Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಯಲ್ಲಿ ನೀರು ತರಿಸುವ ಆಲೂ ಕ್ಯಾಪ್ಸಿಕಂ ರೈಸ್ ಬಾತ್..! ಮಾಡೋದು ಹೇಗೆ?
ಬೆಳಗ್ಗೆ ತಿಂಡಿಗೆ ಏನಾದರು ವಿಶೇಷ ಖಾದ್ಯ ಮಾಡಬೇಕು ಎಂಬುದು ನಿಮ್ಮ ಆಲೋಚನೆಯಾಗಿದ್ದರೆ ಅದಕ್ಕೆ ಹೊಸ ತಿಂಡಿ ನಾವಿಂದು ತಿಳಿಸಲಿದ್ದೇವೆ. ಮನೆಯಲ್ಲಿ ಹಬ್ಬವಿದ್ದರೆ ಅಥವಾ ಶುಭ ಕಾರ್ಯವಿದ್ದರೆ ಇಲ್ಲವೆ ಅತಿಥಿಗಳು ಆಗಮಿಸಿದ್ದ ಅವರಿಗಾಗಿ ಈ ಬೆಳಗಿನ ವಿಶೇಷ ತಿಂಡಿ ಮಾಡಬಹುದು. ಊಟದ ಜೊತೆಗೂ ಸ್ವಲ್ಪ ಸ್ವಲ್ಪ ಇದನ್ನು ಸವಿಯಲು ನೀಡಬಹುದು.
ಬೆಳಗ್ಗೆ ತಿಂಡಿಗೆ ನೀವು ರೈಸ್‌ನಲ್ಲಿ ವಿವಿಧ ರೀತಿಯ ಖಾದ್ಯ ಮಾಡಿ ಸವಿದಿರುತ್ತೀರಿ. ಅದರಲ್ಲೂ ರೈಸ್ ಬಾತ್, ಪಲಾವ್, ಪುಳಿಯೋಗರೆ, ಚಿತ್ರಾನ್ನ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಮಾಡುವಂತಹ ಖಾದ್ಯವಾಗಿದೆ. ಹಾಗಾದ್ರೆ ನಾವಿಂದು ಇದೇ ರೀತಿ ರೈಸ್ ಬಳಸಿಕೊಂಡು ಮಾಡುವಂತಹ ಅತ್ಯಂತ ರುಚಿಕರ ಖಾದ್ಯವನ್ನು ಮಾಡಿ ನೋಡೋಣ.

ಬೆಳಗ್ಗೆ ತಿಂಡಿಗೆ ಅತ್ಯಂತ ರುಚಿಕರವಾಗಿ ನಾವು ಕ್ಯಾಪ್ಸಿಕಂ ರೈಸ್ ಬಾತ್ ಮಾಡಿ ಸವಿಯೋಣ. ನೀವು ಮದುವೆ ಮನೆಯಲ್ಲಿ ಇಲ್ಲವೆ ಶುಭ ಕಾರ್ಯದ ಸಂದರ್ಭದಲ್ಲಿ ಈ ಖಾದ್ಯ ಸವಿದಿರಬಹುದು. ಕ್ಯಾಪ್ಸಿಕಂ ಹಾಕಿ ಈ ರೈಸ್ ಬಾತ್ ಮಾಡಲಾಗುತ್ತದೆ. ಹುಡಿ ಹುಡಿಯಾಗಿ ಅತ್ಯಂತ ರುಚಿಕರವಾಗಿರುವ ಈ ತಿಂಡಿ ಎಲ್ಲರಿಗೂ ಇಷ್ಟವಾಗೋದು ಪಕ್ಕ.
ಹಾಗಾದ್ರೆ ಕ್ಯಾಪ್ಸಿಕಂ ರೈಸ್ ಬಾತ್ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು> ಮಾಡಲು ಎಷ್ಟು ಸಮಯ ಹಿಡಿಯುತ್ತದೆ? ಎಂಬ ಈ ಎಲ್ಲಾ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.
