Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಳಗಾವಿ ಸ್ಟೈಲ್ ಅಲಿಪಾಕ ಮಾಡಿ ನೋಡಿ.! ಹೇಗಿದೆ ಅದರ ರುಚಿ ಗೊತ್ತಾ?
ಉತ್ತರ ಕರ್ನಾಟಕ ಭಾಗವು ತಮ್ಮ ವಿಶೇಷ ಬಗೆಯ ಖಾದ್ಯಗಳಿಂದಲೇ ಫೇಮಸ್. ಹಾಗೆ ಉತ್ತರ ಕರ್ನಾಟಕದ ಖಾದ್ಯಗಳ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ನಾವು ಹಲವು ರೀತಿಯಲ್ಲಿ ಈ ಖಾದ್ಯಗಳ ಮಾಡಿ ಸವಿಯುವುದು ನೋಡಬಹುದು. ಹಲವು ರೀತಿಯ ಸಿಹಿ ರುಚಿಯ ಖಾದ್ಯ ಹಾಗೆ ಖಾರ ಖಾರದ ಖಾದ್ಯಗಳು ಅಲ್ಲಿನ ಫೇಮಸ್ ಖಾದ್ಯಗಳಲ್ಲಿ ಒಂದು ಎನ್ನಬಹುದು.
ಇನ್ನು ಉತ್ತರ ಕರ್ನಾಟದಲ್ಲಿ ಮಾಡಿ ಸವಿಯುವ ಹಲವು ಖಾದ್ಯಗಳು ಎಲ್ಲರಿಗೂ ಇಷ್ಟವಾಗುತ್ತವೆ. ಅದ್ರಲ್ಲೂ ವಿಶೇವಾಗಿ ಅಲ್ಲಿನ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಖಾದ್ಯಗಳ ಸವಿಯುವುದು ನೋಡಬಹುದು. ನಾವಿಂದು ಬೆಳಗಾವಿಯಲ್ಲಿ ಮಾಡುವಂತಹ ವಿಶೇಷ ರುಚಿಯ ಹಾಗೆ ವಿಭಿನ್ನ ಎನಿಸುವಂತಹ ಅಲಿಪಾಕ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಅಲಿಪಾಕ ಬೆಳಗಾವಿ ಹಾಗೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಮಾಡುತ್ತಾರೆ. ಆದ್ರೆ ಒಂದೊಂದು ಭಾಗದಲ್ಲಿ ಒಂದೊಂದು ಹೆಸರಿನಿಂದ ಕರೆಯಲಾಗುತ್ತದೆ. ನಾವಿಂದು ಬೆಳಗಾವಿಯಲ್ಲಿ ಮಾಡುವಂತಹ ಅವಲಕ್ಕಿಯ ಈ ವಿಶೇಷ ಖಾದ್ಯ ಕುರಿತಾಗಿ ತಿಳಿದುಕೊಳ್ಳೋಣ.
ಅವಲಕ್ಕಿಯಲ್ಲಿ ಮಾಡುವ ಅಲಿಪಾಕ ಬೆಳಗ್ಗೆ ತಿಂಡಿಗೆ ಸಂಜೆಯ ಸ್ನ್ಯಾಕ್ಸ್‌ಗೆ ಬಹಳ ರುಚಿ ನೀಡಲಿದೆ. ನೀವು ಸಹ ಅದ್ಭುತ ರುಚಿ ಬಯಸಿದ್ದರೆ ಇದನ್ನು ಒಮ್ಮೆ ಮನೆಯಲ್ಲಿ ಮಾಡಿ ಸವಿದು ನೋಡಿ. ಅದರಲ್ಲೂ ಮಕ್ಕಳಿಗೆ ಇದನ್ನು ಮಾಡಿ ಸವಿಯಲು ನೀಡಿ. ಹಾಗಾದ್ರೆ ನಾವಿಂದು ಈ ಅಲಿಪಾಕ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಬೆಳಗಾವಿ ಅಲಿಪಾಕ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅವಲಕ್ಕಿ
- ಕೊತ್ತಂಬರಿ ಸೊಪ್ಪು
- ಹುರಿಗಡಲೆ
- ನಿಂಬೆ ಹಣ್ಣು
- ತೆಂಗಿನಕಾಯಿ ತುರಿ
- ಹುರಿದ ಶೇಂಗಾ
ಬೆಳಗಾವಿ ಅಲಿಪಾಕ್ ಮಾಡುವ ವಿಧಾನವೇನು?
ಮೊದಲು ಅರ್ಧ ಕಪ್ ಹುರಿಗಡಲೆ ಅಥವಾ ಪುಟಾಣಿಯನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ನುಣ್ಣಗೆ ಪುಡಿ ಮಾಡಿಕೊಂಡು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಅದೇ ಮಿಕ್ಸಿ ಜಾರ್‌ಗೆ ಒಂದು ಕಟ್ ಕೊತ್ತಂಬರಿ ಸೊಪ್ಪು, ಶುಂಠಿ, ಹಸಿ ಮೆಣಸು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಂಡು ಗಟ್ಟಿ ಚಟ್ನಿಯಂತೆ ಮಾಡಿಟ್ಟುಕೊಳ್ಳಿ.
ಈಗ ದೊಡ್ಡ ಪಾತ್ರೆಯಲ್ಲಿ ಹುರಿಗಡೆಲೆ ಪುಡಿ ಹಾಕಿಕೊಂಡು ಎದಕ್ಕೆ ಅರಶಿಣ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಈ ಮೊದಲು ರುಬ್ಬಿಕೊಂಡಿದ್ದ ಕೊತ್ತಂಬರಿ, ಹಸಿ ಮೆಣಸಿನ ಪೇಸ್ಟ್ ಅನ್ನು ಇದಕ್ಕೆ ಹಾಕಿಕೊಳ್ಳಿ. ನಂತರ ಇದಕ್ಕೆ ಅರ್ಧ ನಿಂಬೆ ಹಿಂಡಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇದು ಹಸಿರು ಬಣ್ಣದ ಚಟ್ನಿ ಪುಡಿಯಂತೆ ಬರಬೇಕು. ಉಂಡೆ ಕಟ್ಟುವಂತಹ ಹದ ಬರಬೇಕು.
ಹಾಗೆ ಇದರಲ್ಲಿ ಸ್ವಲ್ಪ ಭಾಗ ತೆಗೆದು ಸಣ್ಣ ಉಂಡೆ ಕಟ್ಟಿಕೊಂಡು ಇಡಿ. ಈಗ ಎರಡು ಕಪ್ ಪೇಪರ್ ಅವಲಕ್ಕಿ ತೆಗೆದುಕೊಂಡು ಜರಡಿ ಹಿಡಿದು ಕ್ಲೀನ್ ಮಾಡಿಕೊಳ್ಳಿ. ಈಗ ಈ ಅವಲಕ್ಕಿಯನ್ನು ಒಂದು ಬೌಲ್‌ಗೆ ಹಾಕಿ ತೆಂಗಿನಕಾಯಿ ತುರಿ, ಹುರಿದ ಶೇಂಗಾ, ಉಪ್ಪು, ಕೊತ್ತಂಬರಿ ಸೊಪ್ಪು, ನಿಂಬೆ ರಸ ಹಿಂಡಿಕೊಳ್ಳಿ.
ಈಗ ಮೊದಲೇ ರೆಡಿ ಮಾಡಿ ಇಟ್ಟ ಮಸಾಲೆಯನ್ನು ಸಹ ಇದಕ್ಕೆ ಹಾಕಿಕೊಳ್ಳಿ. ಬಳಿಕ ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಿಕೊಳ್ಳಿ. ಮಸಾಲೆ ಹಿಡಿದು ಹಸಿರು ಬಣ್ಣಗೆ ಬರಬೇಕು ಎಂದೇನಿಲ್ಲ, ಹಾಗೆ ಚೆನ್ನಾಗಿ ಕಲಸಿಕೊಂಡರೆ ಸಾಕು. ಈಗ ಈ ಅವಲಕ್ಕಿಯನ್ನು ಒಂದು ಪ್ಲೇಟ್‌ಗೆ ಹಾಕಿ ಹಾಗೆ ಮಸಾಲೆ ಕಟ್ಟಿದ್ದ ಉಂಡೆಯನ್ನು ಕೂಡ ಇದರೊಂದಿಗೆ ಸವಿಯಲು ನೀಡಬಹುದು. ನೀವು ಸಹ ಈ ರೀತಿಯಾಗಿ ಈ ಮಸಾಲೆ ಅವಲಕ್ಕಿ ಅಥವಾ ಅಲಿಪಾಕ ಮಾಡಿ ನೊಡಿ.



Click it and Unblock the Notifications