Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಲಂಚ್ ಬಾಕ್ಸ್‌ಗೆ ಮಾಡಿ ಅವರೆಕಾಳಿನ ರೈಸ್ ಬಾತ್..! ಇಲ್ಲಿದೆ ಸುಲಭದ ರೆಸಿಪಿ
ಬೆಳಗ್ಗೆ ಬ್ರೇಕ್ ಫಾಸ್ಟ್ ಸವಿಯಲು ಅತ್ಯುತ್ತಮ ಆರೋಗ್ಯಕರ ಖಾದ್ಯ ಮಾಡಲು ಯಾವಾಗಲು ಇಚ್ಛಿಸಿರಬಹುದು. ಅದರಲ್ಲೂ ರೈಸ್‌ನಿಂದ ಮಾಡುವ ತಿಂಡಿಗೆ ಬಹಳ ಸಮಯವೂ ಹಿಡಿಯುವುದಿಲ್ಲ. ಹೀಗಾಗಿ ನೀವು ಸುಲಭವಾಗಿ, ಕಡಿಮೆ ಸಮಯದಲ್ಲಿ ಮಾಡುವಂತಹ ಹಲವು ಬಗೆಯ ರೈಸ್ ಖಾದ್ಯಗಳ ಮಾಡಿ ಸವಿಯಲು ಯಾವಾಗಲು ಮುಂದಾಗುತ್ತೀರಿ.
ಅದರಲ್ಲೂ ರೈಸ್ ಬಾತ್ ರೆಸಿಪಿಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ರೈಸ್‌ನಿಂದ ಮಾಡುವಂತಹ ರೈಸ್ ಬಾತ್ ರೆಸಸಿಪಿಗಳ ಸವಿಯಲು ಹಾಗೂ ಮಾಡುವುದು ಕೂಡ ತುಂಬಾನೆ ಸುಲಭ. ಆದ್ರೆ ನಾವಿಂದು ರುಚಿಯ ಜೊತೆಗೆ ಆರೋಗ್ಯ ಹಾಗೆ ಸುಲಭವಾಗಿ ಮಾಡುವಂತಹ ಅವರೆಕಾಳಿನ ರೈಸ್ ಬಾತ್ ಮಾಡುವ ಕುರಿತಂತೆ ತಿಳಿದುಕೊಳ್ಳೋಣ.

ಈ ಅವರೆಕಾಳಿನ ರೈಸ್ ಬಾತ್ ಅನ್ನು ಮನೆಯಲ್ಲಿ ಸುಲಭವಾಗಿ ಅತ್ಯಂತ ರುಚಿಕರವಾಗಿ ಮಾಡಬಹುದು. ನೀವು ಹೋಟೆಲ್‌ನಲ್ಲಿ ಸವಿದಂತೆ ಈ ರೈಸ್ ಬಾತ್ ರೆಡಿಯಾಗುತ್ತದೆ. ಹಾಗಾದ್ರೆ ಈ ಅವರೆಕಾಳಿನ ರೈಸ್ ಬಾತ್ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಈ ವಿಧವಾದ ರೈಸ್ ಬಾತ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅವರೆಕಾಳಿನ ರೈಸ್ ಬಾತ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅಕ್ಕಿ
- ಅವರೆಕಾಳು
- ಟೊಮೆಟೋ
- ಈರುಳ್ಳಿ
- ಹಸಿ ಮೆಣಸಿನಕಾಯ
- ಉಪ್ಪು
- ಎಣ್ಣೆ
- ತೆಂಗಿನ ಕಾಯಿ ತುರಿ
- ಶುಂಠಿ
- ಬೆಳ್ಳುಳ್ಳಿ
- ಕೊತ್ತಂಬರಿ ಸೊಪ್ಪು
- ಪುದಿನ ಸೊಪ್ಪು
- ಧನಿಯಾ ಪುಡಿ
- ಏಲಕ್ಕಿ
- ಪಲಾವ್ ಎಲೆ
- ಚಕ್ರಮೊಗ್ಗು
- ಕಸ್ತೂರಿ ಮೇತಿ
ಅವರೆಕಾಳಿನ ರೈಸ್ ಬಾತ್ ಮಾಡುವುದು ಹೇಗೆ?
ಮೊದಲು 3 ಕಪ್ ಅಕ್ಕಿಯನ್ನು ತೊಳೆದು ಚೆನ್ನಾಗಿ ನೆನೆಸಿಡಬೇಕು. 15 ನಿಮಿಷ ನೆಂದರೆ ಸಾಕಾಗುತ್ತದೆ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಪುದಿನ ಸೊಪ್ಪು, ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಶುಂಠಿ, ಬೆಳ್ಳುಳ್ಳಿ, ಧನಿಯಾ ಪೌಡರ್, ತೆಂಗಿನಕಾಯಿ ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಈ ಪೇಸ್ಟ್ ಅನ್ನು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಪಲಾವ್ ಎಲೆ, ಚಕ್ಕೆ, ಲವಂಗ, ಚಕ್ರಮೊಗ್ಗು, ಕಸ್ತೂರಿ ಮೇತಿ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಈರುಳ್ಳಿ, ಕಾಲು ಕೆ.ಜಿ ಅವರೆಕಾಳನ್ನು ಹಾಕಿ ಬೇಯಿಸಿಕೊಳ್ಳಬೇಕು. ಇದಕ್ಕೆ ಉಪ್ಪು ಹಾಕಿಕೊಂಡು ಸುಮಾರು 2ರಿಂದ 3 ನಿಮಿಷ ಬೇಯಿಸಿ.
ಈಗ ಇದಕ್ಕೆ ಹೆಚ್ಚಿಕೊಂಡಿರುವ ಟೊಮೆಟೋ ಹಾಕಿಕೊಂಡು ಬಳಿಕ ರುಬ್ಬಿಕೊಂಡಿರುವ ಮಸಾಲೆಯನ್ನು ಕೂಡ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ 3 ಕಪ್ ಅಕ್ಕಿಗೆ ಅದೇ ಅಳತೆಯಲ್ಲಿ ಎರಡರಷ್ಟು ನೀರು ತೆಗೆದುಕೊಂಡು ಇದಕ್ಕೆ ಹಾಕಿ ಕುದಿಯಲು ಬಿಡಬೇಕು. ಸ್ವಲ್ಪ ಉಪ್ಪು ಕೂಡ ಹಾಕಿ ಕುದಿಬರಲು ಬಿಡಿ. ಇದಕ್ಕೆ 3 ಕಪ್ ಅಕ್ಕಿ ಹಾಕಿದ್ದರೆ 5 ಕಪ್ ನೀರು ಬಳಸಿಕೊಳ್ಳಿ.
ನೀರು ಕುದಿಬರುವಾಗ ನೆನೆಸಿಟ್ಟಿರುವ ಅಕ್ಕಿಯನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಕುಕ್ಕರ್ ಮುಚ್ಚಳ ಮುಚ್ಚಿ 1 ಅಥವಾ 2 ಸೀಟಿ ಹೊಡೆಸಿಕೊಂಡರೆ ಸಾಕಾಗುತ್ತೆ. ಹೆಚ್ಚಿ ನೀರು ಬಳಸಿದ್ದರೆ ಮಾತ್ರ 2 ಸೀಟಿ ಹೊಡೆಸಿಕೊಳ್ಳಿ. ಸೀಟಿ ಹೊಡೆಸಿಕೊಂಡ ಬಳಿಕ ಗ್ಯಾಸ್ ತೆಗೆದು ಮುಚ್ಚಳ ತೆರೆದು ಒಮ್ಮೆ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಅವರೆಕಾಳಿನ ರೈಸ್ ಬಾತ್ ರೆಡಿಯಾಗುತ್ತದೆ.



Click it and Unblock the Notifications