Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಂಧ್ರ ಸ್ಟೈಲ್‌ನ ಟೊಮೆಟೋ ಪಪ್ಪು ಮಾಡಿ ನೋಡಿ..! ಘಮ ಘಮಿಸುವ ಖಾದ್ಯ ಇದು!
ನೀವು ಊಟಕ್ಕೆ ತಿಂಡಿಗೆ ಪಪ್ಪು ಸವಿಯುವುದನ್ನು ಇಷ್ಟಪಡುಬಹುದು. ಹೋಟೆಲ್‌ಗಳಲ್ಲಿ ನೀವು ಬೆಳಗ್ಗೆ ತಿಂಡಿ ಸವಿಯಲು ಹೋದರೆ ಅಥವಾ ಮಧ್ಯಾಹ್ನ ಊಟಕ್ಕೂ ಕೂಡ ಈ ರುಚಿಕರ ಪಪ್ಪು ನೀಡುತ್ತಾರೆ. ಚಪಾತಿ, ಪರೋಟಾ, ರೋಟಿ ಹೀಗೆ ಹಲವು ಖಾದ್ಯದ ಜೊತೆಗೆ ಪಪ್ಪು ನೀಡಿದರೆ ರುಚಿ ಡಬಲ್ ಆಗೋದು ಪಕ್ಕ. ಅದ್ರಲ್ಲೂ ಆಂಧ್ರ ಸ್ಟಲ್‌ನಲ್ಲಿ ಮಾಡುವಂತಹ ಪಪ್ಪು ಎಲ್ಲಾ ಕಡೆಯೂ ತುಂಬಾನೆ ಫೇಮಸ್.
ಕೆಲವರಿಗೆ ಊಟದ ಜೊತೆಗೆ ಈ ಪಪ್ಪು ಇರಲೇಬೇಕು. ಆದ್ರೆ ಇಷ್ಟೊಂದು ರುಚಿಯಾಗಿ ಖಾರ ಖಾರವಾಗಿ ಈ ಪಪ್ಪು ಹೇಗೆ ಮಾಡುತ್ತಾರೆ ಅನ್ನೋದು ಮಾತ್ರ ಕೆಲವರಿಗೆ ತಿಳಿದಿರುವುದಿಲ್ಲ. ಈ ಅಡುಗೆ ಬೇಳೆ ಸಾರಿನಷ್ಟೇ ಸುಲಭವಾಗಿ ಮಾಡಬಹುದು. ಬೇಳೆಯನ್ನು ಕುಕ್ಕರ್ ನಲ್ಲಿ ಹಾಕಿ ಬೇಯಿಸಿ ನಂತರ ಟೊಮೆಟೊ ಹಾಕಿ ಮಾಡಬಹುದು ಅಥವಾ ಬೇಳೆ ಮತ್ತು ಟೊಮೆಟೊವನ್ನು ಜೊತೆಯಲ್ಲಿ ಹಾಕಿ ಬೇಯಿಸಿ ನಂತರ ಒಗ್ಗರಣೆ ಕೊಟ್ಟು ಈ ಸಾರು ತಯಾರಿಸಬಹುದು. ಹೀಗೆ ನಾವಿಂದು ಹೊಸ ವಿಧಾನದ ಮೂಲಕ ಈ ಪಪ್ಪು ಮಾಡುವ ಕುರಿತು ತಿಳಿಯೋಣ.

ಆಂಧ್ರ ಶೈಲಿಯ ಈ ಪಪ್ಪು ಮಾಡಲು ಪದಾರ್ಥಗಳು ಯಾವುವು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡುವ ಸರಿಯಾದ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಂಧ್ರ ಶೈಲಿ ಟೊಮೆಟೋ ಪಪ್ಪು ಮಾಡಲು ಬೇಕಾಗುವ ಪದಾರ್ಥಗಳು
- ಸಣ್ಣ ಈರುಳ್ಳಿ - 10
- ಹಸಿರು ಮೆಣಸಿನಕಾಯಿ - 5
- ಟೊಮೆಟೊ - 3
- ಕರಿಬೇವು
- ತೊಗರಿ ಬೇಳೆ
- ಎಣ್ಣೆ
- ಹುಣಸೆಹಣ್ಣು
- ಮೆಣಸಿನ ಪುಡಿ
- ಅರಿಶಿನ ಪುಡಿ
- ಉಪ್ಪು
- ಸಾಸಿವೆ
- ಜೀರಿಗೆ
- ಬೆಳ್ಳುಳ್ಳಿ
- ಕೆಂಪು ಮೆಣಸಿನಕಾಯಿ
- ತುಪ್ಪ
- ಕೊತ್ತಂಬರಿ ಸೊಪ್ಪು
ಆಂಧ್ರ ಶೈಲಿ ಟೊಮೆಟೋ ಪಪ್ಪು ಮಾಡುವುದು ಹೇಗೆ?
