Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಹಾ! ಎಷ್ಟೊಂದು ರುಚಿಕರ ಈ ಬಾದಾಮಿ ಪೂರಿ: ಮಾಡುವುದು ಹೇಗೆ?
ಬಾದಾಮಿ ಪೂರಿ ತುಂಬಾ ರುಚಿಕರವಾದ ತಿಂಡಿಯಾಗಿದೆ. ಬಾದಾಮಿ ಪೂರಿ ಸವಿಯುತ್ತಿದ್ದರೆ ಒಂದು- ಎರಡು ಅಂತ ಪೂರಿ ಹೊಟ್ಟೆಯೊಳಗೆ ಹೋಗುವುದೇ ಗೊತ್ತಾಗುವುದಿಲ್ಲ. ಈ ಬಾದಾಮಿ ಪೂರಿ ಮಾಡುವುದು ಸುಲಭ, ಪೂರಿಮಾಡಿದಂತೆಯೇ ಆದರೆ ಅದಕ್ಕೆ ಹಾಕುವ ಹಾಲಿನ ಮಿಶ್ರಣ ಇದ್ದರೆ ಸಾಕು ಬೊಂಬಾಟ್ ಬಾದಾಮಿ ಪೂರಿ ರೆಡಿ. ಈ ಬಾದಾಮಿ ಪೂರಿ ಸವಿಯುತ್ತಿದ್ದರೆ ಅದರ ರುಚಿಗೆ ಹೊಟ್ಟೆ ತುಂಬಿದರೂ ತಿನ್ನುವುದು ಸ್ಟಾಪ್ ಮಾಡುವುದಕ್ಕೆ ಇಷ್ಟವಾಗುವುದಿಲ್ಲ.

ಬೇಕಾಗುವ ಸಾಮಗ್ರಿ
2-3 ಚಮಚ ಗಸೆಗಸೆ
1 ಚಮಚ ಹುರಿಗಡಲೆ
ಮೈದಾ 1/2 ಕಪ್
ಗೋಧಿ ಹಿಟ್ಟು 1/2 ಕಪ್
ರುಚಿಗೆ ತಕ್ಕ ಉಪ್ಪು
ತೆಂಗಿನ ತುರಿ 1 ಕಪ್
ಬಾದಾಮಿ 8-10
5-6 ಗೋಡಂಬಿ
ಏಲಕ್ಕಿ 2
ಬೆಲ್ಲ 1/2 ಕಪ್
ಎಣ್ಣೆ 1 ಕಪ್
ಮಾಡುವ ವಿಧಾನ
- ನೀವು ಮೈದಾ ಹಾಗೂ ಗೋಧಿ ಹಿಟ್ಟು ಮಿಕ್ಸ್ ಮಾಡಿಡಿ. ಚಪಾತಿಗೆಕಲೆಸುವಂತೆ ಕಲೆಸಿ ಒಂದು ಗಂಟೆ ಇಡಿ.
- ಇದೇ ಸಮಯದಲ್ಲಿ ಹುರಿಗಡಲೆ ಹಾಗೂ ಗಸೆ ಹುರಿಯಿರಿ
- 8-10 ಬಾದಾಮಿ ಕೂಡ ರೋಸ್ಟ್ ಮಾಡಿ
- 1 ಕಪ್ ತೆಂಗಿನ ತುರಿಯನ್ನು ಮಿಕ್ಸಿ ಜಾರ್‌ನಲ್ಲಿ ಸೇರಿಸಿ, ಈಗ ಅದೇ ಜಾರ್‌ಗೆ ನೀವು ರೋಸ್ಟ್ ಮಾಡಿಟ್ಟ ಬಾದಾಮಿ, ಗಸೆಗಸೆ, ಹುರಿಗಡಲೆ ಸೇರಿಸಿ.
