Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಲ್ಲೇ ಮಾಡಿ ಕಡಿಮೆ ಖರ್ಚಿನ ಬಾದಾಮ್ ಪುಡಿ: 1 ಕೆ.ಜಿ ಪುಡಿ ಥಟ್ ಅಂತ ರೆಡಿ!
ಮನೆಯಲ್ಲಿ ಕೆಲವೊಂದು ಅಡುಗೆಗಳಿಗೆ ಮಸಾಲ ಪದಾರ್ಥಗಳನ್ನು ಮನೆಯಲ್ಲಿ ನಾವೇ ರೆಡಿ ಮಾಡಿಕೊಳ್ಳುತ್ತೇವೆ. ಹಾಗೆ ನಾವಿಂದು ಮನೆಯಲ್ಲೇ 1 ಕೆ.ಜಿ ಅಷ್ಟು ಬಾದಾಮ್ ಪುಡಿ ಮಾಡಿಕೊಳ್ಳುವ ಕುರಿತಾಗಿ ತಿಳಿದುಕೊಳ್ಳೋಣ. ಬಾದಾಮ್ ಪುಡಿಯಿಂದ ನೀವು ಬಾದಾಮಿ ಹಾಲು, ಪಾಯಸ, ಜ್ಯೂಸ್ ಸೇರಿ ಹಲವು ರೀತಿಯ ಖಾದ್ಯಗಳು, ಪಾನಿಯಗಳ ಸವಿಯಬಹುದು.
ಬಾದಾಮಿ ಪುಡಿ ನೀವು ಅಂಗಡಿಯಲ್ಲಿ ಖರೀದಿಸಿದರೆ ಬಹಳ ದುಬಾರಿಯಾಗಿರಲಿದೆ. ಹಲವು ಬಾರಿ ನೀವು ಖರೀದಿಸಿ ತಂದು ಮನೆಯಲ್ಲಿ ಇಟ್ಟ ಪುಡಿ ಕೆಲ ಸಮಯದಲ್ಲಿ ಕೆಟ್ಟು ಹೋಗುತ್ತದೆ. ಸಾಮಾನ್ಯವಾಗಿ ಪಾಯಸ, ಬಾದಾಮ್ ಹಾಲು, ಜ್ಯೂಸ್, ಹಾಲಿಗೆ ಮಿಶ್ರಣ ಮಾಡಿಕೊಂಡು ಸವಿಯೋದು ನೋಡಬಹುದು. ಪಾಯಸದೊಂದಿಗೆ ಇದನ್ನು ಹಾಕಿಕೊಂಡು ಸವಿದರೆ ಅದರ ರುಚಿ ದುಪ್ಪಟ್ಟಾಗುತ್ತೆ.

ಆದ್ರೆ ಬಹಳ ಸಮಯದವರೆಗೂ ಕೆಡದಂತೆ ಇಡುವ ಬಾದಾಮ್ ಪುಡಿಯನ್ನು ಮನೆಯಲ್ಲೇ ನಾವು ಮಾಡಬಹುದು. ಬಹಳ ಸುಲಭವಾಗಿ ಮನೆಯಲ್ಲಿ ಈ ಪುಡಿ ಮಾಡಿಕೊಂಡರೆ ಖರ್ಚು ಕಡಿಮೆಯಾಗುವ ಜೊತೆಗೆ ನಿಮಗೆ ಯಾವಾಗ ಬೇಕೋ ಆವಾಗ ಬಳಸಬಹುದು. ಹಾಗಾದ್ರೆ ಈ ಬಾದಾಮ್ ಪುಡಿ ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ಸುಲಭವಾಗಿ ಬಾದಾಮ್ ಪುಡಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಂಬೆಲ್ಲಾ ಕುರಿತು ಇಲ್ಲಿ ತಿಳಿದುಕೊಳ್ಳೋಣ.
ಬಾದಾಮ್ ಪುಡಿ ಮಾಡಲು ಬೇಕಾಗುವ ವಸ್ತುಗಳು
- ಬಾದಾಮಿ ಕಾಳು
- ಗೋಡಂಬಿ
- ಪಿಸ್ತಾ
- ಅರಶಿಣ
- ಸಕ್ಕರೆ
- ಕೇಸರಿ
ಬಾದಾಮ್ ಪುಡಿ ಮಾಡಿಕೊಳ್ಳುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 1 ಕಪ್ ಬಾದಾಮ್ ಕಾಳನ್ನು ಹಾಕಿಕೊಂಡು ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು. ಇದಕ್ಕೆ 150 ಗ್ರಾಮ್ ಗೋಡಂಬಿ, ಸ್ವಲ್ಪ ಪಿಸ್ತಾ ಕೂಡ ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಬೇಕು. ಗರಿ ಗರಿಯಾಗಿ ಹುರಿದ ಬಳಿಕ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಬೇಕು.
ಇದು ಸಂಪೂರ್ಣ ತಣ್ಣಗಾದ ಬಳಿಕ ಈ ಎಲ್ಲಾ ಪದಾರ್ಥವನ್ನು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ. ಒಂದೇ ಬಾರಿಗೆ ಮಿಕ್ಸರ್ ಮಾಡಬೇಡಿ. ಸ್ವಲ್ಪ ಸ್ವಲ್ಪ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಹಾಗೆ ಇದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ, ಏಲಕ್ಕಿ ಬೀಜಗಳು, ಚಿಟಿಕೆ ಅರಶಿಣ ಕೂಡ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಇದೇ ವಿಧಾನದಲ್ಲಿ ಅಷ್ಟೂ ಬಾದಾಮ್ ಅನ್ನು ರುಬ್ಬಿ ಪುಡಿ ಮಾಡಿ ಒಂದು ಬೌಲ್‌ಗೆ ಹಾಕಿಕೊಳ್ಳಿ.
ನಂತರ ಇದು ಬಿಸಿ ಆರಲು ಬಿಡಬೇಕು. ತಣ್ಣಗಾದ ಬಳಿಕ ಇದನ್ನು ಒಂದು ಸ್ಟೀಲ್ ಡಬ್ಬಿಗೆ ಹಾಕಬಹುದು. ಈ ಸಮಯದಲ್ಲಿ ನಿಮ್ಮ ಮನೆಯಲ್ಲಿ ಕೇಸರಿ ದಳಗಳಿದ್ದರೆ ಕೂಡ ಇದಕ್ಕೆ ಹಾಕಿ ಮಿಕ್ಸ್ ಮಾಡಿ ಇಟ್ಟುಕೊಳ್ಳಬಹುದು. ಇದು ಬಹಳ ರುಚಿಕರವಾಗಿರಲಿದೆ. ನೀವು ತಿಂಗಳ ಕಾಲ ಇಟ್ಟು ಸವಿಯಬಹುದು.
ಹಾಗಾದ್ರೆ ಬಾದಾಮ್ ಹಾಲು ಮಾಡೋದು ಹೇಗೆ?
ಮೊದಲು 2 ಕಪ್ ಹಾಲು ತೆಗೆದು ಬೌಲ್‌ಗೆ ಹಾಕಿ ಅದಕ್ಕೆ 2 ಸ್ಪೂನ್ ಬಾದಾಮ್ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿಕೊಂಡು ಕುಡಿಯಲು ನೀಡಬಹುದು. ಬಿಸಿ ಹಾಲನ್ನು ಅಥವಾ ತಣ್ಣಗಿರುವ ಹಾಲನ್ನು ಸಹ ಬಳಸಬಹುದು.



Click it and Unblock the Notifications