Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮಿಷದಲ್ಲಿ ಮಾಡಿ ಅವಲಕ್ಕಿ ಮಸಾಲ ಇಡ್ಲಿ..! ತಿಂದರೆ ಫಿದಾ ಆಗ್ತಿರಾ.!
ಇಡ್ಲಿ ಎಲ್ಲರ ಮನೆಯ ಮೆಚ್ಚಿನ ತಿಂಡಿಗಳಲ್ಲಿ ಒಂದಾಗಿದೆ. ಇಡ್ಲಿ ಅಂದ್ರೆ ಎಲ್ಲರಿಗೂ ತುಂಬಾನೆ ಇಷ್ಟ,. ಏಕಂದ್ರೆ ಸ್ವಲ್ಪವೂ ಎಣ್ಣೆ ಬಳಸದೆ ಇದನ್ನು ಮಾಡಬಹುದು. ಎಣ್ಣೆ ಕಡಿಮೆ ಇರುವ ಆಹಾರ ಆರೋಗ್ಯಕ್ಕೆ ಯಾವಾಗಲೂ ಬೆಸ್ಟ್. ಹೀಗಾಗಿ ಎಲ್ಲರು ಇಡ್ಲಿ ಸೇವಿಸಲು ಇಷ್ಟಪಡುತ್ತಾರೆ.
ಆದ್ರೆ ಇಡ್ಲಿ ಮನೆಯಲ್ಲಿ ಒಂದು ರೀತಿ ಇದ್ದರೆ ಹೊರಗೆ ಹೋಟೆಲ್‌ನಲ್ಲಿ ಸಿಗುವ ಇಡ್ಲಿ ಬೇರೆ ರೀತಿಯ ರುಚಿ ಹೊಂದಿರಲಿದೆ. ಹೀಗಾಗಿ ಪ್ರತಿಯೊಬ್ಬರು ಈ ಇಡ್ಲಿ ಸವಿಯಲು ಇಷ್ಟಪಡುತ್ತಾರೆ. ಅದು ಬೆಳಗ್ಗೆ ಆಗಿರಲಿ ಅಥವಾ ಸಂಜೆಯ ಕಾಲವೇ ಆಗಲಿ ಇಡ್ಲಿ ಸವಿಯುವುದು ಹಲವರ ಫೇವರಿಟ್.
ಇನ್ನು ಅನಾರೋಗ್ಯದಿಂದ ಬಳಲುತ್ತಿರುವರಿಗೆ ಇಡ್ಲಿಯನ್ನೇ ನೀಡುವಂತೆ ವೈದ್ಯರು ಸಹ ಸಹಲೆ ನೀಡುವುದನ್ನು ನಾವು ನೋಡಬಹುದು. ಏಕೆಂದರೆ ಇಡ್ಲಿಯಲ್ಲಿ ಫೈಬರ್ ಹೆಚ್ಚು ಎಣ್ಣೆ ಅಂಶ ಕಡಿಮೆ ನೋಡಬಹುದು. ಆದ್ರೆ ಈ ಇಡ್ಲಿಯಲ್ಲೂ ಹತ್ತಾರು ಬಗೆ ಇರುವುದು ನಾವು ನೋಡಬಹುದು. ಆದರಲ್ಲಿ ಅವಲಕ್ಕಿ ಮಸಾಲೆ ಇಡ್ಲಿ ಎಂದಾದರು ಸವಿದಿದ್ದೀರಾ?

ಹೌದು ನೀವು ಮಲ್ಲಿಗೆ ಇಡ್ಲಿ, ರವೆ ಇಡ್ಲಿ, ಉದ್ದಿನ ಇಡ್ಲಿ ಸೇರಿ ಹಲವು ಬಗೆಯ ಇಡ್ಲಿ ಸವಿದಿರಬಹುದು. ಆದರೆ ಎಂದಾದ್ರು ಅವಲಕ್ಕಿಯಿಂದ ಮಾಡುವ ಮಸಾಲ ಇಡ್ಲಿ ಮಾಡಿದ್ದೀರಾ? ಹಾಗಾದ್ರೆ ನಾವಿಂದು ಈ ಮಸಾಲೆ ಇಡ್ಲಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಈ ಅವಲಕ್ಕಿ ಮಸಾಲೆ ಇಡ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಅವಲಕ್ಕಿ ಇಡ್ಲಿ ಮಾಡುವುದು ಹೇಗೆ? ಮಾಡುವ ವಿಧಾನ ವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಅವಲಕ್ಕಿ ಮಸಾಲೆ ಇಡ್ಲಿ ಮಾಡಲು ಬೇಕಾಗುವ ಪದಾರ್ಥಗಳು
- ರವೆ
- ದಪ್ಪ ಅವಲಕ್ಕಿ
- ಮೊಸರು
- ಪನೀರ್
- ಕೊತ್ತಂಬರಿ ಸೊಪ್ಪು
- ಸೋಡಾ
- ಗರಂ ಮಸಾಲ
- ಖಾರದ ಪುಡಿ
ಅವಲಕ್ಕಿ ಮಸಾಲೆ ಇಡ್ಲಿ ಮಾಡುವುದು ಹೇಗೆ?
ಇಡ್ಲಿ ರವೆಯನ್ನು ತೆಗೆದುಕೊಂಡು ಒಂದು ಬೌಲ್‌ಗೆ ಹಾಕಿಕೊಂಡು ತೊಳೆದುಕೊಳ್ಳಿ. ಅವಲಕ್ಕಿಯನ್ನು ಸಹ ಒಂದು ಬೌಲ್‌ಗೆ ಹಾಕಿ ತೊಳೆದುಕೊಂಡು ನೀರು ತೆಗೆದಿಟ್ಟುಕೊಳ್ಳಿ. ಬಳಿಕ ರವೆಯನ್ನು ನೀರಿನಲ್ಲಿ ನೆನೆಸಿಡಿ. ಮತ್ತೊಂದು ಪಾತ್ರೆಗೆ ಅವಲಕ್ಕಿ ಹಾಕಿಕೊಂಡು ಅದಕ್ಕೆ ಮೊಸರು ಹಾಕಿಕೊಳ್ಳಿ. ನೀವು ಅವಲಕ್ಕಿ ತೆಗೆದುಕೊಂಡ ಅಳತೆಯಲ್ಲೇ ಮೊಸರು ತೆಗೆದುಕೊಳ್ಳಿ. ಇದನ್ನು ಹಾಕಿದ ಬಳಿ 1 ಗಂಟೆ ನೆನೆಸಿಡಿ
ಇದೆಲ್ಲಾ ಆದ ಬಳಿಕ ಮೆತ್ತಗಾಗಿರುವ ಅವಲಕ್ಕಿಯನ್ನು ಮಿಕ್ಸಿ ಜಾರ್‌ಗೆ ಹಾಕಿ ಎರಡು ಸ್ಪೂನ್ ನೀರು ಹಾಕಿ ರುಬ್ಬಿಕೊಳ್ಳಿ. ನುಣ್ಣಗೆ ರುಬ್ಬಿಕೊಳ್ಳಬೇಕು. ಅದೇ ರೀತಿ ರವೆಯನ್ನು ನೀರಿನಿಂದ ತೆಗದು ಚೆನ್ನಾಗಿ ಹಿಂಡಿಕೊಂಡು ಅವಲಕ್ಕಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈ ಹಿಟ್ಟು ಗಟ್ಟಿಯಾಗಿರಬೇಕು, ನೀರು ನೀರು ಆಗಿರಬಾರದು.
ಇಷ್ಟಾದರೆ ಈ ಹಿಟ್ಟಿಗೆ ಸೋಡಾ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ 30 ನಿಮಿಷ ಹಿಟ್ಟು ಹದ ಆಗಲು ಬಿಡಿ. ಬಳಿಕ ಸ್ವಲ್ಪ ಪನೀರ್ ಇದ್ದರೆ ತುರಿದುಕೊಂಡು ಅದಕ್ಕೆ ಖಾರದ ಪುಡಿ, ಉಪ್ಪು, ಗರಂ ಮಸಾಲ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಕಲಸಿಕೊಳ್ಳಿ. ಈಗ ಇದನ್ನು ಉಂಡೆ ಮಾಡಿಕೊಳ್ಳಿ.
ಬಳಿಕ ಇಡ್ಲಿ ಪ್ಲೇಟ್‌ಗೆ ಎಣ್ಣೆ ಹಚ್ಚಿಕೊಂಡು ಈ ಮಸಾಲೆಯನ್ನು ವಡೆಯಂತೆ ಒತ್ತಿಕೊಳ್ಳಿ. ಬಳಿಕ ಇಡ್ಲಿ ಅಚ್ಚಿಗೆ ಅರ್ಧ ಹಿಟ್ಟು ಹಾಕಿ ಮಧ್ಯದಲ್ಲಿ ಪನೀರ್ ಮಸಾಲೆ ಇಟ್ಟು ಬಳಿಕ ಮತ್ತೆ ಅದರ ಮೇಲೆ ಹಿಟ್ಟು ಹಾಕಿಕೊಂಡು ಒಲೆ ಮೇಲೆ ಬೇಯಲು ಇಡಿ. ಸುಮಾರು 20 ರಿಂದ 25 ನಿಮಿಷ ಬೆಂದರೆ ಸಾಕು. ಇಷ್ಟಾದರೆ ನಿಮ್ಮ ಮುಂದೆ ಅವಲಕ್ಕಿ ಮಸಾಲೆ ಇಡ್ಲಿ ರೆಡಿಯಾಗಿರುತ್ತದೆ.



Click it and Unblock the Notifications