- 4-5 ಗೋಡಂಬಿ, 2 ಏಲಕ್ಕಿ ಕೂಡ ಸೇರಿಸಿ
- ನಂತರ ನುಣ್ಣನೆ ರುಬ್ಬಿ
- ಈಗ ಬೆಲ್ಲದ ಪಾಕ ತಯಾರಿಸಿ
- ಈಗ ನೀವು ಕಾಯಿ ಹಾಲಿನ ಮಿಶ್ರಣ ಸೋಸಿ ಕಾಯಿಸಿ
- ನಂತರ ಬೆಲ್ಲದ ಪಾಕ ಸೇರಿಸಿ
- ಮಿಶ್ರಣ ಕುದಿ ಬಂದ ಮೇಲೆ ಉರಿಯಿಂದ ಇಳಿಸಿ ಇಡಿ.
- ಈಗ ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಬಿಸಿ ಮಾಡಿ
- ನಂತರ ಪೂರಿಗೆ ಲಟ್ಟಿಸಿ ಎಣ್ಣೆಗೆ ಹಾಕಿ
- ರೆಡಿಯಾದ ಪೂರಿಯ ಮೇಲೆ ಕಾಯಿ ಹಾಲಿನ ಮಿಶ್ರಣ ಹಾಕಿ, ತುಪ್ಪ ಹಾಕಿ ಸರ್ವ್ ಮಾಡಿ ರುಚಿ ಬೊಂಬಾಟ್ ಆಗಿರುತ್ತದೆ.
ಇತರ ಸಲಹೆ
- ನೀವು ಪೂರಿಯನ್ನು ಬರೀ ಮೈದಾದಿಂದಲೂ ಮಾಡಬಹುದು
- ಮೈದಾ ಬೇಡ ಗೋಧಿ ಪೂರಿ ಸಾಕು ಅಂದರೆ ಅದರಿಂದಲೂ ಮಾಡಬಹುದು
- ಈ ಪೂರಿ ಬಿಸಿ ಬಿಸಿ ತಿನ್ನಬಹುದು,ತಣ್ಣಗಾದ ಮೇಲೂ ತಿನ್ನಬಹುದು
- ಬೇಸಿಗೆಯ ಸಮಯದಲ್ಲಿ ಕಾಯಿ ಹಾಲನ್ನು ಫ್ರಿಡ್ಜ್‌ನಲ್ಲಿಟ್ಟು ನಂತರ ಸರ್ವ್ ಮಾಡಿದರೆ ಇನ್ನೂ ಟೇಸ್ಟ್ ಅನಿಸುವುದು.
- ಮನೆಯಲ್ಲಿ ವಿಶೇಷ ಸಂದರ್ಭವಿದ್ದಾಗ ಇದನ್ನು ಮಾಡುವುದು ಸೂಕ್ತ.
ನೀವು ಬಾದಾಮ್ ಪೂರಿಗೆ ಹಿಟ್ಟು ಕಲೆಸಿ ಒಂದೆರಡು ತಾಸು ಇಟ್ಟರೆ ಒಳ್ಳೆಯದು. ಇನ್ನು ಕಲೆಸುವಾಗ ನೀರಿನ ಬದಲಿಗೆ ಹಾಲು ಹಾಕಿ ಕೂಡ ಸರ್ವ್ ಮಾಡಬಹುದು. ಈ ಬಾದಾಮಿ ಪೂರಿ ಸರ್ವ್ ಮಾಡುವಾದ ಅದರ ಮೇಲೆ ಬಾದಾಮಿ , ಪಿಸ್ತಾ ಪುಡಿ ಮಾಡಿಉದುರಿಸಿ ಸರ್ವ್ ಮಾಡಿದರೆ ಬ್ರೇಕ್‌ಫಾಸ್ಟ್ ಮತ್ತಷ್ಟು ರಾಯಲ್ ಆಗುವುದು.
ರೆಸ್ಟೋರೆಂಟ್, ಹೋಂಸ್ಟೇ ಇರುವವರು ಈ ರೀತಿ ಸರ್ವ್ ಮಾಡಿದರೆ ತಮ್ಮ ಗ್ರಾಹಕರಿಂದ ಉತ್ತಮ ಫೀಡ್‌ಬ್ಯಾಕ್ ಪಡೆಯಬಹುದು.



Click it and Unblock the Notifications