Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅವಲಕ್ಕಿ ಚಿವ್ಡಾ ಮಾಡಿ ಸವಿದಿದ್ದೀರಾ? ಈ ರುಚಿ ಬ್ರೇಕ್‌ಫಾಸ್ಟ್ ಮಾಡಿ!
ನೀವು ನಿತ್ಯ ಬೆಳಗ್ಗೆ ಒಂದೊಂದು ರೀತಿಯ ಬ್ರೇಕ್ ಫಾಸ್ಟ್ ಸವಿಯಲು ಇಷ್ಟಪಡುವವರಾಗಿರಬಹುದು. ಹಾಗೆ ಬೆಳಗ್ಗೆ ಮಸಾಲೆ ಭರಿತವಾಗಿ ಯಾವುದಾದರು ಖಾದ್ಯ ಮಾಡಿದರೆ ಮನೆ ಮಂದಿಯಲ್ಲ ಸಂತಸದಿಂದ ಸವಿಯುತ್ತಾರೆ. ಹಾಗೆ ಎಲ್ಲಾ ದಿನದಂದು ನಿಮಗೆ ಇಷ್ಟವಾಗುವಂತಹ ಖಾದ್ಯ ಮಾಡಿ ಸವಿಯಲು ನೀವು ಇಷ್ಟಪಡುತ್ತೀರಿ.
ಇನ್ನು ಬೆಳಗ್ಗೆ ಬೇಗ ಮಾಡಿಟ್ಟ ತಿಂಡಿ ಬಹಳ ಸಮಯದವರೆಗೂ ಫ್ರೆಶ್ ಆಗಿ ಹಾಗೆ ಯಾವಾಗ ಬೇಕಾದರು ಸವಿಯುವಂತಿದ್ದರೆ ನೀವು ಸಹ ಅಂತಹ ಖಾದ್ಯ ಮಾಡಿ ಸವಿಯಲು ಇಷ್ಟಪಡುತ್ತೀರಿ. ಅದರಲ್ಲಿ ನಾವಿಂದು ಅವಲಕ್ಕಿ ಬಳಸಿ ಮಾಡುವಂತಹ ವಿಶೇಷ ಬಗೆಯ ಒಂದು ತಿಂಡಿಯನ್ನು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಅವಲಕ್ಕಿಯಲ್ಲಿ ಹಲವು ರೀತಿಯ ಖಾದ್ಯಗಳ ಮಾಡುವುದು ನಿಮಗೂ ತಿಳಿದಿರಬಹುದು. ಅದರಲ್ಲೂ ಒಗ್ಗರಣೆ ಅವಲಕ್ಕಿ, ಅವಲಕ್ಕಿ ಮಸಾಲೆ, ಗೊಜ್ಜವಲಕ್ಕಿ, ಅವಲಕ್ಕಿ ಚಿತ್ರಾನ್ನ ಹೀಗೆ ಬಗೆ ಬಗೆಯ ತಿಂಡಿ ಮಾಡಿರುತ್ತೀರಿ, ಆದ್ರೆ ನಾವಿಂದು ರುಚಿ ರುಚಿಯಾಗಿ ಮಾಡುವಂತಹ ಅವಲಕ್ಕಿ ಚಿವ್ಡಾ ಕುರಿತಾಗಿ ತಿಳಿದುಕೊಳ್ಳೋಣ.
ಅವಲಕ್ಕಿ ಜೊತೆಗೆ ಹಲವು ಮಸಾಲೆ ಭರಿತ ಈ ಅವಲಕ್ಕಿ ಚಿವ್ಡಾ ಸವಿಯಲು ಬಹಳ ರುಚಿ ನೀಡಲಿದೆ. ಹೀಗಾಗಿ ನಾವಿಂದು ಈ ರುಚಿ ರುಚಿಯ ಚಿವ್ಡಾ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ.
ಅವಲಕ್ಕಿ ಚಿವ್ಡಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅವಲಕ್ಕಿ
- ಸಕ್ಕರೆ
- ಉಪ್ಪು
- ಧನಿಯ ಕಾಳು
- ಇಂಗು
- ಜೀರಿಗೆ
- ಸಾಸಿವೆ
- ಖಾರದ ಪುಡಿ
- ಅರಶಿಣ
- ಗೋಡಂಬಿ
- ಬಾದಾಮಿ
- ಕೊಬ್ಬರಿ
- ಶೇಂಗಾ
- ಬಿಳಿ ಎಳ್ಳು
- ಕರಿಬೇವು
- ಹುರಿಗಡಲೆ
ಅವಲಕ್ಕಿ ಚಿವ್ಡಾ ಮಾಡುವುದು ಹೇಗೆ?
ಮೊದಲು ಅವಲಕ್ಕಿಯನ್ನು ಜರಡಿಯಲ್ಲಿ ಹಿಡಿದು ಪುಡಿಗಳನ್ನು ಬೇರೆ ಮಾಡಿಕೊಳ್ಳಬೇಕು. ಈಗ ಒಂದು ಮಿಕ್ಸಿ ಜಾರ್‌ಗೆ ಸ್ವಲ್ಪ ಸಕ್ಕರೆ ಹಾಕಿ ಉಪ್ಪು ಹಾಕಿಕೊಳ್ಳಿ (ಬ್ಲಾಕ್ ಸಾಲ್ಟ್ ಬಳಸುವುದು ಉತ್ತಮ) ಇದನ್ನು ಪುಡಿ ಮಾಡಿಕೊಳ್ಳಬೇಕು. ತರಿ ತರಿಯಾಗಿ ಪುಡಿ ಮಾಡಿಕೊಂಡು ಬದಿಗಿಟ್ಟುಕೊಳ್ಳಿ. ಈಗ ಅದೇ ಮಿಕ್ಸಿ ಜಾರ್‌ಗೆ ಧನಿಯಾ ಕಾಳು, ಜೀರಿಗೆ, ಇಂಗು ಹಾಕಿಕೊಂಡು ತರಿ ತರಿಯಾಗಿ ಪುಡಿ ಮಾಡಿಕೊಳ್ಳಬೇಕು.
ಈಗ ಅವಲಕ್ಕಿಯನ್ನು ದೊಡ್ಡ ಪಾತ್ರೆಗೆ ಹಾಕಿಕೊಂಡು ಅದಕ್ಕೆ ಮಿಕ್ಸಿಯಲ್ಲಿ ರುಬ್ಬಿದ್ದ ಸಕ್ಕರೆ ಉಪ್ಪು ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿಕೊಂಡು ನಂತರ ಬದಿಗಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಅದಕ್ಕೆ ಬಾದಾಮಿ ಹಾಕಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ. ಈ ಗೋಡಂಬಿ ಕೂಡ ಹಾಕಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ.
ಈಗ ಅದೇ ಎಣ್ಣೆ ಶೇಂಗಾ ಸಹ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಈಗ ಅದೇ ಎಣ್ಣೆಗೆ ಒಣ ಕೊಬ್ಬರಿಯನ್ನು ಉದ್ದವಾಗಿ ಕತ್ತರಿಸಿಕೊಂಡು 1 ನಿಮಿಷ ಬಿಸಿ ಮಾಡಿ ನಂತರ ತೆಗೆದಿಟ್ಟುಕೊಳ್ಳಿ. ಅದೇ ಬಾಣಲೆಗೆ ಮತ್ತೆ ಎಣ್ಣೆ ಹಾಕಿಕೊಂಡು ಈಗ ಸಾಸಿವೆ, ಜೀರಿಗೆ, ಕರಿಬೇವು (ಇದಿಷ್ಟು ಹೆಚ್ಚಿಗೆ ಪ್ರಮಾಣದಲ್ಲಿ ಹಾಕಿ) ಈಗ ಹುರಿಗಡಲೆ, ಬಿಳಿ ಎಳ್ಳು ಹಾಕಿ ಮತ್ತೆ ಮಿಕ್ಸ್ ಮಾಡುತ್ತಾ ಹುರಿದುಕೊಳ್ಳಿ.
ನಂತರ ಒಣ ಮೆಣಸು ಹಾಕಿ ಗ್ಯಾಸ್ ಆಫ್ ಮಾಡಿಕೊಳ್ಳಿ. ನಂತರ ಮೊದಲು ಪುಡಿ ಮಾಡಿದ್ದ ಧನಿಯಾ ಜೀರಿಗೆ ಅರ್ಧ ಕಪ್‌ನಷ್ಟು ಹಾಕಿ, ಹಾಗೆ ಅರಶಿಣ, ಖಾರದ ಪುಡಿ ಹಾಕಿ ಮತ್ತೆ ಮಿಕ್ಸ್ ಮಾಡಿ. ನಂತರ 5 ನಿಮಿಷ ಬಿಟ್ಟು ಈ ಒಗ್ಗರಣೆಗೆ ಅವಲಕ್ಕಿಯನ್ನು ಹಾಕಿಕೊಂಡು ನಿಧಾನವಾಗಿ ಮಿಕ್ಸ್ ಮಾಡಿಕೊಳ್ಳಿ. ಎಲ್ಲಾ ಮಸಾಲೆಗಳು ಚೆನ್ನಾಗಿ ಹಿಡಿಯುವಂತೆ ಮಾಡಿಕೊಳ್ಳಿ. ಹಾಗೆ ಕೊನೆಯಲ್ಲಿ ಗೋಡಂಬಿ, ಬಾದಾಮಿ, ಕೊಬ್ಬರಿ ಹಾಕಿಕೊಂಡು ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಅವಲಕ್ಕಿ ಚಿವ್ಡಾ ರೆಡಿಯಾಗುತ್ತದೆ.



Click it and Unblock the Notifications