದು ಈ ರೀತಿ ಗರಿ ಗರಿಯಾದ ಮಸಾಲ ಫ್ರೈ ಮಾಡಿ ಸವಿಯಬಹುದು. ಊಟದ ಜೊತೆಗಿದ್ದರೆ ರುಚಿ ದುಪ್ಪಟ್ಟಾಗುತ್ತೆ.
ಇನ್ನು ಬೆಂಡೆಕಾಯಿ ಕರಿದು ಇಳಿಸಿಕೊಂಡ ಬಳಿಕವೂ ಇದರ ಮೇಲೆ ಖಾರದ ಪುಡಿ ಹಾಗೂ ಉಪ್ಪಿನ ಮಿಶ್ರಣ ಹಾಕಿ ಮತ್ತಷ್ಟು ಖಾರವನ್ನಾಗಿ ಮಾಡಿಕೊಂಡು ಸವಿಯಬಹುದು. ಉತ್ತರ ಕರ್ನಾಟಕ ಭಾಗದಲ್ಲಿ ಈ ರೀತಿಯ ಖಾದ್ಯ ಸವಿಯುವುದು ನೋಡಬಹುದು.



Click it and Unblock the Notifications