Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಳ್ಳುಳ್ಳಿ ಹಸಿ ಖಾರ ಮಂಡಕ್ಕಿ ಮಾಡಿ ನೋಡಿ..! ನಾಲಗೆ ರುಚಿಗೆ ಇದು ಬೆಸ್ಟ್..!
ಬೆಳಗ್ಗೆ ತಿಂಡಿಗೆ ಮಸಾಲ ಭರಿತ ಯಾವುದಾದರು ತಿಂಡಿ ಮಾಡಬೇಕು ಅನ್ನೋದು ಎಲ್ಲರ ಆಸೆಯಾಗಿರುತ್ತೆ. ಅದರಲ್ಲೂ ಅವಲಕ್ಕಿ, ಮಂಡಕ್ಕಿಯಿಂದ ಮಾಡುವಂತಹ ತಿಂಡಿ ಎಲ್ಲರಿಗೂ ಇಷ್ಟವಾಗುತ್ತೆ. ಸುಲಭವಾಗಿ ಕಡಿಮೆ ಸಮಯದಲ್ಲಿ ಈ ರೀತಿಯ ಬಗೆ ಬಗೆಯ ತಿನಿಸುವಗಳ ಮಾಡಿ ಸವಿಯಬಹುದು. ಹೀಗಾಗಿ ಎಲ್ಲರಿಗೂ ಮಂಡಕ್ಕಿ, ಅವಲಕ್ಕಿ ಸವಿಯಲು ಬಹಳ ಇಷ್ಟವಾಗುತ್ತೆ.
ಅದರಲ್ಲೂ ಮಂಡಕ್ಕಿಯಲ್ಲಿ ಹಲವು ರುಚಿಯಲ್ಲಿ ತಿಂಡಿ ಮಾಡಬಹುದು. ಅದರಲ್ಲಿ ಮಂಡಕ್ಕಿ ಉಸ್ಲಿ, ಮಸಾಲೆ ಭರಿತ ಮಂಡಕ್ಕಿ, ಮಂಡಕ್ಕಿ ಮಸಾಲೆ, ಖಾರ ಮಂಡಕ್ಕಿ ಮಾಡಿ ಸವಿಯುವುದು ನೋಡಿದ್ದೇವೆ. ಮಂಡಕ್ಕಿಯನ್ನ ಸುಲಭವಾಗಿ ಮಾಡಿ ಸವಿಯುವುದರಿಂದ ಬೆಳಗ್ಗೆ ಗಡಿ ಬಿಡಿಯಲ್ಲಿ ಈ ಖಾದ್ಯ ಮಾಡುವುದು ಸಾಮಾನ್ಯ.

ನಾವಿಂದು ಗಡಿಬಿಡಿಯಲ್ಲಿ ಮಾಡಲಾಗುವಂತಹ ಬೆಳ್ಳುಳ್ಳಿ ಹಸಿ ಖಾರ ಮಂಡಕ್ಕಿ ಮಾಡುವ ಕುರಿತು ತಿಳಿದುಕೊಳ್ಳೋಣ. ಬೆಳ್ಳುಳ್ಳಿ ಹಸಿ ಖಾರವನ್ನ ಸುಲಭವಾಗಿ ಬೆಳಗ್ಗೆ ತಿಂಡಿಗೆ ಮಾಡಿ ಸವಿಯಬಹುದು. ಹೀಗಾಗಿ ನಾವಿಂದು ಬೆಳ್ಳುಳ್ಳಿ ಹಸಿ ಖಾರ ಹಾಕಿ ಮಾಡುವಂತಹ ಅದ್ಭುತ ರುಚಿಯ ಮಂಡಕ್ಕಿ ಮಾಡಿ ಸವಿಯೋಣ. ಬೆಳ್ಳುಳ್ಳಿ ಖಾರ ಮಂಡಕ್ಕಿ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೆಳ್ಳುಳ್ಳಿ ಖಾರದ ಮಂಡಕ್ಕಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮಂಡಕ್ಕಿ
- ಉಪ್ಪು
- ಬೆಳ್ಳುಳ್ಳಿ
- ತೆಂಗಿನಕಾಯಿ ತುರಿ
- ಎಣ್ಣೆ
ಬೆಳ್ಳುಳ್ಳಿ ಖಾರದ ಮಂಡಕ್ಕಿ ಮಾಡುವುದು ಹೇಗೆ?
