Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕ್ಕಳ ಬಾಯಲ್ಲಿ ನೀರು ತರಿಸುವ ಕರಾವಳಿ ಸ್ಪೆಷಲ್ ಬಾಳೆಹಣ್ಣು ಹಲ್ವಾ..!
ಮನೆಯಲ್ಲೇ ಮಾಡುವ ಸಿಹಿ ತಿಂಡಿಗಳ ಯಾರು ತಾನೆ ಇಷ್ಟಪಡಲ್ಲ ಹೇಳಿ. ಮಕ್ಕಳಿಗಂತು ಸಿಹಿ ತಿಂಡಿ ಅಂದರೆ ಎಲ್ಲಿಲ್ಲದ ಇಷ್ಟ. ಯಾವುದಾದರು ಹೊಸ ರೀತಿಯ ತಿಂಡಿಗಳ ಮಾಡಿದಾಗ ಇಷ್ಟಪಟ್ಟು ಸವಿಯುತ್ತಾರೆ. ಅದರಲ್ಲೂ ಹಣ್ಣುಗಳಿಂದ ಮಾಡಿದಂತಹ ಸಿಹಿ ತಿಂಡಿ ಅತ್ಯಂತ ರುಚಿಕರವಾಗಿರುತ್ತೆ. ಹೀಗಾಗಿ ಎಲ್ಲರಿಗೂ ಸವಿಯಲು ಇಷ್ಟವಾಗುತ್ತೆ.
ನಾವಿಂದು ಮನೆಯಲ್ಲಿ ಸುಲಭವಾಗಿ ಮಾಡಿ ಸವಿಯಬಹುದಾದ ಸಿಹಿ ತಿಂಡಿ ಮಾಡುವ ಕುರಿತು ತಿಳಿಯೋಣ. ಅದರಲ್ಲೂ ಕರಾವಳಿ ಭಾಗದಲ್ಲಿ ತುಂಬಾನೆ ಫೇಮಸ್ ಆಗಿರುವ ಬಾಳೆಹಣ್ಣಿನ ಹಲ್ವಾ ಮಾಡುವ ಕುರಿತು ತಿಳಿಯೋಣ. ಈ ಹಲ್ವಾವನ್ನು ಕೆಲವೇ ವಸ್ತುಗಳ ಬಳಸಿ ರುಚಿಕರವಾಗಿ ಮಾಡಬಹುದು, ಮನೆಯಲ್ಲಿ ಎಲ್ಲಾ ವಯಸ್ಸಿನವರು ಇಷ್ಟ ಪಟ್ಟು ಸವಿಯಬಹುದು.

ಈ ತಿಂಡಿಯನ್ನು ಬೆಳಗ್ಗೆ ಹಾಗೂ ಸಂಹೆ ಸಮಯದಲ್ಲಿ ಚೆನ್ನಾಗಿರುತ್ತೆ. ಹಾಗಾದ್ರೆ ಮನೆಯಲ್ಲಿ ಈ ಬಾಳೆಹಣ್ಣಿನ ಹಲ್ವಾ ಮಾಡುವುದು ಹೇಗೆ? ಬಾಳೆಹಣ್ಣಿನ ಹಲ್ವಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬಾಳೆಹಣ್ಣಿನ ಹಲ್ವಾ ಮಾಡಲು ಯಾವೆಲ್ಲಾ ಪದಾರ್ಥ ಬೇಕು?
- ಬಾಳೆಹಣ್ಣು - 5
- ತುಪ್ಪ
- ಸಕ್ಕರೆ
- ಬೆಲ್ಲ
- ಗೋಡಂಬಿ
- ಏಲಕ್ಕಿ ಪುಡಿ
ಬಾಳೆಹಣ್ಣಿನ ಹಲ್ವಾ ಮಾಡುವುದು ಹೇಗೆ?
