ಚಪಾತಿಗೊಂದು ರುಚಿಕರ ಆಲೂ ಪಾಲಕ್ ಕರಿ; ಇದೊಂದು ರೆಸಿಪಿ ಇದ್ರೆ ಸಾಕು, ಊಟ ಬೊಂಬಾಟ್!

Posted By:

ನಿತ್ಯ ಬೆಳಗ್ಗೆ ತಿಂಡಿಯೊಂದಿಗೆ ನೀವು ಯಾವುದೇ ಖಾದ್ಯ ಮಾಡಿದ್ರೂ ತಿಂಡಿ ಸವಿಯಲು ಬಹಳ ರುಚಿ ನೀಡಲಿದೆ. ತಿಂಡಿಯೊಂದಿಗೆ ಹಲವು ರೀತಿಯ ಹಾಗೆ ಇಷ್ಟದ ಖಾದ್ಯ ಮಾಡಿಯೇ ಮಾಡುತ್ತೀರಿ. ದೋಸೆ, ಇಡ್ಲಿಯೊಂದಿಗೆ ಚಟ್ನಿ, ಸಾಗು, ಸಾಂಬಾರ್ ಮಾಡುವುದು ಕಾಮನ್. ಹಾಗೆ ಚಪಾತಿ, ಪರೋಠ ಮಾಡಿದ್ದರೆ ಅದರ ಜೊತೆಗೆ ಯಾವುದಾದರು ಗ್ರೇವಿ ರೀತಿಯ ಖಾದ್ಯ ಮಾಡಿ ಸವಿಯೋದು ಖಚಿತ.

ಇನ್ನು ಚಪಾತಿ ಹಾಗೂ ಊಟದೊಂದಿಗೆ ಯಾವುದಾದರು ರುಚಿ ರುಚಿಯ ಖಾದ್ಯ ಮಾಡಿ ಸವಿಯುವ ನಿಮ್ಮ ಬಯಕೆಯನ್ನು ಈಡೇರಿಸಿಕೊಳ್ಳಲು ಬಯಸಿದರೆ ಈ ರೀತಿಯಾಗಿ ಆಲೂಗಡ್ಡೆ, ಪಾಲಕ್ ಸೊಪ್ಪಿನಿಂದ ಮಾಡುವ ಕರಿ ಬಹಳ ರುಚಿ ನೀಡಲಿದೆ. ಚಪಾತಿ ಸವಿಯಲು ಈ ಕರಿ ಮಾಡಿದರೆ 5ರಿಂದ 6 ಚಪಾತಿ ಸವಿಯೋದು ಖಚಿತ.

How To Make Alu Palak Curry For Chapati At Home In Kannada

ಹಾಗೆ ಚಪಾತಿಯೊಂದಿಗೆ ನೀವು ಸವಿಯಲು ಹಲವು ರೀತಿ ಖಾದ್ಯಗಳು ರುಚಿ ಹೆಚ್ಚಿಸುತ್ತೆ. ಆದ್ರೆ ಈ ಆಲೂಗಡ್ಡೆ, ಪಾಲಕ್ ಸೊಪ್ಪಿನ ಕರಿ ಬಹಳ ರುಚಿಕರವಾಗಿಲಿದೆ. ಹೀಗಾಗಿ ನಾವಿಂದು ಈ ಚಪಾತಿ, ರೊಟ್ಟಿ ಸವಿಯಲು ಹಾಗೆ ಊಟಕ್ಕೆ ಕೂಡ ಇದನ್ನು ಸವಿಯಬಹುದು. ಹಾಗಾದ್ರೆ ತಿಂಡಿಗೆ ನಾವು ಈ ಆಲೂಗಡ್ಡೆ ಪಾಲಕ್ ಸೊಪ್ಪಿನ ಕರಿ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ.

