ಬ್ರೇಕ್‌ಫಾಸ್ಟ್‌ಗೆ ಆಲೂ ಮಸಾಲೆ ಫ್ರೈ ರೈಸ್: ಕ್ಷಣದಲ್ಲಿ ರೆಡಿ ಮಾಡಬಹುದು!

Posted By:

ನೀವು ಬೆಳಗ್ಗೆ ತಿಂಡಿಗೆ ಸುಲಭವಾಗಿ ಮಾಡುವಂತಹ ರೈಸ್‌ನ ಖಾದ್ಯ ಮಾಡಲು ಯಾವಾಗಲು ಬಯಸಿರುತ್ತೀರಿ. ರೈಸ್‌ನಿಂದ ಮಾಡುವ ಹಲವು ಖಾದ್ಯಗಳು ಎಲ್ಲರಿಗೂ ಇಷ್ಟವಾಗುತ್ತೆ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಕೂಡ ರೈಸ್‌ನಿಂದ ಮಾಡುವ ಖಾದ್ಯಗಳು ಇಷ್ಟವಾಗುತ್ತೆ. ಇನ್ನು ನಾವು ರೈಸ್‌ನಿಂದ ಮಾಡುವಂತಹ ಆಲು ಮಸಾಲೆ ರೈಸ್ ಮಾಡುವ ಕುರಿತು ಕುರಿತು ತಿಳಿದುಕೊಳ್ಳೋಣ.

ಆಲೂ ಮಸಾಲೆ ರೈಸ್ ಅನ್ನು ಸವಿಯಲು ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಆಲೂ ಮಸಾಲೆ ರೈಸ್‌ನ ಘಮಲಿಗೆ ಎಲ್ಲರು ಫಿದಾ ಆಗುತ್ತಾರೆ. ಬೆಳಗ್ಗೆ ತಿಂಡಿಗೆ ಹಾಗೆ ಊಟದ ಜೊತೆಗೂ ಕೂಡ ನಾವು ಈ ಆಲೂ ಮಸಾಲೆ ರೈಸ್ ಬಹಳ ರುಚಿ ನೀಡಲಿದೆ. ಹಾಗಾದ್ರೆ ನಾವಿಂದು ರುಚಿ ರುಚಿಯ ಆಲೂ ಮಸಾಲೆ ರೈಸ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

How To Make Aloo Masala Fry Rice For Breakfast At Home In Kannada

ಆಲೂ ಮಸಾಲೆ ಫ್ರೈ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಆಲೂ ಮಸಾಲೆ ಫ್ರೈ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?

  • ಆಲೂಗಡ್ಡೆ 1
  • ಬಾಸುಮತಿ ರೈಸ್
  • ಈರುಳ್ಳಿ 1
  • ಟೊಮ್ಯಾಟೋ
  • ತುಪ್ಪ
  • ಖಾರದ ಪುಡಿ
  • ದನಿಯ ಪುಡಿ
  • ಅರಿಶಿನದ ಪುಡಿ
  • ಗರಂ ಮಸಾಲಾ
  • ಜೀರಿಗೆ ಪುಡಿ
  • ಶುಂಠಿ ಬೆಳ್ಳುಳ್ಳಿ ಪೇಸ್ಟ್
  • ಕೊತ್ತಂಬರಿ ಸೊಪ್ಪು
  • ಚಕ್ಕೆ
  • ಲವಂಗ
  • ಏಲಕ್ಕಿ
  • ಉಪ್ಪು
  • ಎಣ್ಣೆ

ಆಲೂ ಮಸಾಲೆ ಫ್ರೈ ರೈಸ್ ಮಾಡುವುದು ಹೇಗೆ?

ಮೊದಲು ಒಂದು ಬೌಲ್‌ಗೆ ಅಳತೆ ಕಪ್‌ನಲ್ಲಿ ಒಂದು ಕಪ್ ಬಾಸುಮತಿ ರೈಸ್ ಹಾಕಿಕೊಂಡು ನೀರು ಹಾಕಿ ನೆನೆಸಿಡಬೇಕು. 10 ನಿಮಿಷ ನೆನೆಯಲು ಬಿಡಬೇಕು. ಒಲೆ ಮೇಲೆ ಇಂದು ಕುಕ್ಕರ್ ಇಟ್ಟು ಅದಕ್ಕೆ ತುಪ್ಪ ಹಾಗೂ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಇದಕ್ಕೆ ಲವಂಗ, ಚಕ್ಕೆ, ಏಲಕ್ಕಿ ಹಾಕಿ ಬಿಸಿ ಮಾಡಿ. ಹಾಗೆ ಕತ್ತರಿಸಿದ ಈರುಳ್ಳಿ ಹಾಕಿ 3 ನಿಮಿಷ ಫ್ರೈ ಮಾಡಿಕೊಳ್ಳಿ.

