Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
3 ಆಲೂಗಡ್ಡೆಯಿಂದ ಮಾಡಿ ರುಚಿ ರುಚಿ ಪಡ್ಡು..! ಸಖತ್ ಟೇಸ್ಟ್‌ನ ಸಿಂಪಲ್ ರೆಸಿಪಿ!
ಬೆಳಗಿನ ತಿಂಡಿಗೆ ನೀವು ಯಾವುದಾದ್ರು ವಿಶೇಷವಾದ ಹಾಗೆ ವಿಭಿನ್ನವಾದ ತಿಂಡಿ ಮಾಡಲು ಇಚ್ಛಿಸಿದ್ದರೆ ನಿಮಗಾಗಿ ಹಲವು ಖಾದ್ಯಗಳು ನೆನಪಿಗೆ ಬರಬಹುದು. ಆದ್ರೆ ನಿತ್ಯ ಒಂದೇ ರೀತಿಯ ತಿಂಡಿ ಮಾಡುವ ಬದಲಾಗಿ ವಿಶೇಷವಾಗಿ ಮನೆ ಮಂದಿಯಲ್ಲ ಸವಿದು ಮತ್ತೆ ಮತ್ತೆ ಬೇಕು ಎನಿಸುವಂತಹ ಖಾದ್ಯ ಮಾಡಲು ನೀವು ಬಯಸಿದ್ದರೆ ನಿಮಗಾಗಿ ಈ ಸ್ಪೆಷಲ್ ಟೇಸ್ಟಿ ಆಲೂಗಡ್ಡೆಯ ಪಡ್ಡು ಮಾಡುವುದು ಹೇಗೆ ನೋಡಿ.
ಆಲೂ ಗಡ್ಡೆಯಿಂದ ವಿವಿಧ ರೀತಿಯ ತಿಂಡಿ ಮಾಡಬಹುದು ಎಂಬುದು ನಿಮಗೂ ತಿಳಿದಿದೆ. ಅದರಲ್ಲಿ ಈ ಪಡ್ಡು ಬಹಳ ರುಚಿಯಾಗಿ ಬೆಳಗಿನ ತಿಂಡಿಗೆ ಹೇಳಿ ಮಾಡಿಸಿದಂತಹ ರುಚಿ ನೀಡಲಿದೆ. ಬಹಳ ಸುಲಭವಾಗಿ ಹಿಟ್ಟು ರೆಡಿಮಾಡಿಕೊಂಡು ಕಡಿಮೆ ವಸ್ತುಗಳ ಬಳಸಿ ಇದನ್ನು ರೆಡಿ ಮಾಡಬಹುದು. ಅದರಲ್ಲೂ ಮಕ್ಕಳಿಗೆ ಈ ತಿಂಡಿ ಬಹಳ ಇಷ್ಟವಾಗುತ್ತೆ.

ನೀವು ಅಕ್ಕಿ ಹಿಟ್ಟಿನಿಂದ ಪಡ್ಡು ಮಾಡುವಂತಹ ವಿಧಾನದಲ್ಲೇ ಈ ಆಲೂಗಡ್ಡೆಯ ಪಡ್ಡು ಕೂಡ ಮಾಡಿ ಸವಿಯಬಹುದು. ಅದರ ರುಚಿಗೆ ನೀವು ಮತ್ತೆ ಮತ್ತೆ ಮಾಡಲು ಮುಂದಾಗುವುದು ಖಚಿತ. ಹಾಗಾದ್ರೆ ಈ ಪಡ್ಡು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಆಲೂಗಡ್ಡೆ ಪಡ್ಡು ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಲೂಗಡ್ಡೆಯ ಪಡ್ಡು ಮಾಡಲು ಬೇಕಾಗುವ ಪದಾರ್ಥಗಳು
- ಆಲೂಗಡ್ಡೆ
- ಗೋಧಿ
- ಈರುಳ್ಳಿ -1
- ಎಣ್ಣೆ
- ಕೊತ್ತಂಬರಿ ಸೊಪ್ಪು
- ಹಸಿ ಮೆಣಸಿನ ಪೇಸ್ಟ್
- ಖಾರದ ಪುಡಿ
- ಅರಶಿಣ
ಆಲೂಗಡ್ಡೆಯ ಪಡ್ಡು ಮಾಡುವ ವಿಧಾನವೇನು?
ಮೊದಲು ಮೂರು ಆಲೂಗಡ್ಡೆಯನ್ನು ಬೇಯಿಸಿ ಚೆನ್ನಾಗಿ ಸಿಪ್ಪೆ ತೆಗೆದು ಒಂದು ಬೌಲ್‌ಗೆ ಹಾಕಿ ಅದನ್ನು ಪುಡಿ ಮಾಡಿಕೊಳ್ಳಬೇಕು. ಮೆತ್ತನೆಯ ಹಿಟ್ಟಿನಂತೆ ಪುಡಿ ಮಾಡಿಕೊಳ್ಳಿ. ಅನಂತರ ಇದಕ್ಕೆ ಸಣ್ಣದಾಗಿ ಹೆಚ್ಚಿರುವ ಸಣ್ಣ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನ ಪೇಸ್ಟ್, ಉಪ್ಪು, ಚಿಟಿಕೆ ಖಾರದ ಪುಡಿ, ಎಣ್ಣೆ, ಅರಶಿಣದ ಪುಡಿ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು.
ಇದು ನುಣ್ಣಗೆ ಹಿಟ್ಟಾಗಿ ಬದಲಾಗಬೇಕು ಆ ರೀತಿ ಹದ ಮಾಡಿಕೊಳ್ಳಿ. ಇನ್ನೊಂದು ಬೌಲ್‌ನಲ್ಲಿ ನಿಮಗೆ ಎಷ್ಟು ಬೇಕೋ ಅಷ್ಟು ಗೋಧಿ ಹಿಟ್ಟು ತೆಗೆದುಕೊಳ್ಳಿ. ಈಗ ಅಳತೆಯಂತೆ ಅಷ್ಟೇ ಪ್ರಮಾನದ ನೀರು ಹಾಕಿಕೊಳ್ಳಿ. ಹಾಗೆ ಇದಕ್ಕೆ ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ಗಂಟು ಆಗದಂತೆ ಕಲಸಿಕೊಳ್ಳಿ. ಮತ್ತೆ ಅಳತೆ ಕಪ್‌ನಲ್ಲಿ ಅರ್ಧದಷ್ಟು ನೀರು ಹಾಕಿ ಕಲಸಿಕೊಳ್ಳಿ.
ಈಗ ಬೌಲ್‌ನಲ್ಲಿ ಇರುವ ಆಲೂಗಡ್ಡೆ ಹಿಟ್ಟನ್ನು ಈ ಗೋಧಿ ಹಿಟ್ಟಿಗೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟಿನೊಂದಿಗೆ ಅದು ಬೆರೆಯಬೇಕು. ಗಟ್ಟಿಯಾದರೆ ಮತ್ತೆ ಅಳತೆ ಕಪ್‌ನಲ್ಲಿ ಅರ್ಧ ನೀರು ಹಾಕಿ ಕಲಸಿಕೊಳ್ಳಿ. ಹಿಟ್ಟು ತೆಳುವಾಗಿ ಬರಬೇಕು. ಉದ್ದಿನ ದೋಸೆಯ ಹಿಟ್ಟಿನಂತೆ ಹದ ಬರಬೇಕು. ಈಗ ಒಲೆ ಮೇಲೆ ಪಡ್ಡು ಮಾಡುವ ಕಾವಲಿ ಇಟ್ಟು ಕಾದ ಬಳಿಕ ಎಣ್ಣೆ ಹಚ್ಚಿಕೊಳ್ಳಿ, ಅನಂತರ ಹಿಟ್ಟನ್ನು ನಿಧಾನವಾಗಿ ಹಾಕಿಕೊಳ್ಳಿ. ಒಂದು ಕಡೆ ಚೆನ್ನಾಗಿ ಕಾದ ಬಳಿಕ ಮತ್ತೆ ಪಡ್ಡನ್ನು ತಿರುಗಿಸಿ ಹಾಕಿ.
ಎಲ್ಲಾ ಪಡ್ಡು ರೆಡಿಯಾದ ಬಳಿಕ ಒಂದು ಚಟ್ನಿ ಮಾಡಿದರೆ ಬ್ರೇಕ್‌ಫಾಸ್ಟ್‌ಗೆ ರುಚಿ ರುಚಿಯ ಖಾದ್ಯ ರೆಡಿಯಾಗುತ್ತದೆ. ಈ ತಿಂಡಿ ಮನೆ ಮಂದಿ ಎಲ್ಲಾ ಇಷ್ಟಪಟ್ಟು ಸವಿಯಲಿದ್ದಾರೆ.



Click it and Unblock the Notifications