Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಳೆಹಣ್ಣಿನ ಶಾವಿಗೆ: ತುಂಬಾನೇ ರುಚಿಯಾಗಿರುತ್ತೆ, ಮಕ್ಕಳಂತೂ ತುಂಬಾನೇ ಇಷ್ಟಪಡುತ್ತಾರೆ
Recipes
oi-Reena TK
Posted By: Reena TK
ಒತ್ತು ಶಾವಿಗೆ ಮಾಡುವುದು ನಿಮಗೆ ಗೊತ್ತಿರಬಹುದು, ಇದನ್ನು ಸಾಮಾನ್ಯವಾಗಿ ಮನೆಗಳಲ್ಲಿ ಮಾಡಲಾಗುವುದು, ಆದರೆ ಬಾಳೆಹಣ್ಣಿನ ಶಾವಿಗೆ ಮಾಡಿದ್ದೀರಾ, ಇದು ತುಂಬಾ ರುಚಿಯಾಗಿರುತ್ತದೆ, ಮಕ್ಕಳಿಗಂತೂ ತುಂಬಾನೇ ಇಷ್ಟವಾಗುವುದು. ಅಲ್ಲದೆ ಸಂಜೆ ತಿಂಡಿಗೆ ಸುಲಭವಾಗಿ ಮಾಡಬಹುದು, ಮನೆಗೆ ನೆಂಟರಿಷ್ಟರು ಬಂದರೆ ಸುಲಭವಾಗಿ ಮಾಡಬಹುದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಅಕ್ಕಿ ಒಂದು ಲೋಟ
ಪಚ್ಚೆಬಾಳೆಹಣ್ಣು 2 (ಇತರ ಬಾಳೆಹಣ್ಣು ಕೂಡ ಹಾಕಬಹುದು)
2 ಏಲಕ್ಕಿ
1/2 ಕಪ್ ಬೆಲ್ಲದ ಪುಡಿ ಅಥವಾ ಸಕ್ಕರೆ
ಚಿಟಿಕೆಯಷ್ಟು ಉಪ್ಪು
ಬೇಕಾಗುವ ಸಾಮಗ್ರಿ
- 1 ಲೋಟ ಅಕ್ಕಿ(ದೋಸೆ ಅಕ್ಕಿ ಅಥವಾ ರೇಷನ್ ಅಕ್ಕಿ ಬಳಸಬಹುದು)
- ಅಕ್ಕಿಯನ್ನು ತೊಳೆದು 3-4 ಗಂಟೆಗಳ ಕಾಲ ನೆನೆ ಹಾಕಿ, ನಂತರ ನೀರು ಬಸಿದು ಅಕ್ಕಿಯನ್ನು ಮಿಕ್ಸಿ ಜಾರ್‌ಗೆ ಹಾಕಿ
- ಇದಕ್ಕೆ 2 ಬಾಳೆಹಣ್ಣು ಸೇರಿಸಿ
- ಚಿಟಿಕೆಯಷ್ಟು ಉಪ್ಪು ಸೇರಿಸಿ (ಇದು ಸಿಹಿ ಶಾವಿಗೆ ಆದ ಕಾರಣ ಚಿಟಿಕೆಯಷ್ಟು ಉಪ್ಪು ಬಳಸಿದರೆ ಸಾಕು), ಇದಕ್ಕೆ 2 ಏಲಕ್ಕಿ ಸೇರಿಸಿ
- ನಂತರ ಬೆಲ್ಲ ಅಥವಾ ಸಕ್ಕರೆ ಸೇರಿಸಬಹುದು.
- ನಂತರ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ತುಂಬಾ ನುಣ್ಣಗೆ ರುಬ್ಬಿಕೊಳ್ಳಬೇಕು
- ಹಿಟ್ಟು ನೀರು ಮಾಡಿಕೊಳ್ಳಬೇಡಿ, ದೋಸೆಗೆ ರುಬ್ಬುತ್ತೇವೆ ಅಲ್ವಾ ಆ ಹದದಲ್ಲಿ ರುಬ್ಬಿಕೊಳ್ಳಿ
- ನಂತರ ಹಿಟ್ಟು ಒಂದು ಪಾತ್ರೆಗೆ ಹಾಕಿ ಅದನ್ನು ಇಡ್ಲಿ ಪಾತ್ರೆ ಅಥವಾ ಕುಕ್ಕರ್‌ನಲ್ಲಿ(ವಿಶಲ್ ತೆಗೆದು)ಬೇಯಿಸಬೇಕು. ಒಂದು 20-25 ನಿಮಿಷ ಹಬೆಯಲ್ಲಿ ಬೇಯಿಸಬೇಕು.
- ನೀವು ಸ್ಪೂನ್ ಹಾಕಿದಾಗ ಸ್ಪೂನ್‌ಗೆ ಹಿಟ್ಟು ಅಂಟಬಾರದು. ಅಂಟಿಲ್ಲ ಎಂದರೆ ಚೆನ್ನಾಗಿ ಬೆಂದಿದೆ ಎಂದರ್ಥ
- ಈಗ ಒತ್ತು ಶಾವಿಗೆ ಅಚ್ಚು ತೆಗೆದು ಕೊಂಡು ಅದರಲ್ಲಿ ಹಿಟ್ಟು ಕತ್ತರಿಸಿ ಹಾಕಿ, ಒತ್ತಿ, ನೂಲ್ ನೂಲ್ ರೀತಿ ಶಾವಿಗೆ ಬೀಳುತ್ತೆ, ಇದನ್ನು ಬಿಸಿ ತುಪ್ಪದ ಜೊತೆ ಸರ್ವ್ ಮಾಡಿ.
ಇಲ್ಲದಿದ್ದರೆ ಕಾಯಿ ಹಾಲು ಮಾಡಿ ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ, ಅದರಲ್ಲಿ ನೆಚ್ಚಿಕೊಂಡು ತಿನ್ನಲು ಕೂಡ ಸೂಪರ್ ಆಗಿರುತ್ತದೆ.
ಇತರ ಸಲಹೆ
- ನೀವು ಬೇಕಿದ್ದರೆ ಅರ್ಧ ಕಪ್ ತೆಂಗಿನ ತುರಿ ಕೂಡ ಸೇರಿಸಿ ರುಬ್ಬಬಹುದು
- ಈ ಬಾಳೆಹಣ್ಣಿನ ಒತ್ತು ಶಾವಿಗೆ ಸಿಹಿ ಇಷ್ಟಪಡುವವರಿಗೆ ತುಂಬಾನೇ ಇಷ್ಟವಾಗುವುದು
- ಮಕ್ಕಳಿಗೆ ಸಂಜೆ ಸ್ನ್ಯಾಕ್ಸ್ ಆಗಿ ಸುಲಭದಲ್ಲಿ ಮಾಡಿಕೊಡಬಹುದು
- ಬಾಳೆಹಣ್ಣು ಹಣ್ಣಾಗಿದ್ದರೆ ಇನ್ನೂ ಟೇಸ್ಟ್
- ಹೂ ಬಾಳೆಯಾದರೆ 5-6 ಬಳಸಿ
- ನೇಂದ್ರ ಬಾಳೆಹಣ್ಣು ಕೂಡ ಟ್ರೈ ಮಾಡಬಹುದು
Comments
[ of 5 - Users]
Story first published: Thursday, December 5, 2024, 16:25 [IST]
Other articles published on Dec 5, 2024



Click it and Unblock the Notifications