Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅನ್ನಕ್ಕೆ ಹೇಳಿ ಮಾಡಿಸಿದ ರುಚಿಯ ಬಸಳೆ ಸಾಂಬಾರ್ ಮಾಡಿ..! ಎಷ್ಟು ಸುಲಭದ ರೆಸಿಪಿ ಗೊತ್ತಾ?
ನಮ್ಮ ದೇಹಕ್ಕೆ ಸೊಪ್ಪು ಬಹಳ ಮುಖ್ಯ, ಸೊಪ್ಪಿನಲ್ಲಿ ಕಬ್ಬಿಣಾಂಶ ಹಾಗೂ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವಂತಹ ಪೋಷಕಾಂಶಗಳು ಇರುತ್ತವೆ. ಹೀಗಾಗಿ ಸೊಪ್ಪು, ತರಕಾರಿ ಹೆಚ್ಚಾಗಿ ತಿನ್ನಬೇಕು ಎನ್ನುತ್ತಾರೆ. ಇಂತಹ ಸೊಪ್ಪುಗಳಲ್ಲಿ ನಾವು ಪಲ್ಯ, ಸಾಂಬಾರ್ ಸೇರಿ ಹಲವು ರೀತಿ ಖಾದ್ಯ ಮಾಡಿ ಸವಿಯುತ್ತೇವೆ. ಈ ಸೊಪ್ಪುಗಳಲ್ಲಿ ನಾವಿಂದು ಬಸಳೆ ಸೊಪ್ಪಿನ ಕುರಿತು ತಿಳಿಯೋಣ.
ಬಸಳೆ ಸೊಪ್ಪು ದೇಹಕ್ಕೆ ಅತ್ಯಂತ ತಂಪು ತರುವಂತಹ ಸೊಪ್ಪಾಗಿದೆ. ಈ ಸೊಪ್ಪಿನಲ್ಲಿ ವಿಟಮಿನ್ ಎ, ಸಿ, ಬಿ9 ಕಂಡುಬರುತ್ತದೆ. ಲ್ಯೂಟೀನ್ ಮತ್ತು ಬೀಟಾ - ಕೆರೋಟಿನ್ ಆಂಟಿ - ಓಕ್ಸಿಡೆಂಟ್‌ಗಳನ್ನು ಸಹ ನಾವು ಈ ಸೊಪ್ಪಿನಲ್ಲಿ ನೋಡಬಹುದು. ಹೀಗಾಗಿ ಇದರ ಸಾಂಬಾರ್ ನಮ್ಮ ದೇಹಕ್ಕೆ ಬಹಳ ಉತ್ತಮ. ಈ ಬಸಳೆ ಸೊಪ್ಪಿನಿಂದ ಮಾಡುವ ಸಾಂಬಾರ್ ಬಹಳ ರುಚಿಕರವಾಗಿರುತ್ತೆ.

ಬಸಳೆ ಸೊಪ್ಪಿನ ಸಾಂಬಾರ್ ಅನ್ನದ ಜೊತೆಗೆ ಎಷ್ಟು ರುಚಿಯಾಗಿರುತ್ತೆ ಅಂದ್ರೆ ಅದರ ರುಚಿ ಸವಿದವರು ಪದೇ ಪದೇ ಸವಿಯಬೇಕು ಎಂಬ ಆಸೆ ಹೊಂದುತ್ತಾರೆ. ಬಸಳೆ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ನೀಡಿ ತಂದು ಮಾಡುವುದನ್ನು ನಾವು ನೋಡಿದ್ದೇವೆ ಆದ್ರೆ ನಾವು ಸುಲಭವಾಗಿ ಮನೆಯಲ್ಲಿ ಈ ಬಸಳೆ ಸೊಪ್ಪಿನ ಸಾರು ಮಾಡುವುದು ಹೇಗೆ ಎಂಬುದನ್ನು ನಾವಿಂದು ನೋಡೋಣ.
ಬಸಳೆ ಸೊಪ್ಪಿನ ಸಾಂಬಾರ್ ಮಾಡಲು ಬೇಕಾಗುವ ಪದಾರ್ಥಗಳೇನು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯುತ್ತದೆ. ಈ ಸೊಪ್ಪನ್ನು ಹೇಗೆ ಹೆಚ್ಚಿಕೊಳ್ಳಬೇಕು? ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿಯೋಣ.
ಬಸಳೆ ಸೊಪ್ಪಿನ ಸಾಂಬಾರ್ ಮಾಡಲು ಬೇಕಾಗುವ ಪದಾರ್ಥಗಳು
- ಬಸಳೆ ಸೊಪ್ಪು
- ಹೆಸರು ಬೇಳೆ
- ಟೊಮೆಟೋ -2
- ಅರಶಿನ
- ಧನಿಯಾ ಕಾಳು
- ಕರಿಬೇವು
- ಒಣ ಮೆಣಸು
- ಸಾಸಿವೆ
- ಜೀರಿಗೆ
- ಬೆಳ್ಳುಳ್ಳಿ
- ಉಪ್ಪು
- ಎಣ್ಣೆ
- ಇಂಗು
- ಹುಣಸೆ ಹಣ್ಣು
- ತೆಂಗಿನಕಾಯಿ ತುರಿ
ಬಸಳೆ ಸೊಪ್ಪಿನ ಸಾಂಬಾರ್ ಮಾಡುವುದು ಹೇಗೆ?
