Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಲೂ ಪೆಪ್ಪರ್ ಫ್ರೈ ಥಟ್ ಅಂತ ಮಾಡಿ ನೋಡಿ: ತಯಾರಿ ಹೇಗೆ ಮಾಡಬೇಕು?
ಮನೆಯಲ್ಲಿ ಊಟದೊಂದಿಗೆ ನೀವು ಯಾವುದಾದರು ಖಾರ ಖಾರವಾದ ಸೈಡ್ಸ್ ಸವಿಯಲು ಮುಂದಾಗುವುದು ಕಾಮನ್. ಅದಲ್ಲೂ ನಾವಿಂದು ಆಲೂಗಡ್ಡೆಯ ಪೆಪ್ಪರ್ ಫ್ರೈ ಮಾಡಿ ಸವಿಯೋದು ಎಲ್ಲರಿಗೂ ಇಷ್ಟವಾಗಬಹುದು. ಅನ್ನೊದೊಂದಿಗೆ ಈ ಆಲೂ ಪೆಪ್ಪರ್ ಫ್ರೈ ಬಹಳ ರುಚಿ ನೀಡಲಿದೆ. ಖಾರ ಖಾರವಾಗಿ ರುಚಿ ನೀಡುವ ಈ ಖಾದ್ಯವು ಎಲ್ಲರಿಗೂ ಇಷ್ಟವಾಗುತ್ತೆ.
ಒಂದೆರಡು ಆಲೂಗಡ್ಡೆ ಇದ್ದರೆ ಈ ಆಲೂ ಪೆಪ್ಪರ್ ಫ್ರೈ ಮಾಡಿ ಸವಿಯಬಹುದು. ಕಡಿಮೆ ವಸ್ತುಗಳ ಬಳಸಿ, ಕಡಿಮೆ ಸಮಯದಲ್ಲಿ ಇದನ್ನು ಮಾಡಿ ಸವಿಯಬಹುದು. ಹಾಗಾದ್ರೆ ನಾವಿಂದು ಈ ಆಲೂ ಪೆಪ್ಪರ್ ಫ್ರೈ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ. ಅದ್ರಲ್ಲೂ ಅನ್ನದೊಂದಿಗೆ, ಚಪಾತಿ, ರೊಟ್ಟಿ, ದೋಸೆ, ಇಡ್ಲಿಯೊಂದಿಗೆ ಸವಿಯಲು ಬಹಳ ರುಚಿ ನೀಡಲಿದೆ.

ಹಾಗಾದ್ರೆ ನಾವಿಂದು ಈ ರುಚಿ ರುಚಿಯ ಆಲೂ ಫ್ರೈ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಲೂ ಪೆಪ್ಪರ್ ಫ್ರೈ ಮಾಡಲು ಬೇಕಾಗುವ ವಸ್ತುಗಳು
- ಆಲೂಗಡ್ಡೆ
- ಕಾಳು ಮೆಣಸಿನ ಪುಡಿ
- ಕರಿಬೇವು
- ಜೀರಿಗೆ
- ಒಣ ಮೆಣಸು
- ಸಾಸಿವೆ
- ಈರುಳ್ಳಿ
- ಬೆಳ್ಳುಳ್ಳಿ
- ಹಸಿ ಮೆಣಸು
- ಅರಿಶಿನ ಪುಡಿ
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಆಲೂ ಪೆಪ್ಪರ್ ಫ್ರೈ ಮಾಡುವ ವಿಧಾನವೇನು?
ಇದನ್ನು ಮಾಡಲು ಆಲೂಗಡ್ಡೆಯನ್ನು ತೊಳೆದು ಒಂದು ಕುಕ್ಕರ್‌ಗೆ ಹಾಕಿಕೊಂಡು 3 ಸೀಟಿ ಹೊಡೆಸಿ ಬಳಿಕ ಸಿಪ್ಪೆ ತೆಗೆದು ಇಟ್ಟುಕೊಳ್ಳಿ. ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಕಾಳು ಮೆಣಸುಗಳ ಹಾಕಿಕೊಂಡು ಹುರಿಯಬೇಕು. ನಂತರ ಇದಕ್ಕೆ ಸೋಂಪುಕಾಳು, ಜೀರಿಗೆ, ಒಣ ಮೆಣಸು, ಕರಿಬೇವು ಹಾಕಿ 2 ನಿಮಿಷ ಹುರಿದುಕೊಳ್ಳಬೇಕು. ಇದನ್ನು ತೆಗೆದು ಪ್ಲೇಟ್‌ಗೆ ಹಾಕಿ ತಣ್ಣಗಾಗಲು ಬಿಡಿ. ಈಗ ಅದೆ ಬಾಣಲೆಗೆ 2 ಸ್ಪೂನ್ ಎಣ್ಣೆ ಹಾಕಿ ಸಾಸಿವೆ, ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸು, ಕರಿಬೇವು, ಅರಶಿಣ ಪುಡಿ ಉಪ್ಪು ಸಹ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಪ್ಲೇಟ್ ನಲ್ಲಿ ಇಟ್ಟಿದ್ದ ವಸ್ತುಗಳನ್ನೆಲ್ಲ ಇದಕ್ಕೆ ಹಾಕಿಕೊಳ್ಳಿ. ಹುರಿದ ಮಸಾಲೆಗಳನ್ನು ಪುಡಿ ಪುಡಿ ಮಾಡಿಕೊಳ್ಳಿ. ತರಿ ತರಿಯಾಗಿ ಇರಲಿ. ಈಗ ಬೇಯಿಸಿಕೊಂಡಿದ್ದ ಆಲೂಗಡ್ಡೆಯನ್ನು ತೆಗೆದುಕೊಳ್ಳಿ. ನಂತರ ಇದನ್ನು ಕತ್ತರಿಸಿಕೊಳ್ಳಿ. ಚಿಕ್ಕದಾಗಿ ಅಥವಾ 2ರಿಂದ 3 ಭಾಗ ಮಾಡಿಟ್ಟುಕೊಳ್ಳಿ.
ಬಾಣಲೆಯಲ್ಲಿ ಈರುಳ್ಳಿ ಚೆನ್ನಾಗಿ ಬೆಂದಿದ್ದರೆ ಆಲೂಗಡ್ಡೆಯನ್ನು ಇದಕ್ಕೆ ಹಾಕಿಕೊಳ್ಳಿ. ಹಾಗೆ ರುಚಿಗೆ ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿ. ಚೆನ್ನಾಗಿ ಮಸಾಲೆ ಹಿಡಿಯುವಂತೆ ತಿರುಗಿಸಿಕೊಳ್ಳಿ. ಈಗ ಮಿಕ್ಸಿಯಲ್ಲಿ ರುಬ್ಬಿಕೊಂಡಿದ್ದ ಮಸಾಲೆಯನ್ನು ಈ ಬಾಣಲೆಗೆ ಹಾಕಿಕೊಳ್ಳಿ. ಹಾಗೆ ಮಸಾಲೆ ಚೆನ್ನಾಗಿ ಹಿಡಿಯುವಂತೆ ಮಿಕ್ಸ್ ಮಾಡಿ.
2 ನಿಮಿಷ ಫ್ರೈ ಮಾಡಿಕೊಂಡರೆ ಸಾಕಾಗುತ್ತದೆ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಇಳಿಸಿಕೊಂಡರೆ ಊಟದೊಂದಿಗೆ ಸವಿಯಲು ನಿಮ್ಮ ಮುಂದೆ ರುಚಿ ರುಚಿಯ ಆಲೂ ಪೆಪ್ಪರ್ ಫ್ರೈ ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications