Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
10 ನಿಮಿಷದಲ್ಲಿ ಫಸ್ಟ್ ಕ್ಲಾಸ್ ಆಂಬೊಡೆ ಮಾಡಿ..! ಇಲ್ಲಿದೆ ರೆಸಿಪಿ
ಸಂಜೆಯ ಟೀ ಟೈಮ್‌ನಲ್ಲಿ ಸ್ನ್ಯಾಕ್ಸ್ ಇದ್ದರೆ ಅದರ ರುಚಿ ದುಪ್ಪಟ್ಟಾಗುತ್ತದೆ. ಆದ್ರೆ ಈ ತಿಂಡಿ ಟೀ ಜೊತೆಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೂ ಹೇಳಿ ಮಾಡಿಸಿದ್ದಂತೆ ಇದ್ದರೆ ಎಲ್ಲಾ ಸಮಯಕ್ಕೂ ಸವಿಯಲು ಇಷ್ಪಪಡುತ್ತಾರೆ. ಹಾಗೆ ಒಂದೇ ಬಾರಿಗೆ ಎಲ್ಲಾ ಕೆಲಸ ಮಾಡಿದ ನೆಮ್ಮದಿ ಗೃಹಿಣಿಯರಿಗೆ ಇರಲಿದೆ.
ಆದ್ರೆ ಅಂತಹ ಯಾವುದಾದರು ತಿಂಡಿ ಕುರಿತು ನೀವು ಆಲೋಚಿಸುತ್ತಿದ್ದರೆ ಈ ಆಂಬೊಡೆಯನ್ನು ಮಾಡಿ. ಕೆಲವರು ಇದನ್ನೇ ಮಸಾಲೆ ವಡೆ ಎನ್ನುತ್ತಾರೆ. ಮತ್ತೆ ಕೆಲವೊಂದು ಕಡೆ ಆಂಬೋಡೆ ಎನ್ನುತ್ತಾರೆ. ಎರಡೂ ಒಂದೇ ಆಗಿದೆ. ಆದರೆ ಮಸಾಲೆ ವಡೆ ಹಾಗೂ ಆಂಬೊಡೆಯನ್ನು ವಿವಿಧ ರೀತಿಯಲ್ಲಿ ಮಾಡಬಹುದು.

ಒಂದೊಂದು ರೀತಿಯ ವಿಧಾನ ಒಂದೊಂದು ರೀತಿಯ ರುಚಿ ನೀಡುತ್ತದೆ. ಅದರಲ್ಲೂ ಈ ಆಂಬೊಡೆ ತುಂಬಾನೆ ರುಚಿಕರವಾಗರುತ್ತೆ. ಹೀಗಾಗಿಯೇ ನಾವಿಂದು ರಸ್ತೆ ಬದಿಗಳಲ್ಲಿ ಹತ್ತು ಹಲವು ಅಂಗಡಿಗಳು ಟೀ ಜೊತೆಗೆ ಆಂಬೊಡೆ, ಮಸಾಲೆ ವಡೆಗಳಂತಹ ತಿಂಡಿಯನ್ನು ಮಾರಾಟ ಮಾಡುತ್ತಾರೆ. ಅದ್ರಲ್ಲು ಮದ್ದೂರು ವಡೆ ತುಂಬಾನೆ ಫೇಮಸ್ ಖಾದ್ಯ ಆಗಿದೆ.
ಆದ್ರೆ ಆಂಬೊಡೆಯನ್ನ ಬೆಳಗ್ಗೆ ಇಡ್ಲಿ, ದೋಸೆ ಒತೆಯೂ ಸವಿಯಬಹುದು. ಹಾಗೆ ಮಧ್ಯಾಹ್ನದ ಊಟದ ಸಮಯದಲ್ಲಿ, ಸಂಜೆ ಸ್ನ್ಯಾಕ್ಸ್‌ಗೆ ಹಾಗೆ ರಾತ್ರಿ ಊಟದ ಜೊತೆಗೂ ಇದನ್ನು ಸವಿಯಬಹುದಾಗಿದೆ. ನೀವು ಒಮ್ಮೆ ಮನೆಯಲ್ಲಿ ಈ ಖಾದ್ಯ ಮಾಡಿದರೆ ಎಲ್ಲ ಸಮಯಕ್ಕೂ ಬಳಕೆಗೆ ಬರುತ್ತದೆ.
ಹಾಗಾದ್ರೆ ಈ ಆಂಬೊಡೆಯನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಹಿಟ್ಟು ಹೇಗೆ ಹದ ಮಾಡಿಕೊಳ್ಳಬೇಖು. ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಂಬೊಡೆ ಮಾಡಲು ಬೇಕಾಗುವ ಪದಾರ್ಥಗಳು
- ಹುರಿಗಡಲೆ - 1 ಕಪ್
- ಕೊತ್ತಂಬರಿ ಸೊಪ್ಪು
- ಕರಿಬೇವು
- ಈರುಳ್ಳಿ 2
- ಶುಂಠಿ
- ಹಸಿ ಮೆಣಸು
- ಸಬ್ಬಸಿಗೆ ಸೊಪ್ಪು (ಕಡ್ಡಾಯವಲ್ಲ)
- ಉಪ್ಪು
- ಎಣ್ಣೆ
- ಒಣಮೆಣಸು
ಆಂಬೊಡೆ ಮಾಡುವ ವಿಧಾನವೇನು?
ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಶುಂಠಿ, ಹಸಿ ಮೆಣಸು, ಕರಿಬೇವು, ಸಬ್ಬಸಿಗೆ ಸೊಪ್ಪು, ಉಪ್ಪು ಹಾಕಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಎತ್ತಿಟ್ಟುಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್‌ಗೆ ಹುರಿಗಡಲೆ ಹಾಕಿಕೊಂಡು ಅದಕ್ಕೆ ಒಂದು ಸ್ಪೂನ್ ಕೊತ್ತಂಬರಿ ಕಾಳು, 2 ಒಣ ಮೆಣಸು ಹಾಕಿ ಪುಡಿ ಮಾಡಿಕೊಳ್ಳಿ. ಸ್ವಲ್ಪ ತರಿತರಿಯಾಗಿ ಇರುವಂತೆ ಪುಡಿ ಮಾಡಿಕೊಳ್ಳಿ. ಹೀಗೆ ಪುಡಿ ಮಾಡಿಕೊಂಡ ಬಳಿಕ ಈ ಮೊದಲು ಒಂದು ಬೌಲ್‌ನಲ್ಲಿ ಮಿಶ್ರಣ ಮಾಡಿ ಇಟ್ಟಿರುವ ವಸ್ತುಗಳೊಂದಿಗೆ ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ.
ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಬೇಕು. ಈ ಹಿಟ್ಟು ಒಂದು ಹದಕ್ಕೆ ಬರುತ್ತದೆ. ನೀರು ಹಾಕಿಕೊಳ್ಳುವಾಘ ನೋಡಿಕೊಂಡು ಹಾಕಿ. ತುಂಬಾ ತೆಳುವಾಗಿ ಇಲ್ಲವೆ ತುಂಬಾ ದಪ್ಪವಾಗಿ ಹಿಟ್ಟು ಮಾಡಿಕೊಳ್ಳಬೇಡಿ. ಮಧ್ಯಮ ಹದದಲ್ಲಿ ಹಿಟ್ಟು ಮಾಡಿ.
ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ನಂತರ ಎಣ್ಣೆ ಕಾದ ಬಳಿಕ ಅದಕ್ಕೆ ನಿಮಗೆ ಯಾವ ಗಾತ್ರಕ್ಕೆ ಆಂಬೊಡೆ ಬೇಕೋ ಆ ಗಾತ್ರದಲ್ಲಿ ಅಂಗೈ ಮೇಲೆ ತಟ್ಟಿಕೊಂಡು ನೇರವಾಗಿ ಎಣ್ಣೆಗೆ ಬಿಡಿ. ಉರಿ ಆದಷ್ಟು ಸಣ್ಣಗೆ ಇರಲಿ. ಏಕೆಂದರೆ ಆಂಬೊಡೆ ಒಳಗೆ ಚೆನ್ನಾಗಿ ಬೇಯ ಬೇಕಾದರೆ ಸಣ್ಣ ಉರಿಯಲ್ಲಿ ಹೆಚ್ಚು ಹೊತ್ತು ಕರಿಯಬೇಕು. ಉರಿ ದೊಡ್ಡದಾದರೆ ಬೇಗ ಬಣ್ಣ ಬದಲಾಗುತ್ತದೆಯೇ ಹೊರತು ಒಳಗೆ ಚೆನ್ನಾಗಿ ಬೇಯುವುದಿಲ್ಲ.
4ರಿಂದ 5 ನಿಮಿಷ ಚೆನ್ನಾಗಿ ಕರಿದರೆ ನಿಮ್ಮ ಮುಂದೆ ರುಚಿಕರ ಆಂಬೊಡೆ ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ ಅದರ ರುಚಿ ಹೇಗಿದೆ ಟೇಸ್ಟ್ ಮಾಡಿ.



Click it and Unblock the Notifications