Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
5 ನಿಮಿಷದಲ್ಲಿ ಬಾಳೆಹಣ್ಣಿನ ಬೋಂಡಾ ಮಾಡಿ..! ಇದಕ್ಕಿಂತ ಸುಲಭದ ತಿಂಡಿ ಮತ್ತೊಂದಿಲ್ಲ!!
ನೀವು ಮನೆಯಲ್ಲಿ ಸುಲಭವಾಗಿ ಸ್ನ್ಯಾಕ್ಸ್ ಅಥವಾ ಬೆಳಗ್ಗೆ ತಿಂಡಿಗೆ ಅದ್ಭುತ ರುಚಿಯ ಕರಿದ ತಿಂಡಿ ಯಾವುದಾದರು ಮಾಡಲು ಇಚ್ಛಿಸಿದ್ದರೆ ಹತ್ತು ಹಲವು ಖಾದ್ಯಗಳು ನಿಮ್ಮ ಕಣ್ಣ ಮುಂದೆಯೇ ಬರಬಹುದು. ಹಾಗೆ ಕೆಲವೊಂದು ತಿಂಡಿಯನ್ನು ಮನೆಯಲ್ಲಿ ಹಾಗೆ ಹೋಟೆಲ್‌ನಲ್ಲಿಯೂ ಸವಿದಿರಬಹುದು. ಇಂತಹ ಖಾದ್ಯದಲ್ಲಿ ಬೋಂಡಾ ಕೂಡ ಒಂದು. ಬೋಂಡಾ ಅಂದರೆ ಎಲ್ಲರಿಗೂ ಇಷ್ಟವಾಗೋ ಖಾದ್ಯ.
ಆದ್ರೆ ನಾವಿಂದು ಸಾಮಾನ್ಯವಾಗಿ ಮಾಡುವಂತಹ ಬೋಂಡಾದ ಬದಲು ವಿಶೇಷವಾಗಿ ಬಾಳೆಹಣ್ಣಿನಿಂದ ಮಾಡಲಾಗುವ ಬೋಂಡಾವನ್ನು ಮಾಡಿ ಸವಿಯುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಅದರಲ್ಲು ನಾವಿಂದು ಬಾಳೆಹಣ್ಣನಿಂದ ಮಾಡಲಾಗುವ ಅತ್ಯಂತ ರುಚಿಕರ ಸಿಹಿ ಸಿಹಿಯಾದ ಬೋಂಡಾ ಮಾಡಿ ಸವಿಯುವುದು ಹೇಗೆ ಅನ್ನೋದನ್ನ ಇಲ್ಲಿ ತಿಳಿದುಕೊಳ್ಳೋಣ.

ಬಾಳೆಹಣ್ಣಿನಿಂದ ಮಾಡುವಂತಹ ಈ ಬೋಂಡಾ ಸಿಹಿ ಸಿಹಿಯಾಗಿ ಬಾಯಿ ರುಚಿ ಹೆಚ್ಚಿಸಲಿದೆ. ಇದನ್ನು ಬೆಳಗ್ಗೆ ಹಾಗೆ ಸಂಜೆ ಸಮಯದಲ್ಲಿ ಟೀ ಕಾಫಿಯ ಜೊತೆಗೂ ನೀವು ಸವಿಯಬಹುದು. ಹಾಗಾದ್ರೆ ಈ ಬಾಳೆಹಣ್ಣಿನ ಬೋಂಡಾ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಬಾಳೆ ಹಣ್ಣಿನ ಬೋಂಡಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬಾಳೆ ಹಣ್ಣಿನ ಸಿಹಿಯಾದ ಬೋಂಡಾ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಬಾಳೆಹಣ್ಣು - 2
- ಮೈದಾ - 1 ಕಪ್
- ಅಡುಗೆ ಸೋಡಾ
- ಕೊಬ್ಬರಿ ಪುಡಿ- 2 ಸ್ಪೂನ್
- ಏಲಕ್ಕಿ ಪುಡಿ
- ಸಕ್ಕರೆ - ಕಾಲು ಕಪ್
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಬಾಳೆ ಹಣ್ಣಿನ ಸಿಹಿಯಾದ ಬೋಂಡಾ ಮಾಡುವುದು ಹೇಗೆ?
