Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯುಗಾದಿ ಹಬ್ಬಕ್ಕೆ ಬೇಳೆ ದರ ಕುಸಿತ..!ಈ ರೀತಿ ಹೋಳಿಗೆ ಮಾಡೋಕೆ ಸರಿಯಾದ ಸಮಯ.!!
ಯುಗಾದಿ ಹಬ್ಬವೆಂದರೆ ಅಲ್ಲಿ ಸಿಹಿಯದ್ದೇ ಸಂಭ್ರಮ ಸಿಹಿ ಇಲ್ಲದೆ ಯಾವ ಹಬ್ಬವೂ ಪೂರ್ಣ ಆಗುವುದೇ ಇಲ್ಲ. ಅದರಲ್ಲೂ ಯುಗಾದಿಯಂತು ಹಿಂದೂಗಳ ಪಾಲಿಗೆ ಬಹಳ ಮುಖ್ಯವಾದ ಹಾಗೆ ಅತ್ಯಂತ ಸಂಭ್ರಮದ ಹಬ್ಬವಾಗಿರಲಿದೆ. ಈ ನಡುವೆ ಯುಗಾದಿಯಲ್ಲಿ ಸಾಮಾನ್ಯವಾಗಿ ಹೋಳಿಗೆ ಮಾಡಿಯೇ ಮಾಡುತ್ತೀರಿ. ಯುಗಾದಿ ಅಂದರೆ ಅಲ್ಲಿ ಹೋಳಿಗೆ ಇರಲೇಬೇಕು. ಹೋಳಿಗೆ ಇಲ್ಲದೆ ಹಬ್ಬಕ್ಕೊಂದು ಕಳೆ ಬರುವುದಿಲ್ಲ. ಹೀಗಾಗಿ ನಾವಿಂದು ಹೋಳಿಗೆ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಹೆಚ್ಚಾಗಿ ಯುಗಾದಿ ಸಮಯದಲ್ಲಿ ಬೇಳೆ ಹೋಳಿಗೆ ಬಹಳ ಫೇಮಸ್. ಈಗ ಬೇಳೆ ಕಾಳಿನ ಬೆಲೆ ಕೂಡ ಇಳಿಕೆಯಾಗಿರುವುದು ಹಬ್ಬದ ರಂಗು ಹೆಚ್ಚಿಸಲಿದೆ. ಹೀಗಾಗಿ ಬಹುತೇಕರ ಮನೆಯಲ್ಲಿ ಈ ಬೇಳೆ ಹೋಳಿಗೆ ಮಾಡುವುದು ನೋಡಬಹುದು. ಹಾಗಾದ್ರೆ ನಾವಿಂದು ಕೂಡ ಈ ಬೇಳೆ ಹೋಳಿಗೆ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಸುಲಭವಾಗಿ ಬೇಳೆ ಹೋಳಿಗೆ ಮಾಡುವುದು ಹೇಗೆ ಅನ್ನೋದನ್ನು ನೋಡೋಣ.

ಈ ಬಾರಿ ಯುಗಾದಿ ಮಾರ್ಚ್ ಅಂತ್ಯಕ್ಕೆ ಬಂದಿದೆ. ಹೀಗಾಗಿ ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಹಬ್ಬಕ್ಕೆ ಉಳಿದಿವೆ. ಹಬ್ಬದ ದಿನ ಸಿಹಿ ತಿಂಡಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಹಬ್ಬಕ್ಕೂ ಮೊದಲೇ ಈ ಸಿಹಿ ಮಾಡಿ ಸವಿಯಲು ಮುಂದಾಗುವುದು ಬಹಳ ಉತ್ತಮ. ಹಾಗಾದ್ರೆ ಹಬ್ಬ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ನಾವು ಹೋಳಿಗೆ ಮಾಡುವ ಕುರಿತು ತಿಳಿಯೋಣ
ಹೋಳಿಗೆ ಅಂದರೆ ಎಲ್ಲರಿಗೂ ಇಷ್ಟವಾಗುವ ಸಿಹಿ ತಿಂಡಿ, ಒಂದೆರಡು ಚಮಚ ತುಪ್ಪ ಸವರಿಕೊಂಡು ಸವಿಯುತ್ತಿದ್ದರೆ ಅದರ ರುಚಿಗೆ ಯಾವ ಊಟವೂ ಬೇಡ ಎನಿಸುತ್ತೆ. ಹಾಗೆ ಹಬ್ಬದಲ್ಲಿ ಮಾಡಿದ ಹೋಳಿಗೆ ಒಂದಿಷ್ಟು ದಿನ ಇಟ್ಟು ಕೂಡ ನಾವು ಸವಿಯಬಹುದು. ಹಾಗಾದ್ರೆ ಈ ಬೇಳೆ ಹೋಳಿಗೆ ಸುಲಭವಾಗಿ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಬೇಳೆ ಹೋಳಿಗೆ ಹಾಗೂ ಅದರ ಹಿಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಹಾಗೆ ನಾವಿಂದು ಹಿಟ್ಟು ಮಾಡಿಕೊಳ್ಳುವುದರಿಂದ ಹಿಡಿದು ಹೂರ್ಣ ಮಾಡುವುದು ಹಾಗೆ ಕಾಯಿಸುವುದು ಹೇಗೆ ಅನ್ನೋದನ್ನು ಕೂಡ ತಿಳಿದುಕೊಳ್ಳೋಣ. ಮೊದಲಿಗೆ ನಾವು ಹಿಟ್ಟು ಮಾಡಿಕೊಳ್ಳುವ ಕುರಿತಂತೆ ತಿಳಿದುಕೊಳ್ಳೋಣ.
ಹೋಳಿಗೆ ಹಿಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮೈದಾ ಹಿಟ್ಟು - 2 ಕಪ್
- ಚಿರೋಟಿ ರವೆ- ಕಾಲು ಕೆ.ಜಿ
- ಅರಶಿಣ
- ಉಪ್ಪು
- ಎಣ್ಣೆ
ಹೋಳಿಗೆ ಹಿಟ್ಟು ಮಾಡುವುದು ಹೇಗೆ?
ಈಗ ಒಂದು ಬೌಲ್‌ಗೆ ಮೈದಾ ಹಿಟ್ಟು ಜರಡಿ ಹಿಡಿದಿಟ್ಟುಕೊಳ್ಳಿ. ಇದಕ್ಕೆ ಚಿರೋಟಿ ರವೆಯನ್ನು ಹಾಕಿಕೊಳ್ಳಿ. ಹಾಗೆ ಇದಕ್ಕೆ ಅರಶಿಣ, ಉಪ್ಪು ಸಹ ಹಾಕಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಕಲಸಿಕೊಳ್ಳಬೇಕು. ನಂತರ ಸ್ವಲ್ಪ ಸ್ಬಲ್ಪ ಎಣ್ಣೆ ಹಾಕಿಕೊಳ್ಳುತ್ತಾ ಕಲಸಿಕೊಳ್ಳಬೇಕು. ಇದು ಎಷ್ಟು ಮೃದುವಾಗಿ ಮಾಡಲು ಸಾಧ್ಯವೋ ಅಷ್ಟು ಮೃದುವಾಗಿ ಬರುವಂತೆ ಹದ ಮಾಡಿಕೊಳ್ಳಿ.
ಸುಮಾರು 10 ನಿಮಿಷ ಹಿಟ್ಟನ್ನು ಕಲಸಿಕೊಳ್ಳಬೇಕು. ನಂತರ ಹಿಟ್ಟಿನ ಮೇಲೆ ಎಣ್ಣೆಯನ್ನು ಸವರಿ ಹಾಗೆ ಬಿಡಬೇಕು. ಸುಮಾರು 1 ಗಂಟೆಯಾದರು ಈ ಹಿಟ್ಟನ್ನು ಬಿಡಬೇಕು, ಅದು ಮೃದುವಾಗಿ ಹದವಾಗಲು ಮತ್ತೆ ಕಲಸಿಕೊಳ್ಳಬಹುದು. ಇಷ್ಟಾದರೆ ಹೋಳಿಗೆ ಮಾಡಲು ಹಿಟ್ಟು ರೆಡಿಯಾಗುತ್ತದೆ.
ಇದಾದ ಬಳಿಕ ನಾವು ಹೂರ್ಣ ಮಾಡಿಕೊಳ್ಳುವ ಕುರಿತು ತಿಳಿದುಕೊಳ್ಳೋಣ. ಹೋಳಿಗೆ ರುಚಿಯಾಗಿ ಬರಬೇಕಾದರೆ ಅದಕ್ಕೆ ಹೂರ್ಣ ಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ನಾವು ಯಾವ ರುಚಿಯಲ್ಲಿ ಹೂರ್ಣ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ಹೋಳಿಗೆಯ ರುಚಿ ನಿರ್ಧಾರವಾಗಲಿದೆ.
ಹಾಗಾದ್ರೆ ಬೇಳೆ ಹೋಳಿಗೆಗೆ ಹೂರ್ಣ ಮಾಡಿಕೊಳ್ಳುವುದು ಹೇಗೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು ಮಾಡುವ ವಿಧಾನವೇನು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಬೇಳೆ ಹೋಳಿಗೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಹೋಲಿಗೆ ಹಿಟ್ಟು
- ಕಡಲೆ ಬೇಳೆ - ಅರ್ಧ ಕಪ್
- ತೊಗರಿ ಬೇಳೆ -ಅರ್ಧ ಕಪ್
- ತೆಂಗಿನ ಕಾಯಿ
- ಬೆಲ್ಲ - 1 ಕಪ್
- ಗಸಗಸೆ
- ಏಲಕ್ಕಿ
- ತುಪ್ಪ
- ಅಡುಗೆ ಎಣ್ಣೆ
ಬೇಳೆ ಹೋಳಿಗೆ ಮಾಡುವ ವಿಧಾನವೇನು?
ಮೊದಲು ಕಡಲೆ ಬೇಳೆ ಹಾಗೂ ತೊಗರಿ ಬೇಳೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು 1 ಗಂಟೆಯಾದರು ನೆನೆಸಿಡಬೇಕು. ಮೊದಲು ನೆನೆಸಿಟ್ಟ ಬೇಳೆಗಳನ್ನು ನೀರಿನಿಂದ ಬೇರೆ ಮಾಡಿಕೊಂಡು ಅದನ್ನು ಒಂದು ಬಾಣಲೆಗೆ ಹಾಕಿಕೊಳ್ಳಿ. ಹಾಗೆ ನೀರು ಹಾಕಿಕೊಂಡು 15 ನಿಮಿಷ ಬೇಯಿಸಿಕೊಳ್ಳಿ. ಕುಕ್ಕರ್‌ನಲ್ಲಾದರೆ 1 ಸೀಟಿ ಹೊಡೆಸಿಕೊಳ್ಳಿ.
ಈ ಬೇಳೆ ಬೇಯಿಸಿದ ನೀರು ಬೇರ್ಪಡಿಸಿಕೊಳ್ಳಿ. ಬರೀ ಬೇಳೆ ಮಾತ್ರ ಪಾತ್ರೆಯಲ್ಲಿ ಉಳಿಯುವಂತೆ ಮಾಡಿಕೊಳ್ಳಿ. ಈಗ ಈ ಬೇಳೆಗೆ ಬೆಲ್ಲ ಹಾಕಿಕೊಂಡು ಕರಹಗುವಂತೆ ತಿರುಗಿಸುತ್ತಾ ಇರಿ. 5 ನಿಮಿಷದಲ್ಲಿ ಬೆಲ್ಲ ಕರಗುತ್ತದೆ. ನಂತರ ಈ ಬೇಳೆ ತಣ್ಣಗಾಗಲು ಬಿಡಿ. ಬೇಳೆ ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಸ್ವಲ್ಪವೇ ಬೇಳೆ ಹಾಕಿಕೊಂಡು ರುಬ್ಬಿಕೊಳ್ಳಿ. ಮೃದುವಾಗಿ ಬರುವ ಹಿಟ್ಟನ್ನು ಬೌಲ್‌ಗೆ ಹಾಕಿಕೊಳ್ಳಿ.
ಈಗ ಈ ಹೂರ್ಣಕ್ಕೆ ತೆಂಗಿನಕಾಯಿ ತುರಿಯನ್ನು ಹಾಕಿಕೊಳ್ಳಿ. ನಂತರ ಉಂಡೆ ಕಟ್ಟಿಕೊಂಡು ಇಟ್ಟುಕೊಳ್ಳಿ. ಸದ್ಯ ಈಗ ಈ ಹೂರ್ಣ ಕಟ್ಟಿ ಮುಗಿಸಿದ ಬಳಿಕ ಮೈದಾ ಹಿಟ್ಟಿನಲ್ಲಿ ಮಾಡಿಕೊಂಡಿರುವ ಹೋಳಿಗೆ ಹಿಟ್ಟನ್ನು ಕೂಡ ಚೆನ್ನಾಗಿ ಉಂಡೆ ಕಟ್ಟಿಕೊಳ್ಳಿ. ನಂತರ ಒಂದೊಂದೆ ಹಿಟ್ಟು ತೆಗೆದುಕೊಂಡು ಲಟ್ಟಿಕೊಳ್ಳಿ. ನಿಮಗೆ ಯಾವ ಗಾತ್ರಕ್ಕೆ ಬೇಕೋ ಹಾಗೆ ಲಟ್ಟಿಸಿಕೊಳ್ಳಿ.
ಲಟ್ಟಿಸಿಕೊಳ್ಳಲು ಬಾಳೆಎಲೆ, ಹೋಳಿಗೆ ಪೇಪರ್, ಪ್ಲಾಸ್ಟಿಕ್ ಯಾವುದಾದರು ಬಳಸಿ, ಚಪಾತಿ ರೀತಿ ಲಟ್ಟಿಸಿದ ಬಳಿಕ ಹೂರ್ಣ ಮಧ್ಯದಲ್ಲಿ ಇಟ್ಟು ಮತ್ತೆ ಉಂಡೆ ಮಾಡಿಕೊಂಡು ಮೆತ್ತಗಾಗಿ ಲಟ್ಟಿಸಿಕೊಳ್ಳಿ. ಈಗ ಕಾವಲಿಯನ್ನು ಒಲೆ ಮೇಲೆ ಇಟ್ಟು ಅದನ್ನು ಕಾಯಲು ಬಿಡಿ. ನಂತರ ಎಣ್ಣೆ ಹಚ್ಚಿಕೊಂಡು ಎರಡೂ ಕಡೆ ಹೋಳಿಗೆಯನ್ನು ಬೇಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಅದ್ಭುತ ರುಚಿಯ ಹೋಳಿಗೆ ಸಿದ್ದವಾಗುತ್ತದೆ. ನೀವು ಕೂಡ ಮನೆಯಲ್ಲಿ ಈ ಹೋಳಿಗೆ ಮಾಡಿ ತುಪ್ಪದೊಂದಿಗೆ ಅದನ್ನು ಸವಿದು ನೋಡಿ.
ಈ ಹೋಳಿಗೆ ಮಾಡುವಾಗ ನೀವು ಒಂದೇ ಬೇಳೆಯನ್ನು ಕೂಡ ಬಳಸಿಕೊಳ್ಳಬಹುದು. ಕೇವಲ ಕೆಡಲೆ ಬೇಳೆಯನ್ನು ಬಳಸಿಕೊಂಡು ಇದನ್ನು ಮಾಡಿ ಸವಿಯಬಹುದು. ಹಾಗೆ ಈ ರೀತಿ ತೊಗರಿ ಬೇಳೆಯನ್ನು ಕೂಡ ಮಿಕ್ಸ್ ಮಾಡಿಕೊಂಡು ಸವಿಯಬಹುದು. ಈ ಹೋಳಿಗೆ ರುಚಿಯಲ್ಲಿ ಅದ್ಭುತವಾಗಿರುತ್ತೆ. ನೀವು ಕೂಡ ಹಬ್ಬದಲ್ಲಿ ಈ ರೀತಿಯಲ್ಲೇ ಹೋಳಿಗೆ ಮಾಡಿ ಸವಿದು ನೋಡಿ. ಹಿಟ್ಟು ಮಾಡಿಕೊಳ್ಳುವಾಗ ಅಳತೆಗೆ ಸರಿಯಾಗಿ ನೀರು ಹಾಕಿಕೊಂಡರೆ ಹಿಟ್ಟು ಮೃದುವಾಗಿ ಬರಲಿದೆ.
ಹಾಗೆ ಬೇಳೆ ಬೇಯಿಸುವಾಗ ಉಳಿಯುವ ನೀರಿನಿಂದಲೂ ಹಲವು ರೀತಿಯ ಖಾದ್ಯಗಳ ಮಾಡುವುದು ನಿಮಗೆ ತಿಳಿದಿರಬಹುದು. ಅದರಲ್ಲೂ ಅದ್ಭುತ ರುಚಿಯ ಸಾರು ಮಾಡುತ್ತಾರೆ. ಹಾಗೆ ಹೂರ್ಣ ಉಳಿದರೆ ಅಥವಾ ಹಿಟ್ಟು ಉಳಿದರೆ ಅನ್ನು ಚಪಾತಿಯಂತೆ ತಟ್ಟಿ ಎಣ್ಣೆಗೆ ಬಿಟ್ಟು ಅದನ್ನು ಕೂಡ ಕರಿದು ಸವಿಯಬಹುದು. ಇದು ಕೂಡ ಅದ್ಭುತ ರುಚಿ ನೀಡಲಿದೆ.



Click it and Unblock the Notifications