Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಒಂದು ಆಲೂಗಡ್ಡೆಯಲ್ಲಿ ಈ ಸ್ನ್ಯಾಕ್ಸ್ ಮಾಡಿ..! ಈ ರುಚಿಗೆ ಬಾಯಲ್ಲಿ ನೀರು ಬರುತ್ತೆ..!
ಸಂಜೆ ವೇಳೆ ಬಾಯಿ ರುಚಿ ಹೆಚ್ಚಿಸುವ ಯಾವುದಾದರು ಸ್ನ್ಯಾಕ್ಸ್ ಇದ್ದರೆ ಅದರ ರುಚಿಯೇ ಬೇರೆ. ನಾವು ಸಂಜೆ ಟೀ ಕಾಫಿ ಕುಡಿಯುವ ವೇಳೆ ಸವಿಯಲು ಹಲವು ಸ್ನ್ಯಾಕ್ಸ್‌ಗಳ ಮಾಡುತ್ತೇವೆ. ಅದರಲ್ಲೂ ನಾವು ಹೆಚ್ಚಾಗಿ ಬೋಂಡಾ, ಬಜ್ಜಿ, ಬಿಸ್ಕೆಟ್ ಹೀಗೆ ಒಂದಿಷ್ಟ ರುಚಿಯ ಸ್ನ್ಯಾಕ್ಸ್ ಸವಿಯುತ್ತೇವೆ. ಅದರಲ್ಲೂ ಬಿಸಿ ಬಿಸಿಯಾಗಿ ಸವಿಯಲು ಎಲ್ಲರು ಇಷ್ಟಪಡುತ್ತಾರೆ.
ಹೀಗಾಗಿ ಸಂಜೆ ಸಮಯದಲ್ಲಿ ರಸ್ತೆ ಬದಿಯ ಸ್ನ್ಯಾಕ್ಸ್ ಅಂಗಡಿಗಳು ಗ್ರಾಹಕರಿಂದ ತುಂಬಿರುತ್ತವೆ. ಹಾಗೆ ಮನೆಯಲ್ಲೂ ನಾವು ಮಾಡಿ ಸವಿಯುತ್ತೇವೆ. ನಾವಿಂದು ಸಂಜೆ ವೇಳೆ ಮನೆಯಲ್ಲಿ ಮಾಡಿ ಸವಿಯಬಹುದಾದ ಅದ್ಭುತ ರುಚಿಯ ಸ್ನ್ಯಾಕ್ಸ್ ಅನ್ನು ಸವಿದು ನೋಡೋಣ. ಅದರಲ್ಲೂ ಒಂದೇ ಒಂದು ಆಲೂಗಡ್ಡೆಯಿಂದ ಈ ರೀತಿ ಸ್ನ್ಯಾಕ್ಸ್ ಮಾಡಿ ನೋಡಿ.

ಒಂದು ಆಲೂಗಡ್ಡೆ ಬಳಸಿ ಈ ಬೋಂಡಾ ಮಾಡಬಹುದು. ಒಂದಿಷ್ಟು ಮಸಾಲೆಗಳ ಬೆರೆಸಿ ಹಿಟ್ಟು ಮಾಡಿಕೊಂಡರೆ ಈ ಆಲೂಗಡ್ಡೆ ರೆಸಿಪಿ ನಿಮ್ಮ ಬಾಯಿ ರುಚಿಗೆ ಸಿಕ್ಕಾಪಟ್ಟೆ ಇಷ್ಟವಾಗುತ್ತೆ.
ಹಾಗಾದ್ರೆ ಈ ಒಂದು ಆಲೂಗಡ್ಡೆಯ ಬಳಸಿ ರುಚಿ ರುಚಿಯ ಸ್ನ್ಯಾಕ್ಸ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿಯೋಣ.
ಆಲೂಗಡ್ಡೆ ಬೋಂಡಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಆಲೂಗಡ್ಡೆ -1
- ಕಡಲೆ ಹಿಟ್ಟು- 1 ಕಪ್
- ಅಕ್ಕಿ ಹಿಟ್ಟು- 3 ಚಮಚ
- ಓಂಕಾಳು
- ಖಾರದ ಪುಡಿ
- ಉಪ್ಪು
- ಎಣ್ಣೆ
- ಅರಿಶಿನ ಪುಡಿ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಎಲೆಗಳು
- ಗರಂ ಮಸಾಲಾ
- ಧನಿಯಾ ಪುಡಿ
ಆಲೂಗಡ್ಡೆ ಬೋಂಡಾ ಮಾಡುವ ವಿಧಾನವೇನು?
ಮೊದಲು ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದುಕೊಂಡು ಅದರ ಮೇಲಿರುವ ಸಿಪ್ಪೆಯನ್ನು ತೆಗೆದುಕೊಳ್ಳಬೇಕು. ನಂತರ ತೆಳುವಾಗಿ ಸ್ಲೈಸ್ ಮಾಡಿಕೊಳ್ಳಿ. ತುಂಬಾ ದಪ್ಪವೂ ಇರಬಾರದು, ತೆಳ್ಳಗು ಇರಬಾರದು ಹಾಗೆ ಸ್ಲೈಸ್ ಮಾಡಿಕೊಳ್ಳಿ. ನೀವು ಚಾಕುವಿನಿಂದ ಕತ್ತರಿಸಿಕೊಂಡರೆ ಉತ್ತಮ. ಕತ್ತರಿಸಿದ ಆಲೂಗಡ್ಡೆಯನ್ನು ನೀರಿನಲ್ಲಿ ಹಾಕಿಡಿ.
ನಂತರ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಖಾರದ ಪುಡಿ, ಓಂಕಾಳು, ಅರಶಿನ ಪುಡಿ, ಉಪ್ಪು, ಖಾರದ ಪುಡಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಶುಂಠಿ ಹಾಕಿಕೊಂಡಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟನ್ನು ಹದ ಮಾಡಿಕೊಳ್ಳಿ.
ಕೊನೆಯಲ್ಲಿ ಒಂದು ಚಿಟಿಕೆ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈ ಹಿಟ್ಟು ತೀರ ತೆಳ್ಳಗೆ ಮಾಡಿಕೊಳ್ಳಬೇಡಿ. ಸ್ವಲ್ಪ ಗಟ್ಟಿಯಾಗಿರಲಿ. ಈಗ ಹೆಚ್ಚಿಕೊಂಡಿರು ಆಲೂಗಡ್ಡೆಯನ್ನು ಈ ಹಿಟ್ಟಿನೊಳಗೆ ಹಾಕಿ ಎನ್ನಾಗಿ ಕಲಸಿ ಹಿಟ್ಟು ಹಿಡಿಯುವಂತೆ ಮಾಡಿಕೊಳ್ಳಿ.
ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಕಾದ ಬಳಿಕ ಅದಕ್ಕೆ ಒಂದೊಂದೇ ಆಲೂಗಡ್ಡೆಯನ್ನು ಬಿಡಿ. ಎನ್ನಾಗಿ ಆಲೂಗಡ್ಡೆ ಬೇಯಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಆಲೂ ಬಜ್ಜಿ ರೆಡಿಯಾಗುತ್ತದೆ. ಬಿಸಿ ಬಿಸಿಯಾಗಿದ್ದಾಗ ಸಂಜೆ ವೇಳೆ ಸವಿಯಲು ಇದು ಅದ್ಭುತ ರುಚಿ ನೀಡಲಿದೆ.



Click it and Unblock the Notifications