Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರುಚಿ ರುಚಿಯ ಅರಳಿನ ಉಂಡೆ ಥಟ್ ಅಂತ ಮಾಡಿ..! ಈ ರುಚಿಯ ತಿಂಡಿ ಒಮ್ಮೆ ಟ್ರೈ ಮಾಡಿ!!
ನಾವು ಮನೆಯಲ್ಲಿ ಇದ್ದಾಗ ಅತ್ಯುತ್ತಮ ರುಚಿಯ ತಿಂಡಿ ಮಾಡಿ ಸವಿಯುತ್ತೇವೆ. ಹಬ್ಬ ಇದ್ದಾಗ ಇಲ್ಲವೆ ಶುಭ ಕಾರ್ಯಗಳು ನಡೆಯುವಾಗ, ಪೂಜೆ ಅಥವಾ ಯಾರಾದರು ಅತಿಥಿಗಳು ಬರುವ ಮುನ್ನ ಅವರಿಗಾಗಿ ಯಾವುದಾದರೊಂದು ಸಿಹಿ ಮಾಡುವುದು ಸಾಮಾನ್ಯ. ಹಾಗೆ ಅದ್ಭುತ ರುಚಿಯಲ್ಲಿ ಮಕ್ಕಳು ಕೂಡ ಇಷ್ಟಪಡುವಂತೆ ಹಲವು ಬಗೆಯ ತಿಂಡಿ ಮಾಡುತ್ತೇವೆ.
ಅದರಲ್ಲಿ ಎಲ್ಲರಿಗೂ ಇಷ್ಟವಾಗುವಂತಹ ಸುಲಭವಾಗಿ ಮಾಡುವಂತಹ ಸಿಹಿ ತಿಂಡಿ ಅಂದ್ರೆ ಅರಳಿನ ಉಂಡೆ. ಈ ಸಿಹಿಯನ್ನ ಎಲ್ಲರು ಇಷ್ಟಪಟ್ಟು ಸವಿಯುತ್ತಾರೆ. ಅದ್ರಲ್ಲೂ ಮಕ್ಕಳಿಗೆ ಅರಳಿನ ಉಂಡೆ ತುಂಬಾನೆ ರುಚಿ ನೀಡುತ್ತೆ. ನೀವು ಕೂಡ ಒಮ್ಮೆ ಇದನ್ನು ಮನೆಯಲ್ಲಿ ಮಾಡಿ ನೋಡಿ. ಈ ಅರಳಿನ ಉಂಡೆಗಳು ಈಗ ಅಂಗಡಿಗಳಲ್ಲಿ ಸಿಗುತ್ತವೆ. ಆದ್ರೆ ಬೇರೆ ಬೇರೆಯ ರುಚಿ ನಿಮ್ಮ ಅನುಭವಕ್ಕೆ ಬರಬಹುದು.

ಆದ್ರೆ ಮನೆಯಲ್ಲೇ ಅರಳಿನ ಉಂಡೆ ಮಾಡಿ ಸವಿದು ನೋಡಿ. ಅರಳಿನ ಉಂಡೆ ಆರೋಗ್ಯಕ್ಕೂ ಬಹಳ ಒಳ್ಳೆಯದು. ಅದರ ಸಿಹಿಯ ಕಾರಣಕ್ಕೆ ಮಕ್ಕಳಿಗೂ ಕೂಡ ಇಷ್ಟವಾಗುತ್ತೆ. ಹಾಗಾದ್ರೆ ಮನೆಯಲ್ಲಿ ಈ ಅರಳಿನ ಉಂಡೆ ಮಾಡುವುದು ಹೇಗೆ?, ಅರಳಿನ ಉಂಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅರಳಿನ ಉಂಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಜೋಳ- 100 ಗ್ರಾಮ್
- ಬೆಲ್ಲ
- ತುಪ್ಪ
- ಒಣ ಕೊಬ್ಬರಿ
- ಏಲಕ್ಕಿ
- ಶೇಂಗಾ
ಅರಳಿನ ಉಂಡೆ ಮಾಡುವುದು ಹೇಗೆ?
ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ನೀರು ಹಾಕಿ ಕುದಿಯಲು ಬಿಡಿ. ನೀರು ಕುದಿಯಲು ಆರಂಭಿಸಿದಾಗ ಅದಕ್ಕೆ ಜೋಳ ಹಾಕಿಕೊಳ್ಳಬೇಕು. ಅಂಗಡಿಯಲ್ಲಿ ಸಿಗುವ ಯಾವುದೇ ಜೋಳ ಬಳಸಬಹುದು. ಕಡಿ ಜೋಳ, ಬಿಡಿ ಜೋಳ ಎಂದು ಕೂಡ ಇದನ್ನು ಕರೆಯುತ್ತಾರೆ. ಅಲ್ಲದೆ ಜೋಳದ ರೊಟ್ಟಿ ಮಾಡಲು ಈ ಜೋಳ ಬಳಸುತ್ತಾರೆ. ಈ ಜೋಳವನ್ನು ಒಂದು ಕಪ್‌ನಲ್ಲಿ ತೆಗೆದುಕೊಂಡು ಹಾಕಿಕೊಳ್ಳಿ. 100 ಗ್ರಾಮ್ ಜೋಳ ಇದ್ದರೆ ಸಾಕಾಗುತ್ತದೆ.
