Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಡ್ಲಿ-ದೋಸೆಗೆ ಹೇಳಿ ಮಾಡಿಸಿದ ಆಂಧ್ರ ಶೈಲಿಯ ಕೆಂಪು ಚಟ್ನಿ..! ಹೀಗೆ ಮಾಡಿ!
ಬೆಳಗ್ಗೆ ತಿಂಡಿ ಮಾಡಿದಾಗ ಅದಕ್ಕೊಂದು ಸೈಡ್ಸ್ ಇರಲೇಬೇಕಾಗುತ್ತದೆ. ಹೆಚ್ಚಾಗಿ ಚಟ್ನಿ ಅಥವಾ ಸಾಂಬಾರ್, ಪಲ್ಯ, ಇದ್ದೇ ಇರುತ್ತೆ. ಅದ್ರಲ್ಲೂ ಇಡ್ಲಿ, ದೋಸೆ, ಪೂರಿ, ಚಪಾತಿಗೆ ಯಾವುದಾದ್ರು ಪದಾರ್ಥದ ಚಟ್ನಿ ಇದ್ದರೇನೇ ಆ ಖಾದ್ಯಕ್ಕೆ ರುಚಿ ಬರುವುದು. ಹೀಗಾಗಿ ಇಡ್ಲಿ, ದೋಸೆಗೊಂದು ಚಟ್ನಿ ಇರಬೇಕು.
ಇದಕ್ಕಾಗಿಯೇ ಮನೆಯಲ್ಲಿ ಇಡ್ಲಿ, ದೋಸೆ ಮಾಡಿದಾಗ ಅದಕ್ಕೆ ಚಟ್ನಿ ಮಾಡಬೇಕಾಗುತ್ತೆ ಅನ್ನೋ ಕಾರಣಕ್ಕೆ ಹಲವು ಬಾರಿ ಈ ಖಾದ್ಯ ಮಾಡೋದಕ್ಕೆ ಹಿಂದೇಟು ಹಾಕುತಾರೆ. ಇನ್ನು ಚಟ್ನಿ ಅಂದ ಮಾತ್ರಕ್ಕೆ ಸುಲಭವಾಗಿ ಮಾಡಬಹುದಾದ ಕಾಯಿ ಚಟ್ನಿ, ಕಡಲೆ ಚಟ್ನಿ ಅಥವಾ ಹುರಿಗಡಲೆ ಚಟ್ನಿ ಮಾಡುತ್ತೇವೆ.

ಸ್ವಲ್ಪ ರುಚಿಯಲ್ಲಿ ಹೊಸತನ ಹುಡುಕುವವರು ಇದ್ದರೆ ಇಲ್ಲವೆ ಇಡ್ಲಿ-ದೋಸೆ ರುಚಿ ಮತ್ತಷ್ಟು ಹೆಚ್ಚಿಸುವು ಚಟ್ನಿ ಯಾವುದಾದರು ಇದ್ದರೆ ಅದು ಆಂಧ್ರ ಶೈಲಿಯ ಕೆಂಪು ಚಟ್ನಿ. ನೀವು ಹೊರಗಡೆ ಹೋಟೆಲ್ ಅಥವಾ ರಸ್ತೆ ಬದಿಯ ಬಂಡಿಯಲ್ಲಿ ಇಡ್ಲಿ-ದೋಸೆ ಸವಿಯುವಾಗ ಅವರು ಆಂಧ್ರ ಶೈಲಿಯ ಈ ಕೆಂಪು ಚಟ್ನಿ ಸವಿಯಲು ನೀಡುವುದನ್ನು ನಾವು ನೋಡಬಹುದು.
ಈ ಆಂಧ್ರ ಶೈಲಿಯ ಕೆಂಪು ಚಟ್ನಿ ರುಚಿಯಲ್ಲಿ ಸಾಟಿ ಇಲ್ಲ. ಹೀಗಾಗಿ ಇದನ್ನು ಮನೆಯಲ್ಲಿ ನೀವು ಸಹ ಮಾಡಿ ನೋಡಿ. ಈ ಆಂಧ್ರ ಶೈಲಿಯ ಕೆಂಪು ಚಟ್ನಿ ಮಾಡಲು ಬೇಕಾಗುವ ವಸ್ತುಗಳೇನು? ಮಾಡುವುದು ಹೇಗೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಂಧ್ರ ಕೆಂಪು ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ನೆಲಗಡಲೆ- 100 ಗ್ರಾಂ
- ಬೆಳ್ಳುಳ್ಳಿ
- ಒಣ ಮೆಣಸು
- ಹುಣಸೆಹಣ್ಣು
- ಕರಿಬೇವು
- ಎಣ್ಣೆ
- ಸಾಸಿವೆ
- ಇಂಗು
- ಉಪ್ಪು
ಆಂಧ್ರ ಕೆಂಪು ಚಟ್ನಿ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ನೆಲಗಡಲೆ ಹಾಕಿಕೊಂಡು ಹುರಿದುಕೊಳ್ಳಿ. 5 ನಿಮಿಷ ಹುರಿದುಕೊಂಡರೆ ಸಾಕಾಗುತ್ತದೆ. ಕಡಲೆ ಸೀದು ಹೋಗುವಂತೆ ಹುರಿದುಕೊಳ್ಳಬೇಡಿ. ಈಗ ಕಡಲೆಯ ಜೊತೆಗೆ ಒಣ ಮೆಣಸು, ಬೆಳ್ಳುಳ್ಳಿ, ಹುಣಸೆ ಹುಣ್ಣು, ಕರಿಬೇವಿನ ಸೊಪ್ಪು ಹಾಕಿ ಮತ್ತೆ 3 ನಿಮಿಷ ಫ್ರೈ ಮಾಡಿಕೊಳ್ಳಿ.
ಬಳಿಕ ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಅದಕ್ಕೆ ಎಲ್ಲಾ ಪದಾರ್ಥಗಳ ಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ. ರುಬ್ಬಿಕೊಳ್ಳಿ. ಬಳಿಕ ಅದನ್ನು ಒಂದು ಬೌಲ್‌ಗೆ ಹಾಕಿಡಿ. ಬಳಿಕ ಒಂದು ಸಣ್ಣ ಬೌಲ್‌ನಲ್ಲಿ ಒಗ್ಗರಣೆ ಮಾಡಿಕೊಳ್ಳಿ. ಒಂದು ಸ್ಪೂನ್‌ನಲ್ಲಿ ಎಣ್ಣೆ ಇಟ್ಟು, ಅದಕ್ಕೆ ಕರಿಬೇವಿನ ಸೊಪ್ಪಿ, ಮೆಣಸು, ಇಂಗು, ಸಾಸಿವೆ ಹಾಕಿ ಒಗ್ಗರಣೆ ಮಾಡಿ, ಬಳಿಕ ಅದನ್ನು ಚಟ್ನಿಗೆ ಹಾಕಿ.
ಚಟ್ನಿಗೆ ಹಾಕಿದ ಬಳಿಕ ರುಚಿಗೆ ತಕ್ಕಷ್ಟು ಪುಡಿ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಆಂಧ್ರ ಶೈಲಿಯ ಕೆಂಪು ಚಟ್ನಿ ರೆಡಿಯಾಗಿರುತ್ತದೆ. ಇದನ್ನು ಇಡ್ಲಿ, ದೋಸೆ ಜೊತೆ ಸವಿಯಲು ನೀಡಿದರೆ ಅದರ ರುಚಿಯೇ ಬೇರೆ. ನೀವು ಸಹ ಒಮ್ಮೆ ಮನೆಯಲ್ಲಿ ಈ ಚಟ್ನಿಯನ್ನು ಟ್ರೈ ಮಾಡಿ ನೋಡಿ.
ಕೆಲವು ಭಾಗದಲ್ಲಿ ಆಂಧ್ರ ಶೈಲಿಯ ಚಟ್ನಿಗೆ ಹೆಚ್ಚು ಖಾರದ ಪುಡಿ ಹಾಗೂ ಈರುಳ್ಳಿಯನ್ನು ಸುಟ್ಟು ಬಳಿಕ ಅದನ್ನು ಮಿಕ್ಸಿಯಲ್ಲಿ ರುಬ್ಬುವಾಗ ಅರ್ಧ ಬಳಸುತ್ತಾರೆ, ಮತ್ತೆ ಅರ್ಧ ಚಟ್ನಿಯಾದ ಬಳಿಕ ಸಣ್ಣದಾಗಿ ಹೆಚ್ಚಿ ಅದಕ್ಕೆ ಹಾಕುತ್ತಾರೆ, ಇದು ಸಹ ಒಂದು ವಿಧಾನವಾಗಿದೆ. ಈ ಚಟ್ನಿಯೂ ರುಚಿಯಲ್ಲಿ ಎನ್ನಾಗಿರುತ್ತೆ.



Click it and Unblock the Notifications