Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೇಸಿಗೆಯಲ್ಲಿ ಕರುಳಿನ ಆರೋಗ್ಯಕ್ಕೆ ಇದು ಬೆಸ್ಟ್! ಥಟ್ ಅಂತ ಮಾಡಿ ಅವಲಕ್ಕಿ ಮೊಸರನ್ನ!
ಬೇಸಿಗೆಯ ಬಿಸಿ ಈಗಲೆ ಸುಡಲು ಆರಂಭಿಸಿದೆ. ಮಧ್ಯಾಹ್ನದ ಸಮಯದಲ್ಲಿ ತಾಪಮಾನ ಗರಿಷ್ಠ ಮಟ್ಟ ತಲುಪುತ್ತಿದೆ. ಹೀಗಾಗಿ ಈ ಸಮಯದಲ್ಲಿ ಮನೆಯಿಂದ ಹೊರಬಾರದೆ ಇರುವುದು ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ ಎನಿಸುತ್ತಿದೆ. ಹಾಗೆ ದೇಹದ ಉಷ್ಣಾಂಶ ಕೂಡ ಹೆಚ್ಚಾಗುವ ಕಾರಣ ಅನೇಕ ರೀತಿಯ ಸಮಸ್ಯೆ ನೀವು ಎದುರಿಸಬಹುದು. ದೇಹವನ್ನು ಈ ಸಮಯದಲ್ಲಿ ತಂಪಾಗಿಡುವುದು ಬಹಳ ಮುಖ್ಯವಾಗಿದೆ.
ಹೀಗಾಗಿ ನೀವು ಊಟದ ಸಮಯದಲ್ಲಿ ಮಸಾಲೆ ಭರಿತ ಅಥವಾ ಬಹಳಷ್ಟು ಖಾರ, ಅಥವಾ ದೇಹದ ಉಷ್ಣತೆ ಹೆಚ್ಚಿಸುವಂತಹ ಖಾದ್ಯದ ಬದಲಾಗಿ ದೇಹಕ್ಕೆ ತಂಪು ನೀಡುವಂತಹ ಆಹಾರ ಸೇವಿಸುವುದು ಬಹಳ ಉತ್ತಮ. ಅದರಲ್ಲೂ ನಿಮ್ಮ ಕರುಳಿನ ಆರೋಗ್ಯ ಸುಧಾರಿಸುವ ಅಥವಾ ಜೀರ್ಣಕ್ರಿಯೆಗೆ ಸಹಕಾರಿಯಾಗುವಂತಹ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯ ಎನಿಸುತ್ತದೆ.

ಹೀಗಾಗಿ ನಾವಿಂದು ಕರುಳಿನ ಆರೋಗ್ಯಕ್ಕೆ ಬಹಳ ಉತ್ತಮವಾಗಿರುವ ಮೊಸರು ಹಾಕಿ ಮಾಡುವಂತಹ ಅವಲಕ್ಕಿ ಮೊಸರನ್ನ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಮೊಸರು ನಮ್ಮ ಜೀರ್ಣಕ್ರಿಯೆಯ ಆರೋಗ್ಯಕ್ಕೆ ಬಹಳ ಉತ್ತಮ. ಹಾಗೆ ನಮ್ಮ ಕರುಳಿನ ಆರೋಗ್ಯಕ್ಕೂ ಬಹಳ ಮುಖ್ಯ. ಅದರಲ್ಲೂ ಈ ಅವಲಕ್ಕಿ ಮೊಸರನ್ನ ದೇಹಕ್ಕೂ ತಂಪು ನೀಡಲಿದೆ.
ಹಾಗಾದ್ರೆ ಈ ಅವಲಕ್ಕಿ ಮೊಸರನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಇದನ್ನು ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅವಲಕ್ಕಿ ಮೊಸರನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ದಪ್ಪ ಅವಲಕ್ಕಿ
- ಕರಿಬೇವು
- ಸಾಸಿವೆ
- ಶುಂಠಿ
- ಹಸಿ ಮೆಣಸು
- ಒಣ ಮೆಣಸು
- ಕಡಲೆ ಬೇಳೆ
- ಉದ್ದು
- ಕಾಳು ಮೆಣಸು
- ಉಪ್ಪು
- ಎಣ್ಣೆ
- ಕೊತ್ತಂಬರಿ ಸೊಪ್ಪು
- ಮೊಸರು
ಅವಲಕ್ಕಿ ಮೊಸರನ್ನ ಮಾಡುವ ವಿಧಾನವೇನು?