ಮೊದಲು ಒಂದು ಕುಕ್ಕರ್ ತೆಗೆದುಕೊಂಡು ಅದಕ್ಕೆ ಚೆನ್ನಾಗಿ ತೊಳೆದಿರುವ ತೊಗರಿ ಬೇಳೆ ಹಾಕಿಕೊಂಡು ನೀರು ಹಾಕಿ. ಬೇಳೆ ಮುಚ್ಚುವಷ್ಟು ನೀರು ಹಾಕಿ. ಬಳಿಕ ಇದಕ್ಕೆ ಸಾಂಬಾರ್ ಈರುಳ್ಳಿ, ಟೊಮೆಟೋ, ಹಸಿ ಮೆಣಸು, ಖಾರದ ಪುಡಿ, ಅರಶಿಣ ಪುಡಿ, ಎಣ್ಣೆ ಕೂಡ ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಅನಂತರ ಹುಣಸೆ ಹುಳಿ ಹಾಕಿ ಮುಚ್ಚಳ ಮುಚ್ಚಿ 4 ಸೀಟಿ ಹೊಡೆಯಲು ಬಿಡಿ.
4 ಸೀಟಿ ಹೊಡೆದ ಬಳಿಕ ಕುಕ್ಕರ್ ಮುಚ್ಚಳ ತೆಗೆದು ಒಮ್ಮೆ ಕಲಸಿಕೊಳ್ಳಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಸೆದುಕೊಳ್ಳಬೇಕು. ಮೀಡಿಯಂ ಆಗಿ ಪುಡಿ ಮಾಡಿಕೊಳ್ಳಬೇಕು, ಬೇಳೆ ಗಟ್ಟಿಯಾಗಿರಬಾರದು. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಇದಕ್ಕೆ ಸಾಸಿವೆ, ಜೀರಿಗೆ, ಒಣ ಮೆಣಸು, ಬೆಳ್ಳುಳ್ಳಿ, ಕರಿಬೇವು ಕೂಡ ಹಾಕಿ ಫ್ರೈ ಮಾಡಿಕೊಳ್ಳಿ.
ನಂತರ ಈ ಒಗ್ಗರಣೆಯನ್ನು ಕುಕ್ಕರ್‌ನಲ್ಲಿ ಇರುವ ದಾಲ್‌ಗೆ ಹಾಕಿಕೊಳ್ಳಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಮತ್ತೆ ಬೇಯಿಸಿಕೊಳ್ಳುವ ಅವಶ್ಯಕತೆ ಇಲ್ಲ. ಈಗ ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಗೂ ಒಂದು ಸ್ಪೂನ್ ತುಪ್ಪ ಹಾಕಿ ಮಿಕ್ಸ್ ಮಾಡಿದರೆ ನಿಮ್ಮ ಮುಂದೆ ರುಚಿ ರುಚಿಯ ಆಂಧ್ರ ಶೈಲಿಯ ಟೊಮೆಟೋ ಪಪ್ಪು ರೆಡಿಯಾಗುತ್ತದೆ. ನೀವು ಯಾವುದೇ ಖಾದ್ಯಕ್ಕೆ ಬೇಕಾದರು ಇದನ್ನು ಬಳಸಬಹುದು. ಸ್ವಲ್ಪ ತೆಳುವಾಗಿ ಮಾಡಿದರೆ ಊಟಕ್ಕೆ ದಪ್ಪವಾಗಿದ್ದರೆ ತಿಂಡಿಗೆ ಇದನ್ನು ಬಳಸಬಹುದು. ನೀವು ಕೂಡ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications