Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜ್ಯೂಸ್ ಅಂಗಡಿಯಲ್ಲಿ ಸಿಗುವ ಬಾಳೆಹಣ್ಣಿನ ಮಿಲ್ಕ್ ಶೇಕ್ ಮನೆಯಲ್ಲೇ ಮಾಡಿ..! ತುಂಬಾ ಸಿಂಪಲ್
ಹಣ್ಣುಗಳು ನಮ್ಮ ಆರೋಗ್ಯಕ್ಕೆ ಎಷ್ಟು ಉತ್ತಮ ಎಂಬುದು ನಮಗೆಲ್ಲಾ ತಿಳಿದಿರುವ ಸಂಗತಿ. ಊಟದ ಬಳಿಕ ಹಣ್ಣು ಸವಿದರೆ ದೇಹಕ್ಕೆ ಬಹಳ ಒಳ್ಳೆಯದು. ಹೀಗಾಗಿ ಊಟದ ಬಳಿಕ ಹಣ್ಣಿನ ಜ್ಯೂಸ್ ಕುಡಿಯುವುದು, ಹಣ್ಣು ಸವಿಯುವುದು ಉತ್ತಮ. ಆದ್ರೆ ಅಂಗಡಿಯಲ್ಲಿ ಅಥವಾ ಜ್ಯೂಸ್ ಶಾಪ್‌ಗಳಲ್ಲಿ ಹಣ್ಣಿನ ಜ್ಯೂಸ್‌ಗೆ ಈಗ 100 ರೂಪಾಯಿ ನೀಡಬೇಕಾಗುತ್ತೆ. ಇದು ಸ್ವಲ್ಪ ದುಬಾರಿಯೇ.
ಸಾಮಾನ್ಯವಾಗಿ ಕಡಿಮೆ ಹಣದಲ್ಲಿ ಸಿಗುವಂತಹ ಹಣ್ಣು ಯಾವುದಾದರು ಇದ್ದರೆ ಅದು ಬಾಳೆ ಹಣ್ಣು ಆಗಿದೆ. ಹಳ್ಳಿಗಳಲ್ಲಿ ಮನೆ ಮನೆಗೂ ಬಾಳೆಹಣ್ಣು ಬೆಳೆಯುತ್ತಾರೆ. ಸಿಟಿಯಲ್ಲಿ ಅಂಗಡಿಯಿಂದ ಖರೀದಿಸಿ ತಂದು ಸವಿಯುತ್ತಾರೆ. ಪೂಜೆಯಿಂದ ಹಿಡಿದು ಊಟ ಮಾಡಿದ ಬಳಿಕ ಬಾಳೆ ಹಣ್ಣು ಸವಿಯೋದನ್ನು ನಾವು ನೋಡಿರುತ್ತೇವೆ.

ಬಾಳೆಹಣ್ಣಿನಲ್ಲಿರುವ ಮೂರು ನೈಸರ್ಗಿಕ ಸಕ್ಕರೆಗಳಾದ ಸುಕ್ರೋಸ್, ಫ್ರುಕ್ಟೋಸ್ ಮತ್ತು ಗ್ಲುಕೋಸ್ ಫೈಬರ್ ಸಮ್ಮಿಳಿತವಾಗಿದ್ದು ತ್ವರಿತವಾದ ಶಕ್ತಿಯನ್ನು ನಮಗೆ ಒದಗಿಸುತ್ತದೆ. 90 - ನಿಮಿಷದ ನಮ್ಮ ದಿನದ ಕಾರ್ಯಾಚರಣೆಗೆ 2 ಬಾಳೆಹಣ್ಣು ನಮಗೆ ಶಕ್ತಿಯನ್ನು ಒದಗಿಸುತ್ತದೆ. ರಕ್ತದಲ್ಲಿನ ಹಿಮೋಗ್ಲೋಬೀನ್ ಉತ್ಪಾದನೆಯನ್ನು ಬಾಳೆಹಣ್ಣು ಉತ್ತೇಜಿಸುವುದರಿಂದ ನಿಮಗೆ ಅನಿಮೀಯಾ ಉಂಟಾಗುವ ಸಂಭವನೀಯತೆ ಕಡಿಮೆ ಇರುತ್ತದೆ.
ಇನ್ನು ಈ ಬಾಳೆಹಣ್ಣಿನ ಮಿಲ್ಕ್ ಶೇಕ್ ಎಷ್ಟು ಬಾರಿ ಆದರೂ ಸವಿಯಬೇಕು ಎನಿಸುತ್ತದೆ. ಇದರ ರುಚಿಗೆ ಮನಸೋಲದವರೇ ಇಲ್ಲ. ಹೀಗಾಗಿ ಹೋಟೆಲ್‌ನಲ್ಲಿ ಜ್ಯೂಸ್ ಅಂಗಡಿಯಲ್ಲಿ ಮಿಲ್ಕ್ ಶೇಕ್ ಬೇಡಿಕೆ ಇರುವ ಜ್ಯೂಸ್‌ನಲ್ಲಿ ಒಂದು. ಹಾಗಾದ್ರೆ ಈ ಆರೋಗ್ಯಕರ ಮಿಲ್ಕ್ ಶೇಕ್ ಅನ್ನು ಮನೆಯಲ್ಲೇ ಮಾಡೋದು ಹೇಗೆ? ಮನೆಯಲ್ಲಿ ಬಾಳೆಹಣ್ಣಿನ ಮಿಲ್ಕ್ ಶೇಕ್ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಎಷ್ಟು ಸುಲಭವಾಗಿ ಮಾಡಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬಾಳೆಹಣ್ಣಿನ ಮಿಲ್ಕ್ ಶೇಕ್ ಮಾಡಲು ಬೇಕಾಗುವ ಪದಾರ್ಥಗಳು
- ಬಾಳೆಹಣ್ಣು - 2
- ಹಾಲು - 1 ಗ್ಲಾಸ್
- ಜೇನುತುಪ್ಪ
- ಸಕ್ಕರೆ
ಬಾಳೆಹಣ್ಣಿನ ಮಿಲ್ಕ್ ಶೇಕ್ ಮಾಡುವುದು ಹೇಗೆ?
ಮೊದಲು ಬಾಳೆಹಣ್ಣಿನ ಸಿಪ್ಪೆ ಸುಲಿದು ಅದರ ಒಂದು ಹಣ್ಣಿನಲ್ಲಿ ಮೂರರಿಂದ ನಾಲ್ಕು ಕಟ್ ಮಾಡಿ ಒಂದು ಬೌಲ್‌ಗೆ ಹಾಕಿಕೊಳ್ಳಿ. ಸುಮಾರು 2 ಹಣ್ಣುಗಳಿದ್ದರೆ ಸಾಕಾಗುತ್ತದೆ. ನಂತರ ಒಂದು ಮಿಕ್ಸಿ ಜಾರ್‌ಗೆ ಬಾಳೆಹಣ್ಣುಗಳ ಜಾಕಿ ಅದಕ್ಕೆ ಒಂದು ಗ್ಲಾಸ್ ಹಾಲು, ಅದಕ್ಕೆ ಸ್ವಲ್ಪ ಜೇನು ತುಪ್ಪ, ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
1 ನಿಮಿಷ ಗ್ರೈಂಡ್ ಮಾಡಿಕೊಂಡರೆ ಸಾಕಾಗುತ್ತದೆ. ನಂತರ ಒಂದು ಗ್ಲಾಸ್‌ಗೆ ನೇರವಾಗಿ ಹಾಕಿಕೊಂಡು ಕುಡಿಯಬಹುದು. ಇದು ಮನೆಯಲ್ಲಿಯೇ ಆರಾಮವಾಗಿ ಮಾಡಿಕೊಳ್ಳಬಹುದಾದ ಮಿಲ್ಕ್ ಶೇಕ್ ಆಗಿದೆ. ಇದಕ್ಕೆ ಬಿಸಿ ಹಾಲನ್ನು ಸಹ ಬಳಸಿ ಮಾಡಿಕೊಳ್ಳಬಹುದು. ನೀವು ಸಹ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ. ಊಟದ ನಂತರ ಹಾಗೂ ಡಯೆಟ್ ಆಗಿಯೂ ಸಹ ಇದನ್ನು ಸೇವಿಸಬಹುದು.
ಬಾಳೆಹಣ್ಣುಗಳಲ್ಲಿ ವಿಟಮಿನ್ ಎ ಇದ್ದು, ನಿಮ್ಮ ಕಣ್ಣುಗಳ ಆರೋಗ್ಯಕ್ಕೆ ಬಹಳ ಉತ್ತಮ. ಮಕ್ಕಳಿಗೆ ದಿನಕ್ಕೊಂದು ಬಾಳೆಹಣ್ಣು ನೀಡುವುದರಿಂದ ಅವರಲ್ಲಿ ಆರೋಗ್ಯಕ್ಕೆ ಹಾಗೂ ತೂಕ ಹೆಚ್ಚಿಸಲು ನೆರವಾಗುತ್ತದೆ. ಬಾಳೆಹಣ್ಣುಗಳಲ್ಲಿ ರೆಸಿಸ್ಟೆಂಟ್ ಸ್ಟಾರ್ಚ್ ಇದ್ದು, ಇದು ಜೀರ್ಣಾಂಗವ್ಯೂಹದ ಆರೋಗ್ಯಕ್ಕೆ ಅಗತ್ಯವಾಗಿರೋ ಶಾರ್ಟ್-ಚೈನ್ ಕೊಬ್ಬಿನಾಮ್ಲಗಳ ಉತ್ಪಾದನೇನಾ ಹೆಚ್ಚಿಸುತ್ತೆ.
ಹೀಗಾಗಿ ಮನೆಯಲ್ಲಿಯೇ ಬಾಳೆಹಣ್ಣಿನ ಮಿಲ್ಕ್ ಶೇಕ್ ಮಾಡಿ ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ, ಮಾಡುವುದು ಸಹ ಸುಲಭ, ಹೆಚ್ಚು ವಸ್ತುಗಳ ಅವಶ್ಯಕತೆಯೂ ಇರುವುದಿಲ್ಲ. ಮನೆಯಲ್ಲಿ ಮಾಡುವುದರಿಂದ ಹೆಚ್ಚು ಖರ್ಚು ಸಹ ಆಗುವುದಿಲ್ಲ. ಮನೆಮಂದಿಯಲ್ಲ ಬಾಳೆಹಣ್ಣಿನ ಮಿಲ್ಕ್ ಶೇಕ್ ಸವಿಯಬಹುದು.



Click it and Unblock the Notifications