Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಸಾಲೆ ರುಬ್ಬದೆ ಮಾಡಿ ಬೀಟ್ರೂಟ್ ಬಿರಿಯಾನಿ; 10 ನಿಮಿಷ ಸಾಕು!
ನೀವು ಊಟಕ್ಕೆ ಬಹಳ ರುಚಿ ರುಚಿಯಾದ ಹಲವು ರೀತಿ ಖಾದ್ಯಗಳ ಮಾಡುತ್ತೀರಿ. ನಾನ್ ವೆಜ್ ಪ್ರಿಯರು ಒಂದಿಷ್ಟು ಖಾದ್ಯಗಳ ಮಾಡಿದ್ರೆ ವೆಜ್ ಪ್ರಿಯರು ಸಹ ರುಚಿ ರುಚಿಯಾದ ಖಾದ್ಯಗಳ ಮಾಡಿ ಸವಿಯೋದು ನೋಡಬಹುದು. ಹಾಗೆ ವೆಜ್ ಖಾದ್ಯಗಳ ಪಟ್ಟಿಯಲ್ಲಿ ವೆಜ್ ಬಿರಿಯಾನಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಬಿರಿಯಾನಿಯ ಹೆಸರು ಕೇಳಿದ್ರೆ ನಿಮ್ಮ ಬಾಯಲ್ಲಿ ನೀರು ಬರಬಹುದು.
ಇನ್ನು ವೆಜ್ ಬಿರಿಯಾನಿಯಲ್ಲಿ ಹಲವು ಬಗೆಗಳಿವೆ. ಒಂದೊಂದು ಬಗೆಯು ಒಂದೊಂದು ರೀತಿಯ ರುಚಿ ಹೊಂದಿರಲಿದೆ. ಹಾಗೆ ಈ ರುಚಿಯ ಖಾದ್ಯಗಳನ್ನು ಮನೆಯಲ್ಲಿ ಮಾಡಿ ಸವಿಯೋದು ಅಂದ್ರೆ ಎಲ್ಲರು ಇಷ್ಟಪಡುತ್ತಾರೆ. ಆದ್ರೆ ವೆಜ್ ಬಿರಿಯಾನಿಯಲ್ಲಿ ಹಲವು ಬಗೆ ಇದ್ದರೂ ನಾವಿಂದು ಹೊಸ ರೀತಿಯ ವೆಜ್ ಬಿರಿಯಾನಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಅದ್ರಲ್ಲೂ ವೆಜ್ ಬಿರಿಯಾನಿಯಲ್ಲಿ ಬೀಟ್ರೂಟ್ ಬಳಸಿ ಮಾಡುವಂತಹ ಈ ಬಿರಿಯಾನಿ ರುಚಿಯಲ್ಲಿ ಮಾತ್ರವಲ್ಲ ಮಾಡೋದು ಕೂಡ ಬಹಳ ಸುಲಭ. ಈ ರುಚಿ ಒಮ್ಮೆ ನೀವು ಸವಿದರೆ ಪದೇ ಪದೇ ಮಾಡಿ ಸವಿಯೋದು ಖಚಿತ. ಹಾಗೆ ಈ ಬೀಟ್ರೂಟ್ ರುಚಿಯ ಬಿರಿಯಾನಿ ಮನೆಯಲ್ಲಿ ಎಲ್ಲರು ಇಷ್ಟಪಡುವ ಬಿರಿಯಾನಿ ಆಗೋದು ಖಚಿತ.
ಹಾಗಾದ್ರೆ ಈ ಬೀಟ್ರೂಟ್ ಬಿರಿಯಾನಿ ಮಾಡುವುದು ಹೇಗೆ? ಮಾಡಲು ಎಷ್ಟು ಸಮಯಬೇಕು? ಯಾವೆಲ್ಲಾ ವಸ್ತುಗಳು ಬೇಕಾಗುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳೋಣ.
ಬೀಟ್ರೂಟ್ ಬಿರಿಯಾನಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಬೀಟ್ರೂಟ್
- ಅಕ್ಕಿ (15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಬೇಕು)
- ಮೊಸರು
- ಟೊಮೆಟೊ
- ಖಾರದ ಪುಡಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಹಸಿ ಮೆಣಸಿನಕಾಯಿ
- ಪುದೀನ
- ಕೊತ್ತಂಬರಿ ಸೊಪ್ಪು
- ಈರುಳ್ಳಿ
- ಲವಂಗ
- ಪಲಾವ್ ಎಲೆ
- ದಾಲ್ಚಿನ್ನಿ
- ಏಲಕ್ಕಿ
- ಕಲ್ಲು ಮೊಗ್ಗು
- ಬಿರಿಯಾನಿ ಪುಡಿ
- ತುಪ್ಪ
- ಅಡುಗೆ ಎಣ್ಣೆ
- ಉಪ್ಪು
ಬೀಟ್ರೂಟ್ ಬಿರಿಯಾನಿ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ತುಪ್ಪ ಮತ್ತು ಎಣ್ಣೆ ಎರಡನ್ನೂ ಹಾಕಿಕೊಂಡು ಬಿಸಿ ಮಾಡಿ. ನಂತರ ಇದಕ್ಕೆ ಚಕ್ಕೆ ಲವಂಗ, ಪಲಾವ್ ಎಲೆ, ಕಲ್ಲು ಹೂವು, ಹಾಗೆ ಕತ್ತರಿಸಿಕೊಂಡ ಈರುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 2 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಹಸಿ ಮೆಣಸು, ಪುದಿನ ಹಾಗೂ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿ.
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಕತ್ತರಿಸಿಕೊಂಡಿದ್ದ ಟೊಮೆಟೋವನ್ನು ಸಹ ಹಾಕಿಕೊಂಡು, ಉಪ್ಪು ಹಾಕಿ ಫ್ರೈ ಆಗಲು ಬಿಡಿ. ಈಗ ಒಂದು ಸಣ್ಣ ಬೀಟ್ರೋಟ್ ಅನ್ನು ಸಣ್ಣದಾಗಿ ಕತ್ತರಿಸಿಕೊಂಡು ಇದಕ್ಕೆ ಹಾಕಿಕೊಳ್ಳಿ. 2 ನಿಮಿಷ ಬಿಟ್ಟು ಇದಕ್ಕೆ 2 ಸ್ಪೂನ್ ಮೊಸರು ಹಾಗೆ ಬಿರಿಯಾನಿ ಪೌಡರ್ ಸಹ ಹಾಕಿಕೊಳ್ಳಿ.
ಹಾಗೆ ಮತ್ತೊಂದು ನಿಮಿಷ ಫ್ರೈ ಮಾಡಿದ ಬಳಿಕ ಈಗ ಮೊದಲು ತೊಳೆದು ನೆನೆಸಿಟ್ಟಿದ್ದ 1 ಕಪ್ ಅಕ್ಕಿಯ ಅಳತೆಯಲ್ಲಿ 2 ಕಪ್ ನೀರು ಹಾಕಿಕೊಳ್ಳಿ. ಈಗ ಕುದಿಬರಲು ಬಿಡಿ. ಕುದಿ ಬರಲು ಆರಂಭಿಸಿದಾಗ ಅಕ್ಕಿಯನ್ನು ಸಹ ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ ಕುದಿಬರಲು ಬಿಡಿ. ಕುದಿಯಲು ಆರಂಭಿಸಿದಾಗ ಕುಕ್ಕರ್ ಮುಚ್ಚಳ ಮುಚ್ಚಿ. ನಂತರ 2 ಸೀಟಿ ಹೊಡೆಯಲು ಬಿಡಿ. ನಂತರ ಮುಚ್ಚಳ ತೆಗೆದು ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಬೀಟ್ರೂಟ್ ಬಿರಿಯಾನಿ ಸಿದ್ದವಾಗುತ್ತೆ. ನೀವು ಕೂಡ ಈ ರುಚಿಯ ಬಿರಿಯಾನಿ ಮಾಡಿ ನೋಡಿ.



Click it and Unblock the Notifications