ಮೊದಲಿಗೆ ದಪ್ಪ ಅವಲಕ್ಕಿಯನ್ನು ಒಂದು ಬೌಲ್‌ಗೆ ಹಾಕಿಕೊಂಡು ಚೆನ್ನಾಗಿ ತೊಳೆದುಕೊಳ್ಳಬೇಕು. ಎರಡರಿಂದ ಮೂರು ಬಾರಿ ತೊಳೆದುಕೊಳ್ಳಿ. ನಂತರ ಶುದ್ಧ ನೀರಿನಲ್ಲಿ 3 ನಿಮಿಷ ನೆನೆಸಿಡಬೇಕು. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಕಡಲೆ ಬೇಳೆ, ಉದ್ದು, ಕಾಳು ಮೆಣಸು ಹಾಕಿ ಬಿಸಿ ಮಾಡಿಕೊಳ್ಳಿ.
ನಂತರ ಒಣ ಮೆಣಸು, ಹಸಿ ಮೆಣಸು, ಅರ್ಧ ಇಂಚು ಶುಂಠಿ, ಕರಿಬೇವು ಇದಕ್ಕೆ ಹಾಕಿ ಮತ್ತೆ ಬಿಸಿ ಮಾಡಿಕೊಳ್ಳಿ. ಈಗ ಇದನ್ನು ತೆಗೆದು ಬದಿಗಿಟ್ಟುಕೊಳ್ಳಿ. ನೆನೆಸಿಟ್ಟಿರುವ ಅವಲಕ್ಕಿಯನ್ನು ನೀರಿನಿಂದ ತೆಗೆದು ಒಂದು ಪಾತ್ರೆಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಕಾಲು ಲೀಟರ್ ಮೊಸರು ಹಾಕಿಕೊಳ್ಳಿ. ಅಥವಾ ಅಳತೆಗೆ ತಕ್ಕಷ್ಟು ಮೊಸರು ಹಾಕಿಕೊಳ್ಳಿ. ಹಾಗೆ ಸ್ವಲ್ಪವೇ ನೀರು ಹಾಕಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹೀಗೆ ನೀರಿನ ಬದಲಾಗಿ ಹಾಲು ಕೂಡ ಹಾಕಿಕೊಳ್ಳಬಹುದು.
ನಂತರ ಇದಕ್ಕೆ ರೆಡಿ ಮಾಡಿಕೊಂಡಿರುವ ಒಗ್ಗರಣೆಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಕೊನೆಯಲ್ಲೊ ಕೊತ್ತಂಬರಿ ಸೊಪ್ಪು ಸಣ್ಣದಾಗಿ ಹೆಚ್ಚಿಕೊಂಡು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ಥಟ್ ಎಂದು ನಿಮ್ಮ ಮುಂದೆ ಅವಲಕ್ಕಿ ಮೊಸರನ್ನ ರೆಡಿಯಾಗುತ್ತದೆ. ನೀವು ಕೂಡ ಮಧ್ಯಾಹ್ನದ ಊಟದ ವೇಳೆ ಇಲ್ಲವೆ ಬೆಳಗ್ಗೆ ತಿಂಡಿಗೆ ಇದನ್ನು ಮಾಡಿ ಸವಿಯಬಹುದು. ಆರೋಗ್ಯದ ದೃಷ್ಟಿಯಲ್ಲೂ ಬಹಳ ಉತ್ತಮ. ಇದಕ್ಕೆ ನೀವು ದ್ರಾಕ್ಷಿ, ದಾಳಿಂಬೆ ಹಣ್ಣು ಕೂಡ ಹಾಕಿ ಸವಿಯಬಹುದು.



Click it and Unblock the Notifications