ಈಗ ಒಂದು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ದನಿಯಾ ಪುಡಿ, ಅರಶಿಣ ಪುಡಿ, ಗರಂ ಮಸಾಲೆ ಪುಡಿ, ಜೀರಿಗೆ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿ 30 ಸೆಕೆಂಡ್‌ಗಳ ಕಾಲ ಮಿಕ್ಸ್ ಮಾಡಿಕೊಳ್ಳಿ. ಈಗ ಸಣ್ಣದಾಗಿ ಹೆಚ್ಚಿಕೊಂಡಿರುವ ಟೊಮೆಟೋ ಹಾಕಿ ಅದಕ್ಕೆ ಉಪ್ಪು ಕೂಡ ಬೆರೆಸಿ ಫ್ರೈ ಮಾಡಿಕೊಳ್ಳಿ.

5 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ಸಿಪ್ಪೆ ತೆಗೆದಿಟ್ಟ ಒಂದು ಆಲೂಗಡ್ಡೆ ಕತ್ತರಿಸಿಕೊಂಡು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಮಸಾಲೆಗಳು ಚೆನ್ನಾಗಿ ಹಿಡಿದ ಬಳಿಕ ಇದಕ್ಕೆ ಒಂದೂವರೆ ಕಪ್ ನೀರು ಹಾಕಿಕೊಳ್ಳಿ. (1 ಕಪ್ ನೀರು ತೆಗೆದುಕೊಂಡಿದ್ದರಿಂದ ಒಂದೂವರೆ ನೀರು ಹಾಕಿ, ಅಕ್ಕಿಯನ್ನು ನೆನೆಸದೆ ಮಾಡುವುದಾದರೆ 1 ಕಪ್ ಅಕ್ಕಿಗೆ 2 ಕಪ್ ನೀರು ಹಾಕಬೇಕಾಗುತ್ತದೆ) ಈಗ ನೀರು ಹಾಕಿದ ಮೇಲೆ ಮಿಕ್ಸ್ ಮಾಡಿಕೊಂಡು ನೆನೆಸಿಟ್ಟಿದ್ದ ಅಕ್ಕಿಯನ್ನು ಕೂಡ ಹಾಕಿಕೊಂಡು ಬೆರೆಸಿಕೊಳ್ಳಿ.

ಹಾಗೆ ಕೊತ್ತಂಬರಿ ಸೊಪ್ಪು ಸಹ ಹಾಕಿ ಮಿಕ್ಸ್ ಮಾಡಿಕೊಂಡು ಕುಕ್ಕರ್ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ. 2 ಸೀಟಿ ಹೊಡೆದ ಬಳಿಕ ಕುಕ್ಕರ್ ತಣ್ಣಗಾಗಲು ಬಿಡಿ. ನಂತರ ಮುಚ್ಚಳ ತೆಗೆದು ಒಮ್ಮೆ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಈ ಆಲೂ ಮಸಾಲ ಫ್ರೈ ರೈಸ್ ರೆಡಿಯಾಗುತ್ತದೆ. ಇದರ ಮೇಲೆ ಒಂದು ಸ್ಪೂನ್ ತುಪ್ಪ ಹಾಕಿಕೊಂಡು ಸವಿಯಲು ಮುಂದಾದರೆ ಬಾಯಲ್ಲಿ ನೀರು ಬರುತ್ತೆ. ನೀವು ಸಹ ಬೆಳಗ್ಗೆ ತಿಂಡಿಗೆ ಇದನ್ನು ಟ್ರೈ ಮಾಡಿ ನೋಡಿ.

[ of 5 - Users]
Story first published: Sunday, June 1, 2025, 13:30 [IST]
X
Desktop Bottom Promotion