ಮೊದಲು ಬೆಳ್ಳುಳ್ಳಿಯ ಸಿಪ್ಪೆ ತೆಗೆದುಕೊಳ್ಳಿ. ನಂತರ ಒಂದು ಸಣ್ಣ ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ತೆಂಗಿನಕಾಯಿ ತುರಿ, 10 ಬೆಳ್ಳುಳ್ಳಿ, ಉಪ್ಪು, ಹಸಿ ಮೆಣಸಿನ ಕಾಯಿಯನ್ನು ಮದ್ಯದಲ್ಲಿ ಕತ್ತರಿಸಿಕೊಂಡು ಹಾಕಿ ರುಬ್ಬಿಕೊಳ್ಳಿ. ಸ್ವಲ್ಪವೂ ನೀರು ಬಳಸದೆ ಇದನ್ನು ರುಬ್ಬಿಕೊಳ್ಳಬೇಕು.
ಹೀಗೆ ರುಬ್ಬಿಕೊಂಡ ಮಸಾಲೆಯನ್ನು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಹಾಗೆ ಇದನ್ನು ಚೆನ್ನಾಗಿ ಮಿಕ್ಸ್ ಕೂಡ ಮಾಡಿಕೊಳ್ಳಿ. ನಂತರ ಒಂದು ದೊಡ್ಡ ಪಾತ್ರೆ ತೆಗೆದುಕೊಂಡು ಅದಕ್ಕೆ ಹುರಿ ಹುರಿಯ ಮಂಡಕ್ಕಿ ಹಾಕಿಕೊಳ್ಳಿ. ನಂತರ ಇದಕ್ಕೆ ರುಬ್ಬಿಕೊಂಡಿರುವ ಮಸಾಲೆಯನ್ನು ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಬೇಕು. ಕೈಯಿಂದ ಅಥವಾ ಸ್ಪೂನ್‌ನಿಂದ ಕಲಸಿಕೊಳ್ಳಬೇಕು.
ಎಲ್ಲಾ ಮಸಾಲೆಯು ಇದಕ್ಕೆ ಹಿಡಿಯುವಂತೆ ಕಲಸಿಕೊಳ್ಳಿ. ಕೊನೆಯದಾಗಿ ಇದಕ್ಕೆ 4 ಸ್ಪೂನ್ ಎಣ್ಣೆ ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿ. ಹೀಗೆ ಮಿಕ್ಸ್ ಮಾಡುವಾಗ ಅದರ ರುಚಿ ನೋಡಿ ಉಪ್ಪು ಬೇಕಾದರೆ ಸೇರಿಸಿಕೊಳ್ಳಿ, ನಿಮಗೆ ಕಲರ್ ಬೇಕಾದರೆ ಸ್ವಲ್ಪವೇ ಸ್ವಲ್ಪ ಅರಶಿಣ ಹಾಕಿಕೊಂಡರೆ ಸಾಕಾಗುತ್ತದೆ. ಇನ್ನೂ ರುಚಿಯಾಗಿ ಬೇಕಾದರೆ ಹುರಿಗಡಲೆಯನ್ನು ಮಿಕ್ಸಿಯಲ್ಲಿ ಪೌಡರ್ ಮಾಡಿಕೊಂಡು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಬಹುದು.
ಇಷ್ಟಾದರೆ ನಿಮ್ಮ ಮುಂದೆ ಬೆಳ್ಳುಳ್ಳಿ ಹಸಿ ಖಾರ ಮಂಡಕ್ಕಿ ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ. ಬೆಳಗ್ಗೆ ತಿಂಡಿಗೆ ಇಲ್ಲವೆ ಸಂಜೆ ಸ್ನ್ಯಾಕ್ಸ್‌ಗೂ ಕೂಡ ಇದು ರುಚಿ ನೀಡಲಿದೆ.



Click it and Unblock the Notifications