ಕ್ಯಾಪ್ಸಿಕಂ ರೈಸ್ ಬಾತ್ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ - 2 ಕಪ್
- ಆಲೂಗಡ್ಡೆ - 2
- ಕ್ಯಾಪ್ಸಿಕಂ - 1
- ಈರುಳ್ಳಿ - 2
- ಟೊಮೇಟೊ - 2
- ಬೆಳ್ಳುಳ್ಳಿ 1
- ಶುಂಠಿ
- ಎಣ್ಣೆ
- ತುಪ್ಪ
- ಪಲಾವ್ ಎಲೆ
- ಲವಂಗ
- ಕಸೂರಿ ಮೆಂತ್ಯ
- ಏಲಕ್ಕಿ
- ಚಕ್ಕೆ
- ಚಕ್ರಮೊಗ್ಗು
- ದನಿಯಾ ಕಾಳು
- ತುರಿದ ತೆಂಗಿನಕಾಯಿ
- ನಿಂಬೆ ರಸ
- ಹಸಿರು ಮೆಣಸಿನಕಾಯಿ
- ಮೊಸರು
- ಪುದೀನ ಎಲೆಗಳು
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಉಪ್ಪು
ಕ್ಯಾಪ್ಸಿಕಂ ರೈಸ್ ಬಾತ್ ಮಾಡುವುದು ಹೇಗೆ?
ಒಂದು ಬೌಲ್‌ಗೆ ಅಕ್ಕಿ ಹಾಕಿ ತೊಳೆದು ಬಳಿಕ ನೆನೆಯಲು ಬಿಡಬೇಕು. ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ದನಿಯಾ ಕಾಳು, ಜೀರಿಗೆ, ಹಸಿ ಮೆಣಸು, ಒಣ ಮೆಣಸು, ಬೆಳ್ಳುಳ್ಳಿ, ಇಂಗು, ಕರಿಬೇವು, ಅರಶಿನ, ಚಕ್ಕೆ, ಲವಂಗ, ಚಕ್ರಮೊಗ್ಗು, ಏಲಕ್ಕಿ ಶುಂಠಿ ಹಾಕಿಕೊಂಡು ಹುರಿದುಕೊಳ್ಳಬೇಕು. ಇದನ್ನು ಒಂದು ಸ್ಪೂನ್ ಎಣ್ಣೆ ಹಾಕಿಕೊಂಡು 5 ನಿಮಿಷಗಳ ಕಾಲ ಇದನ್ನು ಹುರಿದುಕೊಳ್ಳಿ.
ನಂತರ ಒಲೆ ಆಫ್ ಮಾಡಿ ತಣ್ಣಗೆ ಮಾಡಿ ಇದನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿ ಇದಕ್ಕೆ ತೆಂಗಿನಕಾಯಿ ತುರಿ ಹಾಕಿ ಸ್ವಲ್ಪ ನೀರು ಸಹ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಈಗ ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ನಂತರ ಕಸೂರಿ ಮೇಥಿ, ಪುದಿನ ಸೊಪ್ಪು, ಪಲಾವ್ ಎಲೆ, ಈರುಳ್ಳಿ ಸೇರಿಸಿ ಫ್ರೈ ಮಾಡಿಕೊಳ್ಳಿ, 2 ನಿಮಿಷಗಳ ಕಾಲ ಫ್ರೈ ಮಾಡಿದ ಬಳಿಕ ಇದಕ್ಕೆ ಆಲೂಗಡ್ಡೆ, ಕ್ಯಾಪ್ಸಿಕಂ, ಟೊಮೆಟೋ, ಉಪ್ಪು ಹಾಕಿ ಮಿಕ್ಸ್ ಮಾಡಿ.
ಒಟ್ಟು 3 ನಿಮಿಷಗಳ ಕಾಲ ಫ್ರೈ ಮಾಡಿಕೊಂಡ ಬಳಿಕ ಮಿಕ್ಸಿಯಲ್ಲಿ ರುಬ್ಬಿರುವ ಮಸಾಲೆಯನ್ನು ಇದಕ್ಕೆ ಹಾಕಿಕೊಂಡು ಇದಕ್ಕೆ ಸ್ವಲ್ಪ ಮೊಸರು, ನಿಂಬೆ ಹಣ್ಣಿನ ರಸ, ಹಾಗೂ ನೆನೆಸಿಟ್ಟಿರುವ ಅಕ್ಕಿಯನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ. ಸರಿಯಾದ ಅಳತೆಯಲ್ಲಿ ನೀರು ಹಾಕಿಕೊಳ್ಳಿ. ಒಂದಕ್ಕೆ ಎರಡರಷ್ಟು ನೀರು ಹಾಕಿ. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪು ಸಹ ಹಾಕಿ ಮಿಕ್ಸ್ ಮಾಡಿ ಕುಕ್ಕರ್ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ.
2 ಸೀಟಿ ಬಳಿಕ ಕುಕ್ಕರ್ ಮುಚ್ಚಳ ತೆಗೆದು ಮಿಕ್ಸ್ ಮಾಡಿದರೆ ಆಲೂ ಕ್ಯಾಪ್ಸಿಕಂ ರೈಸ್ ಬಾತ್ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಇದನ್ನು ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications