ಬಾಯಲ್ಲಿ ನೀರು ತರಿಸುವ ನಲ್ಲಿಕಾಯಿ ಉಪ್ಪಿನಕಾಯಿ..! ಸುಲಭವಾಗಿ ಮಾಡೋದು ಹೇಗೆ?

Posted By:

ಊಟದ ಜೊತೆಗೆ ನೀವು ಪಲ್ಯ, ಚಟ್ನಿ, ಬಜ್ಜಿ, ಬೋಂಡಾ ಹೀಗೆ ಹತ್ತಾರು ಖಾದ್ಯಗಳ ಸವಿಯುವ ಅಭ್ಯಾಸ ಇಟ್ಟುಕೊಂಡಿರುತ್ತೀರಿ. ಹಾಗೆ ಉಪ್ಪಿನಕಾಯಿ ಕೂಡ ಅತ್ಯಂತ ರುಚಿಕರ ಹಾಗೆ ಬಹುತೇಕ ಎಲ್ಲರು ಇಷ್ಟಪಡುವಂತಹ ಒಂದು ಊಟದ ಜೊತೆ ಸವಿಯುವ ಖಾದ್ಯ ಆಗಿದೆ. ಶುಭ ಸಮಾರಂಭಗಳಲ್ಲಿ ಮೊದಲು ಎಲ್ಲರು ರುಚಿ ನೊಡುವುದು ಈ ಉಪ್ಪಿನಕಾಯಿಯನ್ನೇ. ಮತ್ತೆ ಕೆಲವರಿಗೆ ಉಪ್ಪಿನಕಾಯಿ ಇಲ್ಲದಿದ್ದರೆ ಊಟ ಮಾಡಿದಂತೆಯೇ ಆಗುವುದಿಲ್ಲ.

ಸದ್ಯ ಈಗ ನಾವು ಮಾರುಕಟ್ಟೆಯಲ್ಲಿ ಎಷ್ಟೊಂದು ವಿಧವಾದ ಉಪ್ಪಿನಕಾಯಿಗಳ ನೋಡುತ್ತೇವೆ ಅಂದರೆ ಕೆಲವೊಂದು ಹೆಸರುಗಳನ್ನು ನೀವು ಕೂಡ ಕೇಳಿರುವುದಿಲ್ಲ. ಹಲವು ಬಗೆಯ ತರಕಾರಿಗಳಿಂದಕೂ, ಮಾಂಸದಿಂದಲೂ ಕೂಡ ಈಗ ಉಪ್ಪಿನಕಾಯಿ ಮಾಡುತ್ತಾರೆ. ಆದ್ರೆ ಈ ಎಲ್ಲಾ ಉಪ್ಪಿನಕಾಯಿಗಳಿಗಿಂತಲೂ ಒಂದು ಕೈ ಮೇಲು ಎನ್ನುವಂತಹ ರುಚಿ ನೀಡುವುದು ನಲ್ಲಿಕಾಯಿಯ ಉಪ್ಪಿನಕಾಯಿ.

How To Make Amla Pickle At Home In Kannada

ಮಾರುಕಟ್ಟೆಯಲ್ಲಿ ನೀವು ಅಪರೂಪಕ್ಕೆ ಈ ನಲ್ಲಿಕಾಯಿ ಉಪ್ಪಿನಕಾಯಿಯನ್ನು ನೋಡಬಹುದು. ಅಷ್ಟು ಸುಲಭವಾಗಿ ಇದು ಸಿಗುವುದಿಲ್ಲ. ಹಾಗೆ ಎಲ್ಲಾ ನಲ್ಲಿಕಾಯಿಯು ಉಪ್ಪಿನಕಾಯಿ ಹಾಕಲು ಬರುವುದಿಲ್ಲ. ನಲ್ಲಿಕಾಯಿ ಉಪ್ಪಿನಕಾಯಿ ಹೆಸರು ಕೇಳಿದರೆ ಸಾಕು ಹಲವರ ಬಾಯಲ್ಲಿ ನೀರುಬರಬಹುದು. ಹುಳಿ ಹುಳಿ ಖಾರ ಖಾರವಾದ ಅದರ ರುಚಿಗೆ ಎಲ್ಲರು ಫಿದಾ ಆಗುತ್ತಾರೆ.

ಹಾಗಾದ್ರೆ ಮನೆಯಲ್ಲಿ ಈ ನಲ್ಲಿಕಾಯಿ ಉಪ್ಪಿನಕಾಯಿ ಮಾಡುವುದು ಹೇಗೆ? ಎಂಬುದು ನಿಮಗೆ ಗೊತ್ತಾ? ನಾವಿಂದು ಅತ್ಯಂತ ಸುಲಭವಾಗಿ ಈ ನಲ್ಲಿಕಾಯಿ ಉಪ್ಪಿನಕಾಯಿಯನ್ನು ಮನೆಯಲ್ಲಿ ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ. ನಲ್ಲಿಕಾಯಿ ಉಪ್ಪಿನಕಾಯಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ? ಯಾವೆಲ್ಲಾ ತಯಾರಿ ಬೇಕಾಗುತ್ತದೆ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳೋಣ.

ನಲ್ಲಿಕಾಯಿ ಉಪ್ಪಿನಕಾಯಿ ಹಾಕಲು ಬೇಕಾಗುವ ಪದಾರ್ಥಗಳು

  • ನಲ್ಲಿಕಾಯಿ
  • ಮೆಂತ್ಯ
  • ಜೀರಿಗೆ
  • ಸಾಸಿವೆ
  • ಸೋಂಪು ಕಾಳು
  • ಅಜ್ವೈನ
  • ಖಾರ ಮೆಣಸಿನ ಪುಡಿ
  • ಅರಿಶಿನ ಪುಡಿ
  • ಬೆಳ್ಳುಳ್ಳಿ - 2
  • ಇಂಗು
  • ಉಪ್ಪು

ನಲ್ಲಿಕಾಯಿ ಉಪ್ಪಿನಕಾಯಿ ಹಾಕುವ ವಿಧಾನವೇನು?

ಇದಕ್ಕೆ ಬೆಟ್ಟದ ನಲ್ಲಿಕಾಯಿ ಅಥವಾ ಮನೆಯ ಬಳಿ ಬೆಳೆಯುವಂತಹ ಸಣ್ಣ ಗಾತ್ರದ ನಲ್ಲಿಕಾಯಿ ಇದ್ದರೆ ಅದ್ಭುತವಾಗಿರುತ್ತೆ. ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಮೆಂತ್ಯ, ಜೀರಿಗೆ, ಸಾಸಿವೆ, ಸೋಂಕಾಳು, ಅಜ್ವೈನ ಅಥವಾ ಓಂಕಾಳು ಹಾಕಿ 02 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಈ ಮಸಾಲೆಗಳು ತಣ್ಣಗಾಗಲು ತೆಗೆದಿಟ್ಟುಕೊಳ್ಳಿ.

ಈಗ ನಲ್ಲಿಕಾಯಿಗಳನ್ನು ತೊಳೆದು ಇಡ್ಲಿ ಪಾತ್ರೆಯಲ್ಲಿ ಅಥವಾ ಹಬೆಯಲ್ಲಿ 10 ನಿಮಿಷ ಬೇಯಿಸಿಕೊಳ್ಳಬೇಕು. ಇದು ಮೃದುವಾಗಿ ಕೈಯಲ್ಲಿ ಪುಡಿಯಾಗುವಂತೆ ಬೇಯಿಸಿಕೊಳ್ಳಿ. ಈಗ ಒಂದು ಮಿಕ್ಸಿ ಜಾರ್‌ಗೆ ಮೊದಲು ಹುರಿದ ಎಲ್ಲಾ ವಸ್ತುಗಳ ಹಾಕಿಕೊಂಡು ನುಣ್ಣಗೆ ರುಬ್ಬಿಕೊಂಡು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಬೆಳ್ಳುಳ್ಳಿ, ಇಂಗು, ಖಾರದ ಪುಡಿ, ಅರಶಿಣ ಹಾಕಿ.

ಸಣ್ಣ ಉರಿಯಲ್ಲಿ ಈ ಮಸಾಲೆಗಳು ಚೆನ್ನಾಗಿ ಫ್ರೈ ಆಗಬೇಕು. ಅನಂತರ ಬೇಯಿಸಿದ ನಲ್ಲಿಕಾಯಿಯನ್ನು ಹಾಕಿಕೊಂಡು ಒಮ್ಮೆ ಮಿಕ್ಸ್ ಮಾಡಿಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಂಡಿರುವ ಮಸಾಲೆಯನ್ನು ಇದಕ್ಕೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಬಿಸಿ ಆಗಲು ಬಿಡಿ. 4 ನಿಮಿಷ ಒಲೆ ಮೇಲೆ ಇಟ್ಟು ಮಿಶ್ರಣ ಮಾಡಿಕೊಳ್ಳುತ್ತಾ ಇರಿ. ಅನಂತರ ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ನಲ್ಲಿಕಾಯಿ ಉಪ್ಪಿನಕಾಯಿ ರೆಡಿಯಾಗುತ್ತದೆ. ಊಟಕ್ಕೆ ಇದು ಅದ್ಭುತ ರುಚಿ ನೀಡಲಿದೆ.

[ of 5 - Users]
X
Desktop Bottom Promotion