Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಭಿನ್ನ ರುಚಿಯ ಬೀಟ್ರೂಟ್ ಮಸಾಲ ವಡೆ ಟ್ರೈ ಮಾಡಿ..! ಸ್ಪೆಷಲ್ ರೆಸಿಪಿ ಇಲ್ಲದೆ..!
ನೀವು ಫ್ರೀ ಇರುವ ಸಮಯದಲ್ಲಿ ಅಥವಾ ಯಾವುದಾದರು ಹಬ್ಬದಲ್ಲಿ, ಶುಭ ಸಮಾರಂಭದಲ್ಲಿ ಮನೆಗೆ ಯಾರಾದರು ಅತಿಥಿಗಳು ಬರುತ್ತಾರೆ ಎಂದಾಗ ಸಿಹಿ ತಿಂಡಿ, ಮಸಾಲೆ ತಿಂಡಿಗಳ ಮಾಡುವುದು ಸಾಮಾನ್ಯ. ಅದರಲ್ಲು ನೀವು ಮಾಸಾಲೆ ವಡೆ ಇಷ್ಟಪಡುವವರಾಗಿದ್ದರೆ ಬಗೆ ಬಗೆಯ ಮಸಾಲೆ ವಡೆ ಮಾಡಿ ಸವಿದಿರುತ್ತೀರಿ. ಅದರಲ್ಲೂ ಕಡಲೆ ಬೇಳೆಯ ಮಸಾಲೆ ವಡೆ ಹೆಚ್ಚು ಫೇಮಸ್ ಆಗಿರುತ್ತೆ.
ಹಾಗೆ ಈ ವಡೆಯಲ್ಲಿ ಯಾವುದೇ ಬಗೆ ಮಾಡಿದ್ರೂ ಕೂಡ ಅದ್ಭುತ ರುಚಿ ನೀಡಲಿದೆ. ಹೀಗೆ ನಾವಿಂದು ಈ ವಡೆಯ ವಿಭಿನ್ನ ರುಚಿ ನೀಡುವಂತಹ ವಿಶೇಷ ರೀತಿಯಲ್ಲಿ ಮಾಡುವ ಕುರಿತು ತಿಳಿಯೋಣ. ಅದರಲ್ಲೂ ಬೀಟ್ರೂಟ್‌ನಲ್ಲಿ ವಡೆ ಮಾಡುವ ವಿಭಿನ್ನ ಶೈಲಿಯನ್ನು ನಾವಿಂದು ತಿಳಿಯೋಣ. ನಾವು ಈ ಮೊದಲು ಬೀಟ್ರೂಟ್‌ನಿಂದ ಮಾಡುವಂತಹ ಹಲವು ಖಾದ್ಯಗಳನ್ನು ಪರಿಚಯಿಸಿದ್ದೆವು. ಇಂದು ಬೀಟ್ರೂಟ್ ವಡೆ ಮಾಡುವುದನ್ನು ನೋಡೋಣ.

ನಾವಿಂದು ಮನೆಯಲ್ಲಿ ಈ ಬೀಟ್ರೂಟ್‌ನಿಂದ ಮಾಸಾಲೆ ವಡೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಬೀಟ್ರೂಟ್ ಮಸಾಲೆ ವಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡುವ ಸರಿಯಾದ ವಿಧಾನದ ಕುರಿತಂತೆ ನಾವಿಂದು ತಿಳಿಯೋಣ.
ಬೀಟ್ರೂಟ್ ಮಸಾಲೆ ವಡೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಕಡಲೆ ಬೇಳೆ- 1 ಕಪ್
- ಬೆಳ್ಳುಳ್ಳಿ
- ಈರುಳ್ಳಿ
- ಬೀಟ್ರೂಟ್
- ಚಕ್ಕೆ
- ಲವಂಗ
- ಉಪ್ಪು
- ಜೀರಿಗೆ
- ಅಕ್ಕಿ ಹಿಟ್ಟು
- ಸೋಂಕಾಳು
- ಶುಂಠಿ
- ಎಣ್ಣೆ
ಬೀಟ್ರೂಟ್ ಮಸಾಲೆ ವಡೆ ಮಾಡುವುದು ಹೇಗೆ
ಮೊದಲು ಒಂದು ಕಪ್‌ನಲ್ಲಿ ಕಡಲೆ ಬೇಳೆ ತೆಗೆದುಕೊಂಡು ಚೆನ್ನಾಗಿ ತೊಳೆದುಕೊಂಡು 3ರಿಂದ 4 ಗಂಟೆ ನೆನೆಸಿಡಬೇಕು. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ನೆನೆಸಿಟ್ಟಿರುವ ಕಡಲೆ ಬೇಳೆಯನ್ನು ಹಾಕಿಕೊಂಡು ಅದಕ್ಕೆ ಒಂದು ಬೀಟ್ರೂಟ್ ಅನ್ನು ಕತ್ತರಿಸಿಕೊಂಡು ಕೂಡ ಹಾಕಿಕೊಳ್ಳಿ. ಹಾಗೆ ಬೆಳ್ಳುಳ್ಳಿ, ಶುಂಠಿ, ಸೋಂಕಾಳು, ಜೀರಿಗೆ, ಚಕ್ಕೆ, ಲವಂಗ, ಉಪ್ಪು ಹಾಕಿಕೊಂಡು ರುಬ್ಬಿಕೊಳ್ಳಬೇಕು.
ನೀರು ಹಾಕದೆಯೇ ರುಬ್ಬಿಕೊಳ್ಳಬೇಕು. ನುಣ್ಣಗೆ ಆಗುವಂತೆ ರುಬ್ಬಿಕೊಳ್ಳಿ. ನಂತರ ಮತ್ತೆ ಸ್ವಲ್ಪ ಕಡಲೆ ಬೇಳೆ ಹಾಕಿ ರುಬ್ಬಿ ಆದ್ರೆ ಈ ಬಾರಿ ತರಿತರಿಯಾಗಿ ರುಬ್ಬಿ. ಕಡಲೆ ಬೇಳೆ ಹಾಗೆ ಇಡಿ ಇಡಿಯಾಗಿ ಇರಲಿ. ಈಗ ರುಬ್ಬಿರುವ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಅನಂತರ ಸಣ್ಣದಾಗಿ ಹೆಚ್ಚಿಕೊಂಡ ಹಸಿ ಮೆಣಸು, ಉಪ್ಪು, 2 ಸ್ಪೂನ್ ಅಕ್ಕಿ ಹಿಟ್ಟು, ಕೊತ್ತಂಬರಿ, ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
ಎಲ್ಲಾ ಪದಾರ್ಥಗಳು ಚೆನ್ನಾಗಿ ಮಿಕ್ಸ್ ಆಗುವಂತೆ ಹಿಟ್ಟು ಹದ ಮಾಡಿಕೊಳ್ಳಿ. ಅನಂತರ ವಡೆಯನ್ನು ಕೈಯಲ್ಲೇ ತಟ್ಟಿಕೊಂಡು ಒಂದು ತಟ್ಟೆಗೆ ಹಾಕಿಕೊಳ್ಳಿ, ಈಗ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ಬಳಿಕ ಅದಕ್ಕೆ ವಡೆಗಳನ್ನು ಹಾಕಿ ಕರಿದುಕೊಳ್ಳಿ. ಎರಡು ಬದಿಯಲ್ಲೂ ವಡೆ ಚೆನ್ನಾಗಿ ಕರಿಯಬೇಕು. ಅನಂತರ ಒಲೆಯಿಂದ ಇಳಿಸಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಬೀಟ್ರೂಟ್ ವಡೆ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ ನೋಡಿ. ಇದರ ರುಚಿ ಬೇರೆಲ್ಲಾ ವಡೆಗಳಿಗಿಂತ ಭಿನ್ನವಾಗಿರುತ್ತೆ.



Click it and Unblock the Notifications