Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೇಳೆ ಹೋಳಿಗೆ ಮಾಡುವ ಸರಿಯಾದ ವಿಧಾನವೇನು ಗೊತ್ತಾ? ಹೀಗೆ ಮಾಡಿ ನೋಡಿ!
ದೀಪಾವಳಿ ಹತ್ತಿರವಾಗುತ್ತಿದೆ. ದೀಪಾವಳಿ ಅಂದರೇನೆ ಸಂಭ್ರಮ. ಮನೆಯಲೆಲ್ಲಾ ಅಡಗರ. ದೀಪಾವಳಿ ಜೀವನದಲ್ಲಿ ಬೆಳಕು ತರುವ ಹಬ್ಬ ಎಂದು ಆಚರಿಸಲಾಗುತ್ತದೆ. ಹಿಂದೂಗಳು ಆಚರಿಸುವ ಹಬ್ಬದಲ್ಲೇ ದೀಪಾವಳಿ ಬಹಳ ಮುಖ್ಯ ಹಬ್ಬ. ಹೀಗಾಗಿ ದೀಪಾವಳಿ ಸಂಭ್ರಮದಿಂದ ಆಚರಿಸಲಾಗುತ್ತದೆ. ದೀಪಾವಳಿ ಅಂದರೆ ಮಕ್ಕಳಿಗೆ ಸಡಗರ.
ಅಲ್ಲದೆ ಹಬ್ಬ ಅಂದರೆ ಅಲ್ಲಿ ಸಿಹಿ ಒಂದು ಇರಲೇಬೇಕು. ಸಿಹಿ ಇಲ್ಲದೆ ಹಬ್ಬ ಪೂರ್ಣ ಆಗುವುದೇ ಇಲ್ಲ. ದೀಪಾವಳಿಯಲ್ಲಿ ಸಿಹಿ ಅಂದತೆ ಅದು ಹೋಳಿಗೆ. ಹೋಳಿಗೆಯನ್ನು ಹಲವು ವಿಧದಲ್ಲಿ ಮಾಡಬಹುದು. ಕಾಯಿ ಹೋಳಿಗೆ, ಬೇಳೆ ಹೋಳಿಗೆ ತುಂಬಾನೆ ರುಚಿಕರ ಹಾಗೂ ಫೇಮಸ್ ವಿಧವಾಗಿದೆ. ಅದರಲ್ಲೂ ಬೇಳೆ ಹೂರ್ಣದ ಹೋಳಗೆ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು.

ನಾವು ಸಹ ದೀಪಾಳಿಗೆ ಈಗಲೇ ಸಿದ್ದತೆ ಮಾಡಿಕೊಳ್ಳೋಣ. ದೀಪಾವಳಿಗೆ ಬೇಳೆ ಹೋಳಿಗೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಬೇಳೆ ಹೋಳಿಗೆ ಮಾಡುವುದು ಹೇಗೆ? ಬೇಳೆ ಹೋಳಿಗೆ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ಸರಿಯಾದ ಕ್ರಮವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೇಳೆ ಹೋಳಿಗೆ ಮಾಡಲು ಬೇಕಾಗುವ ಪದಾರ್ಥಗಳು
- ಕಡಲೆ ಬೇಳೆ- 1 ಕಪ್
- ತಂಗಿನ ತುರಿ
- ಮೈದಾ - 1 ಬೌಲ್
- ಅರಶಿನ ಪುಡಿ
- ಏಲಕ್ಕಿ ಪುಡಿ
- ಉಪ್ಪು
- ಎಣ್ಣೆ
ಬೇಳೆ ಹೋಳಿಗೆ ಮಾಡುವುದು ಹೇಗೆ?
ಮೊದಲು ಒಂದು ಬೌಲ್‌ನಲ್ಲಿ ಕಡಲೆ ಬೇಳೆಯನ್ನು ನೀರಿನಲ್ಲಿ ತೊಳೆದು ನೀರಿನಲ್ಲಿ ನೆನೆಸಿಡಿ 15 ನಿಮಿಷ ನೆನೆಸಿಟ್ಟರೆ ಸಾಕು. ಈಗ ನೆಂದಿರುವ ಕಡಲೆ ಬೇಳೆಯನ್ನ ಕುಕ್ಕರ್‌ಗೆ ಹಾಕಿ ಬೇಯಲು ಬಿಡಿ. 3 ಸೀಟಿ ಹೊಡೆಸಿ ಬೇಯಿಸಿಕೊಳ್ಳಿ.
ಈಗ ಒಂದು ಬೌಲ್‌ನಲ್ಲಿ 1 ಬೌಲ್ ಮೈದಾ ಹಾಕಿ ಅದಕ್ಕೆ ಅರಶಿನ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ ಚಪಾತಿ ಹಿಟ್ಟಿನಂತೆ ಕಲಸಿಕೊಳ್ಳಬೇಕು. ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಕಲಸಿಕೊಳ್ಳಬೇಕು. ಇದಕ್ಕೆ ಒಂದು ಸ್ಪೂನ್ ಎಣ್ಣೆ ಹಾಕಿ ಚೆನ್ನಾಗಿ ಹಿಟ್ಟನ್ನು ಹದ ಮಾಡಿಕೊಳ್ಳಬೇಕು. ಹಿಟ್ಟು ಮೆದುವಾಗಿ ಬರಬೇಕು.
