Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೀಟ್ರೂಟ್‌ನ ರಸಂ ಮಾಡಿದ್ರೆ ಊಟದ ಮಜಾ ಹೆಚ್ಚಾಗುತ್ತೆ..! ಮಾಡೋದು ಹೇಗೆ ಗೊತ್ತಾ?
ಊಟ ಅಂದ್ರೆ ಅಲ್ಲಿ ಬಗೆ ಬಗೆಯ ತಿನಿಸುಗಳು, ಬಗೆಯ ಸಾಂಬಾರ್, ಖಾದ್ಯಗಳು ಇದ್ದೇ ಇರುತ್ತೆ. ನೀವು ಯಾವಾಗಲು ಒಂದೇ ರೀತಿಯ ಖಾದ್ಯಗಳ ಮಾಡುವುದಿಲ್ಲ. ನಿತ್ಯ ಹೊಸದಾಗಿ ಏನಾದರು ಮಾಡುವುದು ವಿಶೇಷ ರುಚಿಯಲ್ಲಿ ಸಾಂಬಾರ್, ರಸಂ ಮಾಡುವುದು ನೀವು ಪ್ರಯತ್ನಿಸುತ್ತಿರುತ್ತೀರಿ. ಹಾಗೆ ಎಲ್ಲಾ ಬಗೆಯನ್ನೂ ಒಮ್ಮೆ ರುಚಿಸಲು ಮುಂದಾಗಿರುತ್ತೀರಿ.
ಇನ್ನು ಈ ರಸಂ ವಿಚಾರದಲ್ಲಿಯೂ ಇದೇ ರೀತಿ. ನೀವು ರಸಂ ಅನ್ನು ಕೂಡ ವಿವಿಧ ಬಗೆಯಲ್ಲಿ ಹಲವು ರುಚಿಯಲ್ಲಿ ಮಾಡಿ ಸವಿಯಬಹುದು. ಅದರಲ್ಲೂ ವಿಭಿನ್ನ ರಸಂ ಮಾಡಿದ್ರೆ ಎರಡು ದಿನ ಇಟ್ಟು ಸವಿಯಬಹುದು. ಇಂತಹ ವಿಭಿನ್ನ ರಸಂನಲ್ಲಿ ನಾವಿಂದು ಬೀಟ್ರೂಟ್ ರಸಂ ಮಾಡುವ ಕುರಿತು ತಿಳಿದುಕೊಳ್ಳೋಣ. ಬೀಟ್ರೂಟ್‌ನಿಂದ ನೀವು ರುಚಿಕರ ಪಲ್ಯ, ಸಾಂಬಾರ್, ಚಟ್ನಿ ಕೂಡ ಮಾಡಿ ಸವಿದಿರುತ್ತೀರಿ, ಆದ್ರೆ ಇದರ ರಸಂ ರುಚಿ ಎಂದಾದ್ರು ಸವಿದಿದ್ದೀರಾ?

ಬೀಟ್ರೂಟ್‌ನಿಂದ ಅದ್ಭುತವಾಗಿ ರಸಂ ಮಾಡಬಹುದು, ಒಂದು ಒಳ್ಳೆಯ ಒಗ್ಗರಣೆ ಇದಕ್ಕೆ ಹಾಕಿದ್ರೆ ಬಾಯಿ ಚಪ್ಪರಿಸಿ ನೀವು ಸವಿಯುತ್ತೀರಿ. ಇಂತಹ ರುಚಿಕರ ಹಾಗೂ ನಿಮಿಷಗಳಲ್ಲಿ ರೆಡಿ ಮಾಡಬಹುದಾದ ಈ ಬೀಟ್ರೂಟ್ ರಸಂ ಅನ್ನು ನಾವಿಂದು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಈ ಬೀಟ್ರೂಟ್ ರಸಂ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಈ ರಸಂ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೀಟ್ರೂಟ್ ರಸಂ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಬೀಟ್ರೂಟ್
- ಹಸಿ ಮೆಣಸು
- ಹುಣಸೆಹುಳಿ
- ಎಣ್ಣೆ
- ಉಪ್ಪು
- ಕೊತ್ತಂಬರಿ ಸೊಪ್ಪು
- ಕಡಲೆ ಬೇಳೆ
- ತೊಗರಿ ಬೇಳೆ
- ಟೊಮೆಟೋ - 1
- ಕರಿಬೇವು
- ಬೆಳ್ಳುಳ್ಳಿ
- ಸಾಸಿವೆ
- ಜೀರಿಗೆ
- ಇಂಗು
- ಅರಶಿಣ
- ತೆಂಗಿನ ತುರಿ
ಬೀಟ್ರೂಟ್ ರಸಂ ಮಾಡುವುದು ಹೇಗೆ?
ಮೊಲದು ಬೀಟ್ರೂಟ್ ಅನ್ನು ಹೆಚ್ಚಿಕೊಂಡು ಒಂದು ಕುಕ್ಕರ್‌ಗೆ ಹಾಕಿ ಅದಕ್ಕೆ ಸ್ವಲ್ಪ ಕಡಲೆಬೇಳೆ ಹಾಕಿ 2 ಸೀಟಿ ಹೊಡೆಸಿ ಬೇಯಿಸಿಕೊಂಡು ಅದರಿಂದ ರಸವನ್ನು ತೆಗೆದಿಟ್ಟುಕೊಳ್ಳಬೇಕು. ಇದರಿಂದಲೇ ರಸಂ ಮಾಡಬೇಕು. ಬೆಂದಿರುವ ಬೀಟ್ರೂಟ್ ಅನ್ನು ಸ್ವಲ್ಪ ಪುಡಿ ಮಾಡಿದರೆ ರಸ ಸಿಗುತ್ತದೆ. ಹಾಗೆ ಮತ್ತೆ ತೊಗರಿ ಬೇಳೆಯನ್ನೂ ಕೂಡ ಬೇಯಿಸಿಕೊಂಡು ಸ್ಮ್ಯಾಶ್ ಮಾಡಿಕೊಂಡು ಒಂದು ಬೌಲ್‌ನಲ್ಲಿ ಹಾಕಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಸಾಸಿವೆ, ಜೀರಿಗೆ, ಇಂಗು, ಹಸಿ ಮೆಣಸು, ಜಜ್ಜಿರುವ ಬೆಳ್ಳುಳ್ಳಿ, ಅರಶಿಣ ಹಾಕಿ ಫ್ರೈ ಮಾಡಿಕೊಳ್ಳಬೇಕು. ಅನಂತರ ಇದಕ್ಕೆ ಕರಿಬೇವು, ಟೊಮೆಟೋ ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಬೇಕು. ಈಗ ಬೀಟ್ರೂಟ್ ಬಸಿದು ತೆಗೆದಿಟ್ಟಿರುವ ನೀರನ್ನು ಇದಕ್ಕೆ ಹಾಕಿಕೊಳ್ಳಬೇಕು.
ಈಗ ಹುಣಸೆ ಹುಳಿಗೆ ನೀರು ಹಾಕಿ ಆ ಹುಳಿ ಹಾಕಿ, ಹಾಗೆ ಸ್ವಲ್ಪ ಉಪ್ಪು, ಮತ್ತು ತೆಂಗಿನಕಾಯಿ ತುರಿ, ಮೊದಲು ಪುಡಿ ಮಾಡಿಟ್ಟಿರುವ ತೊಗರಿ ಬೇಳೆಯ ರಸ ಕೂಡ ಹಾಕಿ ಇದನ್ನು ಮಿಕ್ಸ್ ಮಾಡಿಕೊಂಡು ಕುದಿಯಲು ಬಿಡಿ. 7ರಿಂದ 8 ನಿಮಿಷ ಕುದಿಯಲು ಬಿಡಿ. ಅನಂತರ ಇದಕ್ಕೆ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ 1 ನಿಮಿಷ ಕುದಿಸಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಬೀಟ್ರೂಟ್ ರಸಂ ರೆಡಿಯಾಗುತ್ತದೆ. ನೀವು ಕೂಡ ಅದ್ಭುತ ರುಚಿಯಲ್ಲಿ ಈ ರಸಂ ಮಾಡಬಹುದು.



Click it and Unblock the Notifications