ಮೊದಲು ಬಸಳೆ ಸೊಪ್ಪನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಬಸಳೆ ಸೊಪ್ಪಿನ ದಂಟನ್ನು ಬೆರಳಿನಷ್ಟು ಉದ್ದ ಕತ್ತರಿಸಿಕೊಂಡು ಇಟ್ಟುಕೊಳ್ಳಿ, ನೀವು ದಂಟನ್ನು ಬೇರೆಯಾಗಿ ಬೇಯಿಸಿಕೊಳ್ಳಬಹುದು ಇಲ್ಲವೆ ಸಾಂಬಾರ್ ಜೊತೆಗೆ ಹಾಕಿ ಬೇಯಿಸಬಹುದು.
ಮೊದಲು ಕುಕ್ಕರ್ ಅನ್ನು ಒಲೆ ಮೇಲೆ ಇಟ್ಟು ಅದಕ್ಕೆ ಒಂದು ಬೌಲ್ ಹೆಸರು ಬೇಳೆಯನ್ನು ತೊಳೆದು ಕುಕ್ಕರ್‌ಗೆ ಹಾಕಿಕೊಳ್ಳಿ. ಹೆಸರು ಬೇಳೆಯ ಬದಲಿಗೆ ನೀವು ತೊಗರಿ ಬೇಳೆಯನ್ನು ಕೂಡ ಬಳಸಬಹುದು. ನಂತರ ಇದಕ್ಕೆ ಹೆಚ್ಚಿರುವ ಎರಡು ಟೊಮೆಟೋ, ಅರಶಿನ, ಎಣ್ಣೆ ಹಾಕಿ 2 ಸೀಟಿ ಹೊಡೆಸಿಕೊಳ್ಳಿ. ಈಗ ಈ ಕುಕ್ಕರ್ ಮುಚ್ಚಳ ತೆಗೆದು ಅದಕ್ಕೆ ಬಸಳೆ ಸೊಪ್ಪು ಹಾಗೂ ದಂಟು, ನೀರು, ಉಪ್ಪು ಹಾಕಿ ಕುದಿಸಿಕೊಳ್ಳಿ.
ಬಾಯಿ ರುಚಿ ಬ್ರೇಕ್‌ಫಾಸ್ಟ್: ಸ್ವಾದಿಷ್ಟ ಮಸಾಲೆ ಇಡ್ಲಿ ಮಾಡೋದು ಹೇಗೆ? ಇಲ್ಲಿದೆ ರೆಸಿಪಿ
5 ನಿಮಿಷ ಬೇಯಿಸಿಕೊಂಡರೆ ಸಾಕಾಗುತ್ತದೆ. 5 ನಿಮಿಷ ಆದ ಬಳಿಕ ಉರಿ ಸಣ್ಣದಾಗಿ ಇಡಿ. ಈಗ ಇನ್ನೊಂದು ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಧನಿಯಾ ಕಾಳು, ಜೀರಿಗೆ, ಖಾರದ ಪುಡಿ ಅಥವಾ ಬ್ಯಾಡಗಿ ಮೆಣಸು, ಇಂಗು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಕರಿಬೇವಿನ ಸೊಪ್ಪು ಹಾಕಿ ಹುರಿದುಕೊಳ್ಳಿ. ಕೊನೆಯದಾಗಿ ತೆಂಗಿನಕಾಯಿ ತುರಿ ಹಾಕಿ ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ.
ಆರೋಗ್ಯಕ್ಕೆ ಅತ್ಯುತ್ತಮ ಈ ಜೀರಿಗೆ ಮೆಣಸಿನ ರಸ..! ಮಾಡೋದು ಹೇಗೆ?
ಈಗ ಈ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿ ಇದಕ್ಕೆ ಹುಣಸೆ ಹಣ್ಣು, ನೀರು ಹಾಕಿ ರುಬ್ಬಿಕೊಳ್ಳಿ. ನುಣ್ಣಗೆ ರುಬ್ಬಿಕೊಳ್ಳಬೇಕು. ಇನ್ನೊಂದು ಕಡೆ ಕುಕ್ಕರ್‌ನಲ್ಲಿ ಬಸಳೆ ಬೇಯುತ್ತಿರುವಾಗ ಇದಕ್ಕೆ ರುಬ್ಬಿಕೊಂಡ ಈ ಮಸಾಲೆಯನ್ನು ಹಾಕಿಕೊಳ್ಳಿ. ಹಾಗೆ ಸ್ವಲ್ಪ ನೀರು ಸಹ ಹಾಕಿಕೊಂಡು ಮಿಶ್ರಣ ಮಾಡಿ ಕುದಿಯಲು ಬಿಡಿ. 10 ನಿಮಿಷ ಕುದಿ ಬಂದಾಗ ಇನ್ನೊಂದು ಒಲೆಯಲ್ಲಿ ಒಗ್ಗರಣೆ ಮಾಡಿ.
ಸಣ್ಣ ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ಕೊನೆಯಲ್ಲಿ ಒಣ ಮೆಣಸು ಹಾಕಿಕೊಂಡು ಒಲೆ ಆಫ್ ಮಾಡಿ ಈ ಒಗ್ಗರಣೆಯನ್ನು ಬಸಳೆ ಸಾರಿಗೆ ಹಾಕಿ ಮಿಕ್ಸ್ ಮಾಡಿ ಒಂದು ನಿಮಿಷ ಬಿಟ್ಟು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನೀವು ಊಟಕ್ಕೆ ಸವಿಯಲು ಬಸಳೆ ಸೊಪ್ಪಿನ ಸಾರು ರೆಡಿಯಾಗುತ್ತದೆ.



Click it and Unblock the Notifications