Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಗ್ಯಾಸ್ ಇಲ್ಲದೆ, ಎಣ್ಣೆ ಬಳಸದೆ ಮಾಡುವಂತಹ ಬ್ರೇಕ್‌ಫಾಸ್ಟ್..! 5 ನಿಮಿಷದಲ್ಲಿ ರೆಡಿ
ನೀವು ಬೆಳಗ್ಗೆ ತಿಂಡಿಗೆ ಕೆಲವು ಬಾರಿ ಹಿಂದಿನ ದಿನವೇ ತಯಾರಿ ನಡೆಸಬೇಕಾಗುತ್ತದೆ. ದೋಸೆ, ಇಡ್ಲಿಗೆ ಹಿಂದಿನ ದಿನ ತಯಾರಿ ಮಾಡಬೇಕಿದೆ. ಹಾಗೆ ಪೂರಿ, ಚಪಾತಿ ಸೇರಿ ಕೆಲವೊಂದು ತಿಂಡಿಗೆ ಹಲವು ರೀತಿಯ ತಯಾರಿ ಮಾಡಿಕೊಳ್ಳಬೇಕಾಗುತ್ತೆ. ಆದ್ರೆ ಯಾವುದೇ ಮಾಡಿಕೊಳ್ಳದೆ ಹಲವು ಬಗೆಯ ತಿಂಡಿಗಳನ್ನು ನಾವು ಮಾಡಬಹುದು ಎಂಬುದು ಕೂಡ ನಿಮಗೆಲ್ಲಾ ತಿಳಿದಿದೆ.
ಬೆಳಗ್ಗೆ ಸಾಮಾನ್ಯವಾಗಿ ಗಡಿಬಿಡಿಯಲ್ಲಿ ತಿಂಡಿಯನ್ನು ಮಾಡಿಕೊಳ್ಳಬೇಕಾಗುತ್ತೆ. ಹೀಗಾಗಿ ಎಲ್ಲರು ತಕ್ಷಣವೇ ಮಾಡಿ ಸವಿಯಬಹುದಾದ ಖಾದ್ಯ ಯಾವುದಿದೆ ಎಂಬುದನ್ನು ಯೋಚಿಸುತ್ತಾರೆ, ಸುಲಭವಾಗಿ ಹಾಗೆ ಮನೆ ಮಂದಿಗೆಲ್ಲಾ ಇಷ್ಟವಾಗುವ ಖಾದ್ಯ ಯಾವುದಾದರು ಇದ್ದರೆ ಅದನ್ನು ಮಾಡಲು ಮುಂದಾಗುವವರೆ ಹೆಚ್ಚು. ಮಕ್ಕಳು ಶಾಲೆಗೆ ತೆರಳುತ್ತಿದ್ದರೆ ಅಥವಾ ನೀವು ಕೆಲಸಕ್ಕೆ ಹೋಗಬೇಕಾದರೆ ಗಡಿ ಬಿಡಿಯಲ್ಲೇ ತಿಂಡಿ ಮಾಡಿ ಮುಗಿಸಬೇಕಾಗುತ್ತದೆ.

ಇಂತಹ ಸಂದರ್ಭಕ್ಕೆ ಸೂಕ್ತವಾದಂತಹ ತಿಂಡಿ ಅಂದರೆ ಅದು ಅವಲಕ್ಕಿ, ಅದರಲ್ಲೂ ಅವಲಕ್ಕಿಯಲ್ಲಿ ಹತ್ತು ಹಲವು ಬಗೆ ಖಾದ್ಯ ಮಾಡಿ ನೀವು ಸವಿದಿರುತ್ತೀರಿ. ಮಸಾಲೆ ಅವಲಕ್ಕಿ, ಒಗ್ಗರಣೆ ಅವಲಕ್ಕಿ, ಕಾಯಿ ಅವಲಕ್ಕಿ, ಸಕ್ಕರೆ ಅವಲಕ್ಕಿ ಹೀಗೆ ಒಂದಿಷ್ಟು ಬಗೆಯಲ್ಲಿ ಮಾಡಿ ಸವಿಯಬಹುದು. ನಾವಿಂದು ಇದೇ ರೀತಿ ಅತ್ಯಂತ ಸುಲಭವಾಗಿ ಮಾಡುವ ಅವಲಕ್ಕಿ ಖಾದ್ಯ ಕುರಿತು ತಿಳಿಯೋಣ.
ಅದರಲ್ಲೂ ನಾವಿಂದು ಒಲೆಯನ್ನೇ ಹಚ್ಚದೆ, ಹಾಗೆ ಕಡಿಮೆ ವಸ್ತುಗಳ ಬಳಸಿಕೊಂಡು 5 ನಿಮಿಷದ ಒಳಗೆ ಮಾಡಬಹುದಾದ ಅದ್ಭುತ ರುಚಿಯ ಅವಲಕ್ಕಿ ಬಗೆಯನ್ನು ಇಲ್ಲಿ ಹೇಳಲಾಗಿದೆ. ಈ ರೀತಿ ಅವಲಕ್ಕಿ ತಿಂಡಿ ಬೆಳಗ್ಗೆ ತಿಂಡಿಗೆ ಮಾಡಿ ಸವಿದರೆ ಆ ದಿನ ಅದ್ಭುತವಾಗಿರುತ್ತೆ. ಹಾಗಾದ್ರೆ ಈ ಮಸಾಲೆ ಭರಿತ ಅವಲಕ್ಕಿ ತಿಂಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ಇಲ್ಲಿ ತಿಳಿದುಕೊಳ್ಳೋಣ.
ಮಸಾಲೆ ಅವಲಕ್ಕಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಪೇಪರ್ ಅವಲಕ್ಕಿ ಅಥವಾ ತೆಳು ಅವಲಕ್ಕಿ
- ತೆಂಗಿನಕಾಯಿ
- ಹಸಿ ಮೆಣಸು
- ಕರಿಬೇವು
- ಕೊತ್ತಂಬರಿ ಸೊಪ್ಪು
- ಉಪ್ಪು
- ನಿಂಬೆ ರಸ
ಮಸಾಲೆ ಅವಲಕ್ಕಿ ಮಾಡುವ ವಿಧಾನವೇನು?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ತೆಂಗಿನ ಕಾಯಿ ತುರಿ ಹಾಕಿ, ಎರಡು ಹಸಿ ಮೆಣಸು, ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು, 1 ಸ್ಪೂನ್ ನಿಂಬೆ ರಸ ಕೂಡ ಹಾಕಿಕೊಂಡು ನೀರನ್ನು ಬಳಸದೆ ರುಬ್ಬಬೇಕು. ತರಿ ತರಿಯಾಗಿ ಇದನ್ನು ರುಬ್ಬಕೊಳ್ಳಬೇಕು.
ಈಗ ಒಂದು ಬಾಣಲೆಯಲ್ಲಿ ತೆಳು ಅವಲಕ್ಕಿಯನ್ನು ಹಾಕಿಕೊಳ್ಳಿ. ಈ ಅವಲಕ್ಕಿಯನ್ನು ಜರಡಿ ಹಿಡಿದು ಬಳಸಿಕೊಳ್ಳಬೇಕು. ಇದರಲ್ಲಿ ಪುಡಿ, ಕಸ ಇರುವ ಕಾರಣ ಜರಡಿ ಹಿಡಿದರೆ ಉತ್ತಮ. ಈಗ ಅವಲಕ್ಕಿ ಹಾಕಿರುವ ಪಾತ್ರೆಗೆ ರುಬ್ಬಿಕೊಂಡಿರುವ ಹುಡಿ ಮಸಾಲೆಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದು ಹಸಿ ಬಣ್ಣದ ಅತ್ಯಂತ ರುಚಿಕರ ಖಾದ್ಯವಾಗುತ್ತೆ. ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾ ರುಚಿ ನೋಡಿಕೊಳ್ಳಿ.
ನೀವು ಹೀಗೆ ಮಿಕ್ಸ್ ಮಾಡಿಕೊಳ್ಳುತ್ತಾ ಸಕ್ಕರೆ ಬೇಕಾದರೆ ಇದಕ್ಕೆ ಹಾಕಿಕೊಳ್ಳಬೇಕು. ಅವಲಕ್ಕಿ ಸವಿಯುವಾಗ ಸಿಹಿ ಸಿಹಿ ಅನುಭವವಾದರೆ ರುಚಿ ದುಪ್ಪಟ್ಟಾಗುತ್ತೆ. ಇಷ್ಟಾದರೆ ಬೆಳಗ್ಗೆ ತಿಂಡಿ ಥಟ್ ಅಂತ ರೆಡಿಯಾಗಿರುತ್ತೆ. ಇದಕ್ಕೆ ಒಲೆ ಹಚ್ಚಬೇಕು, ಒಂದಿಷ್ಟು ವಸ್ತುಗಳು ಬೇಕು ಎಂಬುದಿಲ್ಲ. ಸುಲಭವಾಗಿ ಮಾಡಿ ಸವಿಯಬಹುದು. ರುಚಿ ಕೂಡ ಅದ್ಭುತವಾಗಿರುತ್ತೆ. ಒಂದು ಬೇಳೆ ಹೆಚ್ಚಾಗಿ ಉಳಿದರೆ ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ರೀತಿ ಕೂಡ ಸವಿಯಬಹುದು.



Click it and Unblock the Notifications