ಸುಮಾರು 5 ನಿಮಿಷ ಈ ಜೋಳ ಚೆನ್ನಾಗಿ ಕುದಿಯಬೇಕು. ನಂತರ ಒಲೆ ಆಫ್ ಮಾಡಿಕೊಂಡು ಜೋಳವನ್ನು ಜರಡಿ ಹಿಡಿದು ಒಂದು ಶುದ್ಧ ಬಟ್ಟೆಯ ಮೇಲೆ ಹರಡಿಕೊಳ್ಳಬೇಕು. ನೀರಿನ ಪಸೆ ಇಲ್ಲದ್ದಂತೆ ಒಣಗಿಸಿಕೊಳ್ಳಿ. ಕನಿಷ್ಟ 30 ನಿಮಿಷ ಒಣಗಿಸಿಕೊಳ್ಳಿ. ನಂತರ ಒಣಗಿದ ಈ ಜೋಳವನ್ನು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಈ ಜೋಳವನ್ನು ಹಾಕಿಕೊಳ್ಳಿ.
2 ನಿಮಿಷದಲ್ಲಿ ಜೋಳ ಸಿಡಿಯಲು ಆರಂಭಿಸುತ್ತದೆ. ಈ ವೇಳೆ ಪಾತ್ರೆಗೆ ಒಂದು ಕಾಟನ್ ಬಟ್ಟೆಯನ್ನು ಮುಚ್ಚಬೇಕು. ಆಗಾಗ ಬಟ್ಟೆಯನ್ನು ತಿರುಗಿಸಿಕೊಳ್ಳುತ್ತಾ ಇರಿ, ನಂತರ ಒಂದು ಪಾತ್ರೆಗೆ ಈ ಕಾಳುಗಳನ್ನು ಹಾಕಿಕೊಳ್ಳಿ. ಇದು ನೋಡಲು ಪಾಪ್‌ಕಾರ್ನ್‌ನಂತೆ ಕಾಣಿಸುತ್ತದೆ.
ನಂತರ ಇದನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಅದಕ್ಕೆ ಸ್ವಲ್ಪ ಒಣ ಕೊಬ್ಬರಿ ತುರಿ, ಏಲಕ್ಕಿ, ಸಿಪ್ಪೆ ತೆಗೆದಿರುವ ಸ್ವಲ್ಪ ಶೇಂಗಾ ಬೀಜ ಹಾಕಿ ಮಿಕ್ಸ್ ಮಾಡಿ ಪೌಡರ್ ಮಾಡಿ. ತುಂಬಾನೆ ನುಣ್ಣಗೆ ರುಬ್ಬಿಕೊಳ್ಳಬೇಡಿ. ಪುಡಿ ಪುಡಿ ಆಗಿರಲಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 3 ಸ್ಪೂನ್ ತುಪ್ಪ ಅಥವಾ ಎಣ್ಣೆ ಕೂಡ ಹಾಕಿಕೊಳ್ಳಬಹುದು. ಬಳಿಕ ಇದಕ್ಕೆ ಒಂದು ಕಪ್‌ನಲ್ಲಿ ಬೆಲ್ಲವನ್ನು ಪುಡಿ ಮಾಡಿಕೊಂಡು ಇದಕ್ಕೆ ಹಾಕಿ. ಬೆಲ್ಲ ಚೆನ್ನಾಗಿ ಕರಗಲು ಬಿಡಿ. ಚೆನ್ನಾಗಿ ಪುಡಿ ಮಾಡಿಕೊಳ್ಳುತ್ತಾ ಇರಿ.
ದಪ್ಪವಾಗಿ ಪಾಕ ಬಂದಾಗ ಅದನ್ನು ಬೌಲ್‌ನಲ್ಲಿ ಇರುವ ಮಿಶ್ರಣದ ಮೇಲೆ ಹಾಕಿ ಕೈ ಬಳಸದೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. 1 ನಿಮಿಷದಲ್ಲಿ ಅದು ತಣ್ಣಗಾದ ಬಳಿಕ ಕೈಯಿಂದ ಮಿಕ್ಸ್ ಮಾಡಿಕೊಳ್ಳಿ. ನಂತರ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆ ಮಾಡಿಕೊಳ್ಳಿ. ಹಾಗೆ ಉಂಡೆ ತಣ್ಣಗಾಗಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಅರಳಿನ ಉಂಡೆ ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications