ಚಳಿಗೆ ಬಾಯಲ್ಲಿ ನೀರು ತರಿಸುವ ಆಂಧ್ರ ಚಿಕನ್ ಚಿಲ್ಲಿ! ಹಸಿ ಮೆಣಸು ಇದ್ದರೆ ಸಾಕು, ಮಸಾಲೆಯೇ ಬೇಡ!

Posted By:

ಅಡುಗೆಗಳು ಅದ್ರಲ್ಲೂ ವಿವಿಧ ಬಗೆಯ ಖಾದ್ಯಗಳು ಅಂದ್ರೆ ಎಲ್ಲರು ಸವಿಯಲು ಇಷ್ಟಪಡುತ್ತಾರೆ. ಅದ್ರಲ್ಲೂ ಆಂಧ್ರ ಶೈಲಿಯ ಅಡುಗೆಗಳು ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರೋದು ಖಚಿತ. ಹಾಗೆ ಆಂಧ್ರ ಅಂದ ತಕ್ಷಣ ಖಾರ ಖಾರದ ರೆಸಿಪಿಗಳು ನೆನೆಪಿಗೆ ಬರಲಿವೆ. ಹಾಗೆ ನಾನ್‌ವೆಜ್‌ಗಳಲ್ಲಿ ಖಾರವಾದ ಅಡುಗೆಗಳ ಸವಿಯಬೇಕು ಅಂದ್ರೆ ನೀವು ಆಂಧ್ರದ ಶೈಲಿ ಅಡುಗೆ ಸವಿಯಬೇಕು.

ಆಂಧ್ರದ ಖಾರವಾದ ಅಡುಗೆಗಳು ಊಟದ ರುಚಿ ದುಪ್ಪಟ್ಟಾಗಿಸಲಿದೆ. ಹಾಗೆ ಅವರು ವಿಶೇಷ ರೀತಿಯಾಗಿ ಅಡುಗೆಯನ್ನ ಮಾಡುವುದು ನೋಡಬಹುದು, ಎಷ್ಟು ಪ್ರಮಾಣದಲ್ಲಿ ಯಾವ ಮಸಾಲೆ ಬಳಸಬೇಕು ಅನ್ನೋದನ್ನು ಸರಿಯಾಗಿ ತಿಳಿದಿದ್ದರೆ ಸಾಕಾಗುತ್ತದೆ. ಅದ್ರಲ್ಲೂ ನಾನ್‌ವೆಜ್ ಖಾದ್ಯಗಳಲ್ಲಿ ಚಿಕನ್ ಚಿಲ್ಲಿ ನೆನೆದರೆ ಬಾಯಲ್ಲಿ ನೀರು ಬರಲಿದೆ.

Andra Style Chicken Chilli For Winter At Home In Kannada

ಆಂಧ್ರದಲ್ಲಿ ಚಿಕನ್ ಚಿಲ್ಲಿ ಬಹಳ ಫೇಮಸ್, ಅದ್ರಲ್ಲೂ ವಿಶೇಷ ರುಚಿಯಲ್ಲಿ ಖಾರ ಖಾರವಾದ ಈ ಚಿಕನ್ ಚಿಲ್ಲಿ ಮಾಡುತ್ತಾರೆ. ಊಟದೊಂದಿಗೆ ಮಾತ್ರವಲ್ಲ ಚಪಾತಿ, ಪಟೋಠ, ಇಡ್ಲಿ, ದೋಸೆ ಸೇರಿ ಎಲ್ಲಾ ತಿಂಡಿಯೊಂದಿಗೂ ಇದರ ರುಚಿ ದುಪ್ಪಟ್ಟಾಗಲಿದೆ. ಹಾಗಾದ್ರೆ ಆಂಧ್ರ ಶೈಲಿಯ ಚಿಕನ್ ಚಿಲ್ಲಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಆಂಧ್ರ ಶೈಲಿಯ ಚಿಕನ್ ಚಿಲ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಪ್ರಮಾಣದಲ್ಲಿ ಮಸಾಲೆಗಳ ಬಳಸಬೇಕು ಅನ್ನೋದನ್ನು ತಿಳಿದುಕೊಳ್ಳೋಣ.

ಆಂಧ್ರ ಶೈಲಿಯ ಚಿಕನ್ ಚಿಲ್ಲಿ ಮಾಡಲು ಬೇಕಾಗುವ ವಸ್ತುಗಳು ಬೇಕು?

  • ಚಿಕನ್
  • ಅಡುಗೆ ಎಣ್ಣೆ
  • ಹಸಿ ಮೆಣಸಿನಕಾಯಿ
  • ಅರಿಶಿನ ಪುಡಿ - 1/2 ಚಮಚ
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ
  • ಕಾರ್ನ್ ಫ್ಲೋರ್ - 1 ಚಮಚ
  • ಉಪ್ಪಿಗೆ ರುಚಿಗೆ ತಕ್ಕಷ್ಟು
  • ಮೆಣಸಿನಕಾಯಿ ಸಾಸ್ - 1 ಚಮಚ
  • ಸೋಯಾ ಸಾಸ್ - 1 ಚಮಚ
  • ಉಪ್ಪು


ಆಂಧ್ರ ಶೈಲಿಯ ಚಿಕನ್ ಚಿಲ್ಲಿ ಮಾಡುವ ವಿಧಾನವಿದು

ಮೊದಲಿಗೆ ಚಿಕನ್ ಅನ್ನು ತೊಳೆದು ಕ್ಲೀನ್ ಮಾಡಿ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಿ. ಈಗ ಇದಕ್ಕೆ 15 ಹಸಿ ಮೆಣಸನ್ನು ಕುಟ್ಟಾಣಿಯಲ್ಲಿ ಕುಟ್ಟಿಕೊಂಡು ಹಾಕಬೇಕು. ಇಲ್ಲವೆ ಮಿಕ್ಸಿಯಲ್ಲಿ 2 ಸುತ್ತು ರುಬ್ಬಿ ತರಿತರಿಯಾಗ ಮಾಡಿಕೊಂಡು ಬಾಣಲೆಗೆ ಹಾಕಿಕೊಳ್ಳಬೇಕು.

ಅರ್ಧ ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ಚಿಕನ್ ಸೇರಿಸಿ ಅರಶಿಣ ಸೇರಿಸಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿಕೊಳ್ಳಿ. ಆಗಾಗ ಮುಚ್ಚಳ ತೆಗೆದು ಮಿಕ್ಸ್ ಮಾಡುತ್ತಾ ಇರಿ. ಅನಂತರ ಬೇಯಿಸಿದ ಚಿಕನ್‌ಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಉಪ್ಪು ಸಹ ಸೇರಿಸಿಕೊಂಡು ಮತ್ತೆ 1 ನಿಮಿಷ ಬೇಯಿಸಿ.

ಈಗ ಒಂದು ಸ್ಪೂನ್ ಕಾರ್ನ್ ಫ್ಲೋರ್ ಸೇರಿಸಬೇಕು. ಅದಕ್ಕಾಗಿ ಒಂದು ಗ್ಲಾಸ್‌ಗೆ ಕಾರ್ನ್ ಪ್ಲೋರ್ ಹಾಕಿ ನೀರು ಬೆರೆಸಿ ಮಿಕ್ಸ್ ಮಾಡಿ ಅದರ ನೀರನ್ನು ಚಿಕನ್‌ಗೆ ಸೇರಿಸಿ ಮಿಕ್ಸ್ ಮಾಡಿ ಮತ್ತೆ 4ರಿಂದ 5 ನಿಮಿಷ ಬೇಯಿಸಿಕೊಳ್ಳಬೇಕು. ಆಗಾಗ ಮುಚ್ಚಳ ತೆಗೆದು ಮಿಶ್ರಣ ಮಾಡುತ್ತಾ ಇರಿ. ಇದು ಗಟ್ಟಿಯಾಗಲು ಆರಂಭಿಸಲಿದೆ.

ಇದಕ್ಕೆ ಸೋಯಾ ಸಾಸ್ ಹಾಗೂ ಚಿಲ್ಲಿ ಸಾಸ್ ಇದ್ದರೆ ಸೇರಿಸಿಕೊಳ್ಳಿ. ನಂತರ ಮಿಶ್ರಣ ಮಾಡಿ 2 ನಿಮಿಷ ಬೇಯಿಸಿಕೊಳ್ಳಿ. ನೀರು ಡ್ರೈ ಆಗಿ ಗ್ರೇವಿ ಸ್ವಲ್ಪ ಗಟ್ಟಿಯಾಗಲು ಬಿಡಬೇಕು, ಇಷ್ಟಾದರೆ ನಿಮ್ಮ ಮುಂದೆ ಆಂಧ್ರ ಶೈಲಿಯ ಚಿಕನ್ ಚಿಲ್ಲಿ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಮಾಡಿ ಸವಿದು ನೋಡಿ.

[ of 5 - Users]
Story first published: Thursday, December 4, 2025, 17:05 [IST]
X
Desktop Bottom Promotion