ಈಗ ಈ ಹಿಟ್ಟನ್ನು ಬೌಲ್‌ಗೆ ಹಾಕಿ ಮುಚ್ಚಿ ಇಡಬೇಕು. 3 ಗಂಟೆಗಳ ಕಾಲ ಈ ಹಿಟ್ಟನ್ನು ಇಡಬೇಕು. ಈಗ ಕುಕ್ಕರ್ ಬೇಯಿಸಿಕೊಂಡಿದ್ದನು ತೆಗೆದುಕೊಳ್ಳಬೇಕು. ಕಡಲೆ ಬೇಳೆ ಮೆತ್ತಗಾಗಿರಬೇಕು. ಈಗ ಬೇಯಿಸಿದ ಕಡಲೆ ಬೇಳೆಯನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಅಷ್ಟೇ ಪ್ರಮಾಣದ ತೆಂಗಿನಕಾಯಿ ತುರಿ ಸೇರಿಸಬೇಕು. ಹಾಗೆ ಒಂದೂವರೆ ಕಪ್ ಬೆಲ್ಲ ಸೇರಿಸಿಕೊಂಡು ಒಲೆ ಮೇಲೆ ಇಡಿ.
ಒಲೆಯಲ್ಲಿ ಬೆಲ್ಲ ಇದರೊಂದಿಗೆ ಕರಗಬೇಕು. ಈಗ ಗಟ್ಟಿಯಾಗುವಂತೆ ಹೂರ್ಣ ಮಾಡಿಕೊಳ್ಳೊ. ಬಿಸಿ ಬೇಳೆ ಬಾತ್‌ನಂತೆ ಬರುವಂತೆ ಈ ಹೂರ್ಣ ರೆಡಿಯಾಗಿರಲಿ. ಇದಕ್ಕೆ ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಈಗ ಇದನ್ನು ಮಿಕ್ಸಿ ಜಾರ್‌ಗೆ ಹಾಕಿ ಕೊಂಡು ರುಬ್ಬಬೇಕು. ನೀರು ಹಾಕದೆ ರುಬ್ಬಿಕೊಳ್ಳಿ. ಇದು ನುಣ್ಣಗೆ ಆಗಬೇಕು. ಕೈಗೆ ಅಂಟದಂತೆ ಈ ಹೂರ್ಣ ರೆಡಿಯಾಗುತ್ತದೆ.
ಈಗ ಈ ಹೂರ್ಣವನ್ನು ಉಂಡೆ ಮಾಡಿ ಇಟ್ಟಕೊಳ್ಳಿ. ಇತ್ತ 3 ಗಂಟೆ ಇಟ್ಟಿರುವ ಹಿಟ್ಟನ್ನು ತೆಗೆದುಕೊಂಡು ಅದನ್ನು ಕೂಡ ಉಂಡೆ ಮಾಡಿ ಇಟ್ಟುಕೊಳ್ಳಿ. ಸಮು ಪ್ರಮಾಣದಲ್ಲಿ ಎರಡೂ ಉಂಡೆ ಇರಲಿ. ಈಗ ಒಂದು ಪ್ಲಾಸ್ಟಿಕ್ ಮೇಲೆ ಎಣ್ಣೆ ಅವರಿಕೊಂಡು ಕೈಗೂ ಎಣ್ಣೆ ಹಚ್ಚಿಕೊಂಡು ಮೊದಲು ಹಿಟ್ಟನ್ನು ಚಪಾತಿಯಂತೆ ಲಟ್ಟಿಸಿ ಮಧ್ಯದಲ್ಲಿ ಹೂರ್ಣ ಇಟ್ಟು ಸಂಪೂರ್ಣ ಮುಚ್ಚಬೇಕು. ನಂತರ ನಿಧಾನವಾಗಿ ಲಟ್ಟಿಕೊಳ್ಳಬೇಕು. ಈಗ ಒಲೆ ಮೇಲೆ ಕಾವಲಿ ಇಟ್ಟು ಎಣ್ಣೆ ಹಚ್ಚಿ ಕಾಯಲು ಬಿಡಿ. ಎರಡೂ ಕಡೆ ಚೆನ್ನಾಗಿ ಕಾಯಬೇಕು. ಇಷ್ಟಾದರೆ ನಿಮ್ಮ ಮುಂದೆ ಬೇಳೆ ಹೋಳಿಗೆ ಸವಿಯಲು ಸಿದ್ಧವಾಗುತ್ತದೆ. ಇದಕ್ಕೆ ಬಿಸಿ ತುಪ್ಪ ಹಾಕಿ ಸವಿಯಲು ನೀಡಿದರೆ ಅದರ ರುಚಿ ಅದ್ಭುತವಾಗಿರುತ್ತದೆ.



Click it and Unblock the Notifications