Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2 ಕ್ಯಾರೆಟ್ ಇದ್ರೆ ಬೇಕರಿ ರುಚಿಯ ಈ ಸ್ವೀಟ್ ರೆಡಿ ಮಾಡಬಹುದು! ಹೇಗೆ ಗೊತ್ತಾ?
ಮನೆಯಲ್ಲಿ ಸಿಹಿ ಮಾಡುವುದು ಕಾಮನ್, ಆದ್ರೆ ಸಿಹಿ ಅಂದ್ರೆ ಹೆಚ್ಚು ವಸ್ತುಗಳು ಬೇಕು ಎಂದುಕೊಳ್ಳುತ್ತೀರಿ. ಆದ್ರೆ ನಾವಿಂದು ಕೇವಲ 2 ವಸ್ತುಗಳ ಬಳಸಿ ಅದ್ಭುತ ರುಚಿಯ ಸ್ವೀಟ್ ಮಾಡುವ ಕುರಿತು ತಿಳಿದುಕೊಳ್ಳೋಣ. ಅದರಲ್ಲು ಕ್ಯಾರೆಟ್ ಹಾಗೂ ಬೆಲ್ಲ ಇದ್ರೆ ಬೇಕರಿ ರುಚಿಯ ಸಿಹಿ ತಿಂಡಿ ಮಾಡಬಹುದು. ಅದ್ರಲ್ಲೂ ವಿಶೇಷ ದಿನಗಳಲ್ಲಿ ಈ ರೀತಿ ಸ್ವೀಟ್ ಮಾಡಿ ಸವಿದು ನೋಡಿ.
ಮನೆಯಲ್ಲಿ ಯಾವುದಾದರು ಶುಭ ಕಾರ್ಯ ಇದ್ದರೆ, ಅತಿಥಿಗಳ ಆಗಮನವಾಗುವುದಾದರೆ ಆ ದಿನದಂದು ಸ್ಪೆಷಲ್ ಸಿಹಿ ಮಾಡಿ ಸವಿದು ನೋಡಿ. ಅದ್ರಲ್ಲೂ ಮಕ್ಕಳು ಇಷ್ಟಪಡುವಂತಹ ಈ ಕ್ಯಾರೆಟ್ ಹಾಗೂ ಬೆಲ್ಲದ ಹೊಸ ರೀತಿಯ ಸ್ವೀಟ್ ಸವಿದು ನೋಡಿ. ಇದನ್ನು ಮಾಡೋದು ಬಹಳ ಸುಲಭ ಹಾಗೆ ಕಡಿಮೆ ಸಮಯದಲ್ಲಿ ಮಾಡಬಹುದು.
ಈ ಹೊಸ ರುಚಿಯ ಕ್ಯಾರೆಟ್ ಸ್ವೀಟ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕ್ಯಾರೆಟ್ ಬಳಸಿ ಮಾಡುವ ಸ್ವೀಟ್‌ಗೆ ಯಾವೆಲ್ಲಾ ವಸ್ತುಗಳು ಬೇಕಾಗುತ್ತದೆ?
- ಕ್ಯಾರೆಟ್
- ಬೆಲ್ಲ
- ಏಲಕ್ಕಿ ಪುಡಿ
- ತುಪ್ಪ
- ಕಾರ್ನ್ ಫ್ಲೋರ್
ಕ್ಯಾರೆಟ್ ಬಳಸಿ ಸ್ವಿಟ್ ಮಾಡುವುದು ಹೇಗೆ?
