Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಬಾಳೆಹಣ್ಣಿ ಕಪ್ ಕೇಕ್ ಮಾಡಿದರೆ 2-3 ವಾರ ಇಟ್ಟು ತಿನ್ನಬಹುದು, ಮಾಡುವುದು ಕೂಡ ಕಷ್ಟವಿಲ್ಲ
ಮಕ್ಕಳ ಸ್ನ್ಯಾಕ್ಸ್ ಡಬ್ಬಕ್ಕೆ ನೀವು ಬೇಕಾರೆ ಬಾಳೆಹಣ್ಣಿನ ಕಪ್ ಕೇಕ್ ತಯಾರಿಸಬಹುದು. ಫ್ರೀ ಇದ್ದಾಗ ಈ ಕಪ್ ಕೇಕ್ ಮಾಡಿಟ್ಟರೆ 3-4 ವಾರ ಇಟ್ಟರೂ ಹಾಳಾಗಲ್ಲ, ಅಲ್ಲದೆ ಈ ಕೇಕ್ ತುಂಬಾ ರುಚಿಯಾಗಿರುತ್ತದೆ. ಈ ಕೇಕ್ ನೀವು ಸುಲಭವಾಗಿ ಮಾಡಬಹುದು, ಇದನ್ನು ಮಾಡಲು ಒಂದು ಗಂಟೆಯೂ ಬೇಕಾಗಿಲ್ಲ, ಬೇಗನೆ ಮಾಡಬಹುದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1/4 ಕಪ್ ಹಾಲು
2 ಮೊಟ್ಟೆ
1/4 ಕಪ್ ಬೆಣ್ಣೆ
ಬ್ರೌನ್ ಶುಗರ್ (ಸಕ್ಕರೆ ಬೇಕಾದರೆ ಬಳಸಬಹುದು) 1/2 ಕಪ್
ಮೈದಾ 2 ಕಪ್
2 ಚಮಚ ಬೇಕಿಂಗ್ ಪುಡಿ
ಚಿಟಿಕೆಯಷ್ಟು ಉಪ್ಪು
3 ಹಣ್ಣಾದ ಪಚ್ಚೆ ಬಾಳೆಹಣ್ಣು
ಮಾಡುವ ವಿಧಾನ
- ಓವನ್ 375 ಡಿಗ್ರಿಗೆ ಪ್ರೀ ಹೀಟ್ ಮಾಡಿ
- ಒಂದು ಬೌಲ್‌ಗೆ ಮೊಟ್ಟೆಯ ಬಿಳಿ ಹಾಕಿ ಚೆನ್ನಾಗಿ ಕದಡಿ
- ನಂತರ ಬೆಣ್ಣೆ, ಮೊಟ್ಟೆಯ ಹಳದಿ ಭಾಗ ಹಾಕಿ ಚೆನ್ನಾಗಿ ಕದಡಿ, ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ
- ಈಗ ಬೇರೆ ಬೌಲ್‌ನಲ್ಲಿ ಮೈದಾ ಹಿಟ್ಟು, ಅಡುಗೆ ಸೋಡಾ, ಚಿಟಿಕೆಯಷ್ಟು ಉಪ್ಪು ಸೇರಿಸಿ, ನಂತರ ಬಾಳೆಹಣ್ಣು ಮ್ಯಾಶ್ ಮಾಡಿ ಹಾಕಿ.
- ಈಗ ನೀವು ಮೊಟ್ಟೆ ಮಿಶ್ರಣವನ್ನು ನಿಧಾನಕ್ಕೆ ಸುರಿಯುತ್ತಾ ಕಲೆಸಿ
- ಈಗ ಕಪ್ ಕೇಕ್ ಟಿನ್‌ಗೆ ಬೆಣ್ಣೆ ಸವರಿ
- ಅದರಲ್ಲಿ ಮುಕ್ಕಾಲು ಭಾಗ ಹಿಟ್ಟು ಸುರಿಯಿರಿ
- ಅದು ಬೆಂದು ಬಂದಾಗ ಉಬ್ಬಿ ಬರುತ್ತದೆ
- ಈಗ ಅವುಗಳನ್ನು ಕತ್ತರಿಸಿ ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟರೆ 2-3 ವಾರ ಇಟ್ಟು ಬಳಸಬಹುದು.
ಓವನ್ ಇಲ್ಲ ಎಂದಾದರೆ ಕುಕ್ಕರ್‌ನಲ್ಲಿಯೂ ಮಾಡಬಹುದು,
ನೀವು ಕುಕ್ಕರ್‌ನಲ್ಲಿ ಮಾಡುವುದಾದರೆ ಕುಕ್ಕರ್ ವಿಶಲ್ ತೆಗಿಯಬೇಕು. ನಂತರ
ತಳಕ್ಕೆ ಎಣ್ಣೆ ಸವರಬೇಕು. ನಂತರ ಒಂದು ಬಿಳಿ ಹಾಳೆಗೆ ಎಣ್ಣೆ ಸವರಿ
ನಂತರ ಹಿಟ್ಟನ್ನು ಸುರಿದು 15-20 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ
ಹಿಟ್ಟು ಬೆಂದಾಗ ಅದನ್ನು ಉರಿಯಿಂದ ಇಳಿಸಿ ತಣ್ಣಗಾದ ಮೇಲೆ ತೆಗೆದು
ಕತ್ತರಿಸಿ.



Click it and Unblock the Notifications