Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
10 ನಿಮಿಷದಲ್ಲಿ ಈ ಬಾಳೆಕಾಯಿ ಚಿಪ್ಸ್ ಮಾಡಬಹುದು..! ರೆಸಿಪಿ ಇಲ್ಲಿದೆ..!
ನಾವು ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ಸವಿಯಲು ಇಷ್ಟಪಡುತ್ತೇವೆ. ಅದರಲ್ಲೂ ಟೀ-ಕಾಫಿಯ ಜೊತೆಗೆ ಯಾವುದಾದರು ಸ್ನ್ಯಾಕ್ಸ್ ಇದ್ದರೆ ಅದರ ರುಚಿಯೇ ಬೇರೆ. ಹೀಗಾಗಿ ಟೀ ಜೊತೆಗೆ ಬೋಂಡಾ, ಬಿಸ್ಕೇಟ್, ಚಿಪ್ಸ್ ಅನ್ನು ಸವಿಯುತ್ತೇವೆ. ಸಂಜೆ ಯಾವುದಾದರು ಸ್ನ್ಯಾಕ್ಸ್ ಸವಿಯಲು ಜನರು ರಸ್ತೆ ಬದಿ ಅಂಗಡಿಗಳ ಮೊರೆ ಹೋಗೋದು ಕೂಡ ನಾವು ನೋಡಬಹುದು.
ಇನ್ನು ಹೊಸದಾಗಿ ನಾವು ಮನೆಯಲ್ಲೇ ಕೆಲವೊಂದು ಸ್ನ್ಯಾಕ್ಸ್ ಮಾಡಿ ಸವಿಯುತ್ತೇವೆ. ಅದರಲ್ಲಿ ನಾವಿಂದು ಮನೆಯಲ್ಲೇ ಕುಳಿತು ಬಾಳೆಹಣ್ಣಿನ ಚಿಪ್ಸ್ ಮಾಡುವ ಕುರಿತು ತಿಳಿಯೋಣ. ಬಾಳೆ ಹಣ್ಣಿನ ಚಿಪ್ಸ್ ಅನ್ನು ನಾವು ಸವಿಯುತ್ತಿದ್ದರೆ ಬಾಯಲ್ಲಿ ನೀರು ಬರುತ್ತೆ. ಹೀಗಾಗಿ ಈ ಚಿಪ್ಸ್ ಅನ್ನು ಬೇಕರಿಯಿಂದ ತಂದು ಇಲ್ಲವೆ, ನಾವೇ ಮಾಡಿ ಸವಿಯುವುದು ಸಾಮಾನ್ಯ.

ನಾವಿಂದು ಬಾಳೆ ಹಣ್ಣಿನ ಚಿಪ್ಸ್ ಮಾಡುದನ್ನು ತಿಳಿದುಕೊಳ್ಳೋಣ. ಅದರಲ್ಲೂ ಹೆಚ್ಚು ಕಷ್ಟ ಪಡದೆ ಸುಲಭವಾಗಿ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಬಾಳೆಹಣ್ಣಿನ ಚಿಪ್ಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಈ ಚಿಪ್ಸ್ ಮಾಡುವುದು ಹೇಗೆ? ಮಾಡಲು ಎಷ್ಟು ಸಮಯ ಬೇಕು? ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬಾಳೆ ಹಣ್ಣಿನ ಚಿಪ್ಸ್ ಮಾಡಲು ಬೇಕಾಗುವ ಪದಾರ್ಥಗಳು
ಬಾಳೆ ಕಾಯಿ - 4
ಅರಶಿನ
ಖಾರದ ಪುಡಿ
ಬಾಳೆ ಹಣ್ಣಿನ ಚಿಪ್ಸ್ ಮಾಡುವುದು ಹೇಗೆ?
ಮೊದಲು ಬಾಳೆ ಕಾಯಿಯ ಸಿಪ್ಪೆಯನ್ನು ಚಾಕುವಿನಿಂದ ತೆಗೆದುಕೊಳ್ಳಿ, ಈ ವೇಳೆ ಕೈಗೆ ನೀರು ಹಚ್ಚಿಕೊಳ್ಳಿ ಇಲ್ಲದಿದ್ದರೆ ಅದರ ಅಂಟು ಹಿಡಿಯುತ್ತದೆ. ಬಾಳೆಕಾಯಿ ಸುಲಿದ ಬಳಿಕ ಅದನ್ನು ನೀರಿಗೆ ಹಾಕಿ ಇಟ್ಟುಕೊಳ್ಳಿ. ಈಗ ಒಂದು ಬೌಲ್‌ನಲ್ಲಿ ಸ್ವಲ್ಪ ನೀರು ತೆಗೆದುಕೊಂಡು ಅದಕ್ಕೆ ಅರಶಿನ ಪುಡಿ ಹಾಕಿ ಕಲಸಿ ಇಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಎಣ್ಣೆ ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ನೇರವಾಗಿ ಎಣ್ಣೆಗೆ ಈ ಬಾಳೆಕಾಯಿಯನ್ನು ಸ್ಲೈಸ್ ಮಾಡಿ ಹಾಕಿ. ಸುಮಾರು 2 ನಿಮಿಷ ಒಂದು ಕಡೆ ಬೇಯಿಸಿಕೊಂಡ ಬಳಿಕ ಮತ್ತೊಂದು ಕಡೆ ತಿರುಗಿಸಿ ಕಾಯಿಸಿಕೊಳ್ಳಿ. 3 ನಿಮಿಷದ ಬಳಿಕ ಈಗ ಅರಶಿನದ ನೀರನ್ನು ಸ್ವಲ್ಪವೇ ಆ ಚಿಪ್ಸ್‌ಗಳ ಮೇಲೆ ಹಾಕಿ ಕರಿಯಲು ಬಿಡಿ. ಇದು ಬಾಳೆಕಾಯಿ ಚಿಪ್ಸ್‌ಗೆ ಬಣ್ಣ ನೀಡುತ್ತದೆ.
ಈಗ ಬಾಳೆಕಾಯಿ ಚಿಪ್ಸ್ ಅನ್ನು ಎಣ್ಣೆಯಿಂದ ಎತ್ತಿ ಜರಡಿಯಲ್ಲಿ ಇಡಿ. ಚೆನ್ನಾಗಿ ಒಣಗುವಂತೆ ಮಾಡಿಕೊಳ್ಳಿ. ನಂತರ ನಿಮಗೆ ಖಾರದ ಬೇಕಾದರೆ ಸ್ವಲ್ಪ ಖಾರದ ಪುಡಿಯನ್ನು ಕೈ ಮೇಲೆ ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. ಇದು ಚಿಪ್ಸ್‌ನ ಮೇಲೆ ಖಾರದ ಪುಡಿ ಹಿಡಿಯುವಂತೆ ಮಾಡುತ್ತದೆ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಬಾಳೆಹಣ್ಣಿನ ಚಿಪ್ಸ್ ರೆಡಿಯಾಗತ್ತದೆ. ನೀವು ಕೂಡ ಒಮ್ಮೆ ಮಾಡಿ ನೋಡಿ.



Click it and Unblock the Notifications