ಮೊದಲು 2 ಇಲ್ಲವೆ 3 ಕ್ಯಾರೆಟ್ ಅನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಅದನ್ನು ಹೆಚ್ಚಿಕೊಳ್ಳಬೇಕು. ಸಣ್ಣದಾಗಿ ಇಲ್ಲವೆ ಮಧ್ಯಮ ಗಾತ್ರದಲ್ಲಿ ಹೆಚ್ಚಿಕೊಂಡು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಬೇಕು. ನಂತರ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈ ರುಬ್ಬಿದ ಕ್ಯಾರೆಟ್ ಅನ್ನು ಜರಡಿ ಹಿಡಿದು ಗಟ್ಟಿಯಾದ ಅಂಶವನ್ನು ತೆಗೆದುಕೊಂಡು ಅದನ್ನು ಮತ್ತೆ ಮಿಕ್ಸಿ ಜಾರ್‌ಗೆ ಹಾಕಿ ತಣ್ಣೀರು ಹಾಕಿ ಮತ್ತೆ ರುಬ್ಬಿಕೊಳ್ಳಿ. 2 ಬಾರಿ ರುಬ್ಬಿ 2 ಬಾರಿ ಶೋಧಿಸಿಕೊಂಡು ಕ್ಯಾರೆಟ್ ಜ್ಯೂಸ್ ಹಾಗೂ ಕ್ಯಾರೆಟ್ ಪುಡಿ ಬೇರೆ ಬೇರೆ ಮಾಡಿ.
ನಮಗೆ ಸ್ವೀಟ್ ಮಾಡಲು ಕ್ಯಾರೆಟ್ ಜ್ಯೂಸ್ ಅಗತ್ಯವಿದೆ. ಈ ಜ್ಯೂಸ್ ಅನ್ನು ಅಳತೆ ಕಪ್‌ನಲ್ಲಿ ತೆಗೆದುಕೊಂಡು ಅದನ್ನು ಬಾಣಲೆಗೆ ಹಾಕಿಕೊಂಡು ಒಲೆ ಮೇಲೆ ಇಡಿ ಈಗ ಮತ್ತೊಂದು ಪಾತ್ರೆಗೆ ಸ್ವಲ್ಪ ಬೆಲ್ಲದ ಪುಡಿ ಹಾಗೆ ನೀರು ಹಾಕಿ ಮಿಕ್ಸ್ ಮಾಡುತ್ತಾ ಕರಗಲು ಬಿಡ. ಕರಗಿದ ಬೆಲ್ಲದ ಪಾಕವನ್ನು ಜರಡಿ ಹಿಡಿದು ಕಸಗಳ ತೆಗೆದು ಬಳಿಕ ಕ್ಯಾರೆಟ್ ಜ್ಯೂಸ್ ಜೊತೆಗೆ ಮಿಕ್ಸ್ ಮಾಡಿಕೊಳ್ಳಿ.
ಈಗ ಒಂದು ಬೌಲ್‌ನಲ್ಲಿ ಅರ್ಧ ಕಪ್ ಕಾರ್ನ್ ಫ್ಲೋರ್ ಹಾಕಿ ಮತ್ತೆ ಅರ್ಧ ಕಪ್ ನೀರು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿಕೊಂಡು ಒಲೆ ಮೇಲೆ ಇರುವ ಕ್ಯಾರೆಟ್ ಜ್ಯೂಸ್‌ಗೆ ಹಾಕಿಕೊಳ್ಳಿ. ನಂತರ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣ ಗಟ್ಟಿಯಾಗಲು ಆರಂಭಿಸಲಿದೆ.
2 ನಿಮಿಷದ ಬಳಿಕ ಇದಕ್ಕೆ 2 ಸ್ಪೂನ್ ತುಪ್ಪ ಹಾಕಿಕೊಂಡು ಮತ್ತೆ ಮಿಕ್ಸ್ ಮಾಡುತ್ತಾ ಇರಿ. ಇದು ಗಟ್ಟಿಯಾಗಲು ಆರಂಭಿಸುತ್ತದೆ. ಗಟ್ಟಿಯಾಗಲು ಆರಂಭಿಸಿದಾಗ ಏಲಕ್ಕಿ ಪುಡಿ, ತುಪ್ಪ ಹಾಕಿ ಮತ್ತೆ ಮಿಕ್ಸ್ ಮಾಡಿ ಒಲೆ ಆಪ್ ಮಾಡಿಕೊಳ್ಳಿ. ಈಗ ಒಂದು ತಟ್ಟೆಗೆ ತುಪ್ಪ ಸವರಿಕೊಂಡು ಬಿಸಿ ಇರುವ ಸ್ವೀಟ್ ಹಾಕಿ ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಕ್ಯಾರೆಟ್ ಸ್ವೀಟ್ ರೆಡಿಯಾಗುತ್ತದೆ.



Click it and Unblock the Notifications