ಮೊದಲು ಹಣ್ಣಾಗಿರುವ 2 ಬಾಳೆಹಣ್ಣನ್ನು ತೆಗೆದುಕೊಂಡು ಮಿಕ್ಸಿ ಜಾರ್‌ಗೆ ಅರ್ಧಕ್ಕೆ ಕತ್ತರಿಸಕೊಂಡು ಹಾಕಿಕೊಳ್ಳಿ. ಅದಕ್ಕೆ ಸಕ್ಕರೆ ಹಾಕಿಕೊಳ್ಳಿ. ನಿಮಗೆ ಸಿಹಿ ಎಷ್ಟು ಬೇಕು ಎಂಬ ಆಧಾರದ ಮೇಲೆ ಸಕ್ಕರೆ ಹಾಕಿಕೊಳ್ಳಿ. ನಂತರ ಇದನ್ನು ನುಣ್ಣಗೆ ರುಬ್ಬಿಕೊಂಡು ಒಂದು ಬೌಲ್‌ಗೆ ಹಾಕಿಕೊಳ್ಳಿ. ನಂತರ ಈ ಹಿಟ್ಟಿಗೆ ಈಗ ಏಲಕ್ಕಿ ಪುಡಿ, ಕೊಬ್ಬರಿ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಒಂದು ವೇಳೆ ಈ ಹಿಟ್ಟು ತೆಳುವಾಗಿ ಬಂದರೆ ಸ್ವಲ್ಪ ಮೈದಾ ಹಿಟ್ಟು ಹಾಕಿ ಕಲಸಿಕೊಳ್ಳಿ. ಈ ಹಿಟ್ಟು ಅಂಟಾಗಬೇಕು. ಬೋಂಡಾ ಹಿಟ್ಟಿನ ಹದಕ್ಕೆ ಬರುವಂತೆ ಮೈದಾ ಹಾಕಿ ಕಲಸಿಕೊಳ್ಳಿ, ಹಾಗೆ ಗಟ್ಟಿ ಎನಿಸಿದರೆ ನೀರು ಹಾಕಿ ಹಿಟ್ಟು ಹದ ಮಾಡಿ, ಹದ ಮಾಡಿಕೊಳ್ಳುವಾಗ ಚಿಟಿಕೆ ಸೋಡಾ ಪುಡಿ ಕೂಡ ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ.
ಇಷ್ಟಾದರೆ ಹಿಟ್ಟು ರೆಡಿ ಆದಂತೆ. ನಂತರ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕದಾ ಬಳಿಕ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಹಿಟ್ಟು ತೆಗೆದುಕೊಂಡು ಎಣ್ಣೆಯೊಳಗೆ ಬಿಡಿ. ಸಣ್ಣ ಉರಿಯಲ್ಲಿ 3 ನಿಮಿಷ ಬಿಟ್ಟರೆ ಬ್ರೌನ್ ಕಲರ್‌ಗೆ ತಿರುಗುತ್ತದೆ. ನಿಧಾನವಾಗಿ ತಿರುಗಿಸುತ್ತಾ ಫ್ರೈ ಮಾಡಿಕೊಳ್ಳಿ. ಇಷ್ಟಾದರೆ ಸಿಹಿ ಸಿಹಿಯಾದ ಬಾಳೆ ಹಣ್ಣಿನ ಬೋಂಡಾ ರೆಡಿಯಾಗುತ್ತದೆ. ನೀವು ಕೂಡ 5 ನಿಮಿಷದೊಳಗೆ ಇದನ್ನು ಮಾಡಿ ಮುಗಿಸಬಹುದು.



Click it and Unblock the Notifications