Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೇವಲ 2 ಬೀಟ್ರೂಟ್ ಇದ್ರೆ ಈ ರೀತಿ ಹಲ್ವಾ ಮಾಡಿ! ಬೇಕರಿ ರುಚಿಯ ಸ್ವಾದ!
ತರಕಾರಿಗಳಿಂದ ಹಲವು ರೀತಿಯ ತಿಂಡಿಗಳ ಮಾಡಿ ಸವಿಯಬಹುದು ಎಂಬುದು ನಿಮಗೆಲ್ಲಾ ತಿಳಿದಿರಬಹುದು. ಅದ್ರಲ್ಲೂ ವಿಶೇಷ ಬಗೆಯ ತಿಂಡಿಗಳು ಹಾಗೆ ಹಲವು ತರಕಾರಿಗಳಿಂದ ಮಾಡುವಂತಹ ರುಚಿ ರುಚಿಯ ಸಿಹಿ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಹಬ್ಬದ ಸಮಯದಲ್ಲಿ ಹಲ್ವಾ, ಬಾತ್, ಬರ್ಫಿಗಳು ಮಾಡೋದು ನೋಡಿರುತ್ತೀರಿ. ನಾವಿಂದು ತರಕಾರಿ ಬಳಸಿ ಮಾಡುವ ವಿಶೇಷ ರುಚಿಯ ಹಲ್ವಾ ಮಾಡುವ ಕುರಿತಾಗಿ ತಿಳಿಯೋಣ.
ಅದ್ರಲ್ಲೂ ನಾವಿಂದು ಬೀಟ್ರೂಟ್‌ನಿಂದ ಮಾಡುವಂತಹ ರುಚಿ ರುಚಿಯಾದ ಹಲ್ವಾ ಕುರಿತಾಗಿ ತಿಳಿದುಕೊಳ್ಳೋಣ. ಬೀಟ್ರೂಟ್ ಬಳಸಿ ಮಾಡುವ ಹಲವು ಖಾದ್ಯಗಳ ನೀವು ಸವಿದಿರುತ್ತೀರಿ. ನಾವಿಂದು ಅತ್ಯಂತ ಸುಲಭವಾಗಿ ಈ ಬೀಟ್ರೂಟ್ ಹಲ್ವಾ ಮಾಡುವ ಕುರಿತಾಗಿ ತಿಳಿಯೋಣ. ಕೇವಲ 2 ಬೀಟ್ರೂಟ್ ಇದ್ದರೆ ಸಾಕು ರುಚಿ ರುಚಿಯಾದ ಬೇಕರಿ ಶೈಲಿಯ ಹಲ್ವಾ ಮನೆಯಲ್ಲೇ ಮಾಡಬಹುದು.

ಈ ರುಚಿಯ ಹಲ್ವಾ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ. ಹಾಗೆ ಬೀಟ್ರೂಟ್ ಹಲ್ವಾ ಮಾಡಲು ತಯಾರಿ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ನೋಡಿ.
ಬೀಟ್ರೂಟ್ ಹಲ್ವಾ ಮಾಡಲು ಬೇಕಾಗುವ ವಸ್ತುಗಳು
- ಬೀಟ್ರೂಟ್
- ತುಪ್ಪ
- ಏಲಕ್ಕಿ ಪುಡಿ
- ಬೆಲ್ಲ ಅಥವಾ ಸಕ್ಕರೆ
- ಡ್ರೈ ಫ್ರೂಟ್ಸ್
- ಎಣ್ಣೆ
- ಕಾರ್ನ್ ಫ್ಲೋರ್
ಬೀಟ್ರೂಟ್ ಹಲ್ವಾ ಮಾಡುವ ವಿಧಾನವೇನು?
ಮೊದಲು ಬೀಟ್ರೂಟ್ ಸಿಪ್ಪೆಯನ್ನು ತೆಗೆದು ಸಾಂಬಾರ್‌ಗೆ ಹೆಚ್ಚುವಂತೆ ಹೆಚ್ಚಿಕೊಳ್ಳಿ. ಅನಂತರ ಒಂದು ಮಿಕ್ಸಿ ಜಾರ್‌ಗೆ ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅನಂತರ ಈ ರಸವನ್ನು ಸೋಸಿಕೊಂಡು ಬರೀ ಜ್ಯೂಸ್ ಅನ್ನು ಮಾತ್ರವೇ ತೆಗೆದಿಟ್ಟುಕೊಳ್ಳಿ.
ಈಗ ಅಳತೆ ಕಪ್‌ನಲ್ಲಿ ಈ ಜ್ಯೂಸ್ ಅನ್ನು ತೆಗೆದುಕೊಂಡು ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ 3 ಕಪ್ ಬೀಟ್ರೂಟ್ ರಸ ಹಾಕಿಕೊಳ್ಳಿ. ಅನಂತರ 1 ಕಪ್ ಕಾರ್ನ್ ಫ್ಲೋರ್ ಇದಕ್ಕೆ ಹಾಕಿ ನಿಧಾನವಾಗಿ ಮಿಕ್ಸ್ ಮಾಡಿ. ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿದ ನಂತರ ಒಲೆ ಆನ್ ಮಾಡಿಕೊಂಡು ನಿಧಾನವಾಗಿ ತಿರುಗಿಸುತ್ತಾ ಇರಿ. ಇದು ಗಟ್ಟಿಯಾಗಲು ಆರಂಭಿಸಲಿದೆ.
ಸಣ್ಣ ಉರಿಯಲ್ಲಿ ಮಿಕ್ಸ್ ಮಾಡುತ್ತಾ ಇರಬೇಕು. ಇದರ ಬಣ್ಣ ಕಡು ಬಣಕ್ಕೆ ತಿರುಗಲಿದೆ. ಗಟ್ಟಿ ಸಾಸ್‌ನಂತೆ ಆದ ಬಳಿಕ ಇದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ ಹಾಕಿ, 1 ಕಪ್ ಸಕ್ಕರೆ ಸಾಕಾಗುತ್ತದೆ. ಸಕ್ಕರೆ ಬದಲು ನೀವು ಬೆಲ್ಲ ಕೂಡ ಬಳಸಬಹುದು. ಸಕ್ಕರೆ ಅಥವಾ ಬೆಲ್ಲ ಕರಗಲು ಬಿಟ್ಟು ಈಗ 3ರಿಂದ 4 ಸ್ಪೂನ್ ತುಪ್ಪ ಸಹ ಹಾಕಿಕೊಳ್ಳಿ. ಮತ್ತೆ ಮಿಶ್ರಣ ಮಾಡುತ್ತಾ ಇರಿ.
ತಳ ಬಿಡುವಷ್ಟು ಹದಕ್ಕೆ ತಿರುಗಿಸುತ್ತಾ ಇರಿ. ಇದಕ್ಕೆ ಏಲಕ್ಕಿ ಪುಡಿ, ಹಾಗೆ ಸಣ್ಣದಾಗಿ ಹೆಚ್ಚಿಕೊಂಡಿರುವ ಡ್ರೈ ಫ್ರೂಟ್ಸ್‌ಗಳನ್ನು ಸೇರಿಸಿ. ಗೋಡಂಬಿ, ದ್ರಾಕ್ಷಿ, ಬಿಳಿ ಎಳ್ಳು, ಹೀಗೆ ಯಾವುದಾದರು ವಸ್ತುಗಳ ಸೇರಿಸಬಹುದು. ಹೀಗೆ ಸ್ವಲ್ಪ ಗಟ್ಟಿಯಾಗಲು ಬಿಡಬೇಕು. ಕೈ ಬಿಡದೆ ಮಿಕ್ಸ್ ಮಾಡುತ್ತಾ ಇರಬೇಕು. ಈಗ ಒಂದು ಬಾಕ್ಸ್ ತಟ್ಟೆಗೆ ಎಣ್ಣೆ ಹಚ್ಚಿಕೊಂಡು ಇಟ್ಟುಕೊಂಡು ಅದಕ್ಕೆ ಈ ಎಲ್ಲಾ ಹಲ್ವಾವನ್ನು ಹಾಕಿಕೊಳ್ಳಿ.
ನಂತರ ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಅಚ್ಚು ಪಾತ್ರೆಯಲ್ಲಿ ಕತ್ತರಿಸಿಕೊಂಡು ತೆಗೆದರೆ ನಿಮ್ಮ ಮುಂದೆ ರುಚಿ ರುಚಿಯ ಬೀಟ್ರೂಟ್ ಹಲ್ವಾ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಸುಲಭವಾಗಿ ಇದನ್ನು ಮಾಡಿ ಸವಿದು ನೋಡಿ. ಮಕ್ಕಳಿಗಂತು ಬಹಳ ಇಷ್ಟವಾಗುತ್ತೆ.



Click it and Unblock the Notifications