Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇಹಕ್ಕೆ ತಂಪು, ಅತ್ಯುತ್ತಮ ನಿದ್ರೆಗೆ ಬಾರ್ಲಿ ಗಂಜಿ ಮಾಡಿ..! 10 ನಿಮಿಷದಲ್ಲಿ ರೆಡಿ
ಬೇಸಿಗೆ ಆರಂಭಕ್ಕೂ ಮುನ್ನವೇ ಬಿಸಿಲಿನ ತಾಪ ಹೆಚ್ಚಳವಾಗಿದ್ದು, ಹೊರಗೆ ಓಡಾಡುವುದೇ ಈಗ ಕಷ್ಟವಾಗಿದೆ. ಹಾಗೆ ಮನೆಯೊಳಗೂ ಕೂಡ ವಿಪರೀತ ಹೀಟ್‌ನಿಂದಾಗಿ ದೇಹದ ದಣಿಯಲು ಆರಂಭಿಸುತ್ತದೆ. ಬೇಸಿಗೆಯ ಆರಂಭಕ್ಕೂ ಮುನ್ನ ಹೀಟ್ ವೇವ್‌ನಂತಹ ವಾತಾವರಣವು ದೇಹದಲ್ಲಿ ಹಲವು ರೀತಿ ಬದಲಾವಣೆಗೆ ಕಾರಣವಾಗುತ್ತದೆ. ಅದರಲ್ಲೂ ದೇಹ ಈಗ ಬಿಸಿಲಿಗೆ ಒಡ್ಡಿಕೊಳ್ಳಲು ಆರಂಭಿಸುವ ಕಾರಣ ದೇಹವನ್ನು ಆದಷ್ಟು ತಂಪಾಗಿಡಬೇಕಾಗುತ್ತದೆ.
ದೇಹದ ಉಷ್ಣತೆ ಹೆಚ್ಚಳವಾದರೆ ಅನೇಕ ಅನಾರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗೆ ದೇಹವನ್ನು ತಂಪು ಮಾಡುವುದು ಕೂಡ ಮುಖ್ಯವಾಗುತ್ತೆ. ಇದಕ್ಕಾಗಿ ಇಡೀ ದಿನ ನೀರು ಕುಡಿಯುವುದು, ಎಳನೀರು ಸೇವನೆ ಹಾಗೆ ನಮ್ಮ ಆಹಾರದಲ್ಲೂ ಒಂದಿಷ್ಟು ಬದಲಾವಣೆ ಮಾಡಿಕೊಳ್ಳುವುದು ಅತ್ಯಾವಶ್ಯಕ. ಹಾಗೆ ಈ ಸಮಯದಲ್ಲಿ ಊಟದ ಜೊತೆಗೆ ಒಂದಿಷ್ಟು ದೇಹಕ್ಕೆ ತಂಪಾಗುವ ಆಹಾರ ಸೇವನೆ ಮುಖ್ಯ.
ದೇಹ ತಂಪಾಗಿಸಲು ಹಲವು ಬಗೆಯ ಆಹಾರಗಳ ಬಳಸಿರುತ್ತೇವೆ. ನೀರು, ಹಣ್ಣು, ಜ್ಯೂಸ್, ಹುಳಿ, ಮಜ್ಜಿಗೆ ಹೀಗೆ ಹಲವು ಪದಾರ್ಥ ದೇಹಕ್ಕೆ ಉತ್ತಮ. ಹಾಗೆ ನಾವಿಂದು ದೇಹವನ್ನು ತಂಪಾಗಿಸುವ ಬಾರ್ಲಿ ಗಂಜಿ ಕುರಿತು ತಿಳಿದುಕೊಳ್ಳೋಣ. ಬಾರ್ಲಿ ನೀರು ಬಹಳ ತಂಪಾಗಿರುತ್ತೆ. ಹೀಗಾಗಿ ನಿತ್ಯ ಬಾರ್ಲಿಯ ನೀರು ಸೇವನೆ ನಮ್ಮ ದೇಹಕ್ಕೆ ಉತ್ತಮ ಎನ್ನಲಾಗಿದೆ.

ಆದ್ರೆ ನಾವಿಂದು ಬಾರ್ಲಿಯಿಂದ ಮಾಡುವಂತಹ ಅದ್ಭುತ ರುಚಿಯ ಗಂಜಿಯ ಕುರಿತು ತಿಳಿದುಕೊಳ್ಳೋಣ. ಬಾರ್ಲಿಯಲ್ಲಿ ಮಾಡುವ ಗಂಜಿಯು ನಿಮ್ಮ ದೇಹದ ಉಷ್ಣಾಂಶ ಸಮತೋಲನದಲ್ಲಿಡಲು ಸಹಕಾರಿಯಾಗಿದೆ. ಬಾರ್ಲಿ ನೀರಿನಲ್ಲಿ ಕ್ಯಾಲ್ಸಿಯಂ, ಫೈಬರ್, ಕಬ್ಬಿಣ, ಮೆಗ್ನೀಸಿಯಮ್, ಮ್ಯಾಂಗನೀಸ್ ಸೇರಿ ಹಲವು ಜೀವಸತ್ವಗಳು ಹೇರಳವಾಗಿವೆ. ಹಾಗಾದ್ರೆ ಬಾರ್ಲಿಯಿಂದ ರುಚಿ ರುಚಿಯ ಗಂಜಿ ಮಾಡುವುದು ಹೇಗೆ?
ಬಾರ್ಲಿ ಗಂಜಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬಾರ್ಲಿ ಗಂಜಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಬಾರ್ಲಿ
- ಕೊತ್ತಂಬರಿ ಸೊಪ್ಪು
- ಉಪ್ಪು
- ಸಾಸಿವೆ
- ಜೀರಿಗೆ
- ಹಸಿ ಮೆಣಸು- 2
- ಕರಿಬೇವು
- ಇಂಗು
ಬಾರ್ಲಿ ಗಂಜಿ ಮಾಡುವುದು ಹೇಗೆ?
ಮೊದಲು ಒಂದು ಬೌಲ್‌ನಲ್ಲಿ ಬಾರ್ಲಿ ತೆಗೆದುಕೊಂಡು ಎರಡರಿಂದ ಮೂರು ಬಾರಿ ಚೆನ್ನಾಗಿ ತೊಳೆಯಬೇಕು. ನಂತರ ಒಂದು ಕುಕ್ಕರ್‌ಗೆ ಹಾಕಿ ಎರಡರಷ್ಟು ನೀರು ಹಾಕಿ ಉಪ್ಪು ಹಾಕಿ ಮುಚ್ಚಳ ಮುಚ್ಚಿ ಮೂರು ಸೀಟಿ ಹೊಡೆಸಿಕೊಳ್ಳಬೇಕು. ಬಾರ್ಲಿ ಬೆಂದು ಮೆತ್ತಗಾಗಬೇಕು. ಈಗ ಕುಕ್ಕರ್‌ನಲ್ಲಿರುವ ಬಾರ್ಲಿಯನ್ನು ಜರಡಿ ಹಿಡಿದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಹಾಗೆ ಆ ಬಾರ್ಲಿ ನೀರನ್ನು ಕೂಡ ಹಾಗೆ ಇಟ್ಟುಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಎರಡು ಸುತ್ತು ರುಬ್ಬಬೇಕು. ಇದು ತರಿತರಿಯಗಿ ಎರಡು ಭಾಗ ಆಗುವಂತೆ ಮಾಡಿಕೊಳ್ಳಿ. ಈಗ ರುಬ್ಬಿದ ಈ ಬಾರ್ಲಿ ಪುಡಿಯನ್ನು ಮೊದಲು ತೆಗೆದಿಟ್ಟಿರುವ ಬಾರ್ಲಿ ನೀರಿನೊಂದಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಅರ್ಧ ಕಪ್ ಮೊಸರು ಹಾಕಿ. ಹುಳಿ ಮೊಸರು ಬಳಸಬೇಡಿ. ಮೊಸರು ಹಾಕಿ ಒಮ್ಮೆ ಮಿಕ್ಸ್ ಮಾಡಿ.
ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಸಾಸಿವೆ, ಜೀರಿಗೆ, ಹಸಿ ಮೆಣಸು, ತುರಿದ ಶುಂಠಿ, ಕರಿಬೇವು, ಇಂಗು ಹಾಕಿ ಒಗ್ಗರಣೆ ರೆಡಿ ಮಾಡಿಕೊಂಡು ಈ ಬಾರ್ಲಿ ಗಂಜಿಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಉಪ್ಪು ರುಚಿ ನೋಡಿ ಇದಕ್ಕೆ ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿ ಒಮ್ಮೆ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ರುಚಿ ರುಚಿ ಬಾರ್ಲಿ ಗಂಜಿ ರೆಡಿಯಾಗುತ್ತೆ. ಬಹುಬೇಗ ದೇಹ ತಂಪಾಗಲು ಈ ಗಂಜಿ ಫಸ್ಟ್ ಚಾಯ್ಸ್..



Click it and Unblock the Notifications