ಹಣ್ಣಾಗಿರುವ ಬಾಳೆ ಹಣ್ಣುಗಳನ್ನು ಕತ್ತರಿಸಿಕೊಂಡು ಮಿಕ್ಸಿ ಜಾರ್‌ಗೆ
ಹಾಕಿಕೊಳ್ಳಿ. ಅದನ್ನು ನುಣ್ಣಗೆ ಪೇಸ್ಟ್ ಆಗುವಂತೆ ರುಬ್ಬಿಕೊಳ್ಳಿ. ಇದು
ನುಣ್ಣಗಾದ ಬಳಿಕ ಅದನ್ನು ಕೈಯಿಂದ ಮತ್ತೆ ಹಿಸುಕಿಕೊಳ್ಳಬೇಕು. ಇದರಿಂದ
ಬಾಳೆಹಣ್ಣಿನ ಹಿಟ್ಟು ಹದವಾಗುತ್ತದೆ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ
ತುಪ್ಪ
ಹಾಕಿಕೊಂಡು ತುಪ್ಪ ಕಾದ ಬಳಿಕ ಬಾಳೆಹಣ್ಣಿನ ಈ ಹಿಟ್ಟನ್ನು ಅದಕ್ಕೆ ಹಾಕಿ ಚನ್ನಾಗಿ
ಮಿಕ್ಸ್ ಮಾಡುತ್ತಾ ಇರಿ.
ಸುಮಾರು 15 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿದರೆ ಅದರ ಬಣ್ಣ ಬದಲಾಗುತ್ತದೆ. ಹಾಗೆ ಸುವಾಸನೆ ಬರಲು ಆರಂಭವಾಗುತ್ತದೆ. ಸ್ವಲ್ಪ ಬಣ್ಣ ಬದಲಾದಾಗ ಅದಕ್ಕೆ ಸಕ್ಕರೆ ಹಾಗೂ ಗೋಡಂಬಿ ಸೇರಿ ಮಿಕ್ಸ್ ಮಾಡಿಕೊಳ್ಳಿ. ಕಂದು ಬಣ್ಣಕ್ಕೆ ತಿರುಗಿದಾಗ ಅದಕ್ಕೆ ಏಲಕ್ಕಿ ಪುಡಿ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮತ್ತೆ 10 ನಿಮಿಷ ಸಣ್ಣ ಉರಿಯಲ್ಲಿ ಮಿಕ್ಸ್ ಮಾಡುತ್ತಾ ಇರಿ.
ಈ ನಡುವೆ ಮತ್ತೊಂದು ಕಡೆ ಬೆಲ್ಲವನ್ನು ಒಂದು ಪಾತ್ರೆಗೆ ಹಾಕಿ ಅಂಟು ಬರುವಂತೆ ಕರಗಿಸಿಕೊಂಡು ಈ ಮಿಶ್ರಣಕ್ಕೆ ಹಾಕಲು ರೆಡಿ ಮಾಡಿಟ್ಟುಕೊಳ್ಳಿ.
ನಂತರ ಒಲೆ ಆಫ್ ಮಾಡಿಕೊಂಡು ಅಚ್ಚು ಪಾತ್ರೆಗೆ ಹಾಕಿಕೊಳ್ಳಿ. ಹಾಗೆ ತಣ್ಣಗಾಗಲು ಬಿಡಿ. ನಂತರ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಳ್ಳಿ. ಈ ರೀತಿ ಮಾಡಿ ಸವಿಯಲು ನೀಡಿ. ಮಕ್ಕಳಿಗಂತು ಈ ಬಾಳೆಹಣ್ಣಿನ ಹಲ್ವಾ ಬಹಳ ಇಷ್ಟವಾಗುತ್ತೆ. ಮೈಸೂರು ಬಾಳೆ ಅಥವಾ ಸೇಲಂ ದೊಡ್ಡ ತಳಿ ಬಾಳೆ ಹಣ್ಣನ್ನು ಈ ಸಿಹಿ ಮಾಡಲು ಬಳಸಿ. ಬಾಳೆ ಸಂಪೂರ್ಣ ಹಣ್ಣಾಗಿರಬೇಕು. ಮೆದುವಾಗಿರಬೇಕು.
ಈ ಸಿಹಿಯನ್ನು ಒಂದಿಷ್ಟು ದಿನ ಗಾಳಿಯಾಡದಂತೆ ಇಟ್ಟು ಕೂಡ ಸವಿಯಬಹುದು, ಒಮ್ಮೆ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications