Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೇಳೆ ಸಾರು ಬಿಡಿ ಈ ರೀತಿ ಬೇಳೆ ರಸಂ ಮಾಡಿ ಸವಿದು ನೋಡಿ..! ಇಲ್ಲಿದೆ ರೆಸಿಪಿ
ನಿಮ್ಮ ಊಟದ ಜೊತೆಗ ಒಂದಲ್ಲಾ ಒಂದು ಸಾರು, ಸಾಂಬಾರ್, ರಸಂ ಇರುವುದು ಸಾಮಾನ್ಯ. ಸಾಂಬಾರ್, ಸಾರು ಇದ್ದರೆ ರುಚಿ ರುಚಿಯಾದ ಊಟ ಮಾಡಬಹುದು. ಹಾಗೆ ಎಲ್ಲರು ಮಧ್ಯಾಹ್ನ, ರಾತ್ರಿಯ ಊಟಕ್ಕೆ ಯಾವುದಾದರು ಸಾರು, ಸಾಂಬಾರ್ ಮಾಡಿಯೇ ಮಾಡುತ್ತೀರಿ, ಅದರಲ್ಲೂ ತರಕಾರಿ ಬಳಸದೆ ಮಾಡುವಂತಹ ಸಾರಿನ ಕುರಿತಾಗಿತೂ ನೀವು ತಿಳಿದಿರಬಹುದು.
ತರಕಾರಿ ಇಲ್ಲದೆ ರಸಂ, ಟೊಮೆಟೋ ರಸಂ, ಬೇಳೆ ಸಾರು ಮಾಡಿ ಸವಿಯುವುದು ಕಾಮನ್. ಅದರಲ್ಲೂ ನಾವು ಹಲವು ಬಗೆಯ ರಸಂ ಮಾಡುವುದಂತು ಎಂದಿಗೂ ಸಾಮಾನ್ಯ ಕ್ರಿಯೆ ಎನ್ನಬಹುದು. ಹಾಗೆ ನೀವು ಬೇಳೆಯಿಂದ ಮಾಡುವಂತಹ ಸಾರು ಅದ್ಭುತ ರುಚಿ ನೀಡಲಿದೆ. ಊಟದ ಜೊತೆಗೆ ಬೇಳೆಯ ಸಾರು ಹಾಗೆ ಬೆಳೆಯ ರಸಂ ಮಜಾ ನೀಡುತ್ತೆ.

ಹಾಗೆ ನೀವು ಬೇಳೆ ಸಾರು ಸವಿಯಲು ಬಹಳ ರುಚಿ ನೀಡುತ್ತೆ. ದಾಲ್ ಕಿಚಡಿಯಂತೆ ಸ್ವಾದ ನೀಡಲಿದೆ. ಹಾಗೆ ಬೇಳೆ ರಸಂ ಕೂಡ ಅದ್ಭುತ ರುಚಿ ನೀಡಲಿದೆ. ಹಾಗಾದ್ರೆ ನಾವಿಂದು ಊಟದ ಜೊತೆಗೆ ಸವಿಯಲು ಈ ಬೇಳೆ ರಸಂ ಮಾಡುವುದು ಹೇಗೆ ಅನ್ನೋದನ್ನು ನೋಡೋಣ. ಅದರಲ್ಲೂ ಈ ಬೇಳೆ ರಸಂ ಯಾವ ರೀತಿ ರುಚಿ ನೀಡಲಿದೆ ಎನ್ನುವುದುನ್ನು ನಾವಿಂದು ತಿಳಿದುಕೊಳ್ಳೋಣ.
ಹಾಗಾದ್ರೆ ಈ ವೇಳೆ ರಸಂ ಮಾಡುವುದು ಹೇಗೆ? ಬೇಳೆ ರಸಂ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೇಳೆ ರಸಂ ಮಾಡಲು ಬೇಕಾಗುವ ವಸ್ತುಗಳು
- ತೊಗರಿಬೇಳೆ
- ಹೆಸರುಬೇಳೆ
- ಟೊಮೊಟೋ -2
- ಅರಿಶಿಣ ಪುಡಿ
- ಸಾಸಿವೆ
- ಇಂಗು
- ಬ್ಯಾಡಗಿ ಮೆಣಸಿನಕಾಯಿ
- ಖಾರದ ಮೆಣಸಿನಕಾಯಿ
- ಕರಿಬೇವಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- ಹುಣಸೆ ಹಣ್ಣು
- ಹಸಿ ಮೆಣಸು
- ಜೀರಿಗೆ
- ಬೆಳ್ಳುಳ್ಳಿ
- ಬೆಲ್ಲ
- ಸಾಂಬಾರ್ ಪುಡಿ
- ಉಪ್ಪು
- ಎಣ್ಣೆ
ಬೇಳೆ ರಸಂ ಮಾಡುವ ವಿಧಾನವೇನು?
ಮೊದಲು ತೊಗರಿ ಬೇಳೆ ಹಾಗೂ ಹೆಸರು ಬೇಳೆಯನ್ನು ಎರಡು ಬೌಲ್‌ನಲ್ಲಿ ಹಾಕಿ ತೊಳೆದುಕೊಂಡು ಕುಕ್ಕರ್‌ಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಟೊಮೆಟೋ, ಅರಶಿಣ, ಹಾಗೆ ಬೇಳೆ ಮುಳುಗುವಷ್ಟು ನೀರು, 1 ಸ್ಪೂನ್ ಎಣ್ಣೆ ಹಾಕಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ ಮೂರು ಸೀಟಿ ಹೊಡೆಯಲು ಬಿಡಿ. 3 ಸೀಟಿಯ ಬಳಿಕ ತಣ್ಣಗಾಗಲು ಬಿಡಿ.
ಈಗ ಒಂದು ಮಿಕ್ಸಿ ಜಾರ್‌ಗೆ ಕಾಳು ಮೆಣಸು, ಜೀರಿಗೆ, ಬೆಳ್ಳುಳ್ಳಿ, ಸಾಂಬಾರ್ ಪುಡಿ, ಕರಿಬೇವಿನ ಸೊಪ್ಪು ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಈಗ ಕುಕ್ಕರ್ ಮುಚ್ಚಳ ತೆಗೆದು ಅದನ್ನು ಸ್ವಲ್ಪ ಪುಡಿ ಮಾಡಿಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಸಾಸಿವೆ, ಇಂಗು, ಮೆಣಸು, ಖಾರದ ಮೆಣಸು, ಹಾಕಿಕೊಳ್ಳಿ.
ಈಗ ಮಿಕ್ಸಿಯಲ್ಲಿ ರುಬ್ಬಿದ್ದ ಪುಡಿಯನ್ನು ಸಹ ಇದಕ್ಕೆ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ಇದು ಪುಳಿಯೋಗರೆ ಪುಡಿಯಂತೆ ಬರಬೇಕು. ಈಗ ಕುಕ್ಕರ್‌ನಲ್ಲಿರುವ ಬೇಳೆ ನೀರು ಹಾಕಿಕೊಳ್ಳಿ. ಹಾಗೆ ಸ್ವಲ್ಪ ಹುಣಸೆ ಹುಳಿಯನ್ನು ನೀರಿನಲ್ಲಿ ನೆನೆಸಿಟ್ಟು ಆ ನೀರು ಸಹ ಹಾಕಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲದ ಪುಡಿ, ಸ್ವಲ್ಪ ನೀರು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುದಿಬರಲು ಬಿಡಿ.
ಇದು ಕುದಿಬರಲು ಆರಂಭಿಸಿದ 5 ನಿಮಿಷ ಹಾಗೆಯೇ ಬಿಟ್ಟು ರುಚಿ ನೋಡಿಕೊಂಡು ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ಈ ಬೇಳೆ ರಸಂ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಈ ರಸಂ ಮಾಡಿ ನೋಡಿ.



Click it and Unblock the Notifications