Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಟೊಮೆಟೋ ಈರುಳ್ಳಿ ಇಲ್ಲದೆ ಆಂಧ್ರ ಸ್ಟೈಲ್‌ನ ಖಾರ ಚಟ್ನಿ ಮಾಡಿ.! ಮಾಡೋದು ಹೇಗೆ?
ಬೆಳಗ್ಗೆ ತಿಂಡಿಗೆ ನಾವು ಯಾವುದಾದರೊಂದು ಚಟ್ನಿ ಮಾಡಿಯೇ ಮಾಡುತ್ತೇವೆ. ನಾವು ಈ ಮೊದಲೇ ಹಲವು ರೀತಿಯ ಚಟ್ನಿ ಮಾಡುವುದು ಹೇಗೆ ಎಂಬುದನ್ನು ನಾವು ಈ ಮೊದಲೇ ತಿಳಿಸಿದ್ದೇವೆ. ಹಾಗೆ ವಿವಿಧ ರೀತಿಯ ಚಟ್ನಿ ಮಾಡಿರುತ್ತೇವೆ. ನಿತ್ಯ ಒಂದಲ್ಲಾ ಒಂದು ತಿಂಡಿಗೆ ವಿವಿಧ ಬಗೆಯ, ವಿವಿಧ ರುಚಿಯ ಸ್ಪೆಷಲ್ ಚಟ್ನಿ ಮಾಡಿರುತ್ತೇವೆ. ದೋಸೆ, ಇಡ್ಲಿ, ಚಿತ್ರಾನ್ನ ಹೀಗೆ ಎಲ್ಲಾ ಖಾದ್ಯದ ಜೊತೆಗೂ ಒಂದೊಂದು ಚಟ್ನಿ ಮಾಡಿಯೇ ಮಾಡುತ್ತೇವೆ.
ಹಾಗೆ ಹೊಸ ಹೊಸ ವಿಧದ ಚಟ್ನಿ ಕೂಡ ನಾವು ಮಾಡಿ ಸವಿದಿರುತ್ತೇವೆ. ಇಂದು ನಾವು ಹೊಸದಾಗಿ ಸ್ಪೆಷಲ್ ರುಚಿಯಲ್ಲಿ ಚಟ್ನಿ ಮಾಡುವ ಕುರಿತು ತಿಳಿದುಕೊಳ್ಳೋಣ. ಅದರಲ್ಲೂ ಆಂಧ್ರ ಶೈಲಿಯ ಹೊಸದೊಂದು ಚಟ್ನಿ ಮಾಡುವುದನ್ನು ನಾವಿಂದು ತಿಳಿಸಲಿದ್ದೇವೆ. ಆಂಧ್ರ ಶೈಲಿಯ ಎಲೆಕೋಸಿನ ಚಟ್ನಿ ಎಂದಾದರು ನೀವು ಸವಿದಿದ್ದೀರಾ?

ನಾವಿಂದು ಆಂಧ್ರದಲ್ಲಿ ಮಾಡುವಂತಹ ಖಾರ ಖಾರವಾದ ಎಲೆಕೋಸಿನ ಚಟ್ನಿಯನ್ನು ಮಾಡಿ ಸವಿಯೋಣ. ಈ ಚಟ್ನಿ ಮಾಡುವುದು ಹೇಗೆ? ಆಂಧ್ರ ಶೈಲಿಯ ಎಲೆಕೋಸಿನ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಈ ಚಟ್ನಿ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಂಧ್ರ ಶೈಲಿಯ ಎಲೆಕೋಸಿನ ಚಟ್ನಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಎಲೆಕೋಸು 200 ಗ್ರಾಂ
- ಪುದಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- ಹುರಿಗಡಲೆ
- ಹುಣಸೆ ಹಣ್ಣು
- ಬೆಳ್ಳುಳ್ಳಿ
- ಶುಂಠಿ
- ಹಸಿ ಮೆಣಸಿನಕಾಯಿ
- ಕರಿಮೆಣಸು
- ಉಪ್ಪು
- ಎಣ್ಣೆ
ಆಂಧ್ರ ಶೈಲಿಯ ಎಲೆಕೋಸಿನ ಚಟ್ನಿ ಮಾಡುವ ವಿಧಾನವೇನು?
ಮೊದಲು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಸಣ್ಣದಾಗಿ ಹೆಚ್ಚಿರುವ ಎಲೆಕೋಸು, ಪುದಿನ ಸೊಪ್ಪು, ಬೆಳ್ಳುಳ್ಳಿ, ಶುಂಠಿ, ಕಾಳುಮೆಣಸು, ಹಸಿ ಮೆಣಸು, ಹುಣಸೆ ಹಣ್ಣು ಕೂಡ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. 5ರಿಂದ 6 ನಿಮಿಷ ಈ ಸೊಪ್ಪುಗಳ ಹಸಿ ವಾಸನೆ ಹೋಗುವವರೆಗೂ ಫ್ರೈ ಮಾಡಿಕೊಳ್ಳಿ.
5 ನಿಮಿಷದ ಬಳಿಕ ಅರ್ಧ ಗ್ಲಾಸ್ ನೀರು ಹಾಕಿಕೊಳ್ಳಿ. ಮತ್ತೆ ಫ್ರೈ ಮಾಡಿಕೊಳ್ಳಿ. ಹಾಗೆ 5 ನಿಮಿಷ ಬೇಯಿಸಿಕೊಳ್ಳಿ. ಚೆನ್ನಾಗಿ ಕುದಿಬರುವಂತೆ ಮಾಡಲು ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಿ. ನಂತರ ಒಲೆ ಆಫ್ ಮಾಡಿಕೊಂಡು ಈ ಎಲ್ಲಾ ವಸ್ತುಗಳು ತಣ್ಣಗಾಗಲು ಬಿಡಬೇಕು, ಈಗ ತಣ್ಣಗಾದ ಬಳಿಕ ಏನು ಮಾಡಬೇಕು ಎಂಬುದನ್ನು ನೋಡಿ.
ಈ ವಸ್ತುಗಳು ತಣ್ಣಗಾದ ಬಳಿಕ ಅದನ್ನು ತೆಗೆದುಕೊಂಡು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪು, ಹುರಿಗಡಲೆ, ಉಪ್ಪು, ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ನುಣ್ಣಗೆ ರುಬ್ಬಿಕೊಂಡರೆ ಈ ಚಟ್ನಿ ರೆಡಿಯಾಗುತ್ತದೆ. ಇದಕ್ಕೆ ಟೊಮೆಟೋ, ಈರುಳ್ಳಿ ಯಾವುದೂ ಬೇಡ, ಸುಲಭವಾಗಿ ಅತ್ಯಂತ ರುಚಿಯಾಗಿ ಖಾರ ಖಾರವಾಗಿ ಮಾಡಬಹುದು.
ದೋಸೆ, ಇಡ್ಲಿ, ಚಪಾತಿ, ಪೂರಿ ಅಷ್ಟೆ ಏಕೆ ಊಟಕ್ಕೂ ಕೂಡ ಇದು ರುಚಿ ನೀಡಲಿದೆ. ನೀವು ಕೂಡ ಮನೆಯಲ್ಲಿ ಈ ಆಂಧ್ರ ಶೈಲಿಯ ಎಲೆಕೋಸಿನ ಚಟ್ನಿ ಮಾಡಿ ಸವಿದು ನೊಡಿ.



Click it and Unblock the Notifications