ಆಲೂಗಡ್ಡೆ ಪಾಲಕ್ ಸೊಪ್ಪಿನ ಕರಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಆಲೂಗಡ್ಡೆ ಪಾಲಕ್ ಸೊಪ್ಪಿನ ಕರಿ ಮಾಡಲು ಬೇಕಾಗುವ ವಸ್ತುಗಳು

  • ಆಲೂಗಡ್ಡೆ
  • ಪಾಲಕ್ ಸೊಪ್ಪು
  • ಕೊತ್ತಂಬರಿ ಸೊಪ್ಪು
  • ಜೀರಿಗೆ
  • ಹಸಿ ಮೆಣಸು
  • ಈರುಳ್ಳಿ
  • ಟೊಮೆಟೋ
  • ಶುಂಠಿ
  • ಬೆಳ್ಳುಳ್ಳಿ
  • ಉಪ್ಪು
  • ಎಣ್ಣೆ
  • ಖಾರದ ಪುಡಿ
  • ಧನಿಯಾ
  • ಅರಶಿಣ
  • ಗರಂ ಮಸಾಲ
  • ನಿಂಬೆ ರಸ

ಆಲೂಗಡ್ಡೆ ಪಾಲಕ್ ಸೊಪ್ಪಿನ ಕರಿ ಮಾಡುವ ವಿಧಾನವೇನು?

ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿಕೊಂಡು ಸಿಪ್ಪೆ ತೆಗೆದು ಕತ್ತರಿಸಿಕೊಂಡು ಇಟ್ಟುಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಬರಲು ಬಿಡಿ. ಈಗ ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಇಟ್ಟುಕೊಂಡು ಬಳಿಕ ಕುದಿಯುತ್ತಿರುವ ನೀರಿನಲ್ಲಿ ಸೊಪ್ಪನ್ನು ಹಾಕಿ.

2 ನಿಮಿಷ ಬಿಟ್ಟು ಅದನ್ನು ನಂತರ ತೆಗೆದು ತಣ್ಣೀರಿನಲ್ಲಿ ಹಾಕಿಡಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಈ ಪಾಲಕ್ ಸೊಪ್ಪನ್ನು ಹಾಕಿಕೊಂಡು ಬಳಿಕ ಕೊತ್ತಂಬರಿ ಸೊಪ್ಪು, ಚಮಚ ನಿಂಬೆ ರಸ ಸಹ ಹಾಕಿಕೊಂಡು ನುಣ್ಣಗೆ ರುಬ್ಬಿ ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.

ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಜೀರಿಗೆ, ಹಸಿ ಮೆಣಸು, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಕತ್ತರಿಸಿಕೊಂಡು ಇದಕ್ಕೆ ಹಾಕಿ ಹುರಿದುಕೊಳ್ಳಿ. ಪೇಸ್ಟ್ ಕೂಡ ಹಾಕಿಕೊಳ್ಳಬಹುದು. ಈಗ ಒಂದು ಟೊಮೆಟೋ, ಅರಶಿಣ ಹಾಗೆ ಉಪ್ಪು ಸಹ ಹಾಕಿಕೊಂಡು ಹುರಿದುಕೊಳ್ಳಬೇಕು.

ಹಾಗೆ ಖಾರದ ಪುಡಿ, ಗರಂ ಮಸಾಲ, ಜೀರಿಗೆ ಪುಡಿ, ಧನಿಯಾ ಪುಡಿ ಹಾಕಿ ಮತ್ತೆ ಹುರಿದುಕೊಳ್ಳಿ. 1 ನಿಮಿಷ ಬಿಟ್ಟು ಇದಕ್ಕೆ ರುಬ್ಬಿಕೊಂಡಿದ್ದ ಪಾಲಕ್ ಸೊಪ್ಪಿನ ಪೇಸ್ಟ್ ಇದಕ್ಕೆ ಹಾಕಿ ಸ್ವಲ್ಪ ನೀರು ಹಾಕಿ ಕುದಿಬರಲು ಬಿಡಿ. 2 ನಿಮಿಷ ಕುದಿ ಬಂದ ಬಳಿಕ ಈಗ ಬೇಯಿಸಿಕೊಂಡಿದ್ದ ಆಲೂಗಡ್ಡೆ ಹಾಕಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಆಲೂ ಪಾಲಕ್ ಕರಿ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಇದನ್ನೊಮ್ಮೆ ಮಾಡಿ ಮಾಡಿ.

[ of 5 - Users]
Story first published: Tuesday, December 2, 2025, 11:49 [IST]
X
Desktop Bottom Promotion